ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ 'ಕೂಲಿ' ಸಿನಿಮಾವು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ರಜನಿಕಾಂತ್ ಸಿನಿಮಾ ಎಂಬ ಕಾರಣಕ್ಕೆ ‘ಕೂಲಿ’ ಚಿತ್ರದ(Coolie Movie) ಮೇಲೆ ಅಭಿಮಾನಿಗಳು ಬಹಳಷ್ಟು ನಿರೀಕ್ಷೆ ಕೂಡ ಇಟ್ಟುಕೊಂಡಿದ್ದರು. 'ಕೂಲಿ' ಚಿತ್ರ ಆಗಸ್ಟ್ 14ರಂದು ಬಿಡುಗಡೆಗೊಂಡಿದ್ದು ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರಕ್ಕೆ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸೂಪರ್ ಹಿಟ್ ಸಿನಿಮಾ ಎಂದು ಹೊಗಳುತ್ತಿದ್ದರೆ, ಇನ್ನು ಕೆಲವರಿಗೆ ಸಾಧಾರಣವೆನಿಸಿದ ಸಿನಿಮಾ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೂ ಕೂಡ ಬಾಕ್ಸಾಫೀಸ್‌ನಲ್ಲಿ ಮಾತ್ರ ಕೂಲಿ ಭರ್ಜರಿ ಕಮಾಲ್ ಮಾಡುತ್ತಿದೆ.
ರಜನಿಕಾಂತ್ ಕೂಲಿ ಚಿತ್ರ ಬಿಡುಗಡೆ ಆದ ಸಂದರ್ಭ ಅಂದು ಕೊಂಡ ಮಟ್ಟಕ್ಕೆ ಸಿನಿಮಾ ಇಲ್ಲ ಎನ್ನುವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಕೂಡ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ನಾಲ್ಕು ದಿನಗಳ ಆರಂಭಿಕ ವಾರಾಂತ್ಯದಲ್ಲಿ ವಿಶ್ವಾದ್ಯಂತ 400 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ.ಆಗಸ್ಟ್ 23 ಶನಿವಾರದಂದು ಶೇಕಡಾ 79 % ಏರಿಕೆ ಕಂಡಿದ್ದು ಬಾಕ್ಸಾ ಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೂಲಗಳ ಪ್ರಕಾರ ಇಲ್ಲಿಯ ವರೆಗೆ ಅಂದರೆ ಹನ್ನೊಂದು ದಿನದಲ್ಲಿ ಕೂಲಿ 257.02 ಕೋಟಿಯನ್ನು ಗಳಿಸಿದೆ.
ವಿಶೇಷ ಅಂದರೆ ಕೂಲಿ ಕಬಾಲಿಯ ದಾಖಲೆಯನ್ನು ಕೂಡ ಬ್ರೇಕ್ ಮಾಡಿದೆ. ಹೌದು 2016ರಲ್ಲಿ ಬಿಡುಗಡೆಯಾದ ಕಬಾಲಿ ಚಿತ್ರ ಕೂಡ ಬಹಳಷ್ಟು ಕ್ಯುರಾಸಿಟಿ ಕೇರಳಿಸಿತ್ತು. ಕೂಲಿಯಂತೆಯೇ ಹವಾ ಸೃಷ್ಟಿ ಮಾಡಿತ್ತು. ಆದರೆ ಕೂಲಿಯಂತೆಯೇ ಕಬಾಲಿ ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲವಾಗಿತ್ತು, ಆದರೂ ಕೂಡ ಬಾಕ್ಸಾಫೀಸ್‌ನಲ್ಲಿ ಮಾತ್ರ ಕೋಟಿ ಕೋಟಿ ಹಣ ಕಲೆಕ್ಷನ್ ಮಾಡಿದ್ದು ಆ ಸಂದರ್ಭ ದಲ್ಲೇ ಕೇವಲ ಹಿಂದಿಯಲ್ಲಿ ಕಬಾಲಿ 28 ಕೋಟಿಯನ್ನು ಗಳಿಸಿತ್ತು. ಸದ್ಯ ಈ ಗಳಿಕೆಯನ್ನು ಈಗ ಕೂಲಿ ಬ್ರೇಕ್ ಮಾಡಿದೆ. ಕೇವಲ ಹಿಂದಿಯಲ್ಲಿ ಕೂಲಿ ಹನ್ನೊಂದು ದಿನದಲ್ಲಿ ರೂ 29.52 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರಗಳ ಸಾಲಿನಲ್ಲಿ ಕೂಲಿ ಮೂರನೇ ಸ್ಥಾನನಕ್ಕೇರಿದೆ.
ರಜನಿ ಸಿನಿಮಾದಲ್ಲಿ ಸ್ಟಾರ್‌ಗಳ ಮಹಾ ಸಂಗಮವೇ ಇತ್ತು. ನಾಗಾರ್ಜುನ್, ಆಮೀರ್ ಖಾನ್, ಉಪೇಂದ್ರರಂತಹ ನಟರು ಸೂಪರ್‌ಸ್ಟಾರ್ ಜೊತೆಗೆ ನಟಿಸಿದ್ದರು. ಹಾಗೇ ಸೌಬಿನ್ ಶಾಹೀರ್, ಶ್ರುತಿ ಹಾಸನ್, ರಚಿತಾ ರಾಮ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಡುಗಡೆಗೂ ಮುನ್ನ ಇದ್ದ ಆಸಕ್ತಿ ನೋಡಿದರೆ, ಸಿನಿಮಾ1000 ಕೋಟಿ ಕ್ಲಬ್ ಸೇರೋದು ಗ್ಯಾರಂಟಿ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಅದು ಅಸಾಧ್ಯವೇನಿಸಿದರೂ ಕೆಲವೇ ದಿನದಲ್ಲಿ ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದ್ದು ಹೊಸ ಭರವಸೆಯನ್ನಂತೂ ಹುಟ್ಟುಹಾಕಿದೆ.