ನವದೆಹಲಿ: 'ಗೀತಾ ಗೋವಿಂದಂ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಅವರ ಕ್ಯೂಟ್ ಪೇರ್ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಮತ್ತೆ ಇವರು ಒಟ್ಟಾಗಿ ನಟಿಸ ಬೇಕೆಂದು ಅಭಿಮಾನಿಗಳ ಮನೆದಾಸೆಯಾಗಿದೆ. ಇದೀಗ ಇಬ್ಬರನ್ನು ಒಟ್ಟಿಗೇ ತೆರೆಯ ಮೇಲೆ ನೋಡುವ ಭಾಗ್ಯ ಅವರ ಫ್ಯಾನ್ಸ್ಗೆ ಸಿಕ್ಕಿದೆ. ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಲಿರುವ ಹೊಸ ಚಿತ್ರವೊಂದರಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಆದರೆ ಇನ್ನು ಆಸಕ್ತಿಕರ ವಿಚಾರ ಅಂದ್ರೆ ಇದೇ ಚಿತ್ರಕ್ಕೆ ಖ್ಯಾತ ಹಾಲಿವುಡ್ ನಟನ ಎಂಟ್ರಿ ಕೂಡ ಆಗಲಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತ ಇದೆ.
ರಶ್ಮಿಕಾ ಹಾಗೂ ವಿಜಯ್ ಅವರು ಒಟ್ಟಿಗೆ ನಟಿಸಿದ್ದ ಎರಡು ಸಿನಿಮಾಗಳು ಹಿಟ್ ಲಿಸ್ಟ್ ಸೇರಿತ್ತು. 'ಗೀತ ಗೋವಿಂದಂ’ ಚಿತ್ರ ಯುವ ಜನರ ಮೋಸ್ಟ್ ಫೆವರ್ ಸಿನಿಮಾ ಆಗಿತ್ತು. ‘ಡಿಯರ್ ಕಾಮ್ರೆಡ್’ ಸಿನಿಮಾ ಸಹ ಹಿಟ್ ಎನಿಸಿಕೊಂಡಿತು.ಆ ಬಳಿಕ ಈ ಜೋಡಿ ವೈಯಕ್ತಿಕ ವಾಗಿ ಒಟ್ಟಿಗೆ ಕಾಣಿಸಿ ಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಸದ್ಯ ರಾಹುಲ್ ಸಾಂಕೃತ್ಯಾ ಯನ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ.
ಇದನ್ನು ಓದಿ:Full Meals Movie: ಕ್ಯಾಸೆಟ್‌ನಲ್ಲಿ ʼವಾಹ್ ಏನೋ ಹವಾʼ ಸಾಂಗ್ ರಿಲೀಸ್ ಮಾಡಿದ ʼಫುಲ್ ಮೀಲ್ಸ್ʼ ಚಿತ್ರತಂಡ
ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಕೂಡ ನಡೀತಾ ಇದ್ದು ಸಿನಿಮಾದಲ್ಲಿ ಖ್ಯಾತ ಹಾಲಿವುಡ್ ಸಿನಿಮಾದ ಸ್ಟಾರ್ ನಟ ರೊಬ್ಬರು ವಿಲನ್ ಆಗಿ ಎಂಟ್ರಿ ನೀಡಲಿದ್ದಾರೆ. ಜನಪ್ರಿಯ ಹಾಲಿವುಡ್ ಸಿನಿಮಾ ಆಗಿರುವ ‘ಮಮ್ಮಿ’ ಚಿತ್ರದಲ್ಲಿ ನಟಿಸಿರುವ ಅರ್ನಾಲ್ಡ್ ವೊಸ್ಲು ಇದೀಗ ತೆಲುಗು ಸಿನಿಮಾ ದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅರ್ನಾಲ್ಡ್ ನಟಿಸಿದ ‘ಮಮ್ಮಿ ರಿಟರ್ನ್ಸ್’, ‘ಜಿಐ: ಜೋ’, ‘ಸ್ಪೈಡರ್ಮ್ಯಾನ್’, ‘ಗ್ರೀನ್ ಲ್ಯಾಂಟರ್ನ್’, ‘ಡಾರ್ಕ್ಮ್ಯಾನ್’ ಇನ್ನೂ ಕೆಲವು ಚಿತ್ರಗಳು ಹಿಟ್ ಆಗಿದ್ದು ರಶ್ಮೀಕಾ- ವಿಜಯ್ ನಟಿಸುವ ಸಿನಿಮಾಕ್ಕೂ ಈ ಖ್ಯಾತ ನಟನ ಎಂಟ್ರಿಯಾದರೆ ಸಿನಿಮಾ ಪಕ್ಕಾ ಹಿಟ್ ಪಡೆಯಲಿದೆ.
ಸದ್ಯ ವಿಜಯ್ ಹಾಗೂ ರಶ್ಮೀಕಾ ಸಿನಿಮಾ ಅಲ್ಲದೆ ಆಫ್‌ಸ್ಕ್ರೀನ್‌ನಲ್ಲಿಯೂ ಅವರು ದೀರ್ಘ ಕಾಲ ದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ, ವಿಜಯ್ ದೇವರಕೊಂಡ ನಟನೆಯ ಸಿನಿಮಾಗಳು ಸತತವಾಗಿ ಫ್ಲಾಪ್ ಆಗಿದ್ದು ಸದ್ಯ ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ರಶ್ಮಿಕಾ ಈಗಾಗಲೇ ಹಲವು ಸಿನಿಮಾದಲ್ಲಿ ಬ್ಯುಸಿ ಇದ್ದು ಇಬ್ಬರಿಗೂ ಮತ್ತೆ ಈ ಚಿತ್ರ ಅದೃಷ್ಟ ತರಲಿದೆಯಾ ಕಾದು ನೋಡಬೇಕಿದೆ.