Rakshabandhan 2025: ರಕ್ಷಾ ಬಂಧನಕ್ಕೆ ಟ್ರೆಂಡಿಯಾದ ವೈವಿಧ್ಯಮಯ ರಾಖಿಗಳು
Rakshabandhan 2025: ಈ ಬಾರಿಯ ರಕ್ಷಾ ಬಂಧನಕ್ಕೆ ಮಾರುಕಟ್ಟೆಯಲ್ಲಿ ಊಹೆಗೂ ಮೀರಿದ ರಾಖಿ ಡಿಸೈನ್ಗಳು ಲಗ್ಗೆ ಇಟ್ಟಿವೆ. ಆಕರ್ಷಕ ಬಗೆಬಗೆಯ ಡಿಸೈನರ್ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ ಬಗೆಯವು ಟ್ರೆಂಡಿಯಾಗಿವೆ? ಯಾವುದಕ್ಕೆ ಬೇಡಿಕೆ ಹೆಚ್ಚಾಗಿದೆ? ಎಂಬುದರ ಕುರಿತು ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರಕೃಪೆ: ಪಿಕ್ಸೆಲ್


ಈ ಬಾರಿಯ ರಕ್ಷಾ ಬಂಧನದ ಸಂಭ್ರಮಕ್ಕೆ ಸಾಥ್ ನೀಡಲು ಊಹೆಗೂ ಮೀರಿದ ಆಕರ್ಷಕ ಬಗೆಬಗೆಯ ಡಿಸೈನರ್ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಈ ಜನರೇಷನ್ ಮಕ್ಕಳ ಫಂಕಿ ರಾಖಿ
ಈ ಜನರೇಷನ್ನ ಹುಡುಗರಿಗೆ ಪ್ರಿಯವಾಗುವಂತ ಫಂಕಿ ರಾಖಿಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವರಿಗೆ ಇಷ್ಟವಾಗುವಂತಹ ಫಂಕಿ ಪದಗಳನ್ನು ಹೊಂದಿರುವಂತವು, ಬ್ರೋ ಎಂದೆಲ್ಲಾ ಬರೆದಿರುವಂತವು, ಜಂಕ್ ಜ್ಯುವೆಲರಿ ಪೀಸ್ನಂತೆ ಕಾಣುವಂತಹ ಫಂಕಿ ಡಿಸೈನ್ನವು ಆಗಮಿಸಿವೆ. ಇವು ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಲಭ್ಯ ಎನ್ನುತ್ತಾರೆ ಮಾರಾಟಗಾರರು.

ಸದಾ ಧರಿಸಬಹುದಾದ ಬ್ರೇಸ್ಲೇಟ್ ರಾಖಿ
ರಾಖಿ ಹಬ್ಬ ಮುಗಿದರೂ ಧರಿಸಬಹುದಾದ ರಾಖಿಗಳಿವು. ಇತರೇ ಸಮಯದಲ್ಲೂ ಅದರಲ್ಲೂ ಸಮಾರಂಭಗಳಲ್ಲಿಯೂ ಇತರೇ ಜ್ಯುವೆಲರಿಗಳಂತೆ ಧರಿಸಬಹುದಾದ ಈ ಬ್ರೇಸ್ಲೇಟ್ ರಾಖಿಗಳು ಥೇಟ್ ಬಂಗಾರದ ಬ್ರೇಸ್ಲೇಟ್ನಂತೆಯೇ ಕಾಣುತ್ತವೆ. ಇದು ಪ್ಲಾಟಿನಂ ಶೇಡ್, ವೈಟ್ ಮೆಟಲ್ ಹಾಗೂ ವನ್ ಗ್ರಾಮ್ ಗೋಲ್ಡ್ನಲ್ಲಿಯೂ ಲಭ್ಯ. ಕೊಂಚ ದುಬಾರಿ ಎನ್ನಬಹುದು.

ಹ್ಯಾಂಡ್ಮೇಡ್ ರಾಖಿ
ಕೈಗಳಲ್ಲಿಯೇ ತಯಾರಿಸಿದಂತಹ ರಾಖಿಗಳಿವು. ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಅವರಿಗೆ ಬೇಕಾದಂತಹ ಡಿಸೈನ್ನಲ್ಲಿ, ಕಟ್ಟಿಸಿಕೊಳ್ಳುವವರ ಅಭಿರುಚಿಗೆ ತಕ್ಕಂತೆ ಇವನ್ನು ಸಿದ್ಧಪಡಿಸಲಾಗಿರುತ್ತದೆ. ಹಾಗಾಗಿ ಡಿಸೈನ್ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ.
ಇಕೋ ಫ್ರೆಂಡ್ಲಿ ರಾಖಿ
ಪರಿಸರ ಸ್ನೇಹಿ ಹಾಗೂ ಪರಿಸರ ಪ್ರೇಮಿಗಳಿಗೆಂದೇ ಇಂತಹ ರಾಖಿಗಳು ಕಾಲಿಟ್ಟಿವೆ. ಪ್ಲಾಸ್ಟಿಕ್ನ ಕೊಂಚವೂ ಟಚ್ ಇರದಂತಹ ಈ ರಾಖಿಗಳು ರಿಸೈಕಲ್ ವಸ್ತುಗಳಿಂದ ಸಿದ್ಧಪಡಿಸಿದವಾಗಿರುತ್ತವೆ. ಇವು ಪರಿಸರ ಸ್ನೇಹಿ ರಾಖಿಗಳು ಎನ್ನಬಹುದು.

ಸ್ಪಿರಿಚ್ಯುಯಲ್ ಸಿಂಬಲ್ ರಾಖಿಗಳು
ಓಂ, ಸ್ವಸ್ತಿಕ್ ಹಾಗೂ ರುದ್ರಾಕ್ಷಿ ಸೇರಿದಂತೆ ಆಧ್ಯಾತ್ಮಿಕ ಸಿಂಬಲ್ ಹಾಗೂ ದೇವರ ಚಿತ್ರಗಳನ್ನು ಹೊಂದಿರುವಂತಹ ರಾಖಿಗಳಿವು. ಇವು ಎವರ್ಗ್ರೀನ್ ರಾಖಿಗಳೆಂದೇ ಖ್ಯಾತಿ ಹೊಂದಿವೆ. ಜನರೇಷನ್ ಬದಲಾದರೂ ಈ ರಾಖಿಗಳು ಮಾತ್ರ ಇಂದಿಗೂ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿವೆ. ಹೊಸ ಡಿಸೈನ್ನಲ್ಲಿ ಇವು ಬಿಡುಗಡೆಗೊಂಡಿವೆ.