ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ashwini Vaishnav Column: ವಿನೂತನ ತಂತ್ರಜ್ಞಾನದ ವಿಶಿಷ್ಟ ಚಾಂಪಿಯನ್:‌ ಪ್ರಧಾನಿ ನರೇಂದ್ರ ಮೋದಿ

ಅಮೆರಿಕ ಮತ್ತು ಸ್ಪೇನ್ ದೇಶಗಳು ಜಾಗತಿಕವಾಗಿ ಈ ವಿಧಾನವನ್ನು ಅಳವಡಿಸಿಕೊಂಡಿರುವುದು ಈ ನಾವೀನ್ಯದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ‘ಇ-ಧಾರಾ’ ವ್ಯವಸ್ಥೆಯು ಭೂ ದಾಖಲೆಗಳನ್ನು ಡಿಜಿಟ ಲೀಕರಣಗೊಳಿಸಿತು. ಸ್ವಾಗತ್ (SWAGAT) ಉಪಕ್ರಮವು ನಾಗರಿಕರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತು.

ಕ್ರಾಂತಿ ಪರ್ವ

ಅಶ್ವಿನಿ ವೈಷ್ಣವ್

ಸರಕಾರಿ ದಾಖಲೆಗಳನ್ನು ಪಡೆಯುವುದು ಒಂದು ದೊಡ್ಡ ಸವಾಲಾಗಿದ್ದ ಕಾಲ ನೆನಪಿದೆಯೇ? ಹಲವು ಭೇಟಿಗಳು, ದೀರ್ಘ ಸರತಿ ಸಾಲುಗಳು ಮತ್ತು ಬೇಕಾಬಿಟ್ಟಿ ಶುಲ್ಕಗಳು ಮುಂತಾದವು ನೆನಪಿವೆಯೇ? ಈಗ ಇದೆಲ್ಲವೂ ಅಕ್ಷರಶಃ ನಿಮ್ಮ ಫೋನ್‌ನಲ್ಲಿವೆ. ಈ ಬದಲಾವಣೆ ಆಕಸ್ಮಿಕವಾಗಿ ಸಂಭವಿಸಿದ್ದಲ್ಲ.

ಪ್ರಧಾನಿ ಮೋದಿಯವರು ತಂತ್ರಜ್ಞಾನವನ್ನು ಭಾರತದ ಶ್ರೇಷ್ಠ ಸಮಾನತಾ ಅಸ್ತ್ರವಾಗಿ ಪರಿವರ್ತಿಸಿ ದ್ದಾರೆ. ಮುಂಬೈನ ಬೀದಿಬದಿಯ ವ್ಯಾಪಾರಿಯೊಬ್ಬರು ಕಾರ್ಪೊರೇಟ್ ಕಾರ್ಯನಿರ್ವಾಹಕ ರಂತೆಯೇ ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಸುತ್ತಾರೆ. ಪ್ರಧಾನಿಯವರ ದೃಷ್ಟಿಕೋನದಲ್ಲಿ, ತಂತ್ರeನಕ್ಕೆ ಯಾವುದೇ ಮೇಲುಕೀಳು ಇಲ್ಲ.

ಈ ರೂಪಾಂತರವು ಪ್ರಧಾನಿಯವರ ಅಂತ್ಯೋದಯದ ಮೂಲತತ್ವವನ್ನು, ಅಂದರೆ ಸರದಿಯಲ್ಲಿ ರುವ ಕೊನೆಯ ವ್ಯಕ್ತಿಯನ್ನೂ ತಲುಪುವುದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಡಿಜಿಟಲ್ ಉಪಕ್ರಮವೂ, ತಂತ್ರಜ್ಞಾನವು ಎಲ್ಲರಿಗೂ ಸಮಾನವಾಗಿ ಲಭಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.

ಗುಜರಾತಿನಲ್ಲಿ ಒಂದು ಪ್ರಯೋಗವಾಗಿ ಪ್ರಾರಂಭವಾದದ್ದು ಭಾರತದ ಡಿಜಿಟಲ್ ಕ್ರಾಂತಿಗೆ ಅಡಿಪಾಯವಾಯಿತು. ಇದೆ ಶುರುವಾದದ್ದು ಗುಜರಾತ್‌ನಿಂದ: ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರು ಗುಜರಾತ್ ಅನ್ನು ತಂತ್ರಜ್ಞಾನ ಮತ್ತು ನಾವೀನ್ಯದ ಮೂಲಕ ಪರಿವರ್ತಿಸಿದರು. 2003ರಲ್ಲಿ ಪ್ರಾರಂಭಿಸಲಾದ ಜ್ಯೋತಿಗ್ರಾಮ ಯೋಜನೆಯು ಫೀಡರ್ ಬೇರ್ಪಡಿಕೆ ತಂತ್ರಜ್ಞಾನ ವನ್ನು ಬಳಸಿತು.

ಇದನ್ನೂ ಓದಿ: Ashwini Vaishnav Column: ಗಡಿಯಂಚಿನಿಂದ ಮುಂಚೂಣಿಗೆ ಬಂದ ಈಶಾನ್ಯ ಭಾರತ

ಗ್ರಾಮೀಣ ಕೈಗಾರಿಕೆಗಳನ್ನು 247 ವಿದ್ಯುತ್ ಮೂಲಕ ಪುನರುಜ್ಜೀವನಗೊಳಿಸಲಾಯಿತು, ಕೃಷಿಗೆ ನಿಗದಿತವಾಗಿ ವಿದ್ಯುತ್ ಒದಗಿಸುವ ಮೂಲಕ ಅಂತರ್ಜಲ ಕುಸಿತವನ್ನು ಕಡಿಮೆ ಮಾಡಲಾಯಿತು. ಮಹಿಳೆಯರು ರಾತ್ರಿ ವೇಳೆಯೂ ಅಧ್ಯಯನ ಮಾಡಬಹುದಿತ್ತು ಮತ್ತು ಸಣ್ಣ ವ್ಯವಹಾರಗಳು ಅಭಿವೃದ್ಧಿ ಹೊಂದಿದವು,

ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗುತ್ತಿದ್ದ ವಲಸೆಯು ಕಡಿಮೆಯಾಯಿತು. ಒಂದು ಅಧ್ಯಯನದ ಪ್ರಕಾರ, ಕೇವಲ ಎರಡೂವರೆ ವರ್ಷಗಳಲ್ಲಿ 1115 ಕೋಟಿ ರುಪಾಯಿ ಹೂಡಿಕೆಯು ವಾಪಸ್ ಬಂದಿತು. 2012ರಲ್ಲಿ, ಅವರು ನರ್ಮದಾ ಕಾಲುವೆಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ನಿರ್ಧರಿಸಿದರು. ಈ ಯೋಜನೆಯು ವಾರ್ಷಿಕವಾಗಿ 16 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿ ಸಿತು, ಇದು 16000 ಮನೆಗಳಿಗೆ ಸಾಕಾಗುತ್ತದೆ. ಇದು ನೀರು ಆವಿಯಾಗುವಿಕೆಯನ್ನು ನಿಧಾನಗೊಳಿ ಸಿತು, ಅಂತಿಮವಾಗಿ ನೀರಿನ ಲಭ್ಯತೆಯನ್ನು ಹೆಚ್ಚಿಸಿತು.

ಈ ‘ಎರಡು-ಪ್ರಯೋಜನ ವಿಧಾನ’ವು ಪ್ರಧಾನಿ ಮೋದಿಯವರ ತಂತ್ರಜ್ಞಾನದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಇದು ಒಂದೇ ಕ್ರಮದಿಂದ ಬಹು ಸಮಸ್ಯೆಗಳನ್ನು ಪರಿಹರಿಸಿತು, ನೀರನ್ನು ಸಂರಕ್ಷಿಸುವುದರ ಜತೆಗೆ ಶುದ್ಧ ಇಂಧನವನ್ನು ಉತ್ಪಾದಿಸಿತು. ಇದು ಪರಿಹಾರಗಳನ್ನು ಮೀರಿ ಹೆಚ್ಚಿನ ದಕ್ಷತೆ ಮತ್ತು ಪರಿಣಾಮವನ್ನು ತೋರಿಸಿತು.

ಅಮೆರಿಕ ಮತ್ತು ಸ್ಪೇನ್ ದೇಶಗಳು ಜಾಗತಿಕವಾಗಿ ಈ ವಿಧಾನವನ್ನು ಅಳವಡಿಸಿಕೊಂಡಿರುವುದು ಈ ನಾವೀನ್ಯದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ‘ಇ-ಧಾರಾ’ ವ್ಯವಸ್ಥೆಯು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿತು. ಸ್ವಾಗತ್ (SWAGAT) ಉಪಕ್ರಮವು ನಾಗರಿಕರಿಗೆ ವಿಡಿಯೋ ಕಾನ್ಫ ರೆನ್ಸಿಂಗ್ ಮೂಲಕ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತು. ಆನ್‌ಲೈನ್ ಟೆಂಡರ್‌ಗಳು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದವು.

ಈ ಉಪಕ್ರಮಗಳು ಭ್ರಷ್ಟಾಚಾರವನ್ನು ಕಡಿಮೆ ಮಾಡಿ ಸರಕಾರಿ ಸೇವೆಯನ್ನು ಸುಲಭವಾಗಿ ಪಡೆಯುವಲ್ಲಿ ಸುಧಾರಣೆ ತಂದವು. ಮೋದಿಯವರು ಆಡಳಿತದಲ್ಲಿ ಜನರ ನಂಬಿಕೆಯನ್ನು ಪುನಃ ಸ್ಥಾಪಿಸಿದರು, ಇದು ಗುಜರಾತಿನಲ್ಲಿ ಸತತವಾಗಿ ಸಾಧಿಸಿದ ದೊಡ್ಡ ಚುನಾವಣಾ ಯಶಸ್ಸಿನಲ್ಲಿ ಪ್ರತಿ-ಲಿಸುತ್ತದೆ.

ರಾಷ್ಟ್ರೀಯ ವೇದಿಕೆ: 2014ರಲ್ಲಿ, ಅವರು ಗುಜರಾತಿನ ಅನುಭವ ಮತ್ತು ಕಲಿಕೆಯನ್ನು ದೆಹಲಿಗೆ ತಂದರು. ಆದರೆ ಪ್ರಮಾಣ ವಿಭಿನ್ನವಾಗಿತ್ತು. ಅವರ ನಾಯಕತ್ವದಲ್ಲಿ, ವಿಶ್ವದ ಅತ್ಯಂತ ಸಮಗ್ರ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾದ ‘ಇಂಡಿಯಾ ಸ್ಟ್ಯಾಕ್’ ರೂಪುಗೊಂಡಿತು. ಅವರು ‘ಜೆಎಎಂ’ (ಜನಧನ್-ಆಧಾರ್-ಮೊಬೈಲ್) ತ್ರಿವಳಿಗೆ ಅಡಿಪಾಯ ಹಾಕಿದರು. ಜನಧನ್ ಖಾತೆ ಗಳು 530 ದಶಲಕ್ಷಕ್ಕೂ ಹೆಚ್ಚು ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿದವು.

ಇದು ಹಿಂದೆ ಆರ್ಥಿಕವಾಗಿ ಹೊರಗುಳಿದ ಜನರನ್ನು ಮೊದಲ ಬಾರಿಗೆ ಔಪಚಾರಿಕ ಆರ್ಥಿಕತೆ ಯೊಳಗೆ ತಂದಿತು. ಬೀದಿಬದಿಯ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಂಪೂರ್ಣವಾಗಿ ನಗದನ್ನು ಅವಲಂಬಿಸಿರುವ ಗ್ರಾಮೀಣ ಕುಟುಂಬಗಳು ಈಗ ಬ್ಯಾಂಕ್ ಖಾತೆಗಳನ್ನು ಹೊಂದಿವೆ. ಇದು ಅವರಿಗೆ ಉಳಿತಾಯವನ್ನು ಪಡೆಯಲು, ಸರಕಾರಿ ಸವಲತ್ತುಗಳನ್ನು ನೇರವಾಗಿ ಪಡೆಯಲು ಮತ್ತು ಸಾಲಗಳನ್ನು ಪಡೆಯಲು ಸಹಾಯ ಮಾಡಿದೆ.

ಆಧಾರ್ ಕಾರ್ಡು ನಾಗರಿಕರಿಗೆ ಡಿಜಿಟಲ್ ಗುರುತನ್ನು ನೀಡಿದೆ, ಇಲ್ಲಿಯವರೆಗೆ 1.42 ಬಿಲಿಯನ್ ನೋಂದಣಿಗಳೊಂದಿಗೆ. ಬಹು ದಾಖಲೆ ಪರಿಶೀಲನೆಗಳ ಅಗತ್ಯವಿರುವ ಬದಲು ಸರಕಾರಿ ಸೇವೆಗಳಿಗೆ ಪ್ರವೇಶ ಸುಲಭವಾಗಿದೆ.

ನೇರ ಲಾಭ ವರ್ಗಾವಣೆ (ಡಿಬಿಟಿ) ಉಪಕ್ರಮವು ಮಧ್ಯವರ್ತಿಗಳನ್ನು ತೆಗೆದು ಹಾಕಿದೆ ಮತ್ತು ಸೋರಿಕೆಯನ್ನು ಕಡಿಮೆ ಮಾಡಿದೆ. ಡಿಬಿಟಿ ಬಳಕೆಯಿಂದಾಗಿ ಇಲ್ಲಿಯವರೆಗೆ 4.3 ಲಕ್ಷ ಕೋಟಿ ರು.ಗೂ ಹೆಚ್ಚು ಉಳಿತಾಯವಾಗಿದೆ. ಈ ಉಳಿತಾಯವನ್ನು ಹೆಚ್ಚಿನ ಶಾಲೆಗಳು, ಆಸ್ಪತ್ರೆಗಳು ಮತ್ತು ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ.

ಹಿಂದೆ, ಗ್ರಾಹಕ ಪರಿಶೀಲನೆಯು ಸಂಕೀರ್ಣ ಪ್ರಕ್ರಿಯೆಯಾಗಿತ್ತು, ಭೌತಿಕ ದಾಖಲೆ ಪರಿಶೀಲನೆ, ಹಸ್ತಚಾಲಿತ ಪ್ರಕ್ರಿಯೆಗಳು ಮತ್ತು ಬಹುಸಂಪರ್ಕ ಬಿಂದುಗಳ ಅಗತ್ಯವಿತ್ತು. ಇದು ಸೇವಾ ಪೂರೈಕೆ ದಾರರಿಗೆ ಪ್ರತಿ ಪರಿಶೀಲನೆಗೆ ನೂರಾರು ರುಪಾಯಿಗಳ ವೆಚ್ಚವಾಗುವುದಕ್ಕೆ ಕಾರಣ ವಾಗುತ್ತಿತ್ತು. ಆಧಾರ್ ಆಧಾರಿತ ‘ಇ-ಕೆವೈಸಿ’ಯು ಇದನ್ನು ಪ್ರತಿ ದೃಢೀಕರಣಕ್ಕೆ ಕೇವಲ 5 ರು.ಗೆ ಇಳಿಸಿತು. ಈಗ ಸಣ್ಣ ವಹಿವಾಟುಗಳು ಸಹ ಆರ್ಥಿಕವಾಗಿ ಲಾಭದಾಯಕವಾಗಿವೆ.

ಯುಪಿಐ ಭಾರತದಲ್ಲಿ ಪಾವತಿ ವಿಧಾನವನ್ನು ಸಂಪೂರ್ಣವಾಗಿ ಪರಿವರ್ತಿಸಿದೆ. ಇದು ಪ್ರಾರಂಭ ವಾದಾಗಿನಿಂದ, 550 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇದರ ಮೂಲಕ ವಹಿವಾಟು ನಡೆಸಿದ್ದಾರೆ. 2025ರ ಆಗ ತಿಂಗಳೊಂದರ 24.85 ಲಕ್ಷ ಕೋಟಿ ರು. ಮೌಲ್ಯದ 20 ಬಿಲಿಯನ್‌ಗೂ ಹೆಚ್ಚು ವಹಿವಾಟುಗಳು ನಡೆದಿವೆ.

ಹಣ ವರ್ಗಾವಣೆಯು ಹಲವು ಗಂಟೆಗಳ ಬ್ಯಾಂಕ್ ಕೆಲಸದಿಂದ ಎರಡು ಸೆಕೆಂಡುಗಳಿಗಿಂತ ಕಡಿಮೆ ಸಮಯದ ಫೋನ್ ಸ್ಕ್ಯಾನ್‌ಗೆ ಬದಲಾಗಿದೆ. ಬ್ಯಾಂಕ್ ಭೇಟಿಗಳು, ಸರತಿ ಸಾಲುಗಳು ಮತ್ತು ಕಾಗದ ಪತ್ರಗಳು ಬಹುತೇಕ ಬಳಕೆಯಲ್ಲಿಲ್ಲ. ಈಗ, ತ್ವರಿತ ‘ಕ್ಯುಆರ್ ಕೋಡ್’ ಪಾವತಿಗೆ ಬದಲಾಗಿವೆ. ಇಂದು, ಭಾರತವು ವಿಶ್ವದ ಅರ್ಧದಷ್ಟು ನೈಜ-ಸಮಯದ ಡಿಜಿಟಲ್ ಪಾವತಿಗಳನ್ನು ನಿರ್ವಹಿಸು ತ್ತಿದೆ.

ಒಂದು ದಶಕದ ಹಿಂದೆ, ಭಾರತವು ಹೆಚ್ಚಾಗಿ ನಗದು ಅವಲಂಬಿತವಾಗಿತ್ತು. ಪ್ರಧಾನಿ ಮೋದಿ ಯವರ ದೃಷ್ಟಿಕೋನವು ಜೆಎಎಂ (ಜನಧನ್-ಆಧಾರ್ -ಮೊಬೈಲ್) ತ್ರಿವಳಿ ಮತ್ತು ಯುಪಿಐ ಮೂಲಸೌಕರ್ಯಕ್ಕೆ ಅಂತಿಮ ರೂಪವನ್ನು ನೀಡಿತು. ಕೋವಿಡ್ ಬಂದಾಗ ಡಿಜಿಟಲ್ ವಹಿವಾಟು ಗಳು ಅನಿವಾರ್ಯವಾದಾಗ, ಈ ವ್ಯವಸ್ಥೆ ಯಶಸ್ವಿಯಾಯಿತು. ‌

ಪರಿಣಾಮವಾಗಿ, ಯುಪಿಐ ಈಗ ಜಾಗತಿಕವಾಗಿ ವೀಸಾಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ಪ್ರಕ್ರಿಯೆ ಗೊಳಿಸುತ್ತದೆ. ಒಂದು ಸಾಮಾನ್ಯ ಮೊಬೈಲ್ ಫೋನ್ ಈಗ ಬ್ಯಾಂಕ್, ಪಾವತಿ ಗೇಟ್‌ವೇ ಮತ್ತು ಸೇವಾ ಕೇಂದ್ರವಾಗಿದೆ.

‘ಪ್ರಗತಿ’ (PಅಎಅSಐ) ವೇದಿಕೆಯು ಆಡಳಿತದ ಹೊಣೆಗಾರಿಕೆಯನ್ನು ಪರಿವರ್ತಿಸಿದೆ. ಈ ವೇದಿಕೆಯ ಮೂಲಕ ಮಾಸಿಕ ವಿಡಿಯೋ ಕಾನರೆಗಳೊಂದಿಗೆ ಪ್ರಧಾನ ಮಂತ್ರಿಯವರು ನೇರವಾಗಿ ಯೋಜನೆ ಯ ಮೇಲ್ವಿಚಾರಣೆ ನಡೆಸುತ್ತಾರೆ. ಪ್ರಧಾನಿಯವರು ಕೆಲಸವನ್ನು ನೇರ ವಿಡಿಯೋ ಮೂಲಕ ಪರಿಶೀಲಿಸುತ್ತಾರೆ ಎಂದು ಅಧಿಕಾರಿಗಳಿಗೆ ತಿಳಿದಾಗ, ಉತ್ತರದಾಯಿತ್ವ ತಂತಾನೇ ಬರುತ್ತದೆ.

ಉದಾಹರಣೆಗೆ, ವಿಳಂಬವಾದ ಹೆದ್ದಾರಿ ಯೋಜನೆಯು ‘ಪ್ರಗತಿ’ ವೇದಿಕೆ ಮೂಲಕ ಪರಿಶೀಲನೆಯ ಸಮಯದಲ್ಲಿ ತಕ್ಷಣ ಗಮನಕ್ಕೆ ಬರುತ್ತದೆ. ವಿಳಂಬಕ್ಕೆ ಕಾರಣಗಳನ್ನು ಅಧಿಕಾರಿಗಳು ವಿವರಿಸ ಬೇಕಾಗುತ್ತದೆ. ಇದು ತ್ವರಿತ ಸುಧಾರಣೆಯನ್ನು ಖಚಿತಪಡಿಸುತ್ತದೆ, ಅಂತಿಮವಾಗಿ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ.

ಎಲ್ಲರಿಗೂ ತಂತ್ರಜ್ಞಾನ: ತಂತ್ರಜ್ಞಾನವು ಕೃಷಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿ ಯನ್ನುಂಟುಮಾಡಿದೆ. ಹರಿಯಾಣದ ರೈತ ಜಗದೇವ್ ಸಿಂಗ್ ಅವರ ಉದಾಹರಣೆಯನ್ನೇ ತೆಗೆದು ಕೊಳ್ಳಿ, ಅವರು ಈಗ ಬೆಳೆ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೃತಕ ಬುದ್ಧಿಮತ್ತೆಯ (ಎಐ) ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಅವರು ತಮ್ಮ ಫೋನ್‌ನಲ್ಲಿ ನೈಜ-ಸಮಯದ ಹವಾಮಾನ ಮತ್ತು ಮಣ್ಣಿನ ಆರೋಗ್ಯ ಮಾಹಿತಿಯನ್ನು ಪಡೆಯುತ್ತಾರೆ.

ಪಿಎಂ-ಕಿಸಾನ್ ಯೋಜನೆಯು 11 ಕೋಟಿ ರೈತರಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ನೇರ ಆದಾಯ ಬೆಂಬಲವನ್ನು ನೀಡುತ್ತಿದೆ. ಡಿಜಿಲಾಕರ್ ಈಗ 57 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, 967 ಕೋಟಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದೆ. ನಿಮ್ಮ ಚಾಲನಾ ಪರವಾನಗಿ, ಪದವಿ ಪ್ರಮಾಣಪತ್ರಗಳು, ಆಧಾರ್ ಮತ್ತು ಇತರ ಅಧಿಕೃತ ದಾಖಲೆಗಳು ನಿಮ್ಮ ಫೋನ್‌ನಲ್ಲಿ ಸುರಕ್ಷಿತವಾಗಿ ಇರುತ್ತವೆ.

ಇನ್ನು ಮುಂದೆ ರಸ್ತೆಯಲ್ಲಿ ಪೊಲೀಸ್ ತಪಾಸಣೆಗಳ ಸಮಯದಲ್ಲಿ ಭೌತಿಕ ದಾಖಲೆಗಳಿಗಾಗಿ ತಡಕಾಡುವ ಅಗತ್ಯವಿಲ್ಲ. ಡಿಜಿಲಾಕರ್ ನಿಂದ ನಿಮ್ಮ ಡಿಜಿಟಲ್ ಪರವಾನಗಿಯನ್ನು ತೋರಿಸ ಬಹುದು. ತ್ವರಿತ ಆಧಾರ್ ದೃಢೀಕರಣದೊಂದಿಗೆ ಆದಾಯ ತೆರಿಗೆ ರಿಟರ್ನ್ ಗಳನ್ನು ಸಲ್ಲಿಸುವುದು ಸುಗಮವಾಗಿದೆ. ಒಂದು ಕಾಲದಲ್ಲಿ ದಾಖಲೆಗಳ ಕಟ್ಟನ್ನು ಹೊತ್ತು ತಿರುಗಬೇಕಾಗಿದ್ದದ್ದು ಈಗ ನಿಮ್ಮ ಜೇಬಿನ ಗಾತ್ರಕ್ಕೆ ಬಂದಿದೆ.

ಬಾಹ್ಯಾಕಾಶ ಮತ್ತು ನಾವೀನ್ಯ: ಭಾರತವು ಅಸಾಧ್ಯವೆನಿಸುವ ಕೆಲಸವನ್ನು ಸಾಧಿಸಿದೆ. ಹಾಲಿ ವುಡ್ ಚಿತ್ರಕ್ಕಿಂತ ಕಡಿಮೆ ಬಜೆಟ್ ನಲ್ಲಿ ಮೊದಲ ಪ್ರಯತ್ನದ ಮಂಗಳ ಗ್ರಹವನ್ನು ತಲುಪಿದೆ. ‘ಮಾರ್ಸ್ ಆರ್ಬಿಟರ್ ಮಿಷನ್’ಗೆ ಕೇವಲ 450 ಕೋಟಿ ರು. ವೆಚ್ಚವಾಗಿದ್ದು, ಭಾರತೀಯ ಎಂಜಿನಿಯ ರಿಂಗ್ ವಿಶ್ವ ದರ್ಜೆಯ ಫಲಿತಾಂಶಗಳನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ.

‘ಚಂದ್ರಯಾನ-3’ ಮೂಲಕ ಭಾರತವು ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಮಾಡಿದ ನಾಲ್ಕನೇ ರಾಷ್ಟ್ರ ಮತ್ತು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರ ವಾಯಿತು. ಇಸ್ರೋ ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.

ಭಾರತೀಯ ರಾಕೆಟ್‌ಗಳು ಈಗ 34 ದೇಶಗಳ ಉಪಗ್ರಹಗಳನ್ನು ಹೊತ್ತೊಯ್ಯುತ್ತವೆ. ‘ಗಗನಯಾನ ಮಿಷನ್’ ಭಾರತವನ್ನು, ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು ಬಾಹ್ಯಾಕಾಶಕ್ಕೆ ಮಾನವ ರನ್ನು ಕಳುಹಿಸುವ ನಾಲ್ಕನೇ ರಾಷ್ಟ್ರವನ್ನಾಗಿ ಮಾಡಲಿದೆ. ಪ್ರಧಾನಿ ಮೋದಿಯವರು ನಮ್ಮ ವಿeನಿಗಳೊಂದಿಗೆ ನಿಂತಿದ್ದಾರೆ ಮತ್ತು ಅವರ ಸಾಮರ್ಥ್ಯಗಳಲ್ಲಿ ಶೇ.100ರಷ್ಟು ವಿಶ್ವಾಸ ವಿಟ್ಟಿದ್ದಾರೆ.

ಜಾಗತಿಕ ನಾಯಕತ್ವ: ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಲಸಿಕೆ ವಿತರಣೆಯ ಅವ್ಯವಸ್ಥೆಯೊಂದಿಗೆ ಜಗತ್ತು ಹೋರಾಡಿತು. ಭಾರತ ತನ್ನ ಶಕ್ತಿಯ ಮೂಲಕ ಪ್ರತಿಕ್ರಿಯಿಸಿತು. ‘ಕೋವಿನ್ ವೇದಿಕೆ’ಯನ್ನು (ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಸಮಗ್ರ ಡಿಜಿಟಲ್ ಪರಿಹಾರ) ದಾಖಲೆ ಸಮಯದಲ್ಲಿ ನಿರ್ಮಿಸಲಾಯಿತು. ಈ ವೇದಿಕೆಯು ಡಿಜಿಟಲ್ ನಿಖರತೆಯೊಂದಿಗೆ 200 ಕೋಟಿ ಡೋಸ್ ಲಸಿಕೆಗಳನ್ನು ನಿರ್ವಹಿಸಿತು.

ಕಾಳದಂಧೆ ಇಲ್ಲ, ಪಕ್ಷಪಾತವಿಲ್ಲ, ಪಾರದರ್ಶಕ ಹಂಚಿಕೆ ಮಾತ್ರ ನಡೆಯಿತು. ಕ್ರಿಯಾತ್ಮಕ ಹಂಚಿಕೆಯು ವ್ಯರ್ಥವಾಗುವುದನ್ನು ಇದು ತಡೆಗಟ್ಟಿತು, ಬಳಕೆಯಾಗದ ಲಸಿಕೆಗಳನ್ನು ಹೆಚ್ಚಿನ ಬೇಡಿಕೆಯಿರುವ ಪ್ರದೇಶಗಳಿಗೆ ತಕ್ಷಣವೇ ಕಳುಹಿಸಲಾಯಿತು. ಈ ಸಾಧನೆಯು ರಾಜಕೀಯ ಇಚ್ಛಾ ಶಕ್ತಿ ಇದ್ದರೆ ತಂತ್ರಜ್ಞಾನದ ಮೂಲಕ ಬೃಹತ್ ಪ್ರಮಾಣದಲ್ಲಿ ಮತ್ತು ನ್ಯಾಯಯುತವಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಪ್ರದರ್ಶಿಸಿತು.

ತಯಾರಿಕೆಯಲ್ಲಿ ಕ್ರಾಂತಿ: ತಯಾರಿಕೆಯ ವಿಷಯವೂ ಅಷ್ಟೇ- ಮೂಲಭೂತ ಅಂಶಗಳನ್ನು ಕರಗತ ಮಾಡಿಕೊಳ್ಳದೆ ನೀವು ನೇರವಾಗಿ ಚಿಪ್‌ಗಳನ್ನು ತಯಾರಿಸಲು ಸಾಧ್ಯವಿಲ್ಲ. ಇದು ಕೋಡಿಂಗ್ ಅನ್ನು ಕಲಿಯುವ ಹಾಗೆ; ನೀವು ಅಪ್ಲಿಕೇಶನ್ ಅನ್ನು ನಿರ್ಮಿಸುವ ಮೊದಲು ‘ಹಲೋ ವರ್ಲ್ಡ್’ನೊಂದಿಗೆ ಪ್ರಾರಂಭಿಸಬೇಕು.

ಇಲೆಕ್ಟ್ರಾನಿಕ್ಸ್ ಉತ್ಪಾದನೆಯೂ ಈ ದಿಕ್ಕಿನಲ್ಲಿ ಸಾಗುತ್ತಿದೆ. ದೇಶಗಳು ಮೊದಲು ಜೋಡಣೆಯಲ್ಲಿ ಪರಿಣತಿ ಸಾಧಿಸುತ್ತವೆ, ನಂತರ ಉಪ-ಮಾಡ್ಯೂಲ್‌ಗಳು, ಬಿಡಿಭಾಗಗಳು ಮತ್ತು ಸಾಧನಗಳಿಗೆ ಹೋಗುತ್ತವೆ. ಭಾರತದ ಪ್ರಯಾಣವು ಈ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಧಾನ ಮಂತ್ರಿ ಯವರ ದೂರದೃಷ್ಟಿಯಡಿಯಲ್ಲಿ, ಇಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ನಮ್ಮ ಬಲವಾದ ನೆಲೆಯು ಈಗ ಮುಂದುವರಿದ ಸೆಮಿಕಂಡಕ್ಟರ್ ಉತ್ಪಾದನೆಯತ್ತ ಜಿಗಿಯಲು ನಮಗೆ ಅನುವು ಮಾಡಿ ಕೊಡುತ್ತಿದೆ. ‌

ಭಾರತವು ಬಹಳ ಹಿಂದಿನಿಂದಲೂ ವಿನ್ಯಾಸ ಪ್ರತಿಭೆಗಳ ಕೇಂದ್ರವಾಗಿದ್ದು, ವಿಶ್ವದ ಶೇ.20ಕ್ಕಿಂತ ಹೆಚ್ಚು ಚಿಪ್ ವಿನ್ಯಾಸಕರು ಇಲ್ಲಿದ್ದಾರೆ. ಭಾರತವು ಈಗ ಮುಂದುವರಿದ 2nm, 3nm ಮತ್ತು 7nm ಚಿಪ್ ವಿನ್ಯಾಸ ಸಾಮರ್ಥ್ಯಗಳನ್ನು ಹೊಂದಿದೆ, ಇವುಗಳನ್ನು ವಿಶ್ವಕ್ಕಾಗಿ ಭಾರತದಲ್ಲಿ ವಿನ್ಯಾಸ ಗೊಳಿಸಲಾಗುತ್ತಿದೆ.

ಫ್ಯಾಬ್‌ಗಳು ಮತ್ತು ಪ್ಯಾಕೇಜಿಂಗ್ ಸೌಲಭ್ಯಗಳನ್ನು ನಿರ್ಮಿಸುವ ಮೇಲಿನ ಪ್ರಸ್ತುತ ಗಮನವು ಸಹಜ ವಿಕಾಸವನ್ನು ಪ್ರತಿನಿಧಿಸುತ್ತದೆ. ಆದರೆ ಈ ವಿಧಾನವು ಉತ್ಪಾದನೆಯನ್ನು ಮೀರಿ ವಿಸ್ತರಿಸುತ್ತಿದೆ. ಸೆಮಿಕಂಡಕ್ಟರ್ ಉತ್ಪಾದನೆಯನ್ನು ಪೋಷಿಸುವ ರಾಸಾಯನಿಕಗಳು, ಅನಿಲಗಳು ಮತ್ತು ವಿಶೇಷ ವಸ್ತುಗಳನ್ನು ಸಹ ಬೆಂಬಲಿಸಲಾಗುತ್ತಿದೆ.

ಇದು ಬಿಡಿಬಿಡಿಯಾದ ಕಾರ್ಖಾನೆಗಳನ್ನು ಮಾತ್ರವಲ್ಲದೆ, ಇಡೀ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸು ತ್ತದೆ. ಮೌಲ್ಯ ಸರಪಳಿಗಳ ಬಗ್ಗೆ ಪ್ರಧಾನಿ ಮೋದಿಯವರ ಸ್ಪಷ್ಟ ತಿಳಿವಳಿಕೆಯಿಂದ ಈ ವಲಯ ಗಳಲ್ಲಿ ಪ್ರಗತಿ ಸಾಧ್ಯವಾಗಿದೆ. ಹಂತ ಹಂತವಾಗಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಮುಂದಿನ ಹಂತಕ್ಕೆ ಹೋಗುವ ಮೊದಲು ಮೌಲ್ಯ ಸರಪಳಿಯ ಪ್ರತಿಯೊಂದು ಹಂತವು ಬಲಿಷ್ಠವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಇಲ್ಲಿನ ವೈಶಿಷ್ಟ್ಯ.

ಜಾಣ್ಮೆಯೊಂದಿಗೆ ಮೂಲಸೌಕರ್ಯ: ‘ಪ್ರಧಾನಮಂತ್ರಿ ಗತಿಶಕ್ತಿ ಪೋರ್ಟಲ್’ ಅಭೂತಪೂರ್ವ ಪ್ರಮಾಣದಲ್ಲಿ ಜಿಐಎಸ್ ತಂತ್ರಜ್ಞಾನವನ್ನು ಬಳಸುತ್ತದೆ. ಪ್ರತಿಯೊಂದು ಮೂಲಸೌಕರ್ಯ ಯೋಜನೆಯ ಡಿಜಿಟಲ್ ನಕ್ಷೆ ಮಾಡಲಾಗಿದೆ. ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ಏಕಕಾಲದಲ್ಲಿ ಯೋಜಿಸಲಾಗಿದೆ. ಈಗ ಯಾವುದೇ ಅಡೆತಡೆಗಳಿಲ್ಲ. ಸಮನ್ವಯದ ಕೊರತೆಯಿಂದಾಗಿ ಯಾವುದೇ ವಿಳಂಬವಾಗುವುದಿಲ್ಲ.

‘ಇಂಡಿಯಾ ಎಐ ಮಿಷನ್’ ಮೂಲಕ, ಜಾಗತಿಕವಾಗಿ ಮೂರನೇ ಒಂದು ಭಾಗದಷ್ಟು ವೆಚ್ಚದಲ್ಲಿ 38000ಕ್ಕೂ ಹೆಚ್ಚು ಜಿಪಿಯುಗಳು ಲಭ್ಯವಿವೆ. ಇದು ನವೋದ್ಯಮಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಗಂಟೆಗೆ ಸರಾಸರಿ 67 ರು. ದರದಲ್ಲಿ ಸಿಲಿಕಾನ್ ವ್ಯಾಲಿ ಮಟ್ಟದ ಕಂಪ್ಯೂಟಿಂಗ್ ಅನ್ನು ಒದಗಿಸಿದೆ.

AIKosh ವೇದಿಕೆಯು ಹವಾಮಾನದಿಂದ ಹಿಡಿದು ಮಣ್ಣಿನ ಆರೋಗ್ಯದವರೆಗೆ 2000+ ಡೇಟಾಸೆಟ್‌ ಗಳನ್ನು ಹೊಂದಿದೆ. ಇವು ಭಾರತದ ಭಾಷೆಗಳು, ಕಾನೂನುಗಳು, ಆರೋಗ್ಯ ವ್ಯವಸ್ಥೆ ಗಳು ಮತ್ತು ಹಣಕಾಸಿಗಾಗಿ ಅಭಿವೃದ್ಧಿಪಡಿಸಲಾದ ಸ್ಥಳೀಯ ಎಲ್‌ಎಲ್‌ಎಂ (ಲಾರ್ಜ್ ಲಾಂಗ್ವೇಜ್ ಮಾಡ್ಯೂಲ್)‌ ಗಳಿಗೆ ಶಕ್ತಿ ತುಂಬುತ್ತವೆ.

ಪ್ರಧಾನಿ ಮೋದಿಯವರ ತಂತ್ರಜ್ಞಾನದ ತಿಳಿವಳಿಕೆಯು ಭಾರತದ ವಿಶಿಷ್ಟ ‘ಎಐ’ ನಿಯಂತ್ರಣ ವಿಧಾನದಲ್ಲಿಯೂ ಪ್ರತಿಫಲಿಸುತ್ತದೆ. ಮಾರುಕಟ್ಟೆ-ಆಧಾರಿತ ಮಾದರಿ ಅಥವಾ ಸರಕಾರಿ-ನಿಯಂತ್ರಿತ ವಿಧಾನಕ್ಕಿಂತ ಭಿನ್ನವಾಗಿ, ವಿಶಿಷ್ಟವಾದ ತಾಂತ್ರಿಕ-ಕಾನೂನು ಚೌಕಟ್ಟು ಅವರ ದೃಷಿಕೋನವಾಗಿದೆ.

ನಾವೀನ್ಯವನ್ನು ಹತ್ತಿಕ್ಕುವ ಕಠಿಣ ನಿಯಮಗಳ ಬದಲಿಗೆ, ಸರಕಾರವು ತಾಂತ್ರಿಕ ಸುರಕ್ಷತಾ ಕ್ರಮ ಗಳಲ್ಲಿ ಹೂಡಿಕೆ ಮಾಡುತ್ತದೆ. ವಿಶ್ವವಿದ್ಯಾಲಯಗಳು ಮತ್ತು ಐಐಟಿಗಳು ಡೀಪ್ ಫೇಕ್, ಗೌಪ್ಯತೆ ಕಾಳಜಿಗಳು ಮತ್ತು ಸೈಬರ್ ಭದ್ರತಾ ಬೆದರಿಕೆಗಳನ್ನು ನಿಭಾಯಿಸಲು ‘ಎಐ-ಚಾಲಿತ’ ಪರಿಕರ ಗಳನ್ನು ಅಭಿವೃದ್ಧಿಪಡಿಸುತ್ತವೆ. ಈ ವಿಧಾನವು ಜವಾಬ್ದಾರಿಯುತ ನಿಯೋಜನೆಯನ್ನು ಖಚಿತ ಪಡಿಸಿಕೊಂಡು ನಾವೀನ್ಯವನ್ನು ಉತ್ತೇಜಿಸುತ್ತದೆ.

ಮೂಲಸೌಕರ್ಯಕ್ಕಾಗಿ ತಂತ್ರಜ್ಞಾನ: ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯು 182 ಮೀಟರ್ ಎತ್ತರವಿದ್ದು, ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. 3ಡಿ ಮಾಡೆಲಿಂಗ್ ಮತ್ತು ಕಂಚಿನ ಹೊದಿಕೆಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಈ ಪ್ರತಿಮೆಯು ವಾರ್ಷಿಕವಾಗಿ 58 ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಯೋಜನೆಯು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಕೆವಾಡಿಯಾವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸಿದೆ.

359 ಮೀಟರ್ ಎತ್ತರದ ‘ಚೆನಾಬ್ ಸೇತುವೆ’, ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ‘ಐಜ್ವಾಲ್ ರೈಲು ಮಾರ್ಗ’ವು ನವೀನ ಹಿಮಾಲಯನ್ ಸುರಂಗ ಮಾರ್ಗ ವಿಧಾನ ವನ್ನು ಬಳಸಿದೆ, ಇದು ಅತ್ಯಂತ ಕಠಿಣ ಭೂಪ್ರದೇಶದಲ್ಲಿ ಸುರಂಗಗಳು ಮತ್ತು ಸೇತುವೆಗಳ ಮೂಲಕ ಹಾದುಹೋಗುತ್ತದೆ. ಹೊಸ ಪಂಬನ್ ಸೇತುವೆಯು ಶತಮಾನದಷ್ಟು ಹಳೆಯದಾದ ರಚನೆಯನ್ನು ಆಧುನಿಕ ಎಂಜಿನಿಯರಿಂಗ್‌ನೊಂದಿಗೆ ಬದಲಾಯಿಸಿದೆ.

ಇವು ಕೇವಲ ಎಂಜಿನಿಯರಿಂಗ್‌ನ ಅದ್ಭುತಗಳಲ್ಲ. ತಂತ್ರಜ್ಞಾನ ಮತ್ತು ದೃಢಸಂಕಲ್ಪದ ಮೂಲಕ ಭಾರತವನ್ನು ಸಂಪರ್ಕಿಸುವ ಮೋದಿಯವರ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೆ.

ಮಾನವೀಯ ಸ್ಪರ್ಶ: ಪ್ರಧಾನಿ ಮೋದಿಯವರು ತಂತ್ರಜ್ಞಾನವನ್ನು ಅರ್ಥಮಾಡಿಕೊಂಡಿದ್ದಾರೆ, ಆದರೆ ಅವರು ಜನರನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರ ಅಂತ್ಯೋದಯದ ದೃಷ್ಟಿಕೋನವು ಪ್ರತಿಯೊಂದು ಡಿಜಿಟಲ್ ಉಪಕ್ರಮಕ್ಕೂ ಸೂರ್ತಿ ನೀಡುತ್ತದೆ. ಯುಪಿಐ ಬಹು ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಬಡ ರೈತನು ಶ್ರೀಮಂತ ಕೈಗಾರಿಕೋದ್ಯಮಿಯಂತೆ ಡಿಜಿಟಲ್ ಗುರುತನ್ನು ಹೊಂದಿದ್ದಾನೆ.

ಸಿಂಗಾಪುರದಿಂದ ಫ್ರಾನ್ಸ್‌ ವರೆಗಿನ ದೇಶಗಳು ಯುಪಿಐಗೆ ಸಂಪರ್ಕ ಹೊಂದಿವೆ. ಜಿ-20 ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು, ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಅತ್ಯಗತ್ಯ ಎಂದು ಗುರುಸಲಾಗಿದೆ. ಜಪಾನ್ ಇದಕ್ಕೆ ಪೇಟೆಂಟ್ ನೀಡಿದೆ. ಭಾರತವು ಪ್ರವರ್ತಕವಾಗಿ ರೂಪಿಸಿದ ಈ ಪರಿಹಾರವು ಡಿಜಿಟಲ್ ಪ್ರಜಾಪ್ರಭುತ್ವಕ್ಕೆ ಜಾಗತಿಕ ಮಾದರಿಯಾಗಿದೆ.

ಮೋದಿಯವರು ಗುಜರಾತಿನಲ್ಲಿನ ತಮ್ಮ ಆರಂಭಿಕ ಪ್ರಯೋಗಗಳಿಂದ ಹಿಡಿದು ‘ಡಿಜಿಟಲ್ ಇಂಡಿಯಾ’ ಉದ್ಘಾಟನೆಯವರೆಗಿನ ಅವರ ಈ ಪ್ರಯಾಣವು ಜೀವನವನ್ನು ಪರಿವರ್ತಿಸುವ ತಂತ್ರ ಜ್ಞಾನದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅವರು ತಂತ್ರಜ್ಞಾನವನ್ನು ಆಡಳಿತದ ವ್ಯಾಕರಣ ವನ್ನಾಗಿ ಮಾಡಿದ್ದಾರೆ.

ನಾಯಕರು ತಂತ್ರಜ್ಞಾನವನ್ನು ಮಾನವೀಯತೆಯೊಂದಿಗೆ ಅಳವಡಿಸಿಕೊಂಡಾಗ, ಎಲ್ಲಾ ರಾಷ್ಟ್ರ ಗಳು ಭವಿಷ್ಯದತ್ತ ತಮ್ಮ ಪ್ರಯಾಣವನ್ನು ವೇಗಗೊಳಿಸಬಹುದು ಎಂಬುದನ್ನು ಅವರು ತೋರಿಸಿ ದ್ದಾರೆ.

(ಲೇಖಕರು ಕೇಂದ್ರ ರೈಲ್ವೆ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗಳ ಸಚಿವರು)