ನವದೆಹಲಿ: ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಹಾಗೂ ಅನಿಮಲ್ ಸಿನಿಮಾ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ಸದ್ಯ ಸ್ಪಿರಿಟ್ ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿ ಯಾಗಿದ್ದಾರೆ. ಸ್ಪಿರಿಟ್ ಸಿನಿಮಾದ ಬಳಿಕ ಖ್ಯಾತ ನಟನ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಆ ಪ್ರಕಾರ ಮಗಧೀರ, ಆರ್ ಆರ್ ಆರ್ ಸಿನಿಮಾ ಖ್ಯಾತಿಯ ನಟ ರಾಮ್ ಚರಣ್ (Ram Charan) ಜೊತೆಗೆ ಅನಿಮಲ್ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ಅವರು ಹೊಸ ಸಿನಿಮಾ ಮಾಡ ಲಿದ್ದು ಹೊಸ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅರ್ಜುನ್ ರೆಡ್ಡಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಟ ರಾಮ್ ಚರಣ್ ಜೊತೆಗೆ ನಿರ್ದೇಶಕ ಸಂದೀಪ್ ರೆಡ್ಡಿ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ಜೊತೆಗೆ ಹೊಸ ಸಿನಿಮಾವನ್ನು ಮಾಡಲು ಈ ಹಿಂದೆ ನಿರ್ಧರಿಸಿದ್ದು ಇದಕ್ಕೆ ನಟ ರಾಮ್ ಚರಣ್ ಕೂಡ ಒಪ್ಪಿಕೊಂಡಿದ್ದರಂತೆ. ಈ ಬಗ್ಗೆ ನಿರ್ದೇಶಕ ಸಂದೀಪ್ ರೆಡ್ಡಿ ಅಧಿಕೃತ ಮಾಹಿತಿ ಇದು ವರೆಗೆ ನೀಡಿಲ್ಲ.
ಸಂದೀಪ್ ರೆಡ್ಡಿ ವಂಗಾ ಈಗಾಗಲೇ ಸ್ಪಿರಿಟ್ ಮತ್ತು ಅನಿಮಲ್ ಪಾರ್ಕ್ ಚಿತ್ರಗಳನ್ನು ಮಾಡುವುದಾಗಿ ಘೋಷಿಸಿದ್ದಾರೆ. ಪ್ರಭಾಸ್ ಜೊತೆಗೆ ಸ್ಪಿರಿಟ್ ಚಿತ್ರವನ್ನು ಶೀಘ್ರದಲ್ಲೇ ಪ್ರಾರಂಭಿಸುವ ನಿರೀಕ್ಷೆಯಿದ್ದು ಅದರ ಜೊತೆಗೆ 2023 ರ ಬ್ಲಾಕ್‌ಬಸ್ಟರ್ 'ಅನಿಮಲ್' ನ ಮುಂದುವರಿದ ಭಾಗವಾಗಿ ಅನಿಮಲ್ ಪಾರ್ಕ್ ಸಿನಿಮಾ ಮಾಡಲು ಕೂಡ ನಿರ್ಧರಿಸಿದ್ದಾರೆ. ಇದರ ಜೊತೆಗೆ ನಿರ್ಮಾಪಕರಾಗಿ ಕೂಡ ಕೆಲಸ ಮಾಡಲು ಸಂದೀಪ್ ರೆಡ್ಡಿ ಅವರು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಈ ಮೂಲಕ ಹೊಸ ಪ್ರತಿಭೆ ಗಳಿಗೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ನೀಡಲು ಯೋಚಿಸಿದ್ದಾರೆ.
ಇದನ್ನು ಓದಿ: BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟೀಸರ್ ಔಟ್
ಸದ್ಯ ನಟ ರಾಮ್ ಚರಣ್ ಅವರು ಬುಚ್ಚಿ ಬಾಬು ಸಾನಾ ನಿರ್ದೇಶಿಸುತ್ತಿರುವ ಪೆಡ್ಡಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪೆಡ್ಡಿ ಒಂದು ಗ್ರಾಮೀಣ ಕ್ರೀಡಾ ನಾಟಕ ಚಿತ್ರವಾಗಿದ್ದು, ಜಾನ್ವಿ ಕಪೂರ್ ನಾಯಕಿಯಾಗಿ, ಹ್ಯಾಟ್ರಿಕ್ ಹೀರೊ ಶಿವ ರಾಜ್‌ಕುಮಾರ್ ಮತ್ತು ಮಿರ್ಜಾಪುರ ಖ್ಯಾತಿಯ ದಿವ್ಯೆಂದು ಕೂಡ ಇದೇ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ನಿರ್ದೇಶಕ ಸಂದೀಪ್ ರೆಡ್ಡಿ ರಾಮ್ ಚರಣ್ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಅನಿಮಲ್ ಪಾರ್ಕ್ ಸಿನಿಮಾದ ತಯಾರಿಗೆ ರಣಬೀರ್ ಕಪೂರ್ ಅವರ ಕಾಲ್ ಶೀಟ್ ಅಡ್ಡಿಯಾಗುತ್ತಿದೆ. ನಟ ರಣಬೀರ್ ಕಪೂರ್ ಅವರು ಸದ್ಯ ನಿತೇಶ್ ತಿವಾರಿ ಅವರ ರಾಮಾಯಣ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಆ್ಯಂಡ್ ವಾರ್ ಚಿತ್ರಗಳೊಂದಿಗೆ ಟೈ ಅಪ್ ಆಗಿದ್ದಾರೆ. ಈ ಸಿನಿಮಾ ಪೂರ್ತಿ ಆದ ಬಳಿಕ ಅನಿಮಲ್ ಪಾರ್ಕ್ ಸಿನಿಮಾ ಮಾಡಲಿದ್ದಾರೆ.