ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.
- ಬೆಂಗಳೂರು ದೂರದರ್ಶನದ ಚಂದನ ವಾಹಿನಿ.
- ಆಕಾಶವಾಣಿ ನಿಲಯ.
- ಎಫ್.ಎಂ ರೈನ್ ಬೋ ಕಂಪನಾಂಕ.
- ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ.
ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ
ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ.
50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.