ಜಿತೇಂದ್ರ ಕುಂದೇಶ್ವರ
ಅನಾಮಿಕ ಹೇಳಿದೆ ಲ್ಲಾ ಸುಳ್ಳಾ?
ಒಂದೇ ಒಂದು ಕಳೇಬರ ಸಿಕ್ಕಿಲ್ಲ
ಬುರುಡೆ ಬಿಟ್ಟದ್ದೆಲ್ಲ ಬುರುಡೇ ಪ್ರಸಂಗ
‘ನ್ಯಾಯ, ನೀತಿಮೂರ್ತಿವೆತ್ತ ಸತ್ಯ ದೈವ’ದ ಧರ್ಮಸ್ಥಳದ ಮಂಜನಾಥನ ಶ್ರೀಕ್ಷೇತ್ರಕ್ಕೆ ಕಳಂಕ ತಟ್ಟಿಸುವ ಧೈರ್ಯವೇ? ‘ಮಾತನಾಡುವ ಮಂಜುನಾಥ’ ಎಂದೇ ಭಕ್ತರು ಕರೆಯುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೇ ಧರ್ಮ ಸಂಕಟವೇ? ಪುಡಿ ರೌಡಿಗಳು, ಕೆಟ್ಟ ಕೊಳಕರು, ಕ್ರಿಮಿನಲ್‌ಗಳು, ಕಮ್ಯೂನಿಸ್ಟರು, ಮತಾಂಧರ ಒಂದು ವರ್ಗ ಖಾವಂದರನ್ನು ಕೆಟ್ಟದಾಗಿ ರಾಜಾ ರೋಷವಾಗಿ ನಿಂದಿಸುತ್ತಿದ್ದರೂ ಈ ಸಭ್ಯ ಸಮಾಜ ಆರಂಭದಿಂದಲೂ ಸತ್ಯ ಹೊರಬರಲಿ ಎಂದು ಧ್ವನಿ ಎತ್ತಿರಲಿಲ್ಲ.
ಅಂತಿಮ ಗುಂಡಿ ತೋಡಿ ಮುಗಿಯುವವರೆಗೂ ಹೇರಳವಾಗಿರುವ ಸಹನೆ ಶಕ್ತಿಯನ್ನು ಬಳಸಿ ಕೊಂಡು ಸುಮ್ಮನೆ ಉಳಿದಿದ್ದರು. ಈ ನಡುವೆ ಸತ್ಯದ ಪರವೂ ಇಲ್ಲ, ಸುಳ್ಳಿನ ಪರವೂ ಇಲ್ಲ ಎಂಬ ಸೋಗಿನಲ್ಲಿದ್ದ ಕೆಲ ತಟಸ್ಥರು ತನಿಖೆಯಾಗಲಿ, ಹೆಣ ಹೊರ ತೆಗೆಯಲಿ, ಶಿಕ್ಷೆಯಾಗಲಿ ಎನ್ನುತ್ತಾ ಪರೋಕ್ಷವಾಗಿ ಧರ್ಮಸ್ಥಳ ಅವಹೇಳನಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರೋತ್ಸಾಹ ನೀಡುತ್ತಿದ್ದರು.
ಸಿಡಿದೆದ್ದ ಭಕ್ತರ ಪಡೆ: ಆದರೆ ಅನಾಮಿಕ ಸೂಚಿಸಿದ 13ನೇ ಕಾರ್ಯ ಮುಕ್ತಾಯದ ಸೂಚನೆ ಸಿಗುತ್ತಿದ್ದಂತೆ ರಾಜ್ಯಾದ್ಯಂತ ಧರ್ಮಸ್ಥಳ ಭಕ್ತರು ಇದು ಷಡ್ಯಂತ್ರ ಎಂದು ಸಿಡಿದೇಳುತ್ತಿದ್ದಾರೆ. ರಾಜ್ಯದ ಎಲ್ಲೆಡೆಗಳಿಂದ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಜನರು ಸಿಡಿದೇಳುತ್ತಿದ್ದಾರೆ. ಇದನ್ನು ನೋಡಿದ ಜನಪ್ರತಿನಿಧಿಗಳು ಅನಿವಾರ್ಯವಾಗಿ ಸದನದಲ್ಲಿ ಧ್ವನಿ ಎತ್ತುತ್ತಿದ್ದಾರೆ.
ಇದನ್ನೂ ಓದಿ: Yagati Raghu Naadig Column: ಬೌಬೌ ಬಾಲವೆಂಬುದು ಯಾವತ್ತಿದ್ರೂ ಡೊಂಕೇ!
ಹೈಕಮಾಂಡ್ ಪ್ರಭಾವ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಪರಮೇಶ್ವರ್ ಸಹಿತ ರಾಜ್ಯ ಸರಕಾರ ಧರ್ಮಸ್ಥಳ ಕ್ಷೇತ್ರದ ಪರವಾಗಿಯೇ ಇದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್ ಅವರಂತೂ ಎಸ್‌ಐಟಿ ತನಿಖೆ ನಡೆಸಲು ಎಡಪಕ್ಷದವರೇ ಕಾರಣ ಎಂದು ಹೇಳಿಕೆಯನ್ನೂ ಕೊಟ್ಟು ಬಿಟ್ಟರು.
ವಿಷಯ ಸ್ವಲ್ಪ ನಿಜ. ಆದರೆ ಕಾಂಗ್ರೆಸ್ ಒಳಗಿರುವ ಎಡಚಿಂತನೆಯ, ಹಿಂದೂ ಮತಗಳನ್ನು ಒಡೆಯುವ ಸ್ಕೆಚ್ ಮಾಡಿರುವ ಕೇರಳ ಮತ್ತು ತಮಿಳುನಾಡಿನ ಕೈ ಹೈಕಮಾಂಡ್ ರಾಜಕಾರಣಿಗಳ ಪ್ರಭಾವ ಇದರಲ್ಲಿ ಕಾಣುತ್ತಿದೆ.
ತಲೆ ಬುರುಡೆ ಪ್ರಸಂಗ : ಧರ್ಮಸ್ಥಳದಲ್ಲಿ ಯುವತಿಯರನ್ನು, ಬಾಲಕಿಯರನ್ನು ಅಪ ಹರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಬಳಿಕ ನೂರಾರು ಹೆಣ ಹೂತಿದ್ದೇನೆ ಎಂದ ಅನಾಮಿಕ ಎಂಬ ತಲೆ ಬುರುಡೆ ಪ್ರಸಂಗ ಆರಂಭವಾಯಿತೋ ರಣಾಂಗಣ ಸಿದ್ಧವಾಗಿತ್ತು.
ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅರುಣ್ ಕುಮಾರ್ ದೂರುದಾರನ ಮಂಪರು ಪರೀಕ್ಷೆಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೋ ವಕೀಲರ ಪಡೆ ಆ ಎಸ್‌ಪಿ ತನಿಖೆ ನಡೆಸೋದೇ ಬೇಡ ಎಂದರು. ಅದೂ ಅಲ್ಲದೆ ಡಿಐಜಿ ಪ್ರಣಬ್ ಮೊಹಂತಿ ನೇತೃತ್ವ ದಲ್ಲಿ ಎಸ್‌ಐಟಿ ರಚನೆಯಾಗಲಿ ಎಂದರು. ಆದರೆ ಬೆಳಗ್ಗೆ ಇದರ ಅಗತ್ಯ ವಿಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರವಮೇಶ್ವರ, ಸಂಜೆಯಾಗುವಾಗ ಪ್ರಣಬ್ ಮೊಹಾಂತಿಯನ್ನು ನೇಮಿಸಿ ಆದೇಶ ಹೊರಡಿಸಿಯೇ ಬಿಟ್ಟರು.
ಡಿಐಜಿ ಪ್ರಣಬ್ ಮೊಹಾಂತಿ: ತನಿಖಾ ತಂಡದಲ್ಲಿ ಕಾಂಗ್ರೆಸ್ ಪ್ರಭಾವಿ ಕೆ.ಜೆ. ಜಾರ್ಜ್‌ನ ಆತ್ಮೀಯ ಡಿಐಜಿ ಪ್ರಣಬ್ ಮೊಹಾಂತಿ ಇದ್ದಾರೆ. ಮೊಹಾಂತಿ ಅಂದಾಗ ನೆನಪಾಯಿತು. ಹಿಂದೊಮ್ಮೆ ೧೫ ವರ್ಷಗಳ ಹಿಂದೆ ಚರ್ಚ್ ದಾಳಿ ಸಂದರ್ಭ ಮಂಗಳೂರಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಗಣಪತಿ ಪ್ರಕರಣ. ಹಿಂದುಗಳ ಮೇಲೆ ಕಲ್ಲು ತೂರುತ್ತಿದ್ದವರ ಮೇಲೆ ಗಣಪತಿ ಅವರು ಲಾಠಿ ಚಾರ್ಜ್ ನಡೆಸಿದ ಆರೋಪದಲ್ಲಿ ತನಿಖೆ ಎದುರಿಸಿದ್ದರು.
ಇದೇ ಕಾರಣಕ್ಕೆ ಇನ್‌ಸ್ಪೆಕ್ಟರ್ ಅವರನ್ನು ಸತಾಯಿಸಿ ಯಾವುದೇ ಪೋಸ್ಟಿಂಗ್ ನೀಡಿರಲಿಲ್ಲ. ಇದೇ ಕಾರಣಕ್ಕೆ ಇನ್‌ಸ್ಪೆಕ್ಟರ್ ಗಣಪತಿ ಮಡಿಕೇರಿಯ ಸುದ್ದಿವಾಹಿನಿಯೊಂದರ ಕ್ಯಾಮೆರಾ ಮುಂದೆ ನನ್ನ ಆತ್ಮಹತ್ಯೆಗೆ ಪ್ರಣಬ್ ಮೊಹಾಂತಿ ಮತ್ತು ಕೆ.ಜೆ. ಜಾರ್ಜೇ ಕಾರಣ ಎಂದು ಹೇಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್‌ಸ್ಪೆಕ್ಟರ್ ಪ್ರಯತ್ನ ಮಾಡಿದ್ದರೂ ಆರೋಪಿಗಳು ಇಬ್ಬರೂ ಖುಲಾಸೆಗೊಂಡಿದ್ದರು ಎನ್ನುವುದನ್ನು ಸ್ಮರಿಸಬಹುದು.
ಲೈವ್ ಕವರೇಜ್‌ಗಳು: ಇವರ ತನಿಖೆ ಶುರುವಾಗುವ ಹೊತ್ತಲ್ಲಿ ಮುಸುಕುಧಾರಿ ಸಮಾಧಿ ಹುಡುಕುವ ಲೈವ್ ಕವರೇಜ್‌ಗಳು ಸ್ಥಳೀಯ ವಾಹಿನಿಗಳಿಂದ ಶುರು ಮಾಡಿ ಬಿಬಿಸಿ, ಅಲ್ ಜಜಿರಾವರೆಗೂ ಬಂದು ಧರ್ಮಸ್ಥಳ -ಲ್ಸ್ ಎಂದು ಅತ್ಯಾಚಾರ, ಸಾಮೂಹಿಕ ಹತ್ಯಾಕಾಂಡ ಎಂಬ ರೀತಿ ಬಿಂಬಿಸತೊಡಗಿದವು.
ಇದೇ ಧರ್ಮಸ್ಥಳ ಟಾರ್ಗೆಟ್ ಗ್ರೂಪ್‌ನ ಉದ್ದೇಶವಾಗಿತ್ತು. ಶಬರಿಮಲೆ ಟಾರ್ಗೆಟ್ ಹಿಂದಿರುವ ಹಿಂದೂ ವಿರೋಧಿ ಶಕ್ತಿಗಳೇ ಇಲ್ಲಿಯೂ ವಿಜೃಂಬಿಸುತ್ತಿದ್ದವು. ಅಪ್ಪಟ ಅಪಪ್ರಚಾರದ ಷಡ್ಯಂತ್ರ : ಯಾವಾಗ ಅನಾಮಿಕ ತೋರಿಸಿದ ಸಮಾಧಿಗಳಲ್ಲಿ ಶವ ಬಿಡಿ ತುಂಡು ಮೂಳೆಗಳು ಸಿಗದೇ ಇದ್ದಾಗಲೇ ಧರ್ಮಸ್ಥಳ ಧರ್ಮಾಧಿಕಾರಿ ಕುಟುಂಬದ ಮೇಲೆ ಕವಿದಿದ್ದ ಅಪಪ್ರಚಾರದ ಮೋಡ ಮರೆಯಾಗತೊಡಗಿತು.
ಹತ್ತು ದಿನಗಳಲ್ಲಿ ಯಾವುದೇ ಮಹಿಳೆಯ ಅಸ್ಥಿ ಪಂಜರೆ ಸಿಗದೇ ಇದ್ದಾಗ ಇದೊಂದು ಅಪಪ್ರಚಾರ ದ ಷಡ್ಯಂತ್ರ ಎನ್ನುವುದು ಭಕ್ತರಿಗೆ ಅರಿವಾಗತೊಡಗಿತು. ಕ್ರಮೇಣ ಆರೆಸ್ಸೆಸ್, ಬಿಜೆಪಿಯೂ ಈ ಪ್ರಕರಣದ ಕುರಿತು ಮಾತನಾಡಲು ಆರಂಭಿಸಿತು. ಒಂದು ವೇಳೆ ಆರೆಸೆಸ್ಸ್ ವರಿಷ್ಠ ಕಲ್ಲಡ್ಕ ಪ್ರಭಾಕರ ಭಟ್ ಧರ್ಮಸ್ಥಳ ರಕ್ಷಣೆ ಹೋರಾಟಕ್ಕೆ ಮೊದಲೇ ಧುಮುಕಿದ್ದರೆ ಈ ವಿಷಮ ಹಂತಕ್ಕೆ ಬರುತ್ತಿರಲಿಲ್ಲ.
ಏಕೆಂದರೆ ಕಲ್ಲಡ್ಕ ಶಾಲೆಗೆ ಕೊಲ್ಲೂರಿನ ಅಕ್ಕಿಸಾಮಗ್ರಿ ನಿರ್ಬಂಧಿಸಿದಾಗ ಅವರು ಹೋರಾಟ ಸಂಘಟಿಸಿದ ಬಳಿಕ ರಮಾನಾಥ ರೈಗಳು ಇದುವರೆಗೂ ಸಾವರಿಸಿಕೊಂಡಿಲ್ಲ. ಆದರೆ ಸೌಹಾರ್ದ ಕ್ಷೇತ್ರದ ಧರ್ಮಸ್ಥಳದಲ್ಲಿ ಹಿಂದುತ್ವವಾದಿಗಳಿಗೆ ಗೌರವ ಇದ್ದರೂ ಅಧಿಕಾರ, ಮನ್ನಣೆ ಇರಲಿಲ್ಲ. ಧರ್ಮಸ್ಥಳ ಹೋರಾಟಗಾರಲ್ಲಿ ಕಮ್ಯನಿಷ್ಟರು ಮಾತ್ರವಲ್ಲ ಅವರ ದಾಳವಾಗಿ ಕೇಸರಿಧಾರಿ ಹಿಂದುತ್ವ ಹೋರಾಟಗಾರರಿದ್ದರು.
ಸೌಜನ್ಯ ಹತ್ಯೆಗೆ ನ್ಯಾಯ ಸಿಗಲೇ ಬೇಕು ಎನ್ನುವ ನೈಜ ಹೋರಾಟಗಾರರು ಇದ್ದರು. ಆದರೆ ನಿಜವಾದ ಅತ್ಯಾಚಾರಿಯ ಬದಲಿಗೆ ಧರ್ಮಸ್ಥಳ ಕುಟುಂಬದವರೇ ಎಂದು ಅವರ ಮಿದುಳಿಗೆ ತುಂಬಿಸಲಾಗಿತ್ತು. ಹಿಂದುತ್ವವಾದಿಗಳು ದೊಡ್ಡ ಸಂಖ್ಯೆಯಲ್ಲಿ ಹೋರಾಟದಲ್ಲಿ ಇದ್ದ ಕಾರಣಕ್ಕೆ ಪ್ರಕರಣ ಇಷ್ಟು ದೂರ ಬರುವಂತಾಯಿತು.
ಧರ್ಮಸ್ಥಳ ಕ್ಷೇತ್ರದ ಸಹನೆ: ಪ್ರಕರಣ ಇಷ್ಟು ಬೆಳೆಯಲು ಮತ್ತೊಂದು ಕಾರಣ ಧರ್ಮಸ್ಥಳ ಕ್ಷೇತ್ರದ ಸಹನೆ. ಹೆಗ್ಗಡೆಯವರು ಹೋರಾಟ ರೂಪಿಸಲು ತಮ್ಮ ಕಡೆಯಿಂದಲೇ ಪ್ರಯತ್ನ ಪಡುತ್ತಿದ್ದರೆ ಧರ್ಮಸ್ಥಳ ಸಂಸ್ಥೆಗೆ ಸಂಬಂಽಸಿ ಸಾವಿರಾರು ಸಿಬ್ಬಂದಿಗಳೇ ಇದ್ದಾರೆ. ಸಂಸ್ಥೆಯಿಂದ ಅನುದಾನ ಪಡೆದ ಲಕ್ಷ ಜನರಿದ್ದಾರೆ. ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದರೂ ಈ ಧರ್ಮ ಸಂಕಟದ ತೂಗುಕತ್ತಿ ಮುಂದೆ ಧರ್ಮಾಧಿಕಾರಿ ಇಷ್ಟು ಸಮಯ ನಿಂತುಕೊಂಡರೇಕೆ ? ಪ್ರಶ್ನೆಯೂ ಕಾಡುತ್ತಿದೆ.
ಅರ್ಧ ಶತಮಾನದ ಸೇವೆ
ಧರ್ಮಾಧಿಕಾರಿಯಾಗಿ ಅರ್ಧ ಶತಮಾನಕ್ಕೂ ಹೆಚ್ಚು ಧರ್ಮಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಅರೋಗ್ಯ ಸಂಬಂಧಿ ಸಮಾಜ ಮುಖಿ ಕಾರ್ಯಗಳು ಬೆಟ್ಟದಷ್ಟಿದೆ. ಇದು ದುಷ್ಟ ವರ್ಗಕ್ಕೆ ಅದರಲ್ಲಿಯೂ ಮತಾಂತರ ರಾಕೆಟ್‌ಗೆ ಸೆಡ್ಡು ಹೊಡೆದಿವೆ. ಹಿಂದುಳಿದವರ ಮನೆಗಳಲ್ಲಿ ಮತ್ತೆ ದೇವರು ಮತ್ತು ಬೆಳಕನ್ನು ಜ್ಞಾನವನ್ನು ಮರು ತಂದ ಜ್ಞಾನಿ, ನೂರಾರು ದೇವಸ್ಥಾನಗಳ ಜೋರ್ಣೋದ್ಧಾರ ಮಾಡಿಸಿ ಲಕ್ಷಾಂತರ ಮಂದಿಗೆ ಬದುಕು ಕಟ್ಟಿ ಕೊಟ್ಟ ಮಹಾ ದಾನಿ. ಕುಡಿತದಿಂದ ಮನೆಮಠ ಕಳೆದುಕೊಂಡವರಿಗೆ ಸುಂದರ ಬದುಕನ್ನು ವಾಪಸ್ ತಂದು ಕೊಟ್ಟ ಭಗೀರಥ. ಇಂಥ ಉದಾತ್ತ ೇವೆಗಳೇ ಎದುರಾಳಿಗಳ ಕಣ್ಣು ಕುಕ್ಕುವಂತಾಯಿತು.
ಹೆಗ್ಗಡೆಯವರಿಗೆ ಅಗ್ನಿಪರೀಕ್ಷೆ
ಸಾಕ್ಷಾತ್ ಲಯಕರ್ತ ಪರಶಿವನಿಗೇ ನಿಂದನೆಗಳು, ಸಂಕಷ್ಟಗಳು ಬಂದಿತ್ತು. ರುಂಡಮಾಲಾಧಾರಿ ಶಿವ ಬ್ರಹ್ಮಕಪಾಲ ರುಂಡವನ್ನು ಹಿಡಿದುಕೊಂಡು ಭಿಕ್ಷುಕನಂತೆ ಭಿಕ್ಷಾಂದೇಹಿ ಎಂದು ಲೋಕವಿಡೀ ಅಲೆಯುತ್ತಿದ್ದ ಪುರಾಣ ಕಥೆ ಗೊತ್ತಿಲ್ಲವೇ? ಶಿವನ ಆರಾಧನೆ ಮಾಡುವ ಧರ್ಮಾಧಿಕಾರಿಗಳಿಗೆ ಇದೂ ಒಂದು ರೀತಿಯ ಅಗ್ನಿ ಪ್ರವೇಶವಿಲ್ಲದ ಬೆಂಕಿ ಉಗುಳುವ ನಿಂದನೆ, ಟೀಕೆ ಆರೋಪಗಳ ದಾಟುವ ಅಗ್ನಿ ಪರೀಕ್ಷೆಯೂ ಇರಬಹುದು. ಇರಲಿ, ಈ ಸಮಾಜ ಒಳ್ಳೆಯ ನಾಯಕರನ್ನು ಯಾರನ್ನು ಬಿಟ್ಟಿದೆ. ಅಂತಹ ವಿವೇಕಾನಂದರನ್ನೇ ಬಿಟ್ಟಿಲ್ಲ. ಬುದ್ಧನನ್ನು, ಜೀಸಸ್ ಕ್ರೈಸ್ತ ಅವರನ್ನೇ ಬಿಟ್ಟಿಲ್ಲ! ಇನ್ನು ವೀರೇಂದ್ರ ಹೆಗ್ಗಡೆಯವರನ್ನು ಬಿಟ್ಟಾರೆಯೇ?