Son Of Sardaar 2: 'ಸನ್ ಆಫ್ ಸರ್ದಾರ್ 2’ ಪ್ರೀಮಿಯರ್ ಶೋಗೆ ಬಾಲಿವುಡ್ ತಾರೆಯರ ಸ್ಟೈಲಿಶ್ ಎಂಟ್ರಿ!
2012ರ ಹಿಟ್ ಆಕ್ಷನ್-ಕಾಮಿಡಿ ಸಿನಿಮಾ ‘ಸನ್ ಆಫ್ ಸರ್ದಾರ್’ ಮುಂದುವರಿದ ಭಾಗವಾದ ‘ಸನ್ ಆಫ್ ಸರ್ದಾರ್ 2’ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ವಿಶೇಷ ಪ್ರಿಮೀಯರ್ ಶೋವನ್ನು ಆಯೋಜಿಸಲಾಗಿದ್ದು ಬಾಲಿವುಡ್ ಹಲವು ಸೆಲೆಬ್ರಿಟಿಗಳು ಗ್ರ್ಯಾಂಡ್ ಎಂಟ್ರಿ ನೀಡಿದ್ದರು. ಅಜಯ್ ದೇವಗನ್, ಮೃಣಾಲ್ ಠಾಕೂರ್, ರವಿ ಕಿಶನ್, ಈ ಚಿತ್ರ ದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ನಡೆದ ಪ್ರೀಮಿಯರ್ ಶೋನಲ್ಲಿ ನಟಿಯರ ವಿಭಿನ್ನ ಲುಕ್ ಎಲ್ಲರ ಗಮನ ಸೆಳೆಯಿತು.
ಮೃಣಾಲ್ ಠಾಕೂರ್ ಈ ಸಿನಿಮಾದಲ್ಲಿ ಪೋಷಕಿ ಪಾತ್ರದಲ್ಲಿ ನಟಿಸಿದ್ದು ಅವರು, ಫ್ಲವರ್ ಪ್ರಿಂಟ್‌ನ ಮಿನಿ ಡ್ರೆಸ್‌ನಲ್ಲಿ ಸ್ಟೈಲಿಶ್ ಆಗಿ ಎಂಟ್ರಿ ನೀಡಿದರು. ಇವರ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದು ಲೈಕ್ ಕಾಮೆಂಟ್ ಗಳ ಸುರಿ ಮಳೆಗೈದಿದ್ದಾರೆ.
ತಮನ್ನಾ ಭಾಟಿಯಾ ಕೂಡ ಈ ಇವೆಂಟ್ ಗೆ ಆಗಮಿಸಿದ್ದು ಕೆಂಪು ಬ್ರಾಲೆಟ್ ಮತ್ತು ಸ್ಕರ್ಟ್ ಧರಿಸಿ ಗಮನ ಸೆಳೆದರು. ಸಿಂಪಲ್ ಮೇಕಪ್ ನೊಂದಿಗೆ ಮೋಸ್ಟ್ ಹೈಲೆಟ್ ಆಗಿರುವ ಇವರ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಟಿವಿ ಸೀರಿಯಲ್ ನಿಂದ ಹಿಡಿದು ಸಿನಿಮಾಗಳ ವರೆಗೆ ತನ್ನ ಛಾಪು ಮೂಡಿಸಿರುವ ನಟಿ ಮೌನಿ ರಾಯ್ ತನ್ನ ಅದ್ಭುತ ನಟನೆ ಮತ್ತು ಫ್ಯಾಶನ್ ಸೆನ್ಸ್ ಗೆ ಹೆಸರುವಾಸಿಯಾಗಿದ್ದಾರೆ. ಈ ಇವೆಂಟ್ ಗೆ ಕಪ್ಪು-ಬಿಳಿ ಪೊಲ್ಕಾ ಡಾಟ್ ಡ್ರೆಸ್ ಧರಿಸಿ ಗಮನ ಸೆಳೆದಿದ್ದಾರೆ.
ನೂಷ್ರತ್ ಭರೂಚಾ ಕೂಡ ಸಿನಿಮಾ ಅಲ್ಲದೆ ವಿವಿಧ ಇವೆಂಟ್ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಭಾಗವಹಿಸುತ್ತಾರೆ. ಇವರು ಕೆಂಪು ಆಫ್-ಶೋಲ್ಡರ್ ಗೌನ್‌ನಲ್ಲಿ ಪ್ರಿಟಿಯಾಗಿ ಕಂಡಿದ್ದಾರೆ.
ಬಾಲಿವುಡ್ ಖ್ಯಾತ ನಟ ಹಾಗೂ ರಾಜಕಾರಣಿ ರವಿ ಕಿಶನ್ ಅಪಾರ ಅಭಿಮಾನಿಗಳನ್ನು ಹೊಂದಿ ದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಆ್ಯಕ್ಟಿವ್ ಆಗಿರುವ ಇವರು ಈ ಇವೆಂಟ್ ಗೆ ಆಗ ಮಿಸಿದ್ದು ಸೂಟ್ ಧರಿಸಿ ಸ್ಟೈಲಿಷ್ ಲುಕ್ ಮೂಲಕ ಗಮನ ಸೆಳೆದರು.
''ಓಂಕಾರ", "ತನು ವೆಡ್ಸ್ ಮನು'' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ದೀಪಕ್ ಡೋಬ್ರಿಯಾಲ್ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ಸಂಪೂರ್ಣ ಕಪ್ಪು ಉಡುಗೆಯಲ್ಲಿ ಯಂಗ್ ಲುಕ್ ಪ್ರದರ್ಶಿಸಿದರು.
ರೋಷ್ನಿ ವಾಲಿಯಾ ಕಪ್ಪು ಗೌನ್‌ನಲ್ಲಿ ಕಂಗೊಳಿಸಿದ್ದು ವಿವಿಧ ಭಂಗಿಗಳಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಅದೇ ರೀತಿ ಚಂಕಿ ಪಾಂಡೆ ಮತ್ತು ಧನುಷ್ ಕೂಡಾ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು.