ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

War 2 Moive: ವಾರ್ 2 ಸಿನಿಮಾ ಸೋಲಿನ ಬಳಿಕ ಜೂ. ಎನ್ ಟಿ ಆರ್ ಅವರನ್ನು ಅನ್ ಫಾಲೋ ಮಾಡಿದ್ರಾ ನಟ ಹೃತಿಕ್ ರೋಷನ್?

ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್, ದಕ್ಷಿಣ ಭಾರತದ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ಕಾಂಬಿನೇಶನ್ ನಲ್ಲಿ ಸಿದ್ಧವಾದ ವಾರ್ 2 ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಇದೀಗ ಈ ಸಿನಿಮಾ ಫ್ಲಾಪ್ ಆದ ಬೆನ್ನಲ್ಲೆ ನಟ ಹೃತಿಕೆ ರೋಷನ್ ಅವರು ಜೂನಿಯರ್ ಎನ್ ಟಿ ಆರ್ ಅವರನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಿಂದ ಅನ್ ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

war 2

ನವದೆಹಲಿ: ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ (Hrithik Roshan) , ದಕ್ಷಿಣ ಭಾರತದ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ (Jr NTR) ಕಾಂಬಿನೇಶನ್ ನಲ್ಲಿ ಸಿದ್ಧವಾದ ವಾರ್ 2 ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಭರ್ಜರಿ ಪ್ರಚಾರದ ನಡುವೆ ಯಶ್ ರಾಜ್ ಫಿಲ್ಮ್ಸ್ ನಿಂದ ಈ ಚಿತ್ರವನ್ನು ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಆಗಸ್ಟ್ 14ರಂದು ಈ ಸಿನಿಮಾ ರಿಲೀಸ್ ಆಗಿದ್ದು ಸೂಪರ್ ಸ್ಟಾರ್ ರಜನೀಕಾಂತ್ ಅವರ ಅಭಿನಯದ ಕೂಲಿ ಚಿತ್ರಕ್ಕೆ ಭರ್ಜರಿ ಪೈಪೋಟಿ ನೀಡುತ್ತೆ ಎಂದೆ ಹೇಳಲಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚಿನ ದಾಖಲೆ ಮಾಡದೆ ರಿಲೀಸ್ ಆದ ಮೊದಲ ದಿನವೇ ಸಾಧಾರಣ ಗಳಿಕೆ ಕಂಡಿತ್ತು. ಇಬ್ಬರು ಖ್ಯಾತ ನಟರು ಒಂದೇ ಸಿನಿಮಾದಲ್ಲಿದ್ದು, ಅವರ ಅಭಿನಯ ಜನರಿಗೆ ಇಷ್ಟವಾದರೂ ಕೂಡ ಸಾಧಾರಣ ಕಥಾ ಹಂದರ ಇದ್ದ ಕಾರಣಕ್ಕೆ ಜನರಿಗೆ ಈ ಸಿನಿಮಾ ಅಷ್ಟಾಗಿ ರೀಚ್ ಆಗಿಲ್ಲ ಎನ್ನಬಹುದು. ಈ ಸಿನಿಮಾ ಫ್ಲಾಪ್ ಆದ ಬೆನ್ನಲ್ಲೆ ನಟ ಹೃತಿಕೆ ರೋಷನ್ ಅವರು ಜೂನಿಯರ್ ಎನ್ ಟಿ ಆರ್ ಅವ ರನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಿಂದ ಅನ್ ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹಿಟ್ ಸಿನಿಮಾ ನಿರ್ದೇಶಿಸಿದ್ದ ಅಯಾನ್ ಮುಖರ್ಜಿ ಅವರು ಈ ಸಿನಿಮಾಕ್ಕೂ ಕೂಡ ಆ್ಯಕ್ಷನ್ ಕಟ್ ಹೇಳಿದ್ದರು. ಭರ್ಜರಿ ಆ್ಯಕ್ಷನ್ , ಸ್ಟಾರ್ ನಟರ ಸಂಗಮ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿತ್ತು. ಆದರೆ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರ ನಿರೀಕ್ಷೆ ಯಂತೆ ಈ ಸಿನಿಮಾ ಇರದ ಕಾರಣ ಜನರ ಮನಗೆಲ್ಲುವಲ್ಲಿ ಈ ಸಿನಿಮಾ ವಿಫಲ ವಾಗಿದೆ‌. ನಟ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ ಟಿಆರ್ ಅವರಿಗೆ ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇದ್ದಿತ್ತು. ಆದರೆ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ಸಾಧಾರಣ ಗಳಿಕೆ ಮಾಡಿದೆ. ವಾರ್ 2 ಸಿನಿಮಾ ಸೋಲಿನಿಂದಾಗಿ ನಟ ಹೃತಿಕ್ ಅವರು ಜೂನಿಯರ್ ಎನ್ ಟಿ ಆರ್ ಜೊತೆ ಅಂತರ ಕಾಯ್ದು ಕೊಂಡಿದ್ದಾರೆ ಅವರಿಬ್ಬರ ನಡುವೆ ವೈಮನಸ್ಸು ಇದೆ ಎಂಬ ಗಾಸಿಪ್ ಹರಿ ದಾಡುತ್ತಿದೆ.

ಇತ್ತೀಚೆಗಷ್ಟೇ ಕ್ರಿಟಿಕ್ ಕೆಆರ್‌ಕೆ ಎಂಬ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಹೃತಿಕ್ ಹಾಗೂ ಜೂನಿಯರ್ ಎನ್ ಟಿ ಆರ್ ಅವರಿಗೆ ಸಂಬಂಧಿ ಸಿದ ಹೊಸ ವಿಚಾರ ಒಂದು ವೈರಲ್ ಆಗಿದೆ. ಬಾಲಿವುಡ್‌ ನಲ್ಲಿ ಶಾಶ್ವತವಾಗಿ ಯಾರೂ ವೈರಿಗಳಲ್ಲ. ಅಂತೆಯೇ ಸ್ನೇಹಿತರೂ ಇಲ್ಲ. ಎಲ್ಲವೂ ಸಕ್ಸಸ್ ಹಾಗೂ ಫೇಲ್ಯೂರ್ ಮೇಲೆ ನಿಂತಿವೆ. ವಾರ್ 2 ಹೀನಾಯ ಸೋಲಾಗುತ್ತಿದ್ದಂತೆ ಹೃತಿಕ್ ರೋಷನ್‌ಗೆ ಜೂನಿ ಯರ್ ಎನ್‌ಟಿಆರ್ ಸ್ನೇಹ ಬೇಡವಾಗಿದೆ. ಅದಕ್ಕೆ ಇನ್‌ಸ್ಟಾಗ್ರಾಂನಿಂದ ಅನ್‌ಫಾಲೋ ಮಾಡಿದ್ದಾರೆ ಎಂದು ಬರೆದಿದ್ದ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ.

ಈ ಸುದ್ದಿಯನ್ನೂ ಓದಿ:45 Movie: ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ʼ45ʼ ಸಿನಿಮಾ ಬಿಡುಗಡೆ ಯಾವಾಗ?

ಈ ವಿಚಾರ ನಿಜವೇ ಅಥವಾ ಸುಳ್ಳೇ ಎಂಬುದು ಇನ್ನು ಕೂಡ ತಿಳಿದುಬಂದಿಲ್ಲ.ಅಸಲಿಗೆ ನಟ ಹೃತಿಕ್ ರೋಷನ್ ಅವರು ನಟ ಜೂನಿಯರ್ ಎನ್‌ಟಿಆರ್‌ ಅವರನ್ನು ಇನ್‌ಸ್ಟಾಗ್ರಾಮ್ ನಲ್ಲಿ ಈ ಹಿಂದೆಯೇ ಫಾಲೋ ಮಾಡುತ್ತಿದ್ದರು ಅನ್ನುವ ಬಗ್ಗೆ ನಿಖರ ಮಾಹಿತಿ ಕೂಡ ಇಲ್ಲ ಎಂದೇ ಹೇಳ ಬಹುದು. ಅಂತೆಯೇ ಜೂನಿಯರ್ ಎನ್‌ಟಿಆರ್‌ ಅವರಿಗೆ ಇನ್‌ಸ್ಟಾಗ್ರಾಮ್ ನಲ್ಲಿ 8.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರು ಯಾರನ್ನೂ ಕೂಡ ಫಾಲೋ ಮಾಡುತ್ತಿಲ್ಲ. ಇನ್ನು ಹೃತಿಕ್ ರೋಷನ್ ಅವರಿಗೆ ಇನ್‌ಸ್ಟಾಗ್ರಾಮ್ ನಲ್ಲಿ 47.9 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದು ಹೃತಿಕ್ 422 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇವರಿ ಬ್ಬರು ಮೊದಲಿನಿಂದಲೇ ಪರಸ್ಪರ ಫಾಲೋ ಮಾಡುತ್ತಿದ್ದಾರೆಯೇ ಎಂಬುದೇ ಯಾರಿಗೂ ಗೊತ್ತಿಲ್ಲದ ವಿಚಾರವಾಗಿದೆ.

ಇವರಿಬ್ಬರು ಒಟ್ಟಿಗೆ ನಟಿಸಿದ್ದ 'ವಾರ್ 2' ಸಿನಿಮಾ ಇವರಿಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಬೆಸೆದಿದೆ. ಇತ್ತೀಚೆಗೆ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಇಬ್ಬರೂ ಜೊತೆಗೆ ಕಾಣಿಸಿ ಕೊಂಡಿದ್ದರು. ಹೃತಿಕ್ ರೋಷನ್ ಈ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ ಟಿ ಆರ್ ಅವರು ತನ್ನ ತಮ್ಮ ನಿದ್ದಂತೆ ಎಂದು ತಿಳಿಸಿದ್ದರು. ಹೀಗಾಗಿ ಸಿನಿಮಾ ಯಶಸ್ಸು ಅಥವಾ ವಿಫಲತೆ ಇವರಿಬ್ಬರ ನಡುವೆ ವೈಮ ನಸ್ಸು ಮೂಡಿಸೊಲ್ಲ ಎಂದು ಅಭಿಮಾನಿಗಳು ಈ ಪೋಸ್ಟ್ ಗೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.