ನವದೆಹಲಿ:ಮೋಹಿನಿ ಕ್ರಿಸ್ಟಿನಾ ಶ್ರೀನಿವಾಸನ್ (Actress Mohini Christina) ಅವರು ಒಂದು ಕಾಲದ ಟಾಪ್ ಹೀರೋಯಿನ್ ಆಗಿ ಪ್ರಸಿದ್ಧ ನಟರ ಜೊತೆ ತೆರೆಹಂಚಿಕೊಂಡು ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಇವರು 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. 1991ರಲ್ಲಿ `ಎರಮನೆ ರೋಜವೇ' ತಮಿಳು ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಅನಂತರ ಮಲಯಾಳಂ ಚಿತ್ರರಂಗದಲ್ಲಿ ಮಿಂಚಿ ಫೇಮಸ್ ಆಗಿದ್ದರು. ಬಳಿಕ ಬಹುಭಾಷೆಯ ನಟಿಯಾಗಿ ತೆರೆ ಮೇಲೆ ಮಿಂಚಿದ್ದಾರೆ. ಮದುವೆ ಯಾದ ಬಳಿಕ ಇವರು ಸಿನಿಮಾ ವೃತ್ತಿ ಬದುಕಿನಿಂದ ದೂರ ಸರಿದಿದ್ದು ಅಭಿಮಾನಿಗಳಿಗೆ ಬೇಸರ ತಂದ ವಿಚಾರವಾಗಿತ್ತು. ಅವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಅಷ್ಟು ಆ್ಯಕ್ಟಿವ್ ಇಲ್ಲ. ಹಾಗಿದ್ದರೂ ಟಿ ಮೋಹಿನಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬ ಮಾಹಿತಿ ಇತ್ತೀಚೆಗಷ್ಟೇ ವೈರಲ್ ಆಗಿದೆ. ಈ ಮೂಲಕ ಸಿನಿಮಾ ಜೀವನದಲ್ಲಿ ಯಶಸ್ವಿ ನಟಿಯಾಗಿದ್ದರು.ಆದರೆ ತಮ್ಮ ವೈಯಕ್ತಿಕ ಜೀವನವನ್ನು ಯಶಸ್ವಿಯಾಗಿ ನಡೆಸಲು ನಟಿ ಮೋಹಿನಿ ಅವರು ಎಡವಿದ್ದಾರೆ ಎನ್ನಬಹುದು.
ಇತ್ತೀಚೆಗಷ್ಟೇ ನಟಿ ಮೋಹಿನಿ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಮದುವೆಯಾದ ಬಳಿಕ ತಾನು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಿರ್ಣಯಕ್ಕೂ ಮುಂದಾಗಿದ್ದೆನು. ಇದುವರೆಗೆ 7 ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದೇ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ.
ನಟಿ ಮೋಹಿನಿ ಅವರು ಸಂದರ್ಶನದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿ, ಸಿನಿಮಾ ಪಯಣ ನನಗೆ ಬಹಳ ಇಷ್ಟವಿತ್ತು. ಆದರೆ ಮದುವೆಯಾದ ಬಳಿಕ ನನಗೆ ಸಿನಿಮಾ ಆಫರ್ ಅಷ್ಟಾಗಿ ಬರ ಲಿಲ್ಲ. ಮದುವೆಯ ನಂತರ ನನ್ನ ಬದುಕು ಬಹಳ ಚೆನ್ನಾ ಗಿಯೇ ಇತ್ತು. ನನ್ನ ಪತಿ ಹಾಗೂ ಮಕ್ಕಳ ಜೊತೆ ಸಂತೋಷದಿಂದ ಇದ್ದೆ. ಆದರೆ ಒಂದು ಹಂತದ ನಂತರ ನನಗೆ ಮಾನಸಿಕ ಖಿನ್ನತೆ ಸಮಸ್ಯೆ ಕಾಡಿತು. ಇದರಿಂದ ಸಾಕಷ್ಟು ಸಮಸ್ಯೆ ಏರ್ಪಟ್ಟಿತು ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಮಾನಸಿಕ ಖಿನ್ನತೆ ಸಮಸ್ಯೆ ನನಗೆ ಹೇಗೆ ಬಂತು ಯಾಕೆ ಬಂತು ಎಂದು ನಿಜಕ್ಕೂ ಗೊತ್ತಿಲ್ಲ. ನನಗೆ ನನ್ನ ಕುಟುಂಬ, ಪತಿ ಹಾಗೂ ಮಕ್ಕಳಿಂದ, ಸ್ನೇಹಿತರಿಂದ ಯಾವ ಸಮಸ್ಯೆ ಕೂಡ ಆಗಿರಲಿಲ್ಲ ಆದರೂ ಕೂಡ ನಾನು ಖಿನ್ನತೆಯಿಂದ ಬಳಲುತ್ತಿದ್ದೆ ಎನ್ನುವುದೇ ನನಗೆ ಬಹಳ ಆಶ್ಚರ್ಯ ಎನ್ನಬಹುದು. ಇದೇ ಖಿನ್ನತೆ ವಿಪರೀತವಾಗಿ ಬದುಕುವುದೇ ಬೇಡ ಎಂಬ ತೀರ್ಮಾನಕ್ಕೂ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಸತತ 7 ಬಾರಿ ಪ್ರಯತ್ನ ಮಾಡಿದ್ದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ; 200 ರೂ. ದಾಟುವಂತಿಲ್ಲ
`ಕಲ್ಯಾಣ ಮಂಟಪ' ಸಿನಿಮಾ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ ಇವರು ನಂತರ ಶ್ರೀರಾಮಚಂದ್ರ, ಗಡಿಬಿಡಿ ಅಳಿಯ, ಗಡಿಬಿಡಿ ಅಳಿಯ',' ಗಡಿಬಿಡಿ ಕೃಷ್ಣ'. 'ಲಾಲಿ', 'ನಿಶ್ಯಬ್ದ', 'ಕುಬೇರ', ' ಖಳನಾಯಕ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದರು. ಮೋಹಿನಿ ಅವರು ಭರತ್ ಅವರನ್ನು ಮದುವೆಯಾಗಿ ಅಮೇರಿಕಾದಲ್ಲಿ ನಲೆಸಿದ್ದಾರೆ. ಈ ಮೂಲಕ ಮೋಹಿನಿ ಚಿತ್ರರಂಗದ ಪಯಣಕ್ಕೆ ವಿದಾಯ ಹೇಳಿದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಬಳಿಕ ಅಮೇರಿಕಾ ದಲ್ಲಿ ಅವರು ತಮ್ಮ ಧರ್ಮ ಕೂಡ ಬದಲಿಸಿದ್ದಾರೆ. ಬ್ರಾಹ್ಮಣರಾಗಿದ್ದ ಇವರು 2006 ರಲ್ಲಿ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಒಟ್ಟಿನಲ್ಲಿ ಇಷ್ಟೆಲ್ಲ ಯಶಸ್ವಿ ವೃತ್ತಿ ಜೀವನ ಕಂಡಿದ್ದರೂ ಯಾವುದೇ ವೈಯಕ್ತಿಕ ಸಮಸ್ಯೆ ಇಲ್ಲದೆಯೂ ಮಾನಸಿಕ ಖಿನ್ನತೆಗೆ ಅವರು ಒಳಗಾಗಿರುವುದೆ ಅಚ್ಚರಿ ಎನ್ನಬಹುದು.