ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ಕಾಂತಾರ ಚಾಪ್ಟರ್ 1 ಪೈರಸಿ ಕಾಪಿ ಪಡೆದರೆ 2 ಲಕ್ಷ ರೂ.ವರೆಗೆ ದಂಡ

ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಚಿತ್ರ ಸೋರಿಕೆಯಾಗಿದ್ದು, ತಮಿಳ್ ರಾಕರ್ಸ್, ಫಿಲಂಝಿಲ್ಲಾ, ಮೂವಿರೂಲ್ಸ್ ನಲ್ಲಿ ಪೈರಸಿ ಕಾಪಿ ಲಭ್ಯವಾಗಿದೆ. ಇದನ್ನು ಒಂದು ವೇಳೆ ಡೌನ್‌ಲೋಡ್ ಮಾಡಿಕೊಂಡರೆ ಭಾರತೀಯ ಹಕ್ಕುಸ್ವಾಮ್ಯ ಕಾನೂನಿನಡಿಯಲ್ಲಿ 2 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.

ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಪುಷ್ಪ, ಅನಿಮಲ್ ಮತ್ತು ಬ್ರಹ್ಮಾಸ್ತ್ರ ಚಿತ್ರಗಳು ಪೈರಸಿ ವೆಬ್‌ಸೈಟ್‌ಗಳಿಗೆ ಬಲಿಯಾಗಿತ್ತು. ಇದು ಕಾನೂನು ಬಾಹಿರವಾಗಿದೆ. ಇದರಿಂದ ಚಲನಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮೇಲೂ ಪರಿಣಾಮ ಬೀರುತ್ತದೆ.್ಸ್ (Movierulez) ಮತ್ತು ಮೂವಿಸದ (Moviesda) ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಲೀಕ್‌ ಆಗಿದೆ. ಅಲ್ಲದೇ ಚಿತ್ರದ ಅನಧಿಕೃತ ಆವೃತ್ತಿಗಳು ಹಲವಾರು ಟೆಲಿಗ್ರಾಮ್ ಚಾನೆಲ್‌ಗಳಲ್ಲಿಯೂ ಪ್ರಸಾರವಾಗುತ್ತಿವೆ. ಆದರೆ ಈ ಕಾಪಿಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರವಿರಲಿ. ಯಾಕೆಂದರೆ ಇದನ್ನು ಡೌನ್ ಲೋಡ್ ಮಾಡಿಕೊಂಡರೆ ಭಾರತೀಯ ಹಕ್ಕುಸ್ವಾಮ್ಯ ಕಾನೂನಿನಡಿಯಲ್ಲಿ 2 ಲಕ್ಷ ರೂ. ವರೆಗೆ ದಂಡ, ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಪುಷ್ಪ, ಅನಿಮಲ್ ಮತ್ತು ಬ್ರಹ್ಮಾಸ್ತ್ರ ಚಿತ್ರಗಳು ಪೈರಸಿ ವೆಬ್‌ಸೈಟ್‌ಗಳಿಗೆ ಬಲಿಯಾಗಿತ್ತು. ಇದು ಕಾನೂನುಬಾಹಿರವಾಗಿದೆ. ಇದರಿಂದ ಚಲನಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮೇಲೂ ಪರಿಣಾಮ ಬೀರುತ್ತದೆ.

ಕಾಂತಾರ ಚಾಪ್ಟರ್ 1ರಲ್ಲಿ ಏನಿದೆ?

ಭಾರತೀಯ ಇತಿಹಾಸದ ಸುವರ್ಣ ಅವಧಿ ಎಂದೇ ಕರೆಯಲಾಗುವ ಕದಂಬರ ಕಾಲದ ವರ್ಣನೆ ಈ ಚಿತ್ರದಲ್ಲಿದೆ. 2023ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ಭಾಗ 2 ಆಗಿತ್ತು ಎಂದು ಆಗಲೇ ರಿಷಬ್ ಶೆಟ್ಟಿ ಘೋಷಿಸಿದ್ದರು. ಹೀಗಾಗಿ ಅದರ ಪೂರ್ವ ಭಾಗ ಮುಂದೆ ಬಿಡುಗಡೆಯಾಗುವುದಾಗಿ ಹೇಳಿದ್ದರು. ಅದರಂತೆಯೇ ಈಗ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿದ್ದು ಇದು ಈ ಹಿಂದೆ ಬಂದಿರುವ ಕಾಂತಾರ ಚಿತ್ರದ ಪೂರ್ವ ಭಾಗವಾಗಿದೆ.

ಇದನ್ನೂ ಓದಿ: JNU Unrest: ಜೆಎನ್‌ಯು ಮತ್ತೆ ಧಗ ಧಗ! ರಾವಣ ಪ್ರತಿಕೃತಿ ದಹನ ವಿವಾದ- ವಿದ್ಯಾರ್ಥಿಗಳ ಮಾರಾಮಾರಿ

ಕಾಂತಾರ ಚಾಪ್ಟರ್ 1 ಹೇಗಿದೆ?

ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಾಕಷ್ಟು ಪ್ರೇಕ್ಷಕರು ಮತ್ತು ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರಕ್ಕೆ 3.5 ಸ್ಟಾರ್ ರೇಟಿಂಗ್ ಕೂಡ ಸಿಕ್ಕಿದೆ. ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾದುದು ಅಲ್ಲವಾದರೂ ಖಂಡಿತಾ ಇದನ್ನು ನೋಡಲೇಬೇಕು. ಇದರಲ್ಲಿ ರಿಷಬ್ ಶೆಟ್ಟಿಯವರು ಭಾರತೀಯ ಜಾನಪದವನ್ನು ಸಿನಿಮಾದೊಂದಿಗೆ ಸಂಯೋಜಿಸುವ ಕಾರ್ಯ ಮಾಡಿದ್ದಾರೆ. ಇದನ್ನು ಅವರು ಚೆನ್ನಾಗಿ ಮಾಡಿದ್ದಾರೆ ಎಂದಿದ್ದಾರೆ ವಿಮರ್ಶಕರು.

ವಿದ್ಯಾ ಇರ್ವತ್ತೂರು

View all posts by this author