ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshit Shetty: ಕೊನೆಗೂ 'ಕಾಂತಾರ ಚಾಪ್ಟರ್ 1' ಸಿನೆಮಾ ಬಗ್ಗೆ ಮೌನ ಮುರಿದ ನಟ ರಕ್ಷಿತ್ ಶೆಟ್ಟಿ: ಹೇಳಿದ್ದೇನು ಗೊತ್ತಾ?

Kantara: Chapter 1: ಈಗ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಕನ್ನಡ ಸೇರಿದಂತೆ ಪರಭಾಷೆಯಲ್ಲಿ ಮೊದಲೇ ವಾಯ್ಸ್ ರೆಕಾರ್ಡ್ ಎಲ್ಲ ಮುಗಿಸಿ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ರಿಲೀಸ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ರಿಷಭ್ ಶೆಟ್ಟಿ ಆಪ್ತರು ಹಾಗೂ ಅಭಿಮಾನಿಗಳು ನೆಚ್ಚಿಕೊಂಡಿದ್ದಾರೆ. ಅಂತೆಯೆ ರಿಷಭ್ ಶೆಟ್ಟಿ ಅವರ ಆಪ್ತ ಗೆಳೆಯರಾದ ರಕ್ಷಿತ್ ಶೆಟ್ಟಿ ಅವರು ಕಾಂತಾರಾ ಚಾಪ್ಟರ್ 1 ಸಿನಿಮಾ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

Rakshit Shetty

ಬೆಂಗಳೂರು: ಕಾಂತಾರ ಸಿನಿಮಾದ ಬಿಗ್ ಸಕ್ಸಸ್ ಬಳಿಕ ಇದೀಗ ಕಾಂತಾರ ಚಾಪ್ಟರ್ 1ಸಿನಿಮಾ (Kantara: Chapter 1) ಕೂಡ ನಿರೀಕ್ಷೆಗೂ ಮೀರಿ ಹೊಸ ದಾಖಲೆ ಮಾಡುತ್ತಿದೆ. ಕಾಂತಾರ ಸಿನಿಮಾ 2022ರಲ್ಲಿ ರಿಲೀಸ್ ಆದಾಗ ಅದಕ್ಕೆ ಈ ಮಟ್ಟಿಗೆ ಯಶಸ್ಸು ಸಿಗುತ್ತದೆ ಎಂಬ ಯಾವ ಸಣ್ಣ ಗೆಸ್ ಕೂಡ ಸಿನಿಮಾ ತಂಡಕ್ಕೆ ಇರಲಿಲ್ಲ. ಈಗ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಕನ್ನಡ ಸೇರಿದಂತೆ ಪರ ಭಾಷೆಯಲ್ಲಿ ಮೊದಲೇ ವಾಯ್ಸ್ ರೆಕಾರ್ಡ್ ಎಲ್ಲ ಮುಗಿಸಿ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ರಿಲೀಸ್ ಮಾಡಲಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾವನ್ನು ರಿಷಭ್ ಶೆಟ್ಟಿ ಆಪ್ತರು ಹಾಗೂ ಅಭಿಮಾನಿಗಳು ನೆಚ್ಚಿಕೊಂಡಿದ್ದಾರೆ. ಅಂತೆಯೆ ರಿಷಬ್‌ ಶೆಟ್ಟಿ ಅವರ ಆಪ್ತ ಗೆಳೆಯರಾದ ರಕ್ಷಿತ್ ಶೆಟ್ಟಿ ಅವರು ಕಾಂತಾರಾ ಚಾಪ್ಟರ್ 1 ಸಿನಿಮಾ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

2022ರಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಗಿದ್ದಾಗ ಆ ಸಿನಿಮಾವನ್ನು ನೋಡಿ ಭಾವುಕರಾಗಿ ಓಡಿ ಬಂದು ನಟ ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿದ್ದಾಗ ರಿಷಬ್‌ ಅವರ ಆಪ್ತರಾದ ನಟ ರಕ್ಷಿತ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಸಿನಿಮಾ ನೋಡಿ ಯಾವುದೆ ತರ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಕೂಡ ಅನೇಕ ಪ್ರತಿಕ್ರಿಯೆ ವ್ಯಕ್ತ ವಾಗಿತ್ತು. ಇದರ ಬೆನ್ನಲ್ಲೇ ನಟ ರಕ್ಷಿತ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪೋಸ್ಟ್ ಒಂದು ವೈರಲ್ ಆಗಿದೆ.



ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ '777 ಚಾರ್ಲಿ' ಚಿತ್ರಕ್ಕೆ ಈ ಬಾರಿ 4 ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದೆ. ಅದರಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಕೂಡ ನಟ ರಕ್ಷಿತ್ ಶೆಟ್ಟಿ ಅವರಿಗೆ ಸಿಕ್ಕಿದೆ. ಹೀಗಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಸಿನಿಮಾ ಇಂಡಸ್ಟ್ರಿಯ ಖ್ಯಾತ ಕಲಾವಿದರು ಮತ್ತು ಆಪ್ತರು ಶುಭ ಕೋರಿ ದ್ದಾರೆ‌. ಅಂತೆಯೇ ನಟ ರಿಷಭ್ ಶೆಟ್ಟಿ ಅವರು ಕೂಡ ಟ್ವೀಟ್ ಮಾಡಿ ಸ್ನೇಹಿತನಿಗೆ ಅಭಿನಂದನೆ ತಿಳಿಸಿದ್ದಾರೆ.

ಈ ಬಗ್ಗೆ ನಟ ರಿಷಬ್‌ ಶೆಟ್ಟಿ ಅವರು ಟ್ವೀಟ್ ಮಾಡಿ ರಕ್ಷಿತ್ ಅವರಿಗೆ ಶುಭಾಶಯ ತಿಳಿಸಿದ್ದಾರೆ‌‌. ಅತ್ಯುತ್ತಮ ನಟನಿಗೆ ರಾಜ್ಯ ಸರ್ಕಾರದಿಂದ ಗೌರವ. ಅಭಿನಂದನೆಗಳು ಮಗಾ" ಎಂದು ರಿಷಬ್ ಶೆಟ್ಟಿ ಟ್ವೀಟ್ ನಲ್ಲಿ ಬರೆದು ವಿಶ್ ಮಾಡಿದ್ದಾರೆ. ಅದಕ್ಕೆ ನಟ ರಕ್ಷಿತ್ ಶೆಟ್ಟಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಥ್ಯಾಂಕ್ಸ್ ಮಗಾ. ಕಾಂತಾರ ಚಾಪ್ಟರ್ 1 ಚಿತ್ರದ ಅದ್ಭುತ ಯಶಸ್ಸಿಗೆ ಹೃತ್ಪೂರ್ವಕ ಅಭಿನಂದನೆಗಳು, ಸಿನಿಮಾಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ವಿಶ್ ಮಾಡಿ ಬರೆದುಕೊಂಡಿದ್ದಾರೆ. ಸದ್ಯ ಇವರಿಬ್ಬರ ಪೋಸ್ಟ್ ವೈರಲ್ ಆಗುತ್ತಿದೆ.

ಇದನ್ನು ಓದಿ:The Girlfriend Movie: ರಶ್ಮಿಕಾ ಮಂದಣ್ಣ-ದೀಕ್ಷಿತ್‌ ಶೆಟ್ಟಿ ಜೋಡಿಯ ʼದಿ ಗರ್ಲ್‌ಫ್ರೆಂಡ್‌ʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ

ಅದರ ಜೊತೆಗೆ ನಟ ರಕ್ಷಿತ್ ಶೆಟ್ಟಿ ಅವರು '777 ಚಾರ್ಲಿ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕ ಬಗ್ಗೆ ಕೂಡ ಟ್ವೀಟ್ ಮಾಡಿದ್ದಾರೆ. 777 ಚಾರ್ಲಿ 4 ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದೆ.. 2ನೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಗಳು ಸಿಕ್ಕಿದ್ದು ನಿಜಕ್ಕು ಖುಷಿಯಾಗಿದೆ. ಪ್ರೇಕ್ಷಕರಿಗೆ ಮತ್ತು ನಮ್ಮ ಸಿನಿಮಾ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿರ್ದೇಶಕ ಕಿರಣ್ ರಾಜ್ ವಿಷನ್, ಪ್ರತೀಕ್ ಒಳ್ಳೆ ಸಂಕಲನ, ನಾಗಾರ್ಜುನ ಶರ್ಮಾ ಸಾಹಿತ್ಯ ಮರೆಯುವಂತಿಲ್ಲ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಟ ರಿಷಭ್ ಹಾಗೂ ರಕ್ಷಿತ್ ನಡುವೆ ಸ್ನೇಹ ಸಂಬಂಧ ಚೆನ್ನಾಗಿಯೇ ಇದೆ ಎಂಬುದು ಸಾಬೀತಾದಂತಿದೆ. ಸು ಫ್ರಂ ಸೋ ಸಿನಿಮಾ ಬಳಿಕ ಕಾಂತಾರ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಹೊಸ ದಾಖಲೆ ನಿರ್ಮಿಸುತ್ತಿದ್ದು 1000 ಕೋಟಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.