ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶೇ.84ರಷ್ಟು ಮಂದಿಗೆ ವಿಮೆ: ಎಕ್ಸಿಸ್‌ ಮ್ಯಾಕ್ಸ್‌ ಲೈಫ್‌ ಇಂಡಿಯಾ ಪ್ರೊಟೆಕ್ಷನ್ ಸೂಚ್ಯಂಕ 7.0

ನಗರವಾಸಿಗಳು, ಗ್ರಾಮೀಣ ಪ್ರದೇಶಗಳಿಗೆ ಸೇರಿದವರು, ವೇತನ ವರ್ಗದವರು, ಗಿಗ್‌ ಕಾರ್ಮಿಕರು ಮತ್ತು ನಿವೃತ್ತರು ಯಾವ ಅಭಿಪ್ರಾಯವನ್ನು ದಾಖಲಿಸಿದ್ದಾರೆ ಎಂಬುದನ್ನು ಇದು  ಹೇಳುತ್ತದೆ. ಹಣಕಾಸಿನ ರಕ್ಷೆ, ಯೋಜನೆ ಮತ್ತು ದೀರ್ಘಾವಧಿ ಭದ್ರತೆಯ ವಿಚಾರವಾಗಿ ದೇಶದಲ್ಲಿ ಯಾವ ಬಗೆಯ ದೃಷ್ಟಿಕೋನ ಇದೆ ಎಂಬುದರ ಬಗ್ಗೆ ಇದು ಅಧಿಕೃತವಾದ ಒಳನೋಟಗಳನ್ನು ನೀಡುತ್ತದೆ.

ಪ್ರಮುಖ ಅಂಶಗಳು
• ನಗರ ಪ್ರದೇಶಗಳ ಪೈಕಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ರಕ್ಷೆಯನ್ನು ಹೊಂದಿರುವ ಪ್ರದೇಶವೆಂಬ ಸ್ಥಾನವನ್ನು ಉಳಿಸಿಕೊಂಡ ದಕ್ಷಿಣ ವಲಯ
• ದಕ್ಷಿಣ ವಲಯದಲ್ಲಿ ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಶೇಕಡ 77ರಷ್ಟು ಮಂದಿ ಕುಟುಂಬದ ಹಣಕಾಸಿನ ಭದ್ರತೆಗಾಗಿ ಅವಧಿ ವಿಮೆಯನ್ನು ಆದ್ಯತೆಯಾಗಿ ಪರಿಗಣಿಸುತ್ತಿದ್ದಾರೆ
• ದಕ್ಷಿಣ ಭಾರತದಲ್ಲಿ ಮಹಿಳೆಯರ ಪೈಕಿ ಶೇಕಡ 86ರಷ್ಟು ಮಂದಿ ಜೀವ ವಿಮಾ ಮಾಲೀಕತ್ವ ಹೊಂದಿದ್ದಾರೆ
• ಜೆಎನ್‌ ಎಕ್ಸ್‌ ಮತ್ತು ಜೆನ್‌ ವೈ ತಲೆಮಾರಿನವರು ಈ ಪ್ರದೇಶದಲ್ಲಿ ವಿಮಾ ರಕ್ಷೆಯ ಹೆಚ್ಚಳಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.

ಬೆಂಗಳೂರು: ಎಕ್ಸಿಸ್‌ ಮ್ಯಾಕ್ಸ್‌ ಲೈಫ್‌ ಇನ್ಶೂರೆನ್ಸ್‌ ಲಿಮಿಟೆಡ್‌ ಕಂಪನಿಯು (ಈ ಮೊದಲು ಇದನ್ನು ಮ್ಯಾಕ್ಸ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿ ಲಿಮಿಟೆಡ್‌ ಎಂದು ಕರೆಯಲಾಗುತ್ತಿತ್ತು) ತನ್ನ ಅತ್ಯಂತ ಪ್ರಮುಖ ಅಧ್ಯಯನವಾದ ʼಇಂಡಿಯಾ ಪ್ರೊಟೆಕ್ಷನ್‌ ಕೋಷೆಂಟ್‌ʼನ ದಕ್ಷಿಣ ವಲಯದ ವರದಿಯನ್ನು ಬಿಡುಗಡೆ ಮಾಡಿದೆ.

ಈ ಅಧ್ಯಯನವನ್ನು ದತ್ತಾಂಶ ಹಾಗೂ ವಿಶ್ಲೇಷಣಾ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿ ಕಂಪನಿ ಯಾದ ʼಕ್ಯಾಂತಾʼ ಜೊತೆ ಸೇರಿ ನಡೆಸಲಾಗಿದೆ. ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಈ ಅಧ್ಯಯನವು ಹಣಕಾಸಿನ ವಿಚಾರಗಳಲ್ಲಿನ ಪೂರ್ವಸಿದ್ಧತೆಯಲ್ಲಿ, ಜಾಗೃತಿಯಲ್ಲಿ ಹಾಗೂ ಜೀವ ವಿಮಾ ಮಾಲೀಕತ್ವದಲ್ಲಿ ಈ ಪ್ರದೇಶವು ಮುಂದೆ ಇರುವುದನ್ನು ತೋರಿಸಿ ಕೊಟ್ಟಿದೆ.

ಇದನ್ನೂ ಓದಿ: R T Vittalmurthy Column: ಸುನೀಲ್‌ ಕುಮಾರ್‌ ಎಂಟ್ರಿಯಾಗಿದ್ದು ಹೇಗೆ ?

ಈ ಅಧ್ಯಯನ ವರದಿಯನ್ನು ಕಂಪನಿಯು ʼಭರವಸೆ ಮಾತನಾಡುತ್ತದೆʼ (ಭರೋಸಾ ಟಾಕ್ಸ್)‌ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಹಣಕಾಸು ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಚಾರಗಳಲ್ಲಿನ ಆಲೋಚನಾ ಕ್ರಮವು ವಿಕಾಸ ಹೊಂದುತ್ತಿರುವುದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದೆ. ಈ ವೇದಿಕೆಯ ಮೂಲಕ ಎಕ್ಸಿಸ್‌ ಮ್ಯಾಕ್ಸ್‌ ಲೈಫ್‌ ಕಂಪನಿಯು ವಿವಿಧ ಜನವರ್ಗ ಗಳಲ್ಲಿನ ನಿಜವಾದ ಧ್ವನಿಯು ಇತರರಿಗೆ ಕೇಳುವಂತೆ ಮಾಡುವ ಗುರಿಯನ್ನು ಹೊಂದಿದೆ.

ನಗರವಾಸಿಗಳು, ಗ್ರಾಮೀಣ ಪ್ರದೇಶಗಳಿಗೆ ಸೇರಿದವರು, ವೇತನ ವರ್ಗದವರು, ಗಿಗ್‌ ಕಾರ್ಮಿಕರು ಮತ್ತು ನಿವೃತ್ತರು ಯಾವ ಅಭಿಪ್ರಾಯವನ್ನು ದಾಖಲಿಸಿದ್ದಾರೆ ಎಂಬುದನ್ನು ಇದು  ಹೇಳುತ್ತದೆ. ಹಣಕಾಸಿನ ರಕ್ಷೆ, ಯೋಜನೆ ಮತ್ತು ದೀರ್ಘಾವಧಿ ಭದ್ರತೆಯ ವಿಚಾರವಾಗಿ ದೇಶದಲ್ಲಿ ಯಾವ ಬಗೆಯ ದೃಷ್ಟಿಕೋನ ಇದೆ ಎಂಬುದರ ಬಗ್ಗೆ ಇದು ಅಧಿಕೃತವಾದ ಒಳನೋಟಗಳನ್ನು ನೀಡುತ್ತದೆ.

ಹಣಕಾಸಿಗೆ ಸಂಬಂಧಿಸಿದ ಆತಂಕಗಳು ಕಾಲ ಬದಲಾದಂತೆಲ್ಲ ತಾವೂ ಬದಲಾವಣೆ ಕಾಣುತ್ತವೆ. ಆಕಾಂಕ್ಷೆಗಳಲ್ಲಿ ಬದಲಾವಣೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಈ ವರದಿಯು ಉದ್ಯಮ ವಲಯಕ್ಕೆ, ಕಾನೂನು ಹಾಗೂ ನಿಯಮಗಳನ್ನು ರೂಪಿಸುವವರಿಗೆ, ನೀತಿ ನಿರೂಪಕರಿಗೆ ಗ್ರಾಹಕರ ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಮುಖ ಸಾಧನವಾಗುತ್ತದೆ.

ʼಹಣಕಾಸಿನ ಮುಂದಾಲೋಚನೆಯಲ್ಲಿ ದಕ್ಷಿಣ ವಲಯವು ದೇಶದಲ್ಲಿ ಮುಂಚೂಣಿ ಸ್ಥಾನದಲ್ಲಿ ಮುಂದುವರಿದಿದೆ. ಚೆನ್ನೈ, ಹೈದರಾಬಾದ್‌ ಮತ್ತು ಬೆಂಗಳೂರು ರಾಷ್ಟ್ರಮಟ್ಟದ ಮಾನದಂಡ ಗಳಿಗಿಂತ ಮುಂದೆ ಇವೆ. ಅರಿವು ಕ್ರಿಯಾರೂಪಕ್ಕೆ ಬಂದಿರುವುದನ್ನು ಐಪಿಕ್ಯೂ 7.0 ಸ್ಪಷ್ಟವಾಗಿ ತೋರಿಸುತ್ತಿದೆ. ವೆಚ್ಚಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಇಂದು ಹೆಚ್ಚಿನವರು ಹಣಕಾಸಿನ ರಕ್ಷೆಗೆ ನೀಡುತ್ತಿದ್ದಾರೆ, ಜೀವ ವಿಮೆಯು ಕೌಟುಂಬಿಕ ಭದ್ರತೆಗೆ ಅಗತ್ಯವೆಂಬುದಾಗಿ ಅವರು ಕಾಣುತ್ತಿದ್ದಾರೆ.

ಜೆನ್‌ ಎಕ್ಸ್‌ ಹಾಗೂ ಜೆನ್‌ ವೈ ಮಾತ್ರವಲ್ಲದೆ ಮಹಿಳೆಯರು ಕೂಡ ಈ ಬದಲಾವಣೆಯ ಚಾಲಕ ಶಕ್ತಿಯಾಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ಆತ್ಮವಿಶ್ವಾಸವನ್ನು ಹಾಗೂ ಗುರಿಯನ್ನು ಆಧರಿಸಿದ ಹೂಡಿಕೆಗಳನ್ನು ಅವರು ಮಾಡುತ್ತಿದ್ದಾರೆ. ಅವರ ಆಯ್ಕೆಗಳು ಇಂದು ಬದಲಾವಣೆಯನ್ನು ಹೇಳುತ್ತಿವೆ. ವಿಮೆಯು ಒಂದು ಬಾರಿಗೆ ಖರೀದಿಸಿ ಮರೆತುಬಿಡುವ ಹಣಕಾಸಿನ ಉತ್ಪನ್ನವಾಗಿ ಉಳಿದಿಲ್ಲ, ಅದು ದೀರ್ಘಾವಧಿಯ ಹಣಕಾಸಿನ ಕಾರ್ಯತಂತ್ರವಾಗಿ ಬದಲಾಗಿದೆ.

ವಿಮಾ ಮಾಲೀಕತ್ವದಲ್ಲಿ ಮಹಿಳೆಯರು ಪುರುಷರಿಗಿಂತ ಮುಂದೆ ಬರುತ್ತಿದ್ದಾರೆ, ಯುವಕರು ವಿಮೆಯನ್ನು ಹೆಚ್ಚೆಚ್ಚು ಪಡೆದುಕೊಳ್ಳುತ್ತಿದ್ದಾರೆ. ಹಣಕಾಸಿನ ಆದ್ಯತೆಗಳಲ್ಲಿ ನಿರ್ಣಾಯಕವಾದ ಬದಲಾವಣೆ ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ಹಣಕಾಸಿನ ರಕ್ಷೆಯನ್ನು ಆಧರಿಸಿದ ವ್ಯವಸ್ಥೆ ದೇಶದಾದ್ಯಂತ ರೂಪುಗೊಳ್ಳುವುದಕ್ಕೆ ಅಡಿಪಾಯ ಹಾಕಿಕೊಡುತ್ತಿದೆ” ಎಂದು ಎಕ್ಸಿಸ್‌ ಮ್ಯಾಕ್ಸ್‌ ಲೈಫ್‌ ಕಂಪನಿಯ ಮುಖ್ಯ ವಿತರಣಾ ಅಧಿಕಾರಿ ಸುಮಿತ್‌ ಮದನ್‌ ಹೇಳಿದ್ದಾರೆ.

ದಕ್ಷಿಣ ವಲಯದಲ್ಲಿ ಬೆಂಗಳೂರು ಮುಂಚೂಣಿ ಸ್ಥಾನದಲ್ಲಿದೆ

ಹಣಕಾಸಿನ ರಕ್ಷೆಯ ಆಯಾಮದಿಂದ ಕಂಡಾಗ ದಕ್ಷಿಣ ವಲಯವು ಮುಂಚೂಣಿ ಸ್ಥಾನದಲ್ಲಿ ಇದೆ. ದಕ್ಷಿಣ ವಲಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ. ಇದು ಅತಿಹೆಚ್ಚಿನ ಅಂಕವನ್ನು (61) ಪಡೆದಿದೆ. ನಂತರದ ಸ್ಥಾನಗಳಲ್ಲಿ ಹೈದರಾಬಾದ್‌ (46) ಮತ್ತು ಚೆನ್ನೈ (44) ಇವೆ. ಚೆನ್ನೈನಲ್ಲಿ ಜೀವ ವಿಮಾ ಮಾಲೀಕತ್ವದ ಪ್ರಮಾಣವು ಶೇ 91ರಷ್ಟು ಇದೆ. ಹಣಕಾಸಿನ ಭದ್ರತಾ ಸೂಚ್ಯಂಕವು ಇಲ್ಲಿ ಶೇ 69ರಷ್ಟು ಇದೆ. ಅಂದರೆ ಹಣಕಾಸಿನ ವಿಚಾರಗಳಲ್ಲಿ ಪೂರ್ವಸಿದ್ಧತೆಯು ಚೆನ್ನೈನಲ್ಲಿ ಬಲಿಷ್ಠವಾಗಿದೆ ಎಂಬುದನ್ನು ಇದು ಹೇಳುತ್ತಿದೆ.

ಬೆಂಗಳೂರಿನಲ್ಲಿ ಅರಿವಿನ ಮಟ್ಟವು ಅತ್ಯಂತ ಹೆಚ್ಚಿನದಾಗಿದೆ. ಅರಿವಿನ ಸೂಚ್ಯಂಕವು ಇಲ್ಲಿ 85ರ ಮಟ್ಟದಲ್ಲಿದೆ. ಅಂದರೆ ಇಲ್ಲಿನ ಜನರು ವಿಮಾ ಉತ್ಪನ್ನಗಳ ಬಗ್ಗೆ ಬಹಳ ಹೆಚ್ಚಿನ ಮಟ್ಟದಲ್ಲಿ ಅರಿವು ಹೊಂದಿದ್ದಾರೆ.