ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು (Pushpa Arun Kumar) ತಮ್ಮ ಪಿಎ ಪ್ರೊಡಕ್ಷನ್ಸ್ (PA Productions)ಲಾಂಛನದಲ್ಲಿ ನಿರ್ಮಿಸಿದ್ದ ಮೊದಲ ಚಿತ್ರ ʼಕೊತ್ತಲವಾಡಿʼ (Kothalavadi Movie). ಶ್ರೀರಾಜ್ ನಿರ್ದೇಶಿಸಿ, ಪೃಥ್ವಿ ಅಂಬಾರ್ ಹಾಗೂ ಕಾವ್ಯ ಶೈವ ನಾಯಕ - ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿ ಜನಮನಸೂರೆಗೊಂಡಿತ್ತು. ಸೆಪ್ಟೆಂಬರ್ 5 ರಿಂದ ಈ ಚಿತ್ರವನ್ನು ಅಮೇಜಾನ್ ಪ್ರೈಮ್‌ನಲ್ಲೂ ವೀಕ್ಷಿಸಬಹುದಾಗಿದೆ.
ʼಕೊತ್ತಲವಾಡಿʼ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು. ಆದರೆ ಮೊದಲು ಸೆಪ್ಟೆಂಬರ್ 5 ರಂದು ಕನ್ನಡದಲ್ಲಿ ಮಾತ್ರ ಪ್ರದರ್ಶನವಾಗಲಿದ್ದು, ನಂತರದ ದಿನಗಳಲ್ಲಿ ಮಿಕ್ಕ ಭಾಷೆಗಳಲ್ಲಿ ವೀಕ್ಷಿಸಬಹುದು.
ಕಾರ್ತಿಕ್ ಎಸ್ ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಗೂ ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿರುವ ಈ ಚಿತ್ರದ ತಾರಾಬಳಗದಲ್ಲಿ ಪೃಥ್ವಿ ಅಂಬರ್, ಕಾವ್ಯ ಶೈವ, ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಮಾನಸಿ ಸುಧೀರ್ ಮುಂತಾದವರಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ | Fashion News 2025: ಆಜಾದಿ ಮಹೋತ್ಸವ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದ ಮಹಿಳಾಮಣಿಯರು