ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Khushi Mukherjee: ಖ್ಯಾತ ನಟಿಯ ಮನೆಯಲ್ಲಿ 25ಲಕ್ಷ ಮೌಲ್ಯದ ಚಿನ್ನ ಕಳ್ಳತನ- ಕೇಸ್‌ ದಾಖಲು!

Actress Khushi Mukherjee: ಸಿನಿಮಾ, ಮಾಡೆಲಿಂಗ್ ಕ್ಷೇತ್ರದಿಂದ ಸುದ್ದಿಯಾಗುತ್ತಿದ್ದ ಖುಷಿ ಮುಖರ್ಜಿ ಅವರು ಇದೀಗ ತಮ್ಮ ಮನೆ ಯಲ್ಲಿ ಆದ ಕಳ್ಳತನದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಖುಷಿ ಮುಖರ್ಜಿ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಸುಮಾರು 25ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮುಂಬೈ: ವಿಭಿನ್ನ ಉಡುಗೆ ತೊಡುಗೆ ತೊಟ್ಟು ಫ್ಯಾಷನ್ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಖುಷಿ ಮುಖರ್ಜಿ (Khushi Mukherjee) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಅವರಂತೆ ವಿಚಿತ್ರವಾದ ಡ್ರೆಸ್ ನಲ್ಲಿ ಖುಷಿ ಮುಖರ್ಜಿ ಕೂಡ ಜನಪ್ರಿಯರಾಗಿದ್ದಾರೆ. ಇವರ ವಿಭಿನ್ನ ಶೈಲಿಯ ಡ್ರೆಸ್ ಗೆ ಆಗಾಗ ಟೀಕೆಗೆ, ಟ್ರೋಲಿಗೆ ಇವರು ಗುರಿಯಾಗುತ್ತಿರುತ್ತಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯ ನಟಿಯಾಗಿದ್ದ ಖುಷಿ ಅವರು ಸಿನಿಮಾ ಹೊರತಾಗಿ ಮಾಡೆಲಿಂಗ್ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ.

ಸಿನಿಮಾ, ಮಾಡೆಲಿಂಗ್ ಕ್ಷೇತ್ರದಿಂದ ಸುದ್ದಿಯಾಗುತ್ತಿದ್ದ ಖುಷಿ ಮುಖರ್ಜಿ ಅವರು ಇದೀಗ ತಮ್ಮ ಮನೆಯಲ್ಲಿ ಆದ ಕಳ್ಳತನದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಖುಷಿ ಮುಖರ್ಜಿ ಅವರ ಮನೆಯಲ್ಲಿ ಕಳ್ಳತನವಾಗಿದ್ದು ಮನೆಯಲ್ಲಿದ್ದ ಸುಮಾರು 25ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಶ್ರೀಮಂತರ ಮನೆಯನ್ನೇ ಟಾರ್ಗೆಟ್ ಮಾಡುವ ಕತರ್ನಾಕ್ ಕಳ್ಳರು ಸಿಸಿ ಟಿವಿ, ಸೆಕ್ಯೂರಿಟಿ ಎಲ್ಲ ಇದ್ದರೂ ಈ ಕಳ್ಳತನದ ಪ್ರಮಾಣ ಮಾತ್ರ ಕಡಿಮೆಯಾಗುತ್ತಲೇ ಇಲ್ಲ ಎನ್ನಬಹುದು. ಅಂತೆಯೇ ನಟಿ ಖುಷಿ ಮುಖರ್ಜಿ ಅವರ ಮನೆಯಲ್ಲಿ ಆಗಿದ್ದ ಕಳ್ಳತನದಿಂದ ಅಪಾರ ಮೊತ್ತ ಹಾಗೂ ಚಿನ್ನ ಭರಣ ಕಳುವಾಗಿದ್ದು ಖುಷಿ ಕುಟುಂಬದವರು ಕಂಗಾಲಾಗಿದ್ದಾರೆ. ಈ ಕಳುವಿನ ಹಿಂದೆ ಮನೆ ಕೆಲಸದವರ ಕೈವಾಡ ಇರಬಹುದೇ ಎಂಬ ಅನುಮಾನ ಕೂಡ ಕಾಡುತ್ತಿದೆ.

ಮುಂಬೈನಲ್ಲಿ ಇರುವ ಇವರು ಅಲ್ಲಿ ಹತ್ತೀರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಈಗಾಗಲೇ ಈ ಪ್ರಕರಣ ತನಿಖೆ ಮಾಡುತ್ತಿದ್ದಾರೆ. ತನಿಖೆ ವೇಳೆ ಯಾರ ಮೇಲಾದರೂ ಅನುಮಾನ ಇದೆಯಾ ಎಂದು ನಟಿಯನ್ನು ಪ್ರಶ್ನಿಸಿದ್ದಾಗ ತಮ್ಮ ಮನೆ ಕೆಲಸದವಳ ಮೇಲೆ ಅನುಮಾನ ಇದೆ ಆದರೆ ಅವರೇ ಮಾಡಿದ್ದಾರೆ ಎಂಬುದು ಖಾತರಿ ಇಲ್ಲ ಎಂದಿದ್ದಾರೆ. ಹೀಗಾಗಿ ಪೊಲೀಸರು ಮನೆ ಕೆಲಸದವರನ್ನೆಲ್ಲ ವಿಚಾರಣೆ ನಡೆಸಿದ್ದಾರೆ. ಅವರ ನಡವಳಿಕೆ ಅನುಮಾನಸ್ಪದವಾಗಿದ್ದು ನಟಿಯು ತನ್ನ ಮನೆ ಕೆಲಸದವರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಖುಷಿ ಅವರು ನಮ್ಮ ಜೀವ ನದಲ್ಲಿ ನಾವು ಬಹುತೇಕರನ್ನು ಪರಿಪೂರ್ಣವಾಗಿ ನಂಬುತ್ತೇವೆ. ಆದರೆ ಅವರು ನಮಗೆ ಈ ತರ ಮೋಸ ಮಾಡಿದಾಗ ದೊಡ್ಡ ಆಘಾತವಾಗುತ್ತದೆ. ಇಲ್ಲಿ ನಗದು ಆಭರಣ ಕಳುವಾಗಿದ್ದಕ್ಕಿಂತಲೂ ನಮ್ಮ ಸುರಕ್ಷತೆ, ವಿಶ್ವಾಸ, ನಂಬಿಕೆ ಇತ್ಯಾದಿ ಭಾವನೆಗಳ ಮೇಲೆ ಹೊಡೆತ ಬೀಳುತ್ತದೆ ಎಂದು ನಟಿ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Nidradevi Next Door Movie: ‘ನಿದ್ರಾದೇವಿ Next Door’ ಚಿತ್ರದ ಟೈಟಲ್‌ ಸಾಂಗ್‌ ಔಟ್‌: ಸೆ.12ಕ್ಕೆ ಚಿತ್ರ ರಿಲೀಸ್‌

ನಟಿ ಖುಷಿ ಅವರು ರಿಯಾಲಿಟಿ ಶೋ ಹಾಗೂ ವೆಬ್ ಸೀರೀಸ್‌ಗಳಲ್ಲಿ ತಮ್ಮ ಬೋಲ್ಡ್ ಲುಕ್‌ನಿಂದ ಬಹಳ ಜನಪ್ರಿಯತೆ ಪಡೆದಿದ್ದಾರೆ. ಇವರು ತಮಿಳಿನಲ್ಲಿ 2013ರಿಂದಲೂ ಸಕ್ರಿಯವಾಗಿದ್ದು, ʼದೊಂಗ ಪ್ರೇಮ', 'ಹಾರ್ಟ್ ಅಟ್ಯಾಕ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಶ್ರೀನಗರ್' ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ಸಹ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ದಿ ಸೊಸೈಟಿ, ಲವ್ ಸ್ಕೂಲ್ 3 ಸೇರಿದಂತೆ ಅನೇಕ ಜನಪ್ರಿಯ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದ್ದಾರೆ.