ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Chaturthi

ಗೌರಿ ಗಣೇಶ ಹಬ್ಬ 2025

Viral Video: ಪಾಕ್‌ನಲ್ಲಿ ಮೊಳಗಿತು ಗಣಪತಿ ಬಪ್ಪಾ ಮೋರಯಾ

ಪಾಕ್‌ನಲ್ಲಿ ಅದ್ಧೂರಿ ಗಣೇಶ ಚತುರ್ಥಿ ಆಚರಣೆ

ಪಾಕಿಸ್ತಾನದಲ್ಲಿ ಹಿಂದೂಗಳು ಗಣಪತಿ ಬಪ್ಪಾ ಮೋರಯಾ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಹಿಂದೂ ಸಮುದಾಯದ ಸದಸ್ಯರೊಬ್ಬರು ಹಂಚಿಕೊಂಡಿರುವ ಈ ವಿಡಿಯೊ ನೋಡಿ ಅನೇಕರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯನ್ನು ಉಂಟು ಮಾಡಿದೆ.

Bagepally Ganeshotsava: ಗೂಳೂರು ರೆಡ್ಡಿ ಯುವ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ 4ನೇ ವರ್ಷದ ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ

4ನೇ ವರ್ಷದ ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ

ಗೂಳೂರು ಗ್ರಾಮದ ರೆಡ್ಡಿ ಯುವ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ 4ನೇ ವರ್ಷದ ಗೌರಿ ಗಣೇಶೋತ್ಸ ವದ ವಿಸರ್ಜನೋತ್ಸವವು ಶುಕ್ರವಾರ ಸಂಜೆ ಹರಿ ಸ್ವಾಮಿ ಯವರಿಂದ ವಿವಿಧ ಪೂಜಾ ಕೈಂಕರ್ಯದ ನಂತರ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆಯಲ್ಲಿ ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Ganeshotsava: ಸಡಗರ, ಸಂಭ್ರಮದಿಂದ ಗಣೇಶೋತ್ಸವ ಆಚರಣೆ

ಸಡಗರ, ಸಂಭ್ರಮದಿಂದ ಗಣೇಶೋತ್ಸವ ಆಚರಣೆ

ಶ್ರೀವಿನಾಯಕ ಗೆಳೆಯರ ಬಳಗವು ತನ್ನ 2 ನೇ ವರ್ಷದ ಗಣೇಶ ಹಬ್ಬದ ಆಚರಣೆ ಅಂಗವಾಗಿ ಬಡಾವಣೆಯ ಕ್ಲಬ್ ಹೌಸ್ ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಐದು ದಿನಗಳ ಕಾಲ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಲ್ಲದೆ ಪ್ರತಿ ದಿನ ಪೂಜೆ ಕೈಂಕರ್ಯಗಳನ್ನು ಕೈಗೊಂಡು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿತು.

Ganesh Chaturthi 2025: ಬಾಂಬೆ ಟೈಮ್ಸ್ ಗಣೇಶ ಮಹೋತ್ಸವಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಬಾಲಿವುಡ್‌ ಸೆಲೆಬ್ರಿಟಿಗಳು

ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿದ ಬಾಲಿವುಡ್ ಸೆಲೆಬ್ರಿಟಿಗಳು

ಮುಂಬೈಯ ಘಾಟ್‌ಕೋಪರ್‌ನಲ್ಲಿ ನಡೆದ ಬಾಂಬೆ ಟೈಮ್ಸ್ ಗಣೇಶ ಮಹೋತ್ಸವಕ್ಕೆ ಈ ಬಾರಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಹಾಜರಾಗಿ ಸಂಭ್ರಮದ ಮೆರುಗು ಹೆಚ್ಚಿಸಿದ್ದಾರೆ.‌ ಈ ಕಾರ್ಯಕ್ರಮದಲ್ಲಿ ಅಭಿಮನ್ಯು ದಸ್ಸಾನಿ, ಶ್ವೇತಾ ತ್ರಿಪಾಠಿ ಸೇರಿದಂತೆ ಹಲವು ತಾರೆಯರು ಪಾಲ್ಗೊಂಡಿದ್ದರು. ಯಾರೆಲ್ಲ ಆಗಮಿಸಿದ್ದರು ಎನ್ನವ ವಿವರ ಇಲ್ಲಿದೆ.

ಹಿಂದೂ ಮಹಾಸಭಾ ಗಣೇಶ ಶಕ್ತಿ ಅಪಾರ !

ಹಿಂದೂ ಮಹಾಸಭಾ ಗಣೇಶ ಶಕ್ತಿ ಅಪಾರ !

ಇವತ್ತಿಗೂ ಈ ಗಣೇಶ ಉತ್ಸವದ ವೈಭವ ಮತ್ತು ಸಂಭ್ರಮ ಒಂದಿಷ್ಟೂ ಖದರ್ ಕಳೆದುಕೊಂಡಿಲ್ಲ. ಇಡೀ ನಗರದಲ್ಲಿ ನೂರಾರು ಕಡೆ ಮಿನಿ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಹಿಂದೂ ಮಹಾಸಭಾ ಗಣಪತಿಯ ಶಕ್ತಿಯದ್ದೇ ಒಂದು ತೂಕವಾದರೆ, ಇತರೆ ಗಣಪತಿ ಗಳೆಲ್ಲವೂ ಸೇರಿ ಒಂದು ತೂಕ. ಅಷ್ಟರಮಟ್ಟಿಗೆ ಇದು ಅದ್ದೂರಿ ಮತ್ತು ಜನಾಕರ್ಷಕ ಉತ್ಸವ.

ಪಿಒಪಿ ಗಣಪತಿ. ಕ್ಯಾರೆ ಎನ್ನದ ಸಂಘಟನೆ

ಪಿಒಪಿ ಗಣಪತಿ. ಕ್ಯಾರೆ ಎನ್ನದ ಸಂಘಟನೆ

ಜಿಲ್ಲೆಯಲ್ಲಿ ಕೂಡ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಸುಮಾರು 650ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಇವುಗಳನ್ನು ವೈಜ್ಞಾನಿಕವಾಗಿ ವಿಸರ್ಜನೆ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ.

ಜಪಾನಿನಲ್ಲಿ ಗಣೇಶ

ಜಪಾನಿನಲ್ಲಿ ಗಣೇಶ

ಜಪಾನ್ ದೇಶದಲ್ಲಿ ಗಣೇಶನನ್ನು ನಂದಿಕೇಶ್ವರ ಎಂದೂ ಕರೆಯಲಾಗುತ್ತದೆ! ಜಪಾನಿನ ಬೌದ್ಧ ಧರ್ಮದ ಒಂದು ಶಾಖೆಯ ದೇವರಾಗಿರುವ ಗಣೇಶನನ್ನು ಅಲ್ಲಿನವರು ಕಂಜಿಟೆನ್ ಅಥವಾ ಕಾಂಕಿ ಟೆನ್ ಎಂದು ಕರೆಯುವರು. ಅಲ್ಲಿ ಗಣೇಶನಿಗೆ ಬಳಕೆಯಲ್ಲಿರುವ ಇತರ ಹೆಸರುಗಳೆಂದರೆ ಶೋಟೆನ್, ಶೋಡೆನ್, ಗಣಬಚಿ, ಗಣಹತಿ, ಬಿನಾಯಕ ಇತ್ಯಾದಿ.

ಮತ್ತೆ ಬಂದಿದೆ ಚೌತಿ ಸಂಭ್ರಮ

ಮತ್ತೆ ಬಂದಿದೆ ಚೌತಿ ಸಂಭ್ರಮ

ಗಣಪತಿ ಹಬ್ಬ ವಿಜೃಂಭಣೆಯಿಂದ ಆಚರಿಸುವ ಸಡಗರದ ಹಬ್ಬ. ವಿಘ್ನ ವಿನಾಶಕ, ಸಂಕಷ್ಟಹರ ನೆಂದು ಭಕ್ತಿ-ಭಾವದಿಂದ ಪೂಜಿಸುವ ಹಬ್ಬವಿದು. ಒಂದು ಕಾಲದಲ್ಲಿ ಅವರವರ ಮನೆಯಲ್ಲಿ ಆಚರಿಸುತ್ತಿದ್ದ ಹಬ್ಬ ಇಂದು ಸಾರ್ವಜನಿಕವಾಗಿ ಸಡಗರದಿಂದ ಆಚರಿಸುವ ಸಂಭ್ರಮದ ಹಬ್ಬ ವಾಗಿದೆ. ಇಂತಹ ಹಬ್ಬ ಹತ್ತಿರವಾಗುತ್ತಿದ್ದಂತೇ ಅದೇನೋ ಮೈಪುಳಕ.

Ganesh Chaturthi 2025: ಗಣಪತಿಗೆ ಆನೆ ತಲೆ ಇರುವುದರ ತಾತ್ವಿಕತೆ ಏನು? ಗಣಪನ ಅನುಗ್ರಹ ಎಲ್ಲರಿಗೂ ಏಕೆ ಅತ್ಯಗತ್ಯ?

ಗಣಪತಿಗೆ ಆನೆ ತಲೆ ಇರುವುದರ ತಾತ್ವಿಕತೆ ಏನು?

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಬುಧವಾರ (ಆಗಸ್ಟ್ 27) ಗಣೇಶ ಚತುರ್ಥಿಯ ಪ್ರಯುಕ್ತ ವಿನಾಯಕನ ಆರಾಧನೆ ಶ್ರದ್ಧಾಭಕ್ತಿಯಿಂದ ನಡೆಯಿತು. ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ 'ಒಂದು ಜಗತ್ತು, ಒಂದು ಕುಟುಂಬ' ವಿಶ್ವ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಅಶೀರ್ವಚನ ನೀಡಿದರು. ಗಣಪತಿ ಹಬ್ಬದ ತಾತ್ವಿಕತೆ, ಗಣೇಶನ ಆರಾಧನೆಯಿಂದ ಸಿಗುವ ಫಲಗಳ ಬಗ್ಗೆ ಸರಳವಾಗಿ, ಮನಮುಟ್ಟುವಂತೆ ವಿವರಿಸಿದರು. ಅವರ ಉಪನ್ಯಾಸದ ಅಕ್ಷರ ರೂಪ ಇಲ್ಲಿದೆ.

Festival Fashion 2025: ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಥ್‌ ನೀಡುವಂತಿರಲಿ ಫ್ಯಾಮಿಲಿ  ಸ್ಟೈಲಿಂಗ್‌

ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಥ್‌ ನೀಡುವಂತಿರಲಿ ಫ್ಯಾಮಿಲಿ ಸ್ಟೈಲಿಂಗ್‌

Festival Fashion 2025: ಗಣೇಶ ಚತುರ್ಥಿಯಂದು ನೀವು ಮಾತ್ರವಲ್ಲ, ನಿಮ್ ಇಡೀ ಫ್ಯಾಮಿಲಿ ಎಥ್ನಿಕ್‌ ಫ್ಯಾಷನ್‌ಗೆ ಸೈ ಎನ್ನಿ! ಟ್ರೆಡಿಷನಲ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇದು ಹಬ್ಬದ ಕಳೆ ಹೆಚ್ಚಿಸುವುದರೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುವುದು ಎನ್ನುತ್ತಾರೆ.

Ganesh Chaturthi: ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್‌ ಮಾರ್ಕೆಟ್‌

ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್‌ ಮಾರ್ಕೆಟ್‌

KR Market: ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆ ಕಂಡುಬಂದಿದೆ. ಹೂವಿನ ಮಾಲೆಗಳ ಮೊಳ ಹಾಗೂ ಮಾರುಗಳು, ಬಿಡಿ ಹೂಗಳ ಬೆಲೆಯೂ ಗಗನಕ್ಕೇರಿದೆ. ಹಣ್ಣುಗಳ ಬೆಲೆಯೂ ಮುಟ್ಟುವಂತೆಯೇ ಇಲ್ಲ ಎಂದು ಗೊಣಗುತ್ತಲೇ ಜನ ಹಬ್ಬಕ್ಕೆ ಅಗತ್ಯವಾದ ಹೂವು ಹಣ್ಣುಗಳನ್ನು ಖರೀದಿಸುವುದು ಕಂಡುಬಂತು.

Ganesh Chaturthi: ಗಣೇಶ ಚತುರ್ಥಿ 2025: ಪೂಜಾ ಸಮಯ, ಹಬ್ಬದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಗಣೇಶ ಚತುರ್ಥಿಯ ಮಹತ್ವ ಗೊತ್ತಾ?

ಗಣೇಶ ಚತುರ್ಥಿಯು ಅಡೆತಡೆಗಳನ್ನು ನಿವಾರಿಸುವ ಗಣೇಶನ ಜನ್ಮ ದಿನವನ್ನು ಸೂಚಿಸುತ್ತದೆ. ಗಣೇಶ ಚತುರ್ಥಿಯು ಭಾದ್ರಪದ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬ. ಈ ದಿನದಂದು ಭಕ್ತರು ತಮ್ಮ ಮನೆಗೆ ಗಣೇಶನ ವಿಗ್ರಹಗಳನ್ನು ತಂದು ನೈವೇದ್ಯ ಅರ್ಪಿಸಿ ವಿಧಿ-ವಿಧಾನಗಳೊಂದಿಗೆ ಪೂಜೆ ಮಾಡುತ್ತಾರೆ. ಹಬ್ಬವು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ವಿಜಯವನ್ನು ಸಂಕೇತಿಸುತ್ತದೆ.

Ganesh Chaturthi : ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಬುಧವಾರ ಗಣೇಶ ಹಬ್ಬ ಇರುವುದರಿಂದ ಪುರಸಭೆ ವ್ಯಾಪ್ತಿ ಸೇರಿದಂತೆ ತಾಲ್ಲೂಕು ವ್ಯಾಪ್ತಿ ಯಲ್ಲಿರುವ ಗ್ರಾಮಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲು ಯುವಕರ ಸಂಘಗಳು, ಸಂಘ-ಸAಸ್ಥೆಯವರು ನಿಗದಿತ ಸ್ಥಳಗಳಲ್ಲಿ ಚಪ್ಪರ ಹಾಕುವುದು, ಗಣಪತಿ ಮೂರ್ತಿ ಖರೀದಿ ಹಾಗೂ ಇನ್ನಿತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

Bollywood actresses: ಗಣೇಶ ಚತುರ್ಥಿ ಹಬ್ಬಕ್ಕೆ ಸೀರೆಯಲ್ಲಿ ಕಂಗೊಳಿಸಲು ಬಾಲಿವುಡ್ ನಟಿಯರು ಫುಲ್‌ ರೆಡಿ

ಸೀರೆಯಲ್ಲಿ ಕಂಗೊಳಿಸಿದ ಬಾಲಿವುಡ್ ನಟಿಯರು!

Bollywood actresses Look: ಗಣೇಶ ಹಬ್ಬದ ಸಂಭ್ರಮದಲ್ಲಿ ಜನರು ತೊಡಗಿ ಕೊಂಡಿದ್ದಾರೆ.‌ ಅದರಲ್ಲೂ ಪ್ರತಿ ಹಬ್ಬದಲ್ಲೂ ಫ್ಯಾಷನ್ ಪ್ರಿಯರಿಗಂತೂ ಸೀರೆ, ಡ್ರೆಸ್ ಇತ್ಯಾದಿ ಬಗ್ಗೆ ಒಲವು ಹೆಚ್ಚು.. ಗಣೇಶ ಚತುರ್ಥಿ ಹಬ್ಬದ ಸಂಭ್ರಮಕ್ಕೆ ಸೀರೆ ಧರಿಸಲು ಬಯಸುವವರಿಗೆ, ಹಲವು ಸಿನಿಮಾಗಳಲ್ಲಿ ನಟಿಯರು ಧರಿಸಿದ ಸೀರೆ ಲುಕ್‌ಗಳು ಹೊಸ ಫ್ಯಾಷನ್ ಟ್ರೆಂಡ್‌ಗಳನ್ನು ಉಂಟು ಮಾಡುತ್ತವೆ. ಬಾಲಿವುಡ್ ನಟಿಯರು ಸಿನಿಮಾದಲ್ಲಿ ನೌವರಿ ಸೀರೆಯುಟ್ಟು ಮಿಂಚಿದ ಕೆಲವು ಫೋಟೋಗಳು ಇಲ್ಲಿವೆ.

Lalbaugcha Raja 2025: ಮುಂಬೈಯ ಪ್ರೀತಿಯ ಗಣಪತಿ ಲಾಲ್‌ಬಾಗ್‌ಚಾ ರಾಜ ಆಗಮನ; ಇಲ್ಲಿದೆ ನಿಮಗೆ ಗೊತ್ತಿಲ್ಲದ ಹಲವು ಸಂಗತಿಗಳು

ಮುಂಬೈಯ ಐಕಾನಿಕ್ ಲಾಲ್‌ಬಾಗ್‌ಚಾ ರಾಜ ಬಗ್ಗೆ ನಿಮಗೆ ಎಷ್ಟು ಗೊತ್ತು?

ದೇಶದೆಲ್ಲೆಡೆ ಗಮನ ಸೆಳೆಯುವ ಮುಂಬೈ ಗಣೇಶೋತ್ಸವದಲ್ಲಿಲಾಲ್‌ಬಾಗ್‌ಚಾ ರಾಜ ಉತ್ಸವ ಮುಖ್ಯ ಭಾಗ. ಮುಂಬೈ ಲಾಲ್‌ಬಾಗ್‌ನಲ್ಲಿ ಪ್ರತಿಷ್ಠಾಪಿಸುವ ಗಣಪತಿಗೆ ಲಾಲ್‌ಬಾಗ್ವಾ ರಾಜಾ ಎನ್ನುತ್ತಾರೆ. ಗಣೇಶ ಚತುರ್ಥಿ ನಿಮಿತ್ತ ಲಾಲ್‌ಬಾಗ್‌ಚಾ ರಾಜನ ಫಸ್ಟ್ ಲುಕ್ ಅನ್ನು ಅನಾವರಣ ಮಾಡಲಾಯಿತು.