ಹೈದರಾಬಾದ್: ಮಲಯಾಳಂನ ಖ್ಯಾತ ನಟ, ಸ್ಟಾರ್ ಇಂಡಿಯಾ ಸ್ಟಾರ್, ಯೂತ್ ಐಕಾನ್ ದುಲ್ಕರ್ ಸಲ್ಮಾನ್ (Dulquer Salmaan) ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ದುಲ್ಕರ್ ಸಲ್ಮಾನ್ ಸಿನಿಮಾಗಳೆಂದರೆ ಕುತೂಹಲ ಜಾಸ್ತಿನೆ ಇರತ್ತೆ. ಯಾಕೆಂದರೆ ದುಲ್ಕರ್ ಸಿನಿಮಾ ಆಯ್ಕೆಗಳೇ ವಿಭಿನ್ನವಾಗಿರುತ್ತೆ. ಪ್ರತಿ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ. ಹಾಗಾಗಿ ದುಲ್ಕರ್ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿರುತ್ತೆ. ಇದೀಗ ಮತ್ತೊಂದು ಹೃದಯಸ್ಪರ್ಶಿ ಲವ್ ಸ್ಟೋರಿ ಮೂಲಕ ಸಿನಿ ರಸಿಕರ ಮುಂದೆ ಬರಲು ರೆಡಿಯಾಗಿದ್ದಾರೆ.
ದುಲ್ಕರ್ ನಟನೆಯ 41ನೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. DQ41 ಚಿತ್ರಕ್ಕೆ ತೆಲುಗಿನ ಖ್ಯಾತ ನಟ ನ್ಯಾಚುರಲ್ ಸ್ಟಾರ್ ನಾನಿ ದುಲ್ಕರ್ ಹೊಸ ಸಿನಿಮಾಗೆ ಕ್ಲಾಪ್ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ಮುಹೂರ್ತ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದಹಾಗೆ ದುಲ್ಕರ್ ಹೊಸ ಸಿನಿಮಾಗೆ ರವಿ ನೆಲಕುಡಿತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ರವಿ ಅವರಿಗೆ ಇದು ಮೊದಲ ಸಿನಿಮಾ. ಯುವ ನಿರ್ದೇಶಕ ಜತೆ ದುಲ್ಕರ್ 41ನೇ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಹೃದಯಸ್ಪರ್ಶಿ ಪ್ರೇಮಕಥೆಯಾಗಿದೆ. ಸೀತಾ ರಾಮಂ ಸಿನಿಮಾ ಬಳಿಕ ದುಲ್ಕರ್ ಮತ್ತೊಂದು ಲವ್ ಸ್ಟೋರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.
ದುಲ್ಕರ್ 41ನೇ ಸಿನಿಮಾ ಎಸ್‌ಎಲ್‌ವಿ ಬ್ಯಾನರ್‌ನಲ್ಲಿ ಮೂಡಿಬರುತ್ತಿದೆ. ನಟ ದುಲ್ಕರ್ ಸಲ್ಮಾನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮಲಯಾಳಂ ಮತ್ತು ತೆಲುಗು ಸಿನಿಮಾರಂಗದಲ್ಲಿ ದುಲ್ಕರ್ ಮಿಂಚುತ್ತಿದ್ದಾರೆ. ದುಲ್ಕರ್ ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ. ಹೀಗಿರುವಾಗ ಚೊಚ್ಚಲ ನಿರ್ದೇಶಕರಿಗೆ ತನ್ನ ಕಾಲ್ ಶೀಟ್ ನೀಡಿದ್ದಾರೆ ಎಂದರೆ ಕಥೆ ಅದ್ಭುತವಾಗಿರಲಿದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.
ಈ ಸುದ್ದಿಯನ್ನೂ ಓದಿ | Rakshabandhan 2025: ರಕ್ಷಾ ಬಂಧನಕ್ಕೆ ಟ್ರೆಂಡಿಯಾದ ವೈವಿಧ್ಯಮಯ ರಾಖಿಗಳು
ಸ್ಟಾರ್ ಕಾಸ್ಟ್ ವಿಚಾರದಲ್ಲಿ ಮಾತ್ರದಲ್ಲದೆ ತಂತ್ರಜ್ಞರ ವಿಚಾರದಲ್ಲೂ ದುಲ್ಕರ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ 2 ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ತೆಲುಗು, ಮಲಯಾಳಂ ಸೇರಿದಂತೆ ಕನ್ನಡ ತಮಿಳು ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ದುಲ್ಕರ್‌ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ಸದ್ಯದಲ್ಲೇ ಚಿತ್ರದಿಂದ ಮತ್ತಷ್ಟು ಅಪ್ ಡೇಟ್ ಹೊರಬೀಳಲಿದೆ.