Roopa Gururaj Column: ಹಸುವಿನ ಕುತ್ತಿಗೆಗೆ ಕಟ್ಟಿದ ಹಗ್ಗ, ಅವನನ್ನೂ ಬಂಧಿಸಿತ್ತು
ಯಾರನ್ನು ನಾವು ಬಂಧಿಸಿಡುತ್ತೇವೆಯೊ, ಅವರೊಂದಿಗೆ ನಾವೇ ಬಂದಿತರಾಗಿರುತ್ತೇವೆ. ಅವರನ್ನು ಬಿಟ್ಟು ನಮ್ಮಿಂದ ಇರಲಾಗದು.ಇದೇ ಜೀವನದ ಒಂದು ಅನಿವಾರ್ಯ ಕರ್ಮ ಎಂದರು. ಅವನಿಗೆ ಅವರ ಮಾತುಗಳ ಒಳಾರ್ಥ ತಿಳಿಯಿತು. ಕೈಮುಗಿದು ತನಗೆ ಸಿಕ್ಕ ಜ್ಞಾನಕ್ಕೆ ಅವರಿಗೆ ನಮಸ್ಕರಿಸಿದ. ಆಗ ಸಂತರು ಹೇಳಿದರು ‘ಯಾರು ಬಂಧನದಿಂದ ಮುಕ್ತರಾಗಲು ಬಯಸುತ್ತಾರೋ, ಅವರು ಎಂದಿಗೂ ಯಾರನ್ನೂ ಬಂಧಿತರನ್ನಾಗಿ ಮಾಡುವುದಿಲ್ಲ.


ಒಂದೊಳ್ಳೆ ಮಾತು
rgururaj628@gmail.com
ಒಬ್ಬ ವ್ಯಕ್ತಿ ಒಂದು ಹಸುವಿನ ಕುತ್ತಿಗೆಗೆ ಹಗ್ಗವನ್ನು ಕಟ್ಟಿ, ಅದರ ಇನ್ನೊಂದು ತುದಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ದಾರಿಯಲ್ಲಿ ನಡೆದು ಹೋಗುತ್ತಿದ್ದ. ಹಸು ಹಗ್ಗದಿಂದ ಬಿಡಿಸಿಕೊಳ್ಳಲು ಬಹಳ ಕಸರತ್ತು ನಡೆಸುತ್ತಿತ್ತು.ಆ ವ್ಯಕ್ತಿಗೆ ರಸ್ತೆಯಲ್ಲಿ ಎದುರಾದ ಸಂತರೊಬ್ಬರು, ಅದನ್ನು ನೋಡಿ ಕೇಳಿದರು.
‘ಅಯ್ಯಾ ನೀನು ಹಸುವಿಗೆ ಬಂಧಿತನಾಗಿರುವೆಯೊ, ಇಲ್ಲಾ ಹಸು ನಿನಗೆ ಬಂಧಿತವಾಗಿದೆಯೊ?’ ಆ ವ್ಯಕ್ತಿ ನಗುತ್ತಾ ಇವರ್ಯಾರೊ ಹುಚ್ಚರಿರಬೇಕು ಅದಕ್ಕೆ ಹೀಗೆ ಕೇಳುತ್ತಿದ್ದಾರೆ ಎಂದುಕೊಂಡ. ನಂತರ ನಗುತ್ತಾ ಇದೊಂದು ಕೇಳುವ ಪ್ರಶ್ನೆ ಏನು? ನಿಮಗೆ ಕಾಣಿಸುತ್ತಿಲ್ಲವೇ? ಹಸು ನನಗೆ ಬಂಧಿತ ವಾಗಿದೆ. ಅದಕ್ಕೆ ನಾನು ಹಸುವನ್ನು ಬಂಧಿಸಿ ಕರೆದೊಯುತ್ತಿದ್ದೇನೆ ಎಂದ.
ಆಗ ಸಂತರು ಹಾಗಾದರೆ ಒಂದು ಕೆಲಸ ಮಾಡು. ಹಸು ನಿನ್ನೊಂದಿಗೆ ಬಂಧಿತವಾಗಿದ್ದಲ್ಲಿ ನೀನು ಅದಕ್ಕೆ ಕಟ್ಟಿದ ಹಗ್ಗವನ್ನು ಕೈ ಬಿಟ್ಟು ತೋರಿಸು. ಆಗಲೂ ಹಸು ನಿನ್ನ ಹಿಂದೆ ಬಂದರೆ, ನಿನ್ನ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು. ಆಗ ಆ ವ್ಯಕ್ತಿ ನಾನು ಹಗ್ಗವನ್ನು ಬಿಟ್ಟೆ ಎಂದರೆ ಹಸು ಓಡಿ ಹೋಗುವುದಿಲ್ಲವೇ? ನಾನು ಮತ್ತೆ ಅದರ ಹಿಂದೆ ಓಡಿ ಹೋಗಬೇಕಾಗುತ್ತದೆ ಅಷ್ಟೇ ಎಂದ.
ಇದನ್ನೂ ಓದಿ: Roopa Gururaj Column: ಸದ್ಗುಣ ಸಂಪನ್ನ ವಿಭೀಷಣ
ಆಗ ಸಂತರು ನಗುತ್ತಾ ನಾನು ಅದನ್ನೇ ಹೇಳಿದ್ದು. ಹಾಗಿದ್ದರೆ ನೀನು ಸರಿಯಾಗಿ ಈ ವಿಷಯವನ್ನು ತಿಳಿದುಕೋ. ಹಸು ಓಡಿ ಹೋಯಿತು ಎಂದರೆ ನೀನು ಅದರ ಹಿಂದೆ ಓಡುವೆ, ಅದು ನಿನ್ನ ಹಿಂದೆ ಓಡಿ ಬರುವುದಿಲ್ಲ. ಅಲ್ಲಿಗೆ ನೀನೇ ಅದನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ನೀನು ಆ ಹಸುವನ್ನು ಬಂಧಿಸಿಟ್ಟುಕೊಂಡಿರುವೆ ಎಂಬ ಭ್ರಮೆಯಲ್ಲಿ ನೀನೇ ಅದರ ಬಂಧಿಯಾ ಗಿರುವೆ.
ಯಾರನ್ನು ನಾವು ಬಂಧಿಸಿಡುತ್ತೇವೆಯೊ, ಅವರೊಂದಿಗೆ ನಾವೇ ಬಂದಿತರಾಗಿರುತ್ತೇವೆ. ಅವರನ್ನು ಬಿಟ್ಟು ನಮ್ಮಿಂದ ಇರಲಾಗದು.ಇದೇ ಜೀವನದ ಒಂದು ಅನಿವಾರ್ಯ ಕರ್ಮ ಎಂದರು. ಅವನಿಗೆ ಅವರ ಮಾತುಗಳ ಒಳಾರ್ಥ ತಿಳಿಯಿತು. ಕೈಮುಗಿದು ತನಗೆ ಸಿಕ್ಕ ಜ್ಞಾನಕ್ಕೆ ಅವರಿಗೆ ನಮಸ್ಕರಿಸಿದ. ಆಗ ಸಂತರು ಹೇಳಿದರು ‘ಯಾರು ಬಂಧನದಿಂದ ಮುಕ್ತರಾಗಲು ಬಯಸುತ್ತಾರೋ, ಅವರು ಎಂದಿಗೂ ಯಾರನ್ನೂ ಬಂಧಿತರನ್ನಾಗಿ ಮಾಡುವುದಿಲ್ಲ.
ಹಾಗೊಮ್ಮೆ ಬಂಧಿಸಿದಿರಿ ಎಂದರೆ ನಾವು ಮುಕ್ತರಾಗುವುದು ಸಾಧ್ಯವಿಲ್ಲ. ಇದು ನಿನಗೆ ಜೀವನದಲ್ಲಿ ಪಾಠವಾಗಲಿ’ ಎಂದರು. ಓಶೋ ಹೇಳಿದ ಈ ಕಥೆಯಲ್ಲಿ ನಮ್ಮೆಲ್ಲರಿಗೆ ದೊಡ್ಡ ಜೀವನದ ಪಾಠ ಅಡಗಿದೆ. ನಾವು ನಮ್ಮ ಮಕ್ಕಳನ್ನು ಬೆಳೆಸಿ, ಜವಾಬ್ದಾರಿ ಇರುವ ಸ್ವತಂತ್ರ ಮನೋಭಾವದ ನಾಗರೀಕರನ್ನಾಗಿಸುವ ಪ್ರಯತ್ನವನ್ನು ಮಾಡುತ್ತಿರುತ್ತೇವೆ.
ಆದರೆ ಆ ಪ್ರಯತ್ನದಲ್ಲಿ ಬಹು ಮುಖ್ಯವಾದ ಬಂಧನವನ್ನು ನಾವು ಕೈ ಬಿಡುವುದೇ ಇಲ್ಲ. ಯಾವ ಹಂತದಲ್ಲೂ ಕೂಡ ಮಕ್ಕಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡು, ತಮ್ಮ ಇಷ್ಟದ ರೀತಿ ತಪ್ಪು ಒಪ್ಪುಗಳನ್ನು ಮಾಡಿ ಅದರಿಂದ ಕಲಿಯುವ ಅವಕಾಶವನ್ನು ನಾವು ಕೊಡುವುದಿಲ್ಲ. ಸದಾ ಅವರ ಬೆನ್ನಿಗೆ ನಿಂತು ಅವರು ಮಾಡುವ ಪ್ರತಿ ಯೊಂದು ಕೆಲಸದಲ್ಲೂ ನಮ್ಮತನವನ್ನು ಹೇರುತ್ತೇವೆ.
ಅವರಿಗೆ ಒಂದು ಚಿಕ್ಕ ಕೆಲಸವನ್ನು ಕೂಡ ಸ್ವತಂತ್ರವಾಗಿ ಮಾಡುವ ಅವಕಾಶವಿರುವುದಿಲ್ಲ. ಈ ರೀತಿ ಪರಾವಲಂಬಿ ಗಳಾದಾಗ ಮಕ್ಕಳು ಸಹಜವಾಗಿ ಎಲ್ಲಕ್ಕೂ ತಂದೆ ತಾಯಿಗಳನ್ನು ಅವಲಂಬಿಸು ತ್ತಾರೆ. ಆಗ ಮಾತ್ರ ನಾವು ಎಂದಿಗೆ ಈ ಮಕ್ಕಳಿಂದ ನಮಗೆ ಬಿಡುಗಡೆಯೋ? ಎಂದಿಗೆ ಅವರು ದೊಡ್ಡವರಾಗುತ್ತಾರೋ ಎಂದು ಹಲುಬುತ್ತೇವೆ.
ಬಂಧನದಲ್ಲಿರುವ ಹಕ್ಕಿಗಳಿಗೆ ಹೇಗೆ ಹಾರುವ ಅವಕಾಶವಿರುವುದಿಲ್ಲವೋ, ಸ್ವತಂತ್ರ ಮನೋ ಭಾವ ಬೆಳೆಸಿಕೊಳ್ಳದ ಮಕ್ಕಳು ಕೂಡ ಸ್ವಂತ ನಿರ್ಧಾರಗಳನ್ನು ಮಾಡುತ್ತಾ ತಮ್ಮ ಪರೀಧಿಯಿಂದ ಆಚೆ ಹೋಗಿ ಧೈರ್ಯದಿಂದ ಕೆಲಸ ಮಾಡಲು ಸಾಧ್ಯವಿರುವುದಿಲ್ಲ. ಆದ್ದರಿಂದಲೇ ಮಕ್ಕಳು ದೊಡ್ಡವ ರಾಗುತ್ತಾ ಅವರಿಗೆ ಜವಾಬ್ದಾರಿ, ಸ್ವತಂತ್ರ ಮನೋಭಾವ ಬೆಳೆಸಿ ಅವರನ್ನು ಸದೃಢ ಮನಸ್ಥಿತಿಯವ ರನ್ನಾಗಿಸಬೇಕು. ಆಗ ಮಾತ್ರ ತಂದೆ ತಾಯಿಗಳಾಗಿ ನಾವು ಒಳ್ಳೆಯ ಯುವ ಜನಾಂಗವನ್ನ ಸಮಾಜಕ್ಕೆ ನೀಡುವ ಕೆಲಸ ಮಾಡುತ್ತೇವೆ.