ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪರಿಷತ್‌ ನಾಮಕರಣಕ್ಕೆ ಉಸ್ತುವಾರಿ ಗ್ರಹಣ

ವಿಚಿತ್ರ ಎಂದರೆ ತೆರವಾಗಿರುವ ನಾಲ್ಕು ಸ್ಥಾನ ಗಳ ಪೈಕಿ ಒಂದಕ್ಕೆ ಅಂದರೆ, ಸಿ.ಪಿ.ಯೋಗೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನಾಮಕರಣ ಮಾಡುವ ಸದಸ್ಯರಿಗೆ ಇನ್ನು ಒಂದೆರಡು ಅಧಿವೇಶನದಲ್ಲಿ ಮಾತ್ರ ಭಾಗವಹಿಸುವ ಅವಕಾಶ ಮಾತ್ರ ಲಭಿಸಲಿದೆ. ಇದರೊಂದಿಗೆ ಅವರು ಅತ್ಯಂತ ಕಡಿಮೆ ಅವಧಿಗೆ ನಾಮಕರಣ ವಾಗುವ ಪರಿಷತ್ ಸದಸ್ಯರು ಎನ್ನುವ ಅನಪೇಕ್ಷಿತ ದಾಖಲೆಗೂ ಪಾತ್ರರಾಗುವ ಸಾಧ್ಯತೆ ಇದೆ.

ಶಿವಕುಮಾರ್‌ ಬೆಳ್ಳಿತಟ್ಟೆ

ಪಟ್ಟಿ ಅಂತಿಮವಾಗಿದ್ದರೂ ಸದ್ಯಕ್ಕೆ ಮುಕ್ತಿ ಇಲ್ಲ, ಎಐಸಿಸಿ ಅಧ್ಯಕ್ಷರಿಂದ ಮತ್ತೆ ಪರಿಶೀಲನೆ

ಅತಿ ವಿಳಂಬ ಎನಿಸಿರುವ ರಾಜ್ಯ ವಿಧಾನಪರಿಷತ್ ನಾಮಕರಣ ವಿಚಾರ ಮತ್ತೆ ಹೈಕಮಾಂಡ್ ಅಂಗಳದಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಪರಿಷತ್‌ನಲ್ಲಿ ತೆರವಾಗಿರುವ ನಾಲ್ಕು ನಾಮಕರಣ ಸದಸ್ಯರ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ಸಲ್ಲಿಸಿದ್ದ ಶಿಫಾರಸು ಪಟ್ಟಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಅನೇಕ ಬಾರಿ ಚರ್ಚಿಸಿ ಅಂತಿಮಗೊಳಿಸಿತ್ತು. ಈ ಪಟ್ಟಿ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಈಗ ಪಟ್ಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೆ ತಡೆಯೊಡ್ಡಿದ್ದಾರೆ ಎನ್ನಲಾಗಿದೆ.

ಅಂದರೆ ಪಟ್ಟಿಗೆ ಖರ್ಗೆ ಅವರ ಮೊಹರು ಬಿದ್ದರೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಟೇಬಲ್‌ನಲ್ಲಿ ಇರಿಸಿಕೊಳ್ಳುವಂತೆ ಖರ್ಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ರಾಜ್ಯದಿಂದ ಶಿಫಾರಸು ಮಾಡಿರುವ ಪಟ್ಟಿ ಬಗ್ಗೆ ಖರ್ಗೆ ಅವರಲ್ಲಿ ಇನ್ನೂ ಅಸಮಾಧಾನವಿದ್ದು, ಇದು ಸರಿಯಾಗದ ಹೊರತು ಪಟ್ಟಿಗೆ ಬಿಡುಗಡೆ ಭಾಗ್ಯ ಲಭಿಸದು ಎನ್ನಲಾಗಿದೆ.

ಈ ಬೆಳವಣಿಗೆಯಿಂದ ಪರಿಷತ್ ನಾಮಕರಣ ಪ್ರಕ್ರಿಯೆ ಇನ್ನೂ ವಿಳಂಬವಾಗುವ ಸಾಧ್ಯತೆ ಕಾಣುತ್ತಿದ್ದು, ಆಕಾಂಕ್ಷಿಗಳಲ್ಲಿ ನಿರಾಶೆ ಹೆಚ್ಚಾಗಿದೆ. ವಿಚಿತ್ರ ಎಂದರೆ ತೆರವಾಗಿರುವ ನಾಲ್ಕು ಸ್ಥಾನ ಗಳ ಪೈಕಿ ಒಂದಕ್ಕೆ ಅಂದರೆ, ಸಿ.ಪಿ.ಯೋಗೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನಾಮಕರಣ ಮಾಡುವ ಸದಸ್ಯರಿಗೆ ಇನ್ನು ಒಂದೆರಡು ಅಧಿವೇಶನದಲ್ಲಿ ಮಾತ್ರ ಭಾಗವಹಿಸುವ ಅವಕಾಶ ಮಾತ್ರ ಲಭಿಸಲಿದೆ. ಇದರೊಂದಿಗೆ ಅವರು ಅತ್ಯಂತ ಕಡಿಮೆ ಅವಧಿಗೆ ನಾಮಕರಣ ವಾಗುವ ಪರಿಷತ್ ಸದಸ್ಯರು ಎನ್ನುವ ಅನಪೇಕ್ಷಿತ ದಾಖಲೆಗೂ ಪಾತ್ರರಾಗುವ ಸಾಧ್ಯತೆ ಇದೆ.

ಇದೇ ರೀತಿ ವಿಳಂಬವಾದರೆ ಜೂನ್ ವೇಳೆಗೆ ಪರಿಷತ್‌ನಲ್ಲಿ ಇನ್ನೂ 8 ಸ್ಥಾನಗಳು ತೆರವಾಗಲಿದ್ದು, ಅದರೊಂದಿಗೇ ಒಟ್ಟಿಗೆ ನೇಮಕ ಮಾಡಿದರೆ ಹೇಗೆ ಎನ್ನುವ ಚರ್ಚೆಯೂ ಇದೆ. ಈ ಚರ್ಚೆ ಏನಾ ದರೂ ನಿಜವಾದರೆ ಆಕಾಂಕ್ಷಿಗಳು ತಮ್ಮ ಆಸೆಯನ್ನೇ ಕೈಬಿಡಬೇಕಾಗುತ್ತದೆ ಎಂದು ಕಾಂಗ್ರೆಸ್ ನಹಿರಿಯ ಮುಖಂಡರು ಹೇಳಿದ್ದಾರೆ.

ಹೈಕಮಾಂಡ್ ಜತೆ ಹಗ್ಗ ಜಗ್ಗಾಟ ಏಕೆ?

ರಾಜ್ಯದಿಂದ ಶಿಫಾರಸು ಮಾಡಿರುವ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗಿಂತ ಅನುಯಾಯಿ ಗಳೇ ಹೆಚ್ಚಾಗಿದ್ದಾರೆ ಎನ್ನುವುದು ಹೈಕಮಾಂಡ್ ಆಕ್ಷೇಪ. ಸದ್ಯ ಶಿಫಾರಸು ಪಟ್ಟಿಯಲ್ಲಿ ಡಿ.ಜಿ. ಸಾಗರ್, ವಿನಯ್ ಕಾರ್ತಿಕ್, ಆರತಿ ಕೃಷ್ಣ ಹಾಗೂ ದಿನೇಶ್ ಅಮೀನ್ ಮಟ್ಟು, ರಮೇಶ್ ಬಾಬು ಸೇರಿದಂತೆ ಕೆಲವರ ಹೆಸರಿದೆ. ಇವರಲ್ಲಿ ಡಿ.ಜಿ.ಸಾಗರ್ ಈ ಹಿಂದೆ ಖರ್ಗೆ ವಿರುದ್ಧವೇ ಸ್ಪರ್ಧಿಸಿದ್ದರು ಎನ್ನುವ ಕಾರಣಕ್ಕೆ ಆ ಹೆಸರಿನ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎನ್ನಲಾಗಿದೆ.

ಹೈಕಮಾಂಡ್ ಬೆಂಬಲ ಹೊಂದಿರುವ ಆರತಿ ಆಯ್ಕೆ ಬಹುತೇಕ ಅಂತಿಮಗೊಂಡಿದೆ. ಆದರೆ ಇವರೊಂದಿಗೆ ರಾಜ್ಯದಿಂದ ಶಿ-ರಸ್ಸಾಗಿರುವ ವಿನಯ್ ಕಾರ್ತಿಕ್ ಅವರಿಗೂ ಅವಕಾಶ ನೀಡಿದರೆ, ಇಬ್ಬರು ಒಕ್ಕಲಿಗರಿಗೆ ನೀಡಿದಂತಾಗುತ್ತದೆ ಎನ್ನುವ ಲೆಕ್ಕಾಚಾರವೂ ಇದೆ. ಇದೆಲ್ಲದರ ಮಧ್ಯೆ, ಹಿಂದುಳಿದ ವರ್ಗದ ಒಬ್ಬರಿಗೆ ಆದ್ಯತೆ ನೀಡಲೇಬೇಕೆನ್ನುವ ಒತ್ತಡ ಹೆಚ್ಚಾಗಿದ್ದು ಇದರಲ್ಲಿ ದಿನೇಶ್ ಅಮೀನ್ ಮಟ್ಟು ಅಥವಾ ರಮೇಶ್ ಬಾಬು ಅವರಲ್ಲಿ ಯಾರಿಗೇ ಅವಕಾಶ ನೀಡಬೇಕೆನ್ನುವುದು ನಿರ್ಧಾರ ವಾಗಬೇಕಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ವಿಳಂಬದಲ್ಲಿ ಎರಡನೆಯದು

ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಯು.ಬಿ.ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್ ಅವರ ಸ್ಥಾನಗಳು ತೆರವಾಗಿ ವರ್ಷವೇ ಆಗುತ್ತಿದೆ. ಜೆಡಿಎಸ್ ನಿಂದ ನಾಮಕರಣಗೊಂಡಿದ್ದ ತಿಪ್ಪೇಸ್ವಾಮಿ ಅವರ ಸ್ಥಾನ ತೆರವಾಗಿ ಈಗಾಗಲೇ 8 ತಿಂಗಳಿಗೂ ಹೆಚ್ಚಿನ ಅವಧಿಯಾಗಿದೆ.

ಬಿಜೆಪಿಯಿಂದ ನಾಮಕರಣಗೊಂಡಿದ್ದ ಸಿ.ಪಿ.ಯೋಗೇಶ್ವರ್ ಅವರ ಸ್ಥಾನಗಳು ತೆರವಾಗಿ 6 ತಿಂಗಳಿಗೂ ಹೆಚ್ಚಾಗಿದೆ. ಆದರೂ ಈ ಸ್ಥಾನಗಳಿಗೆ ಸರಕಾರ ವಿವಿಧ ಕ್ಷೇತ್ರಗಳ ತಜ್ಞರು, ವಿದ್ವಾಂಸ ರನ್ನು ನಾಮಕರಣ ಮಾಡುವ ವಿಚಾರದಲ್ಲಿ ತಿಣುಕಾಡುತ್ತಿದ್ದು, ನಾಮಕರಣಕ್ಕೆ ಹಿಡಿದ ಗ್ರಹಣ ಸದ್ಯಕ್ಕೆ ಬಿಡುವಂತೆ ಕಾಣುತ್ತಿಲ್ಲ. ಹಾಗೆ ನೋಡಿದರೆ ಈ ಹಿಂದೆ ವೀರಪ್ಪ ಮೋಯ್ಲಿ ಅವರು ಮುಖ್ಯ ಮಂತ್ರಿಯಾಗಿzಗ ಸುಮಾರು 13 ತಿಂಗಳವರೆಗೂ ಹೆಚ್ಚಿನ ಅವಽಗೆ ಸದಸ್ಯರನ್ನು ನಾಮಕರಣ ಮಾಡದೆ ವಿಳಂಬ ಮಾಡಲಾಗಿತ್ತು ಇದಾದ ನಂತರ ಎರಡೇ ದೊಡ್ಡ ವಿಳಂಬ ಇದಾಗಿದೆ ಎಂದು ಪರಿಷತ್ ಅಧಿಕಾರಿಗಳು ಹೇಳಿದ್ದಾರೆ.