ಬೆಂಗಳೂರು: ಎನ್ ಸ್ಟಾರ್ ಬ್ಯಾನರ್‌ನಲ್ಲಿ ನಾಗವೇಣಿ ಎನ್. ಶೆಟ್ಟಿ ನಿರ್ಮಾಣದ, ರಾಜ ರವಿಕುಮಾರ್ ನಿರ್ದೇಶನದ ಹಾಗೂ ʼಜಾಲಿಡೇಸ್ʼ ಖ್ಯಾತಿಯ ನಿರಂಜನ್ ಶೆಟ್ಟಿ (Niranjan Shetty) ಹಾಗೂ ಪ್ರಜ್ವಲಿ ಸುವರ್ಣ ನಾಯಕ - ನಾಯಕಿಯಾಗಿ ನಟಿಸಿರುವ ಸಂಗೀತ ಪ್ರಧಾನ ಹಾಗೂ ಪ್ರೇಮ ಕಥಾನಕವನ್ನು ಹೊಂದಿರುವ ʼ31 DAYSʼ ಚಿತ್ರ (31 DAYS Movie) ಈ ವಾರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗುತ್ತಿದೆ. ʼ31 DAYSʼ ಚಿತ್ರವು ವಿ. ಮನೋಹರ್ (V Manohar) ಸಂಗೀತ ನಿರ್ದೇಶನದ 150ನೇ ಚಿತ್ರವಾಗಿದೆ.
ವಿನುತ್ ಕೆ. ಛಾಯಾಗ್ರಹಣ, ಧನು ಕುಮಾರ್, ತ್ರಿಭುವನ್ ನೃತ್ಯ ನಿರ್ದೇಶನ, ಸನತ್, ರವಿತೇಜ್, ನಿಶ್ಚಿತ್ ಪೂಜಾರಿ ಅವರ ಸಂಕಲನ ಹಾಗೂ ಲಕ್ಕಿ ನಾಗೇಶ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ʼ31 DAYSʼ ಸಿನಿಮಾ ಸೆಪ್ಟೆಂಬರ್ 05ರಂದು ಬೆಂಗಳೂರಿನ ಕೆ.ಜಿ. ರಸ್ತೆಯ ʼಸ್ವಪ್ನʼ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಈ ಸುದ್ದಿಯನ್ನೂ ಓದಿ | Beauty Trend 2025: ಹುಬ್ಬಿನ ಇನ್‌ಸ್ಟಂಟ್ ಸೌಂದರ್ಯ ಹೆಚ್ಚಿಸಲು ಬಂತು ಐಬ್ರೋ ಟ್ಯಾಟೂ ಪೆನ್!
ಜಾಲಿಡೇಸ್ʼ ಖ್ಯಾತಿಯ ನಿರಂಜನ್ ಶೆಟ್ಟಿ ಹಾಗೂ ಪ್ರಜ್ವಲಿ ಸುವರ್ಣ ನಾಯಕ - ನಾಯಕಿಯಾಗಿ ನಟಿಸಿರುವ ಸಂಗೀತ ಪ್ರಧಾನ ಹಾಗೂ ಪ್ರೇಮ ಕಥಾನಕವನ್ನು ಹೊಂದಿರುವ ʼ31 DAYS ಚಿತ್ರ ವಿ. ಮನೋಹರ್ ಅವರ ಸಂಗೀತ ನಿರ್ದೇಶನದ 150ನೇ ಚಿತ್ರವಾಗಿದೆ.