ನವದೆಹಲಿ:ಭಾರತೀಯ ಚಲನಚಿತ್ರೋದ್ಯಮದಲ್ಲಿ ಖ್ಯಾತಿ ಪಡೆದ ನಟ ಆರ್. ಮಾಧವನ್ (R.Madhavan) ಅವರು ತಮ್ಮ ಅದ್ಭುತ ಅಭಿನಯದಿಂದಲೇ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ನಟನೆಯ ಜೊತೆಗೆ ಚಲನಚಿತ್ರ ನಿರ್ಮಾಣದಲ್ಲಿಯೂ ಇವರು ಬಹಳ ಸಕ್ರಿಯರಾಗಿದ್ದಾರೆ. ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಖ್ಯಾತಿ ಪಡೆದ ಅವರು ಎಲ್ಲ ತರಹದ ಜಾನರ್ ಸಿನಿಮಾ ದಲ್ಲಿಯೂ ಆಯಾ ಪಾತ್ರಕ್ಕೆ ಹೊಂದುವಂತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಗುರು,ತ್ರೀ ಈಡಿಯಟ್ಸ್, ಶೈತಾನ್, ರನ್ ಸೇರಿದಂತೆ ಅನೇಕ ಹಿಟ್ ಸಿನಿಮಾ ನೀಡಿದ್ದ ಇವರು ಇತ್ತೀಚೆಗಷ್ಟೇ ಆಪ್ ಜೈಸಾ ಕೋಯಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೆ ಆರ್ ಮಾಧವನ್ ಅವರು ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದು, ಈ ಸಿನಿಮಾದ ಕೆಲವು ಅಂಶಗಳು ತಮ್ಮ ವೈಯಕ್ತಿಕ ಜೀವನಕ್ಕೆ ಅತ್ಯಂತ ಆಪ್ತವಾಗಿದೆ ಎಂದು ತಿಳಿಸಿದ್ದಾರೆ. ಅದರ ಜೊತೆ ವಯಸ್ಸು, ಸಂಬಂಧ ಗಳಲ್ಲಿನ ಸಮಾನತೆ ಕಾಯ್ದುಕೊಳ್ಳಿವುದರ ಕುರಿತು ಕೂಡ ಅವರು ಮಾತನಾಡಿದ್ದಾರೆ.
ಆಪ್ ಜೈಸಾ ಕೋಯಿ ಚಿತ್ರದಲ್ಲಿ ಆರ್ ಮಾಧವನ್ ಅವರು 40ರ ವರ್ಷದಲ್ಲಿ ವಧು ಅನ್ವೇಷಣೆ ಮಾಡುವ ಪಾತ್ರದಲ್ಲಿ ಬಹಳ ವಿಭಿನ್ನವಾಗಿ ನಟಿಸಿದ್ದಾರೆ. ಇದರಲ್ಲಿ ಹರೆಯದ ವ್ಯಕ್ತಿಯ ಪಾತ್ರ ವನ್ನು ಅವರು ನಿರ್ವಹಿಸಿದ್ದರು. ಈ ಕಥೆಯು ಸಮಾಜದಲ್ಲಿ ವಯಸ್ಸಿನ ಬಗ್ಗೆ ಇರುವ ಕೆಲವು ಧೋರಣೆ ಬಗ್ಗೆ ತಿಳಿಸಲಿದ್ದು ಈ ಅಂಶವು ಅವರ ನಿಜ ಜೀವನದ ಕೆಲವು ಸಂಗತಿ ಪ್ರತಿಬಿಂಬಿಸಿದೆ ಎಂಬುದನ್ನು ಸ್ವತಃ ಮಾಧವನ್ ಅವರೇ ಹಂಚಿಕೊಂಡಿದ್ದಾರೆ.
ಇದನ್ನು ಓದಿ:Sholay Movie: ʼಶೋಲೆʼ ಸಿನಿಮಾಕ್ಕೆ 50ರ ಸಂಭ್ರಮ: ಹಿರಿಯ ನಟ ಸಚಿನ್ ಪಿಲ್ಗಾಂವ್ಕರ್ ಹೇಳಿದ್ದೇನು?
ನಟ ಆರ್ ಮಾಧವನ್ ಈ ಬಗ್ಗೆ ಮಾತನಾಡಿ, ಬಹುತೇಕರು ತಮ್ಮ ಮಕ್ಕಳ ಸ್ನೇಹಿತರು ತಮ್ಮನ್ನು ಅಂಕಲ್ ಎಂದು ಕರೆದಾಗ ವಯಸ್ಸಿನ ಬಗ್ಗೆ ಮೊದಲು ಟೀಕೆ ಎದುರಿಸಿದಂತಾಗುತ್ತದೆ. ಅದು ನಿಮಗೆ ಮೊದಲು ಅಚ್ಚರಿ ಎನಿಸಬಹುದು. ಆದರೆ ನಂತರ ನೀವು ಅದನ್ನು ಅನಿವಾರ್ಯವಾಗಿ ಒಪ್ಪಿ ಕೊಳ್ಳಲೇ ಬೇಕು ಎಂದು ಮಾಧವನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಳಿಕ ಸಂದರ್ಶಕಿಯು ಮಾಧವನ್ ಅವರಿಗೆ ನಟನ ಕೆಲಸದ ಮೇಲೆ ವಯಸ್ಸು ಪರಿಣಾಮ ಬೀರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.ಅದಕ್ಕೆ ಆರ್ ಮಾಧವನ್ ಅವರು ಉತ್ತರಿಸಿ, ವಯಸ್ಸಾಗುತ್ತಿದೆ ಎಂದಾಗ ನೀವು ಸಿನಿಮಾ ಮಾಡುವಾಗ ನಾಯಕಿಯರ ಆಯ್ಕೆಯಲ್ಲಿ ಜಾಗರೂಕರಾಗಿರಬೇಕು. ಸಿನಿಮಾ ನಾಯಕಿ ಯಂಗ್ ಆಗಿದ್ದು ನಿಮ್ಮ ಜೊತೆ ನಟಸಲು ಯಾವ ಅಭ್ಯಂತರ ಇಲ್ಲದಿದ್ದರು, ನಿಮ್ಮೊಂದಿಗೆ ಕೆಲಸ ಮಾಡಲು ನಾಯಕಿ ಬಯಸಿದ್ದರೂ, ನಟನು ಚಿತ್ರದ ನೆಪದಲ್ಲಿ ಮೋಜು ಮಾಡುತ್ತಿರುವಂತೆ ಕಾಣುತ್ತದೆ. ಜನರು ನಿಮ್ಮನ್ನು ಬೇರೆ ರೀತಿಯಲ್ಲಿ ಜಡ್ಜ್ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ನಮಗೆ ವಯಸ್ಸಾಗಿದ್ದು ನಮ್ಮ ದೇಹದಿಂದ ಮೊದಲು ಅರಿವಾಗುತ್ತದೆ. ವಯಸ್ಸಾಗುತ್ತಾ ಹೋದಂತೆ ಯುವಕನಂತೆ ಕಾಣಲು ಸಾಧ್ಯವಿಲ್ಲ. ಹಾಗೆ ಪಾತ್ರಕ್ಕೆ ತಕ್ಕಂತೆ ಮೇಕಪ್ ಮಾಡಿ ಯುವಕನಂತೆ ಮಾಡಿದರು ಅದು ಕೃತಕವಾಗಿರುತ್ತದೆ. ಈಗ ನಾನು 22 ವರ್ಷದ ಯುವಕನಂತೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ಅರಿವು ನನಗಿದೆ. ವಯಸ್ಸಿಗೆ ಹೊಂದುವಂತ ಪಾತ್ರ ಮಾತ್ರವೇ ಅರಿತು ಒಪ್ಪಿಕೊಳ್ಳಬೇಕು ಎಂದು ನಟ ಆರ್.ಮಾಧವನ್ ಈ ಬಗ್ಗೆ ತಿಳಿಸಿದ್ದಾರೆ.