ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಬೈಲೈನ್‌ ಸ್ಟೋರೀಸ್‌
ರಸ್ತೆ ತೆರಿಗೆ ಕಟ್ಟಲು ವರ್ಷದವರೆಗೆ ಅವಕಾಶವಿದ್ದರೂ ದಂಡಾಸ್ತ್ರ ಪ್ರಯೋಗ

ನೆರೆ ರಾಜ್ಯದಿಂದ ಕಾರು ತಂದು ಓಡಿಸಿದರೆ ತಪ್ಪೇನು ?

ಬೆಂಗಳೂರಿನಲ್ಲಿ ವಾಸಿಸುವ ಅನೇಕರು ಪಾಂಡಿಚೇರಿಯಲ್ಲಿ ವಾಹನ ಖರೀದಿಸುತ್ತಾರೆ. ಬಳಿಕ ವರ್ಷದೊಳಗೆ ಕರ್ನಾಟಕ ರಸ್ತೆ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಆರ್‌ಟಿಒ ಅಧಿಕಾರಿಗಳು, ವರ್ಷದ ಅವಧಿ ಮೀರದಿರುವ ವಾಹನಗಳನ್ನು ಜಪ್ತಿ ಮಾಡುತ್ತಿರುವ ಹಾಗೂ ಆ ವಾಹನಗಳಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುತ್ತಿದ್ದಾರೆ ಎಂದು ಕಾರ್ ಮಾಲೀಕರು ಆರೋಪ ಮಾಡು ತ್ತಿದ್ದಾರೆ

Legislature House: ಭದ್ರಕೋಟೆ ನಡುವೆಯಿರುವ ಎಲ್‌ಎಚ್ʼಗೇಕೆ ಸ್ಮಾರ್ಟ್‌ ಲಾಕರ್‌ ?

ಭದ್ರಕೋಟೆ ನಡುವೆಯಿರುವ ಎಲ್‌ಎಚ್ʼಗೇಕೆ ಸ್ಮಾರ್ಟ್‌ ಲಾಕರ್‌ ?

ರಾಜಧಾನಿ ಬೆಂಗಳೂರಿನ ಭದ್ರಕೋಟೆಯಂತಿರುವ, ಶಕ್ತಿಸೌಧ ಹಾಗೂ ರಾಜಭವನಕ್ಕೆ ಹೊಂದಿ ಕೊಂಡಿರುವ ಶಾಸಕರ ಭವನದಲ್ಲಿ ಶಾಸಕರ ಕೋಣೆಗಳಿಗೆ ಆಧುನಿಕ ಸ್ಮಾರ್ಟ್ ಲಾಕ್, ಲಾಕರ್ ಅಳವಡಿಸಲು ಮುಂದಾಗಿರುವ ವಿಧಾನಸಭಾ ಸಚಿವಾಲಯದ ನಡೆಗೆ ಹಲವರು ಅಚ್ಚರಿ ಯೊಂದಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Ration Shop scam: ಉಳಿಕೆ ಅಕ್ಕಿ ಕೊಡುವಲ್ಲಿ ಕಳ್ಳಾಟ !

ಫೆಬ್ರವರಿ ತಿಂಗಳ ಹೆಚ್ಚುವರಿ 5 ಕೆಜಿ ಕೊಡುವುದಕ್ಕೆ ಹಿಂಜರಿತ

ಕಳೆದ ತಿಂಗಳಿನಿಂದ (ಫೆಬ್ರವರಿ) ನಗದಿನ ಬದಲಿಗೆ ಐದು ಕೆ.ಜಿ. ಅಕ್ಕಿಯನ್ನೇ ನೀಡಲು ತೀರ್ಮಾ ನಿಸಿತ್ತು. ಆದರೆ ಫೆಬ್ರವರಿಯಲ್ಲಿ ಅಗತ್ಯವಿರುವಷ್ಟು ಅಕ್ಕಿಯ ಕೊರತೆ ಇದ್ದಿದ್ದರಿಂದ ಮಾರ್ಚ್‌ ನಲ್ಲಿ ಬಾಕಿ ಐದು ಕೆಜಿ ಅಕ್ಕಿ ನೀಡಲು ಆದೇಶಿಸಲಾಗಿದೆ. ಮಾರ್ಚ್‌ನಲ್ಲಿ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿವ್ಯಕ್ತಿಗೆ ಮಾರ್ಚ್‌ನಲ್ಲಿ ನೀಡ ಬೇಕಿದ್ದ ೧೫ ಕೆ.ಜಿ ಅಕ್ಕಿಯ ಬದಲು ಕೇವಲ 10 ಕೆ.ಜಿ. ನೀಡುತ್ತಿದ್ದಾರೆ

Honey Trap: ಹನಿ ಟ್ರ್ಯಾಪ್‌ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್‌ ಒತ್ತಡವೇ ಜಾಸ್ತಿ

ಹನಿ ಟ್ರ್ಯಾಪ್‌ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್‌ ಒತ್ತಡವೇ ಜಾಸ್ತಿ

ಹನಿಟ್ರ್ಯಾಪ್‌ನಲ್ಲಿ ಕಾಂಗ್ರೆಸ್ ಕೈವಾಡವಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಅಧಿಕೃತ ಹೇಳಿಕೆಯಲ್ಲಿರುವ ಅಂಶ ಪಕ್ಷದ ವರಿಷ್ಠರನ್ನುಕಂಗೆಡಿಸಿದೆ. ಇದರಿಂದ ಪಕ್ಷದ ವರಿಷ್ಠರು ಕೆಂಡಾಮಂಡಲವಾಗಿದ್ದು, ಸತತ ಸೋಲು ಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಇದು ಅಪಾ ಯದ ಗಂಟೆಯಂತಾಗಿದೆ. ಈ ಮಧ್ಯೆ, ಈ ಪ್ರಕರಣವನ್ನು ಇಲ್ಲಿಗೇ ಬಿಡಬಾರದು.

ಇದೀಗ ಸರಕು ಸಾಗಣೆಯಲ್ಲಿ ತೊಡಗಿಸಿಕೊಳ್ಳಲು ಮೆಟ್ರೋ ಚಿಂತನೆ

ಮೆಟ್ರೋದಲ್ಲಿ ಸರಕು ಸಾಗಾಟ?

ದೆಹಲಿ ಮೆಟ್ರೋದಲ್ಲಿ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗಿದ್ದು, ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಅತಿವೇಗವಾಗಿ ವಸ್ತುಗಳನ್ನು ರವಾನಿಸುವ ಜತೆಗೆ ಮೆಟ್ರೋ ಸಂಸ್ಥೆಗಳಿಗೂ ಹೆಚ್ಚುವರಿ ಆದಾಯ ಬರುತ್ತಿದೆ. ಆದ್ದರಿಂದ ದೆಹಲಿ ಮಾದರಿಯನ್ನೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಅಳವಡಿಸುವ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ ದ್ದು, ಶೀಘ್ರದಲ್ಲಿಯೇ ಈ ಸಂಬಂಧ ಖಾಸಗಿ ಸಂಸ್ಥೆಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

App for cauvery Water: ಕಾವೇರಿ ನೀರಿಗೂ App ಬುಕ್ಕಿಂಗ್‌ ಸೌಲಭ್ಯ

ಕಾವೇರಿ ನೀರಿಗೂ App ಬುಕ್ಕಿಂಗ್‌ ಸೌಲಭ್ಯ

ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಹಲವು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವ ಸಾರ್ವಜನಿಕರಿಗೆ ಟ್ಯಾಂಕರ್ ಮಾಫಿ ಯಾದವರು ಭಾರಿ ಶುಲ್ಕವನ್ನು ವಿಧಿಸುತ್ತಿರುವ ಆರೋಪ ಕೇಳಿಬಂದಿದೆ. ಆದ್ದರಿಂದ ಈ ಬಾರಿ ಜಲ ಮಂಡಳಿಯ ವತಿಯಿಂದ ಟ್ಯಾಂಕರ್ ಮೂಲಕ ಕಾವೇರಿ ನೀರಿನ ಟ್ಯಾಂಕರ್ ಪಡೆಯಲು ಆಪ್ ಮೂಲಕ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.

ಐಪಿಎಲ್ ಟಿಕೆಟ್: ಬೆಂಗ್ಳೂರಲ್ಲಿ ಡಿಮಾಂಡಪ್ಪೋ ಡಿಮಾಂಡ್!

ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭ

ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಆರ್‌ಸಿಬಿ ಬಳಗದ ಆಟಗಾರರ ಆಟವನ್ನು ಮೈದಾನದಲ್ಲಿಯೇ ನೇರ ಬಂದು ಕಣ್ತುಂಬಿಕೊಳ್ಳಬೇಕೆಂಬ ಉತ್ಸಾಹದಲ್ಲಿರುವ ಆರ್‌ಸಿಬಿಯ ಅಭಿಮಾನಿಗಳಿಗೆ ಈ ಸಲದ ಐಪಿಎಲ್ ಟಿಕೆಟ್ ದರ ಕೇಳಿ ಶಾಕ್ ಆಗಿದೆ. ದೇಶದ ಇತರ ಯಾವುದೇ ಏಳು ಫ್ರಾಂಚೈಸಿಯ ಟಿಕೆಟ್ ದರವು ಬೆಂಗಳೂರಿನ ಆರ್‌ಸಿಬಿ ಪಂದ್ಯದ ಅರ್ಧದಷ್ಟಿಲ್ಲ ಎಂಬುದು ಗಮನಾರ್ಹ

Demand for Fish: ಮೀನು, ಮಟನ್‌ ಗೆ ಬೇಡಿಕೆ

ಮೀನು, ಮಟನ್‌ ಗೆ ಬೇಡಿಕೆ

ಕೋಳಿ, ಮಟನ್ ಸಹವಾಸವೇ ಬೇಡ ಎಂದು ಮೀನು ಸೇವಿಸುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೀಗಾಗಿ ಮೀನಿನ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇ.30 ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿರುವುದು ಮೊದಲ ಕಾರಣವಾದರೆ, ಮೀನುಗಾರಿಕೆ ಕುಸಿತ ಕಂಡಿರುವುದು ಪ್ರಮುಖ ಇನ್ನೊಂದು ಕಾರಣವಾಗಿದೆ.

KSRTC Bus: ಬಸ್‌ ಹತ್ತಲು ಸಾಲಾಗಿ ಬನ್ನಿ

ಬಸ್‌ ಹತ್ತಲು ಸಾಲಾಗಿ ಬನ್ನಿ

ನೂಕುನುಗ್ಗಲು ತಡೆಗಟ್ಟಲು ಇದೀಗ ಕೆಎಸ್‌ಆರ್‌ಟಿಸಿ ಬಸ್ ಹತ್ತುವುದಕ್ಕೆ ಸರದಿ ಸಾಲು ಗಳನ್ನು ಪರಿಚಯಿಸಲು ಮುಂದಾಗಿದೆ. ಇದಿಷ್ಟೇ ಅಲ್ಲದೇ ಒಂದು ವೇಳೆ ನೂಕು ನುಗ್ಗಲು ಮಾಡಲು ಯಾರಾದರೂ ಪ್ರಯತ್ನಿಸಿದರೆ, ಕ್ರಮ ವಹಿಸಲು ಅಧಿಕಾರಿಗಳು ತೀರ್ಮಾನಿಸಿ ದ್ದಾರೆ. ಈ ಮೂಲ ಕ ಬಸ್ ನಿಲ್ದಾಣಗಳಲ್ಲಿ ಎದುರಾಗುವ ಹತ್ತಾರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡಿಕೆ ಇಂದು ನಿನ್ನೆಯದಲ್ಲ, ಅದು ದಶಕಗಳಷ್ಟು ಹಳೆಯ ವಿಷಯ. ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಇತ್ತೀಚಿನ ವರ್ಷಗಳಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದು, ಹಿಂಸಾ ಹೋರಾಟ ತೀವ್ರಗೊಳಿಸಿದೆ. ಪಾಕ್ ಸೇನೆ, ಆಡಳಿತದ ವಿರುದ್ಧ ತನ್ನ ದಾಳಿ ಮುಂದುವರಿಸು ತ್ತಲೇ ಬಂದಿದೆ

ಗಡಿಭಾಗದ ಅಮಾಯಕ ಮರಾಠಿಗರಿಗೆ, ಕನ್ನಡ ಭಾಷಿಕರಿಗೆ ಕಿರಿಕ್

ಮರಾಠಿಯಲ್ಲೇ ದಾಖಲೆಗಾಗಿ ಕ್ಯಾತೆ

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶ. ಭಾಷೆ ವಿಷಯದಲ್ಲಿ ಹೊತ್ತಿಕೊಳ್ಳುವ ಸಣ್ಣ ಕಿಡಿಯೂ ಇಲ್ಲಿ ಎರಡು ರಾಜ್ಯಗಳ ಸ್ವಾಸ್ಥ್ಯ ಹಾಳು ಮಾಡುತ್ತವೆ. ಅನೇಕ ಬಾರಿ ಎಂಇಎಸ್ ಹಾಗೂ ಶಿವಸೇನೆ ಮಾಡುವ ಅವಾಂತರ ಹಾಗೂ ಪುಂಡಾಟಕ್ಕೆ ಅಮಾಯಕ ಮರಾಠಿ ಹಾಗೂ ಕನ್ನಡ ಭಾಷಿಕರು ತೊಂದರೆಗೆ ಒಳಗಾಗುತ್ತಾರೆ. ಈ ಮಧ್ಯೆ ಅಧಿಕಾರಿಗಳ ದ್ವಂದ್ವ ನಿರ್ಧಾ ರಕ್ಕೆ ಮತ್ತೊಮ್ಮೆ ಬೆಳಗಾವಿ ಹೊತ್ತಿ ಉರಿಯುವಂತಾಗಿದೆ.

ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್‌ ಬಾಕಿ

ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್‌ ಬಾಕಿ

ಮಗುವಿನ ರಕ್ಷಣೆಗೆ ಯಂತ್ರೋಪಕರಣ ಪೂರೈಸಿ ಸತತ 22 ತಾಸು ಕೆಲಸ ಮಾಡಿ ಕಾರ್ಯಾಚರಣೆ ಯಶಸ್ವಿಗೊಳಿಸುವಲ್ಲಿ ನೆರವಾಗಿದ್ದೇವೆ. ಆದರೆ ನಮ್ಮ ಕೂಲಿ ಹಾಗೂ ಯಂತ್ರೋಪಕರಣಗಳ ಬಾಡಿಗೆ 3 ಲಕ್ಷದಷ್ಟು ಇನ್ನೂ ಪಾವತಿಯಾಗಿಲ್ಲ. ಬಿಲ್ ಮೊತ್ತ ಕ್ಕಾಗಿ ಗ್ರಾಪಂ ಪಿಡಿಓ ಅವರಿಂದ ಹಿಡಿದು, ತಹಸೀ ಲ್ದಾರ್, ಎಸಿ, ಡಿಸಿವರೆಗೂ ಭೇಟಿಯಾಗಿ ಕೇಳುತ್ತಲೇ ಬಂದಿದ್ದರೂ ವರ್ಷವಾದರೂ ಬಿಲ್ ಪಾವತಿ ಯಾಗಿಲ್ಲ

ಸಹಜ ಪ್ರಸವ ಮಾಯ, ಶಸ್ತ್ರಚಿಕಿತ್ಸೆ ಅಯೋಮಯ

ಸಿಸೇರಿಯನ್ ಹೆರಿಗೆಗೆ ಪ್ರಾಮುಖ್ಯ ನೀಡುತ್ತಿರುವ ಪ್ರಕರಣಗಳು ಹೆಚ್ಚು

ಖಾಸಗಿ ಆಸ್ಪತ್ರೆಗಳಲ್ಲಿ ಬಹುತೇಕ ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡಲಾಗುತ್ತದೆ. ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಗರ್ಭಿಣಿಯರಲ್ಲಿ ಆತಂಕ ಮೂಡಿಸಿ, ಸಿಸೇರಿಯನ್‌ಗೆ ಪ್ರೋತ್ಸಾಹಿಸಲಾಗುತ್ತದೆ. ಸಹಜ ಹೆರಿಗೆಗೆ ಹೋಲಿಸಿದರೆ ಸಿಸೇರಿಯನ್ ತಾಯಿ, ಮಗುವಿನ ಆರೋಗ್ಯ ಕಾಪಾಡಲು ಉತ್ತಮ ಎನಿಸಿದರೂ ಬಡವರ ಪಾಲಿಗೆ ಬಿಸಿ ತುಪ್ಪವಾಗಿದೆ

ವೀಳ್ಯದೆಲೆ ಮಾರುಕಟ್ಟೆಗೆ ಪೂರೈಕೆ ಶೇ.50 ಕುಸಿತ, ಇಳುವರಿಯೂ ಕಡಿಮೆ

ಒಂದು ವೀಳ್ಯದೆಲೆ ಬೆಲೆ - 5 ರೂ.

ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಗದಗ, ವಿಜಯಪುರ ಹಾಗೂ ಇತರೆ ಕಡೆಗಳಲ್ಲಿ ಬೆಳೆಯುತ್ತಿರುವ ವೀಳ್ಯೆದೆಲೆಯ ಇಳುವರಿ ಈ ವರ್ಷ ತೀರಾ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ವೀಳ್ಯೆದೆಲೆ ಪೂರೈಕೆಯಾಗದಿದ್ದರಿಂದ ದರ ತೀವ್ರವಾಗಿ ಏರಿಕೆ ಯಾಗಲು ಕಾರಣವಾಗಿದೆ.

ಅಧಿಕಾರಿಗಳ ವರ್ಗಾವಣೆ ಸಂಬಂಧ ಬೋಸರಾಜು-ಶರಣಪ್ರಕಾಶ್ ನಡುವೆ ವಾಕ್ಸಮರ

ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ಕಿತ್ತಾಟ

ರಾಯಚೂರು ಜಿಲ್ಲೆಯಲ್ಲಿ ಬೋಸರಾಜು ಹಾಗೂ ಶರಣಪ್ರಕಾಶ್ ಪಾಟೀಲ್ ನಡುವೆ ಎರಡು ಗುಂಪುಗಳಾಗಿವೆ. ಆರಂಭದಲ್ಲಿ ಜಿಲ್ಲೆಗೆ ಸೀಮಿತಗೊಂಡಿದ್ದ ಭಿನ್ನಮತ ಇದೀಗ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೂ ವಿಸ್ತರಿಸಿದ್ದು, ಕೊನೆಗೆ ಸಿಎಂ, ಡಿಸಿಎಂ ಇಬ್ಬರನ್ನೂ ಸಮಾ ಧಾನಪಡಿಸಿದ ಪ್ರಸಂಗ ನಡೆದಿದೆ.

ಆಕಾಂಕ್ಷಿಗಳ ಪಟ್ಟಿಯಲ್ಲಿ ಶಾಸಕರ ಬಂಟರು, ಆಪ್ತರದೇ ಮೇಲುಗೈ, ಕಾರ್ಯಕರ್ತರಿಗೆ ಬರೀ ಕೈ

ನಿಗಮ ಸದಸ್ಯ, ನಿರ್ದೇಶಕರ ನೇಮಕ ವಿಚಾರ ಸದ್ಯಕ್ಕೆ ಮುಗಿದ ಅಧ್ಯಾಯ

ಸುಮಾರು 85ಕ್ಕೂ ಹೆಚ್ಚಿನ ನಿಗಮ, ಮಂಡಳಿಗಳ ಸದಸ್ಯರು ಹಾಗೂ ನಿರ್ದೇಶಕ ರನ್ನು ನೇಮಕ ಮಾಡುವ ಸಂಬಂಧ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದ ಡಾ.ಜಿ.ಪರಮೇಶ್ವರ್ ನೇತೃ ತ್ವದ ಸಮಿತಿ ಇನ್ನೆರಡು ಸಭೆಗಳನ್ನು ನಡೆಸಿ ಪಟ್ಟಿಯನ್ನು ಅಂತಿಮ ಗೊಳಿಸಬೇಕು ಎನ್ನುವಷ್ಟ ರಲ್ಲಿ ಸದಸ್ಯರು ಮತ್ತು ನಿರ್ದೇಶಕರ ಆಕಾಂಕ್ಷಿಗಳಿಗೆ ಆಘಾತದ ಸುದ್ದಿ ಹೊರ ಬಿದ್ದಿದೆ

Karnataka Budget 2025: ಇಂದು ರಾಜ್ಯ ಬಜೆಟ್‌ ಮಂಡನೆ: ಗಾತ್ರ ರೂ.4 ಲಕ್ಷ ಕೋಟಿ ಸಾಧ್ಯತೆ

ಇಂದು ರಾಜ್ಯ ಬಜೆಟ್‌ ಮಂಡನೆ: ಗಾತ್ರ ರೂ.4 ಲಕ್ಷ ಕೋಟಿ ಸಾಧ್ಯತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್ ಮಾರ್ಚ್ 7ರಂದು ಮಂಡನೆಯಾಗಲಿದ್ದು, ಈ ಬಾರಿ ಆಯವ್ಯಯದ ಗಾತ್ರ ಸುಮಾರು 4 ಲಕ್ಷ ಕೋಟಿ ರು. ಮೀರುವ ಸಾಧ್ಯತೆ ಇದೆ. ಕಳೆದ ಬಾರಿ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಈಗ ಆದಷ್ಟೂ ವಾಸ್ತವ ಹಾಗೂ ಸಮತೋಲಿತ ಬಜೆಟ್ ಮಂಡಿಸುವ ಪ್ರಯತ್ನದಲ್ಲಿದ್ದಾರೆ

Universities : ಒಂಬತ್ತು ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ವಾಪಸ್

ಒಂಬತ್ತು ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ವಾಪಸ್

ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಅವುಗಳನ್ನ ನಿಧಾನವಾಗಿ ಇತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಚಿಂತಿಸಲಾಗುತ್ತಿದೆ ಎನ್ನಲಾಗಿದೆ. ಇತ್ತೀಚಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಚರ್ಚಿಸಿ ಅದನ್ನೇ ಅಂತಿಮ ತೀರ್ಮಾನ ಪ್ರಕಟಿಸಲು ಸರಕಾರ ಲೆಕ್ಕಾಚಾರ ಹಾಕಿತ್ತು ಎನ್ನಲಾಗಿದೆ

ದೇವಾನು ದೇವತೆಗಳಿಗೆ ಕ್ಷೀರಾಭಿಷೇಕ, ನೀರಾಭಿಶೇಕ, ಹಣ್ಣುಗಳ ಅಭಿಷೇಕ ಮಾಡುವುದನ್ನು ನೋಡಿದ್ದೇವೆ..!

ಇಲ್ಲೊಂದು ದೇವರಿಗೆ ಮದ್ಯವನ್ನೇ (ಸಾರಾಯಿ) ಅಭಿಷೇಕ ಮಾಡಲಾಗುತ್ತದೆ

ಇಂಡಿ ನಗರದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಈ ಗ್ರಾಮ ದಲ್ಲಿ ಮರುಳಸಿಧ್ಧೇಶ್ವರ ಹಾಗೂ ನಿಜಲಿಂಗ ತಾಯಿ ಎಂಬ ದೇವತೆಗಳಿವೆ. ಈ ದೇವತೆಗಳ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಾದ ಮೊದಲ ಸೋಮವಾರ ಧರ್ಮರ ದೇವರ ಜಾತ್ರೆ, ಅಮವಾಸ್ಯೆಯಾದ ಮೊದಲ ಗುರುವಾರರಂದು ನಿಜಲಿಂಗತಾಯಿ (ಸೀತಮ್ಮ) ದೇವರ ಜಾತ್ರೆ ನಡೆಯುತ್ತದೆ

ಚಿಕಿತ್ಸೆಗಾಗಿ ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಕಂಡಕ್ಟರ್‌ ಭೇಟಿ ಮಾಡದ ಜನಪ್ರತಿನಿಧಿಗಳು, ವಿಧಾನಸಭೆಯಲ್ಲಿ ಚರ್ಚೆ

ಬೆಳಗಾವಿ ಗಲಾಟೆ, ಸಚಿವ, ಶಾಸಕರ ಬುದ್ಧಿವಂತ ನಡೆ

ಇಲ್ಲಿ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳೂ ಗಾಯಾಳು ಕಂಡಕ್ಟರ್ ಭೇಟಿ ಮಾಡಿ ಧೈರ್ಯ ಹೇಳುವ ಧೈರ್ಯವನ್ನೇ ತೋರಿಸಿಲ್ಲ ಎಂದು ರಕ್ಷಣಾ ವೇದಿಕೆ ವಿವಿಧ ಬಣಗಳೂ ಸಿಟ್ಟಿಗೆದ್ದು ಟೀಕಿಸಿವೆ. ಈ ಪ್ರಕರಣದ ವಿಚಾರದಲ್ಲಿ ಶಾಸಕರು ಪಕ್ಷ ಭೇದ ವನ್ನೇ ಮರೆತು ಮೌನ ವಹಿಸಿದ್ದು, ಅವರ ಕನ್ನಡ ನಿರಾಭಿಮಾನದ ಸಂಕೇತ ತೋರಿಸುತ್ತಿದ್ದು, ಇದು ರಾಜಕೀಯ ವಲಯದಲ್ಲಿ ಹೆಚ್ಚು ಟೀಕಿಗೆ ಗುರಿಯಾಗಿದೆ

Hampi Festival: ಹಂಪಿ ಉತ್ಸವ: ಅಂತಿಮ ಹಂತದ ಸಿದ್ದತೆ

ಹಂಪಿ ಉತ್ಸವ: ಅಂತಿಮ ಹಂತದ ಸಿದ್ದತೆ

ವಿಶ್ವವಿಖ್ಯಾತ ಹಂಪಿ ಗತವೈಭವವನ್ನು ನೆನಪಿಸುವ ಹಂಪಿ ಉತ್ಸವಕ್ಕೆ ಸಿದ್ಧತೆ ಕಾರ್ಯ ಭರ ದಿಂದ ಸಾಗಿದೆ. ಉತ್ಸವ ನಿಮಿತ್ತ ಐದು ವೇದಿಕೆಗಳ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಈ ಬಾರಿ ಹಂಪಿ ಉತ್ಸವದಲ್ಲಿ ಖ್ಯಾತ ಕಲಾವಿದರು ಸೇರಿದಂತೆ ಸ್ಥಳೀಯ ಕಲಾವಿದ ರಿಗೂ ವೇದಿಕೆ ಕಲ್ಪಿಸಲಾಗುತ್ತಿದೆ. ಹಂಪಿ ಉತ್ಸವ ಫೆ.28, ಮಾ.2ರವರೆಗೆ 3 ದಿನಗಳ ಕಾಲ ನಡೆಯಲಿದೆ. ಫೆ. 28ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ

Maratha Nigam: ಉದ್ದೇಶ ಮರೆತ ಮರಾಠ ನಿಗಮ, ನಿಲ್ಲದ ಗಡಿತಂಟೆ

ಉದ್ದೇಶ ಮರೆತ ಮರಾಠ ನಿಗಮ, ನಿಲ್ಲದ ಗಡಿತಂಟೆ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಕನ್ನಡಿಗ ಕಂಡ ಕ್ಟರ್‌ಗೆ ಹಲ್ಲೆ ಮಾಡಿದ್ದೂ ಅಲ್ಲದೆ ಫೋಕ್ಸೋ ಪ್ರಕರಣವನ್ನೂ ದಾಖಲಿಸುವುದಾದರೆ, ರಾಜ್ಯ ದಲ್ಲಿ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ಉದ್ದೇಶ ಈಡೇರುತ್ತಿದೆಯೇ ಎನ್ನುವುದು ನಾಡಿನ ಸಾಹಿತಿ, ಹೋರಾಟಗಾರರ ಮೂಲಪ್ರಶ್ನೆಯಾಗಿದೆ

Kannada School Locked: ಕಾಗವಾಡದಲ್ಲಿ ಮತ್ತೊಂದು ಶಾಲೆಗೆ ಬೀಗ

ಕಾಗವಾಡದಲ್ಲಿ ಮತ್ತೊಂದು ಶಾಲೆಗೆ ಬೀಗ

1972ರಲ್ಲಿ ಪ್ರಾರಂಭವಾದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈವರೆಗೂ ಸಾವಿ ರಾರು ವಿದ್ಯಾರ್ಥಿಗಳು ಕಲಿತು ತಮ್ಮ ಬದುಕು ರೂಪಿಸಿಕೊಂಡದ್ದಾರೆ. ಈಗ ಅದೇ ಶಾಲೆ ಈ ಗ್ರಾಮದ ಮಕ್ಕಳಿಗೆ ಬಾಗಿಲು ಬಂದ್ ಮಾಡಿಕೊಂಡಿದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಗ್ರಾಮದ ಮಕ್ಕಳು ಶಾಲೆಗೆ ಬರುತ್ತಿಲ್ಲ, ಆ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕ ವಾಗಿ ಬಂದ್ ಮಾಡಿರುವು ದಾಗಿ ಹೇಳುತ್ತಾರೆ

Coconut Price Rise: ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ

ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ

ನಿತ್ಯದ ವೆಜ್-ನಾನ್‌ವೆಜ್ ಹೋಟೆಲ್ ಅಡುಗೆಗೆ ಹಾಗೂ ಬೇಕರಿಗೆ ಅವಶ್ಯವಾಗಿರುವ ತೆಂಗಿ ನಕಾಯಿಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ಖರೀದಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಒಣ ಕೊಬ್ಬರಿಗಿಂತ ಹಸಿ ತೆಂಗಿನಕಾಯಿಗೆ ಮತ್ತು ಕೊಬ್ಬರಿ ಎಣ್ಣೆ ಮತ್ತು ಕೊಬ್ಬರಿ ಪೌಡರ್‌ಗೆ ಬೆಲೆ ಹೆಚ್ಚಾಗಿದೆ. ಕೊಬ್ಬರಿ ಎಣ್ಣೆ ಲೀ. ಗೆ 280-320 ರು. ಆಗಿದೆ. ಕೊಬ್ಬರಿ ಪೌಡರ್ 230 ಆಗಿದೆ