ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಇದ್ದಂತಹ ನಟ ವಿಷ್ಣುವರ್ಧನ್ (Dr Vishnuvardhan) ಸಮಾಧಿ ದ್ವಂಸ ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕನ್ನಡ ಸಿನಿಮಾದ ಅನೇಕ ನಟ ನಟಿಯರು ಒಬ್ಬೊಬ್ಬರಾಗಿ ಪ್ರತಿಕ್ರಿಯಿಸಿ ಬೇಸರ ವ್ಯಕ್ತ ಪಡಿ ಸುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್, ವಿಜಯರಾಘವೇಂದ್ರ, ವಸಿಷ್ಠ ಸಿಂಹ ಸೇರಿದಂತೆ ಕನ್ನಡದ ನಟರು ಹಾಗೂ ನಟಿಯರಾದ ಸುಧಾರಾಣಿ, ಶ್ರುತಿ ಬೇಸರ ವ್ಯಕ್ತಪಡಿಸಿದ್ದರು. ಇನ್ನು ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕೂಡ ಟ್ವೀಟ್ ಮಾಡಿದ್ದು ಘಟನೆ ಸಂಬಂಧ "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂದು ಬರೆದುಕೊಂಡಿದ್ದರು. ಇದೀಗ ನಟ ಉಪೇಂದ್ರ ಪೋಸ್ಟ್ ಗೆ ವೀರಕಪುತ್ರ ಶ್ರೀನಿವಾಸ್ ಕೌಂಟರ್ ನೀಡಿದ್ದಾರೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದ್ದ ಉಪ್ಪಿಗೆ ವಿಷ್ಣು ಅಭಿಮಾನಿ ಸಂಘದ ಅಧ್ಯಕ್ಷ ಟಕ್ಕರ್ ಕೊಟ್ಟಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸಮಾಧಿ ತೆರವು ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೈಕೋರ್ಟ್ ಆದೇಶ ಅಂತ ಹೇಳಿ ರಾತ್ರೋರಾತ್ರಿ ವಿಷ್ಣು ಸಮಾಧಿ ಸಂಪೂರ್ಣವಾಗಿ ಕೆಡವಲಾಗಿದೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅವರ ಅಂತ್ಯಕ್ರಿಯೆ ನಡೆದಿತ್ತು. ಅದೇ ಜಾಗದಲ್ಲಿ ಸ್ಮಾರಕ ಇರಬೇಕು ಎಂಬುದು ಫ್ಯಾನ್ಸ್ ಆಸೆ ಆಗಿತ್ತು. ಸದ್ಯ ಈ ಘಟನೆ ಬಗ್ಗೆ ನಟ ಉಪೇಂದ್ರ ರಿಯಾಕ್ಷನ್ ನೀಡಿದ್ದು ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.
ಇದನ್ನು ಓದಿ:War 2 Movie: 'ವಾರ್ 2' ಸಿನಿಮಾ ರಿಲೀಸ್‌ಗೆ ದಿನಗಣನೆ; ಜೂನಿಯರ್ ಎನ್‌ಟಿಆರ್- ಹೃತಿಕ್ ರೋಷನ್ ಭರ್ಜರಿ ಪ್ರಚಾರ
ರಿಯಲ್ ಸ್ಟಾರ್ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬಸವಣ್ಣವರ ವಚನದ ಮುಖ್ಯ ಸಾಲಿನ ಮೂಲಕ 'ವಿಷ್ಣು ಅಮರರು' ಎಂದಿದ್ದಾರೆ. "ಸ್ಥಾವರಕ್ಕಳಿವುಂಟು ಜಂಗ ಮಕ್ಕಳಿವಿಲ್ಲ". 'ಕೋಟಿ ಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ' ಎಂದು ನಟ ಉಪೇಂದ್ರ ಬರೆದು ಪೋಸ್ಟ್ ಮಾಡಿದ್ದರು.ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದ್ದ ಉಪ್ಪಿಗೆ ವಿಷ್ಣು ಅಭಿಮಾನಿ ಸಂಘದ ಅಧ್ಯಕ್ಷ ಟಕ್ಕರ್ ನೀಡಿದ್ದಾರೆ. ಇದಕ್ಕೆ ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿದ್ದು, "ಬನ್ನಿ ಉಪೇಂದ್ರ ಸರ್ ರಾಜ್ಯದ, ದೇಶದ ಎಲ್ಲಾ ಸಾಧ ಕರ ಸ್ಮಾರಕಗಳನ್ನು ಕೆಡವಿ ಬಿಡೋಣ" ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.