ನವದೆಹಲಿ: ಬಾಲಿವುಡ್ ನಟ ಆಮಿರ್ ಖಾನ್ (Aamir Khan) ʻಲಾಲ್ ಸಿಂಗ್ ಚಡ್ಡಾʼ ಸಿನಿಮಾದಲ್ಲಿ ನಟಿಸಿದ ನಂತರ ನಿರ್ಮಾಣ ದತ್ತ ಮುಖ ಮಾಡಿದ್ದರು. ಇದೀಗ ದೊಡ್ಡ ಗ್ಯಾಪ್ ನ ನಂತರ ʻಸಿತಾರೆ ಜಮೀನ್ ಪರ್ʼ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಜೂನ್ 20ರಂದು ಸಿನಿಮಾ ರಿಲೀಸ್ ಆಗಲಿದೆ. ಇದರ ಜೊತೆ ನಟ ತಮ್ಮ ಕನಸಿನ ಯೋಜನೆಯಾದ ಮಹಾಭಾರತ ಸಿನಿಮಾದ ತಯಾರಿಯಲ್ಲೂ ಬ್ಯುಸಿ ಯಾಗಿದ್ದಾರೆ. ಸದ್ಯ ನಟ ಆಮಿರ್ ಖಾನ್ ಸಿತಾರೆ ಜಮೀನ್ ಪರ್' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದು ಇತ್ತೀಚಿನ ಸಂದರ್ಶನವೊಂದರಲ್ಲಿ ಮಹಾಭಾರತ ಸಿನಿಮಾವು ಅವರ ವೃತ್ತಿಜೀವನದ ಕೊನೆಯ ಚಿತ್ರವೂ ಆಗಿರಬಹುದು ಎಂದು ಸುಳಿವು ನೀಡಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಕಳೆದ 2 ವರ್ಷ ಗಳಿಂದ ಯಾವುದೇ ಸಿನಿಮಾ ಬಿಡುಗಡೆ ಮಾಡಲಿರಲಿಲ್ಲ. ಆದರೆ ಇದೀಗ ಆಮಿರ್ ಖಾನ್ ಮಹಾಭಾರತವನ್ನು ಸಿನಿಮಾ ಮಾಡುವ ಆಸಕ್ತಿಯನ್ನು ತೋರಿಸಿದ್ದಾರೆ. ಮಹಾಭಾರತ’ ಕತೆಯನ್ನು ಸಿನಿಮಾ ಮಾಡಬೇಕು ಎಂಬುದು ನಟ ಆಮಿರ್ ಖಾನ್ ಅವರ ಜೀವನದ ಬಹುದೊಡ್ಡ ಆಸೆ ಆಗಿತ್ತು. ಅದರಂತೆ ಇದೇ ವರ್ಷ ಮಹಾಭಾರತ ಸಿನಿಮಾ ಪ್ರಾರಂಭ ಮಾಡುವುದಾಗಿ ಹೇಳಿ ಕೊಂಡಿದ್ದಾರೆ.
ಆಮಿರ್ ಖಾನ್ ತಮ್ಮ ಕನಸಿನ ಯೋಜನೆಯಾದ 'ಮಹಾಭಾರತ'ದ ಬಗ್ಗೆ ಆಗಾಗ ಸಂದರ್ಶನಗಳಲ್ಲಿ ಮಾತ ನಾಡುತ್ತಾರೆ. ಅದೇ ರೀತಿ ತಮ್ಮ ಕೊನೆಯ ಸಿನಿಮಾ ಬಗ್ಗೆ ಸಂದರ್ಶಕರೊಬ್ಬರು ಪ್ರಶ್ನೆ ಮಾಡಿದಾಗ ಮಹಾ ಭಾರತ ಸಿನಿಮಾವು ಅವರ ವೃತ್ತಿಜೀವನದ ಕೊನೆಯ ಚಿತ್ರವೂ ಆಗಿರಬಹುದು ಎಂದು ಸುಳಿವು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಆಮಿರ್ ಖಾನ್ ಮಹಾಭಾರತ ಸಿನಿಮಾ ನನ್ನ ಕನಸು, ಇದರಲ್ಲಿ ಭಾವನೆಗಳಿವೆ, ಜಗತ್ತಿನಲ್ಲಿ ನೀವು ಕಾಣುವ ಎಲ್ಲವೂ ಮಹಾಭಾರತದಲ್ಲಿ ಸಿಗಲಿದೆ. ಹಾಗಾಗಿ ಮಹಾ ಭಾರತವನ್ನು ಯಾವಾಗಲೂ ತಾನು ಜೀವಂತಗೊಳಿಸಲು ಬಯಸಿದ್ದೇನೆ ಎಂದು ಹೇಳಿ ಕೊಂಡಿದ್ದಾರೆ.
ಅವರ ಕೊನೆಯ ಚಿತ್ರದ ಬಗ್ಗೆ ಮಾತನಾಡಿದ ಅವರು ಬಹುಶಃ ಈ ಸಿನಿಮಾ ಮಾಡಿದ ನಂತರ ನಾನು ಏನು ಮಾಡಲು ಉಳಿದಿಲ್ಲ ಅಂತ ಭಾವಿಸುತ್ತೇನೆ. ಏಕೆಂದರೆ ಈ ಚಿತ್ರದ ವಿಷಯ ಹಾಗೆಯೇ ಇದೆ. ಬಹುಶಃ ಇದರ ನಂತರ, ನಾನು ಬೇರೆ ಏನನ್ನೂ ಮಾಡುವ ಅಗತ್ಯವಿಲ್ಲ ಎಂದು ನನಗೆ ಅನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಆಮಿರ್ ಖಾನ್ ಸದ್ಯ ಸಿತಾರೆ ಜಮೀನ್ ಪರ್'ನಲ್ಲಿ ಕಾಣಿಸಿಕೊಳ್ಳಲಿದ್ದು ಇದು ಜೂನ್ 20 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಮಿರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಸಿತಾರೆ ಜಮೀನ್ ಪರ ಚಿತ್ರದಲ್ಲಿ ಜೆನೆಲಿಯಾ ದೇಶ್‌ಮುಖ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಆಮಿರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ನಿರ್ಮಿಸಿದ್ದಾರೆ. ಆರ್‌ಎಸ್ ಪ್ರಸನ್ನ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ..