ಬೆಂಗಳೂರು: ʼಬನಾರಸ್ʼ ಚಿತ್ರದ ನಂತರ ಝೈದ್ ಖಾನ್ (Zaid Khan) ನಾಯಕರಾಗಿ ನಟಿಸುತ್ತಿರುವ ಹಾಗೂ ʼಉಪಾಧ್ಯಕ್ಷʼ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ʼಕಲ್ಟ್ʼ ಚಿತ್ರ (Cult Movie) ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಝೈದ್ ಖಾನ್, ರಚಿತರಾಮ್ ಹಾಗೂ ಮಲೈಕ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಮೊದಲ ಹಾಡು ʼಅಯ್ಯೊ ಶಿವನೇʼ ಇದೇ ಸೆಪ್ಟೆಂಬರ್ 10 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅವರೇ ಬರೆದಿರುವ ʼಅಯ್ಯೊ ಶಿವನೇʼ ಹಾಡನ್ನು ಜನಪ್ರಿಯ ಗಾಯಕ - ಗಾಯಕಿ ಜಸ್ಕರಣ್ ಸಿಂಗ್ ಹಾಗೂ ಪೃಥ್ವಿ ಭಟ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮಲೈಕ ಅಭಿನಯಿಸಿದ್ದಾರೆ. ಈಗಾಗಲೇ ಈ ಮೊದಲ ಹಾಡಿನ ಪ್ರೊಮೊ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪ್ರೊಮೊದಲ್ಲೇ ಗಮನ ಸೆಳೆದಿರುವ ʼಅಯ್ಯೋ ಶಿವನೇʼ ಹಾಡನ್ನು ಆಲಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಕೆ.ವಿ.ಎನ್. ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ʼಕಲ್ಟ್ʼ ಚಿತ್ರದ ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಈ ಸುದ್ದಿಯನ್ನೂ ಓದಿ | Beauty Trend 2025: ಹುಬ್ಬಿನ ಇನ್‌ಸ್ಟಂಟ್ ಸೌಂದರ್ಯ ಹೆಚ್ಚಿಸಲು ಬಂತು ಐಬ್ರೋ ಟ್ಯಾಟೂ ಪೆನ್!