ನವದೆಹಲಿ: ಗೀತಾ ಗೋವಿದಂ, ಟ್ಯಾಕ್ಸಿವಾಲಾ, ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಯಲ್ಲಿರುತ್ತಾರೆ. ಇವರ ಅಭಿನಯದ ಲೈಗರ್ , ಖುಷಿ , ದಿ ಫ್ಯಾಮಿಲಿ ಸ್ಟಾರ್ ಮೂವಿ ಅಂದು ಕೊಂಡ ಮಟ್ಟಕ್ಕೆ ಯಶಸ್ಸು ನೀಡಲಿಲ್ಲ. ಹಾಗಿದ್ದರೂ ಇವರಿಗೆ ಸಿನಿಮಾ ಆಫರ್ ಮಾತ್ರ ಬರುತ್ತಲೇ ಇದೆ. ಜೆರ್ಸಿ ಚಿತ್ರ ನಿರ್ಮಾಪಕ ಗೌತಮ್ ತಿನ್ನನುರಿ ನಿರ್ದೇಶನದ ಕಿಂಗ್‌ಡಮ್ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರು ನಾಯಕನಾಗಿ ಅಭಿನಯಿಸಿದ್ದು ಈ ಸಿನಿಮಾ ಮೇಲೆ ಅಭಿಮಾನಿಗಳಿಗೂ ಕೂಡ ನಿರೀಕ್ಷೆ ಹೆಚ್ಚಿದೆ. ಅಂತೆಯೇ ಈ ಸಿನಿಮಾದ ಟ್ರೇಲರ್ ಇವೆಂಟ್ ಕಾರ್ಯಕ್ರಮವನ್ನು ತಿರುಪತಿಯಲ್ಲಿ ಆಯೋಜಿಸಲಾಗಿದ್ದು ನಟ ವಿಜಯ್ ದೇವರಕೊಂಡ ಅವರು ಅಲ್ಲು ಅರ್ಜುನ್ ಅವರ ಫೇಮಸ್ ಡೈಲಾಗ್ ಹೇಳುವ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ನಟ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ ಕಿಂಗ್‌ಡಮ್ ನ ಟ್ರೇಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಈ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಫೇಮಸ್ ಡೈಲಾಗ್ ಅನ್ನು ವಿಜಯ್ ಅವರು ತಮ್ಮದೆ ಆದ ಶೈಲಿಯಲ್ಲಿ ಹೇಳಿದ್ದಾರೆ. ನಮ್ಮ ತಿರುಪತಿ ವೆಂಕಣ್ಣ ಸ್ವಾಮಿಯವರು ಒಂದು ಸಾರಿ ನನ್ನ ಪಕ್ಕ ನಿಂತರೆ ನಾನು ದೊಡ್ಡ ವ್ಯಕ್ತಿಯಾಗುತ್ತೇನೆ ಸಾಮಿ ಎಂದಿದ್ದಾರೆ. ಈ ಮೂಲಕ ಅವರ ಡೈಲಾಗ್ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Vijay Deverakonda Delivered Pushpa Dialogue..#VijayDeverakonda #Kingdom pic.twitter.com/xvJJNqPf5F
— Filmy Wala Telugu (@NewsWalaFilmy) July 26, 2025
ಗೌತಮ್ ತಿನ್ನನುರಿ ನಿರ್ದೇಶನದ ಕಿಂಗ್‌ಡಮ್ ಚಿತ್ರವು ಹೈ- ಆ್ಯಕ್ಷನ್ ಸಿನಿಮಾವಾಗಿದ್ದು ಟ್ರೇಲರ್ ಮೂಲಕ ಅಭಿಮಾನಿಗಳ ಮನ ಸೆಳೆಯುತ್ತಿದೆ. ಈ ಸಿನಿಮಾ ಗೂಢಚಾರಿಕೆಯ ಸ್ಪಸ್ಪೆನ್ಸ್ ಥ್ರಿಲ್ಲರ್ ಇರಲಿದ್ದು ಚೇಸ್, ಫೈಟ್ ಅದ್ಭುತವಾಗಿ ಟ್ರೇಲರ್ ನಲ್ಲಿ ಮೂಡಿ ಬಂದಿದೆ. ಚಿತ್ರದ ಕಥೆಗೆ ತಕ್ಕಂತೆ ಅನಿರುದ್ಧ್ ರವಿಚಂದರ್ ಅವರ ಅದ್ಭುತ ಸಂಗೀತವೂ ಈ ಇರಲಿದೆ. ಕೆಲವು ದೃಶ್ಯಗಳು ಟ್ರೇಲರ್‌ನಲ್ಲಿ ಅಭಿಮಾನಿಗಳ ಕುತೂಹಲಕ್ಕೆ ಕಾರಣ ಮಾಡಿದ್ದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಇದನ್ನು ಓದಿ:Shivaganga Movie: ಹಾಡುಗಳ ಮೂಲಕ ಜನಮನ ಸೆಳೆಯುತ್ತಿದೆ ʼಶಿವಗಂಗʼ ಚಿತ್ರ
ವಿಜಯ್ ಜೊತೆಗೆ ಇದೇ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ, ಸತ್ಯದೇವ್ ಮತ್ತು ಮನೀಶ್ ಚೌಧರಿ ನಟಿಸಿದ್ದಾರೆ. ನಟ ಜೂನಿಯರ್ ಎನ್‌ಟಿಆರ್ ಅವರು ತೆಲುಗಿನಲ್ಲಿ ಹಾಗೂ ನಟ ಸೂರ್ಯ ಅವರು ತಮಿಳಿನಲ್ಲಿ ಈ ಸಿನಿಮಾದ ಟ್ರೇಲರ್‌ಗೆ ಧ್ವನಿ ನೀಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂವ್ಸ್ ಗಳಿಸಿದ್ದು, ಈ ಸಿನಿಮಾವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಯೋಜಿಸಿದ್ದು ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದೆ.
ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಅಡಿಯಲ್ಲಿ ಎಸ್. ನಾಗ ವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ, ಅನಿರುದ್ಧ್ ಅವರ ಸಂಗೀತವು ಈ ಸಿನಿಮಾದಲ್ಲಿ ಇದ್ದು ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾ ಜುಲೈ 31ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದ್ದು ವಿಜಯ್ ದೇವರಕೊಂಡ ಸಿನಿ ಪಯಣಕ್ಕೆ ಯಶಸ್ಸು ನೀಡುತ್ತಾ ಕಾದು ನೋಡಬೇಕು.