ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

I Am Ruby Movie: ಚೇತನ್ ಕೇಶವ್ ನಿರ್ದೇಶನದ ʼI Am ರೂಬಿʼ ಚಿತ್ರದ ಶೀರ್ಷಿಕೆ ಅನಾವರಣ

Sandalwood News: ಚೇತನ್ ಕೇಶವ್ ನಿರ್ದೇಶನದ ಎರಡನೇ ಸಿನಿಮಾದ ಶೀರ್ಷಿಕೆ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಅನಾವರಣವಾಗಿದೆ. ಆಕಾಶ್ ಎಂಬ ಮೈಸೂರಿನ ನೂತನ ಪ್ರತಿಭೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ʼI Am ರೂಬಿʼ ಎಂದು ಹೆಸರಿಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು, ಅ.21: ವಸಿಷ್ಠ ಸಿಂಹ ಅಭಿನಯದ ʼLove ಲಿʼ ಚಿತ್ರ ನಿರ್ದೇಶಿಸಿದ್ದ ಚೇತನ್ ಕೇಶವ್ ನಿರ್ದೇಶನದ ಎರಡನೇ ಸಿನಿಮಾದ ಶೀರ್ಷಿಕೆ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಅನಾವರಣವಾಗಿದೆ. ಆಶ್ರಯ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ. ಶಿವೇಗೌಡ ಸಿ.ವೈ ಹಾಗೂ ʼಚಿಂಗಾರಿʼ ಬಿ. ಮಹದೇವ್ ಅವರು ನಿರ್ಮಿಸುತ್ತಿರುವ ಮತ್ತು ಆಕಾಶ್ ಎಂಬ ಮೈಸೂರಿನ ನೂತನ ಪ್ರತಿಭೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ʼI Am ರೂಬಿʼ (I Am Ruby Movie) ಎಂದು ಹೆಸರಿಡಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಈ ನೂತನ ಚಿತ್ರದ ಬಗ್ಗೆ ಮಾಹಿತಿ ನೀಡಿದೆ.

ನಿರ್ದೇಶಕ ಚೇತನ್ ಕೇಶವ ಅವರೇ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಅಶ್ವಿನ್ ಕೆನಡಿ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ, ಪ್ರತಾಪ್ ಆರ್ ಮೆಂಡನ್ ಕಲಾ ನಿರ್ದೇಶನ ಹಾಗೂ ಡಾ.ಕೆ. ರವಿವರ್ಮ - ದಿಲೀಪ್ ಎಂ ರಾಜ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ರಂಗಾಯಣ ಸೇರಿದಂತೆ ಅನೇಕ ಕಡೆ ನಾಟಕಗಳಲ್ಲಿ ಅಭಿನಯಿಸಿರುವ ಹಾಗೂ ಚಿತ್ರ ನಾಯಕನಾಗಲು ಬೇಕಾದ ಪೂರ್ವ ತಯಾರಿಯನ್ನು ಈಗಾಗಲೇ ಮಾಡಿಕೊಂಡಿರುವ ಮೈಸೂರು ಮೂಲದ ಆಕಾಶ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Deepavali Fashion 2025: ದೀಪಾವಳಿಯ ರಂಗು ಹೆಚ್ಚಿಸುವ ಡಿಸೈನರ್‌ವೇರ್‌ಗಳಿವು

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಖ್ಯಾತಿಯ ಭೂಮಿಕ ರಮೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿರುತ್ತದೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʼI Am ರೂಬಿʼ ಚಿತ್ರಕ್ಕೆ ಡಿಸೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ.