ವಾಣಿಜ್ಯ
RBI: ಅಗ್ಗವಾಗಲಿದೆ ಗೃಹ, ವಾಹನ ಸಾಲ: RBI ಬಂಪರ್‌ ಗಿಫ್ಟ್!

ಅಗ್ಗವಾಗಲಿದೆ ಗೃಹ, ವಾಹನ ಸಾಲ: RBI ಬಂಪರ್‌ ಗಿಫ್ಟ್!

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 5 ವರ್ಷಗಳ ಬಳಿಕ ಮೊದಲ ಬಾರಿಗೆ ತನ್ನ ರೆಪೊ ದರವನ್ನು 6.5%ರಿಂದ 6.25% ಕ್ಕೆ ಇಳಿಸಿದೆ. ಇದರ ಪರಿಣಾಮ ನಿಮ್ಮ ಹೋಮ್‌ ಲೋನ್‌, ವಾಹನ ಸಾಲದ ಬಡ್ಡಿ ದರಗಳು ಇಳಿಕೆಯಾಗಲಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರೋದ್ದಿಮೆಗಳನ್ನು ಮಾಡುವವರಿಗೆ ಕೂಡ ಸಾಲದ ಬಡ್ಡಿ ದರ ತಗ್ಗಲಿದೆ.

Gold Price Today: ಚಿನ್ನದ ದರದಲ್ಲಿ ಯಥಾಸ್ಥಿತಿ; ಗ್ರಾಹಕರಿಗೆ ಕೊಂಚ ನಿರಾಳ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 25 ರೂ. ಮತ್ತು 27ರೂ. ಏರಿಕೆ ಕಂಡಿತ್ತು. ಸದ್ಯ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,930 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,651 ರೂ. ಇದೆ.

Repo Rate: ಗುಡ್‌ನ್ಯೂಸ್‌! ರೆಪೋ ರೇಟ್‌ ದರ ಇಳಿಕೆ- ಬ್ಯಾಂಕ್‌ ಸಾಲಗಳ ಮೇಲಿನ ಬಡ್ಡಿದರ ಕಡಿತ; RBI ಮಹತ್ವದ ಘೋಷಣೆ

ರೆಪೋ ರೇಟ್‌ ದರ ಇಳಿಕೆ-RBI ಮಹತ್ವದ ನಿರ್ಧಾರ

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ದುಬಾರಿ ಬಡ್ಡಿ ದರದಿಂದ ಬಸವಳಿದಿರುವ ಸಾಲಗಾರರಿಗೆ RBI ಶುಕ್ರವಾರ ತುಸು ನಿರಾಳ ಒದಗಿಸಿದೆ. ನಿರೀಕ್ಷೆಯಂತೆ ರೆಪೋದರವನ್ನು(Repo Rate) ಶೇ. 0.25 ಪ್ರತಿಶತದಷ್ಟುಇಳಿಕೆ ಮಾಡಿದೆ. ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Zomato: ಜೊಮಾಟೊ ಇನ್ಮುಂದೆ ಎಟರ್ನಲ್; ಯಾಕಾಗಿ ಈ ಬದಲಾವಣೆ?

ಜೊಮಾಟೊ ಇನ್ಮುಂದೆ ಎಟರ್ನಲ್

ಆನ್‌ಲೈನ್ ಆಹಾರ, ದಿನಸಿ ಸಾಮಗ್ರಿ ವಿತರಣಾ ವೇದಿಕೆ ಜೊಮಾಟೊ ಇನ್ನುಮುಂದೆ ಎಟರ್ನಲ್ ಲಿ. ಎನಿಸಿಕೊಳ್ಳಲಿದೆ. ಹೆಸರು ಬದಲಾವಣೆಗೆ ಜೊಮಾಟೊದ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಫುಡ್ ಆ್ಯಪ್​ನಲ್ಲಿನ ಜೊಮಾಟೊ ಹೆಸರು ಹಾಗೇ ಇರಲಿದೆ. ಅಂದರೆ ಜೊಮಾಟೋ ಆ್ಯಪ್​ನ ಹೆಸರಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

RBI: ನಿಮ್ಮ ಸಾಲದ ಬಡ್ಡಿ ಇಳಿಕೆ ?‌  RBI ರೇಟ್‌ ಕಟ್‌ ಆದ್ರೆ ನೀವೇನು ಮಾಡಬೇಕು ಗೊತ್ತಾ?

RBI ರೇಟ್‌ ಕಟ್‌ ಆದ್ರೆ ನೀವೇನು ಮಾಡಬೇಕು ಗೊತ್ತಾ?

ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ 12 ಲಕ್ಷ ರುಪಾಯಿ ತನಕ ಟ್ಯಾಕ್ಸ್‌ ಫ್ರೀ ಮಾಡಿದೆ. ಮುಂದಿನ ಹಂತದಲ್ಲಿ ಆರ್‌ಬಿಐನಿಂದ ಬಡ್ಡಿ ದರದ ಇಳಿಕೆಯ ಬೆನಿಫಿಟ್‌ ಸಿಗುವ ಸಾಧ್ಯತೆ ಇದೆ. ಆಗ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲದ ಬಡ್ಡಿ ದರಗಳು ಇಳಿಕೆಯಾಗುವ ನಿರೀಕ್ಷೆ ಇದೆ.

Employment News: 86 ಲಕ್ಷ ಭಾರತೀಯರಿಗೆ ಉದ್ಯೋಗ ಕೊಟ್ಟ ನೇರ ಮಾರುಕಟ್ಟೆ; 8 ರಾಜ್ಯಗಳಿಂದ 1854 ಕೋಟಿ ರೂ. ವಹಿವಾಟು

86 ಲಕ್ಷ ಭಾರತೀಯರಿಗೆ ಉದ್ಯೋಗ ಕೊಟ್ಟ ನೇರ ಮಾರುಕಟ್ಟೆ-ಐಡಿಎಸ್‌ಎ ವರದಿಯಲ್ಲಿ ಬಹಿರಂಗ

Employment News: ಈಶಾನ್ಯ ಭಾರತದ ಎಲ್ಲಾ 8 ಸಹೋದರ ರಾಜ್ಯಗಳು ಮಾರಾಟದಲ್ಲಿ ಜಿಗಿತ ಕಂಡಿವೆ. 2022-23ರಲ್ಲಿ ಹಿಂದಿನ ವರ್ಷಕ್ಕಿಂತ 255 ಕೋಟಿ ರೂ. ಹೆಚ್ಚುವರಿ ವಹಿವಾಟು ಸೇರಿದಂತೆ 1854 ಕೋಟಿ ರೂ. ದಾಟಿದೆ ಎಂಬುದನ್ನು ಭಾರತೀಯ ನೇರ ಮಾರಾಟ ಸಂಘ ಗುವಾಹಟಿಯಲ್ಲಿ ಆಯೋಜಿಸಿದ್ಧ 2ನೇ ಈಶಾನ್ಯ ನೇರ ಮಾರಾಟ ಸಮ್ಮೇಳನದಲ್ಲಿ ದೃಢಪಡಿಸಿದೆ. ಈ ಕುರಿತ ವಿವರ ಇಲ್ಲಿದೆ.

TDS Returns: ಟಿಡಿಎಸ್ ರಿಟರ್ನ್ಸ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ- ಕ್ಲೈಮ್ ಮಾಡುವುದು ಹೇಗೆ?

TDS ರಿಟರ್ನ್‌ ಅರ್ಜಿ ಸಲ್ಲಿಸಲು ಮಾರ್ಚ್‌ 31 ಕೊನೆ ದಿನ

ನವೀಕೃತ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯ ಮಿತಿಯನ್ನು ವಿಸ್ತರಣೆಗೊಂಡಿದ್ದು, ಮಾರ್ಚ್ 31ರವರೆಗೆ ನಿಮ್ಮ ಟಿಡಿಎಸ್ ಹಣವನ್ನು ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ. ನಿಮ್ಮ ಪರಿಷ್ಕೃತ ಟಿಡಿಎಸ್ ಅರ್ಜಿಯನ್ನು ಸಲ್ಲಿಸುವಂತೆ ನಿಮ್ಮಿಂದ ಟಿಡಿಎಸ್ ಕಡಿತ ಮಾಡಿದ ಕಂಪನಿ /ಬ್ಯಾಂಕ್ / ಸಂಸ್ಥೆಗೆ ನೀವು ಮನವಿ ಮಾಡಬೇಕಾಗುತ್ತದೆ. ಹಾಗಾದ್ರೆ ಟಿಡಿಎಸ್ ಎಂದರೇನು..? ಟಿಡಿಎಸ್ ಮರುಪಾವತಿಯನ್ನು ಪಡೆಯುವುದು ಹೇಗೆ? ಎಂಬುದನ್ನು ನೋಡೋಣ ಬನ್ನಿ.

Gold Price Today: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ; ಇಂದಿನ ರೇಟ್‌ ಹೀಗಿದೆ

ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆ- ಇಲ್ಲಿ ಚೆಕ್‌ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 25 ರೂ. ಮತ್ತು 27ರೂ. ಏರಿಕೆ ಕಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,930 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,651 ರೂ. ಇದೆ.

Gold Rate: ಚಿನ್ನದ ದರ ಭಾರಿ ಜಿಗಿತ; ಮೊದಲ ಬಾರಿಗೆ 10  ಗ್ರಾಮ್‌ಗೆ 85,000 ರೂ.: ಕಾರಣವೇನು?

ಚಿನ್ನದ ದರ ಭಾರಿ ಜಿಗಿತ; ಕಾರಣವೇನು?

ಬಂಗಾರದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಫೆಬ್ರವರಿ 4ರಂದು 24 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 85,200 ಅಂಕಗಳಿಗೆ ಏರಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 78,100 ರೂ.ಗೆ ಹೆಚ್ಚಳವಾಗಿದೆ. ಬಜೆಟ್‌ ದಿನ ಬಂಗಾರದ ದರ 84,500 ರೂ. ಆಗಿತ್ತು. ಆದರೆ 3 ದಿನದಲ್ಲಿ 85,500 ರೂ. ಮಟ್ಟಕ್ಕೆ ಜಿಗಿದಿದೆ. ಇದಕ್ಕೇನು ಕಾರಣ ಎನ್ನವ ವಿವರ ಇಲ್ಲಿದೆ.

Gold Price Today: ಸ್ವರ್ಣಪ್ರಿಯರಿಗೆ ಮತ್ತೆ ಶಾಕ್‌! ಇಂದು ಕೂಡ ಚಿನ್ನದ ದರದಲ್ಲಿ ಭಾರೀ ಏರಿಕೆ

ಇಂದು ಕೂಡ ಚಿನ್ನದ ದರದಲ್ಲಿ ಭಾರೀ ಏರಿಕೆ

ಬುಧವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 95 ರೂ. ಮತ್ತು 104ರೂ. ಏರಿಕೆ ಕಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,905 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,624 ರೂ. ಇದೆ.

Reliance: ರಿಲಯನ್ಸ್ ಗ್ರೂಪ್ ಸಿಎಂಒ ಆಗಿ ಗಾಯತ್ರಿ ವಾಸುದೇವ ಯಾದವ್ ನೇಮಕ

ಗಾಯತ್ರಿ ವಾಸುದೇವ ಯಾದವ್ ರಿಲಯನ್ಸ್ ಗ್ರೂಪ್ ಸಿಎಂಒ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರ ಕಚೇರಿಯ ನೂತನ ಮುಖ್ಯ ಮಾರುಕಟ್ಟೆ ಅಧಿಕಾರಿ ಮತ್ತು ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಗಾಯತ್ರಿ ವಾಸುದೇವ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಅವರು ಪೀಕ್ ಎಕ್ಸ್ ವಿ ಪಾರ್ಟ್ನರ್ಸ್‌ನಿಂದ ನಮ್ಮ ಕಂಪನಿಗೆ ಸೇರಿದ್ದಾರೆ ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ತಿಳಿಸಿದ್ದಾರೆ.

RBI: ಜನರ ಬಳಿ ಇನ್ನೂ ಇವೆ 6,577 ಕೋಟಿ ರೂ. ಮೌಲ್ಯದ 2,000 ರೂ. ಮುಖಬೆಲೆಯ ನೋಟುಗಳು

ಜನರ ಬಳಿ ಇನ್ನೂ ಇವೆ ರದ್ದಾದ 2,000 ರೂ. ಮುಖಬೆಲೆಯ ನೋಟುಗಳು

2016ರ ನ. 8ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಅದಾದ ಬಳಿಕ 2,000 ರೂ. ಮುಖಬೆಲೆಯ ನೋಟುಗಳು ಚಲಾವಣೆಗ ಬಂದವು. ಇನ್ನು 2023ರಲ್ಲಿ ಮತ್ತೆ 2,000 ರೂ. ಮುಖಬೆಲೆಯ ನೋಟುಗಳನ್ನೂ ಸರ್ಕಾರ ಹಿಂಪಡೆದುಕೊಂಡಿತು. ಇದೀಗ ಅಮಾನ್ಯಗೊಂಡ 2,000 ನೋಟುಗಳ ಪೈಕಿ ಶೇ. 98.15ರಷ್ಟು ಮರಳಿದ್ದು, ಇನ್ನೂ ಜನರ ಬಳಿ 6,577 ಕೋಟಿ ರೂ. ಮೌಲ್ಯದ ನೋಟುಗಳಿವೆ.

Stock Market: ಟ್ರೇಡ್‌ ವಾರ್‌ಗೆ ಟ್ರಂಪ್‌ ಬ್ರೇಕ್‌, ಸೆನ್ಸೆಕ್ಸ್‌ 1,397 ಅಂಕ ಮಹಾ ಜಿಗಿತ

ಸೆನ್ಸೆಕ್ಸ್‌ 1,397 ಅಂಕ ಮಹಾ ಜಿಗಿತ

ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಟ್ರೇಡ್‌ ವಾರ್‌ಗೆ ತಾತ್ಕಾಲಿಕವಾಗಿ ಬ್ರೇಕ್‌ ಹಾಕಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಷೇರು ಸೂಚ್ಯಂಕಗಳು ಜಿಗಿತ ಕಂಡಿವೆ. ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,397 ಅಂಕ ಏರಿಕೊಂಡು 78,583ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 378 ಅಂಕ ಏರಿಕೆಯಾಗಿ 23,739ಕ್ಕೆ ಸ್ಥಿರವಾಯಿತು. ಜತೆಗೆ ಆಟೊಮೊಬೈಲ್‌ ಕ್ಷೇತ್ರದಲ್ಲಿ ಉಂಟಾಗಿರುವ ಬೆಳವಣಿಗೆ ಹೂಡಿಕೆದಾರರಲ್ಲಿ ಹುಮ್ಮಸ್ಸು ತುಂಬಿಸಿದೆ.

Gold Price Today: ಚಿನ್ನದ ದರದಲ್ಲಿ ಏಕಾಏಕಿ ಭಾರೀ ಏರಿಕೆ; ಗ್ರಾಹಕರಿಗೆ ಫುಲ್‌ ಶಾಕ್‌!

ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆ- ಇಲ್ಲಿ ಚೆಕ್‌ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 105 ರೂ. ಮತ್ತು 115ರೂ. ಏರಿಕೆ ಕಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,810 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,520 ರೂ. ಇದೆ.

ಗುಹೆ ಮನುಷ್ಯನ ಅವತಾರದಲ್ಲಿ ಆಮಿರ್ ಖಾನ್ ಚಾರ್ಜ್ಡ್

ಕೋಕ-ಕೋಲಾ ಇಂಡಿಯಾದ ವಿದ್ಯುಚ್ಛಕ್ತಿಯಂಥ ಪಾನೀಯವಾದ ಚಾರ್ಜ್ಡ್, “ಮೈಂಡ್ ಚಾರ್ಜ್ಡ್, ಬಾಡಿ ಚಾರ್ಜ್ಡ್

ಚುರುಕಾದ ದೇಹ ಮತ್ತು ಮನಸ್ಸಿನೊಂದಿಗೆ ಅನಿರೀಕ್ಷಿತ ಸಾಹಸಗಳನ್ನು ಎದುರಿಸುವ ಹಿಂದೆಂದೂ ಕಂಡಿರದ ಗುಹೆ ಮನುಷ್ಯನ ಪಾತ್ರದಲ್ಲಿ ಆಮಿರ್ ಖಾನ್ ಅವರನ್ನು ಒಳಗೊಂಡ ವೈವಿಧ್ಯಮಯವಾದ ಚಿತ್ರ ಶ್ರೇಣಿ ಗಳ ಮೂಲಕ ಪ್ರದರ್ಶಿಸಲಾಗಿದೆ!

ಉತ್ತರ ಪ್ರದೇಶದಲ್ಲಿ ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ‘ಆರ್ಗಾ’ ಜೊತೆ ಅಮೆಜಾನ್ ಇಂಡಿಯಾ ಒಪ್ಪಂದ

ಬ್ರ್ಯಾಂಡ್ ಆರ್ಗಾʼಕ್ಕೆ ಪ್ರಚಾರ ಹಾಗೂ ಉತ್ತೇಜನ ನೀಡುವ ಅಮೆಜಾನ್ ಇಂಡಿಯಾದ ಉಪಕ್ರಮವನ್ನು ನಾವು ಪ್ರಶಂಸಿಸುತ್ತೇವೆ: ಕೀರ್ತಿ ವರ್ಧನ್ ಸಿಂಗ್

ʼವಿಶ್ವ ಜೌಗು ಪ್ರದೇಶಗಳʼ ದಿನದ ಹಿನ್ನೆಲೆಯಲ್ಲಿ ಪಾರ್ವತಿ ಆರ್ಗಾ ಪಕ್ಷಿಧಾಮದಲ್ಲಿ ಹಮ್ಮಿಕೊಳ್ಳ ಲಾದ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕೇಂದ್ರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಹಾಗೂ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ ಸಿಂಗ್‌ ಉಪಸ್ಥಿತಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು

Stock Market: ಷೇರುಪೇಟೆಯಲ್ಲಿ ಭಾರೀ ಸಂಚಲನ; ಸೆನ್ಸೆಕ್ಸ್‌, ನಿಫ್ಟಿಯಲ್ಲಿ ಕುಸಿತ

ಸೆನ್ಸೆಕ್ಸ್‌ 700 ಅಂಕ ಕುಸಿತ, ಹೂಡಿಕೆದಾರರಿಗೆ ಭಾರೀ ನಷ್ಟ

ಇಂದು ಮಾರುಕಟ್ಟೆ(Stock Market) ಆರಂಭಿಕ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಕುಸಿದವು, ಬಿಎಸ್‌ಇ ಸೆನ್ಸೆಕ್ಸ್ 700 ಕ್ಕೂ ಹೆಚ್ಚು ಅಂಕಗಳಿಗೆ ಕುಸಿದವು ಮತ್ತು ಎನ್‌ಎಸ್‌ಇ ನಿಫ್ಟಿ 23,300 ಅಂಕಗಳಿಗಿಂತ ಕೆಳಕ್ಕೆ ಇಳಿದವು. ಇದರಿಂದ ಹೂಡಿಕೆದಾರರಿಗೆ ಭಾರಿ ನಷ್ಟವಾಗಿದೆ.

Gold Price Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌! ಇಂದು ಚಿನ್ನದ ದರ ಎಷ್ಟಿದೆ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 40 ರೂ. ಮತ್ತು 44ರೂ. ಇಳಿಕೆ ಕಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,705 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,405 ರೂ. ಇದೆ.

Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ;  ಇಂದಿನ ಬೆಲೆ ಇಷ್ಟಿದೆ

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಇಷ್ಟಿದೆ

ಕೆಲವು ದಿನಗಳಿಂದ ಸತತ ಏರಿಕೆ ಕಂಡಿದ್ದ ಚಿನ್ನದ ದರ ಇಂದು (ಫೆ. 2) ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,745 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,449 ರೂ. ಇದೆ.

Budget: ಮಧ್ಯಮವರ್ಗದ ಬಜೆಟ್‌ ಆಗಿದ್ದು ಆರೋಗ್ಯ ಕ್ಷೇತ್ರಕ್ಕೆ ಕೆಲವು ಗಮನಾರ್ಹ ಕೊಡುಗೆ

ಜನ ಸಂಖ್ಯೆಗೆ ತಕ್ಕಂತೆ ವೈದ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನೆರವಾಗಲಿದೆ

ಕ್ಯಾನ್ಸರ್‌, ಅಪರೂಪದ ಖಾಯಿಲೆಗಳು, ದೀರ್ಘಕಾಲದ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಸಂಬಂಧಿ ಸಿದ 36 ಜೀವ ರಕ್ಷಕ ‍ಔ‍ಷಧಗಳಿಗೆ ಬೇಸಿಕ್‌ ಕಸ್ಟಮ್‌ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ರೋಗಿ ಗಳಿಗೆ ಚಿಕಿತ್ಸೆಯಲ್ಲಿ ನೆರವು ನೀಡುವ ಕಾರ್ಯಕ್ರಮವನ್ನು(ಪೇಷಂಟ್‌ ಅಸಿಸ್ಟೆಂಟ್‌ ಪ್ರೋಗ್ರಾಮ್‌) ವಿಸ್ತರಿಸ ಲಾಗಿದ್ದು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಅನಿವಾರ್ಯ ಹಾಗೂ ದುಬಾರಿಯಾಗಿರುವ ಔ‍ಷಧಗಳ ಬೆಲೆಯನ್ನು ತಗ್ಗಿಸಲು ನೆರವಾಗಿತ್ತದೆ

Pralhad Joshi: ಕರ್ನಾಟಕಕ್ಕೆ ಏನು ಬೇಕೋ ಅದೆಲ್ಲವನ್ನೂ ಬಜೆಟ್‌ನಲ್ಲಿ ನೀಡಿದ್ದೇವೆ; ಕಾಂಗ್ರೆಸ್‌ ಆರೋಪಕ್ಕೆ ಪ್ರಲ್ಹಾದ್‌ ಜೋಶಿ ತಿರುಗೇಟು

ಕಾಂಗ್ರೆಸ್ ಜವಾಬ್ದಾರಿಯುತ ಪಾರ್ಟಿಯಲ್ಲ: ಪ್ರಲ್ಹಾದ್‌ ಜೋಶಿ ವಾಗ್ದಾಳಿ

ಕಾಂಗ್ರೆಸ್ ಜವಾಬ್ದಾರಿಯುತ ಪಾರ್ಟಿಯಲ್ಲ. ಹಾಗಾಗಿ ಅದರ ನಾಯಕರು ಬೇಜವಾಬ್ದಾರಿಯಿಂದ ವರ್ತಿಸುತ್ತ ಏನೇನೋ ಹೇಳಿಕೆ ನೀಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದರು. ಕೇಂದ್ರ ಬಜೆಟ್ ಮಂಡನೆ ಬಳಿಕ ದೆಹಲಿಯ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

Union Budget 2025-26: ನಿಮ್ಮ ಆದಾಯ 12 ಲಕ್ಷ ರೂ.ಗಿಂತ 1 ರೂ. ಅಧಿಕವಿದ್ದರೂ ಬೀಳುತ್ತೆ ಟ್ಯಾಕ್ಸ್‌! ಏನಿದು ಲೆಕ್ಕಾಚಾರ?

ಆದಾಯ 12 ಲಕ್ಷ ರೂ.ಗಿಂತ 1 ರೂ. ಅಧಿಕವಿದ್ದರೂ ಬೀಳುತ್ತೆ ಟ್ಯಾಕ್ಸ್‌!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಿದ್ದಾರೆ. ಬಹು ನಿರೀಕ್ಷೆಯಂತೆ ಅವರು ಮಧ್ಯಮ ವರ್ಗದ ಜನರಿಗೆ, ವೇತನದಾರರಿಗೆ ಕೇಂದ್ರ ಸರ್ಕಾರ ಬಂಪರ್‌ ಗಿಫ್ಟ್‌ ನೀಡಿದ್ದಾರೆ. 2025-26ರ ಸಾಲಿನಿಂದ ವರ್ಷಕ್ಕೆ 12 ಲಕ್ಷ ರೂ. ತನಕ ಆದಾಯ ಇರುವವರು ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ. ಆದರೆ ಆದಾಯ 12 ಲಕ್ಷ ರೂ.ಗಿಂತ 1 ರೂ. ಅಧಿಕವಾದರೂ ಟ್ಯಾಕ್ಸ್‌ ಕಟ್ಟಬೇಕಾಗುತ್ತದೆ. ಈ ಬಗೆಗಿನ ವಿವರ ಇಲ್ಲಿದೆ.

Sports Budget: ಬಜೆಟ್‌ನಲ್ಲಿ ಕ್ರೀಡೆಗೆ 3794 ಕೋಟಿ ರೂ ನೀಡಿದ ಕೇಂದ್ರ ಸರ್ಕಾರ!

ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ ಬಂಪರ್‌ ಅನುದಾನ, ಖೇಲೋ ಇಂಡಿಯಾಗೆ ಸಿಂಹಪಾಲು!

Sports Budget 2025: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಲೋಕಸಭೆಯಲ್ಲಿ 2025-26 ಸಾಲಿನ ಬಜೆಟ್‌ ಅನ್ನು ಮಂಡಿಸಿದರು. ಅದರಂತೆ ಕ್ರೀಡೆಗೂ ಕೂಡ ಅವರು 3794. 30 ಕೋಟಿ ರೂ. ಗಳನ್ನು ಅನುದಾನವನ್ನು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

Sin Tax: ಮದ್ಯ, ಸಿಗರೇಟ್‌ ಬೆಲೆ ಏರಿಕೆಯಾಗುತ್ತಾ? ಸಿನ್‌ ಟ್ಯಾಕ್ಸ್‌ ಬಗ್ಗೆ ಸಚಿವೆ ನಿರ್ಮಲಾ ಹೇಳಿದ್ದೇನು?

ಮದ್ಯ, ಸಿಗರೇಟ್‌ ಬೆಲೆ ಏರಿಕೆಯಾಗುತ್ತಾ? ಸಿನ್‌ ಟ್ಯಾಕ್ಸ್‌ ಬಗ್ಗೆ ಸಚಿವೆ ನಿರ್ಮಲಾ ಹೇಳಿದ್ದೇನು?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ್ದು, ಯಾವ ವಸ್ತುಗಳ ಬೆಲೆ ಏರಿಕೆಯಾಯ್ತು, ಯಾವ ವಸ್ತುಗಳ ಬೆಲೆ ಇಳಿಕೆಯಾಯ್ತು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ಮಧ್ಯೆ ಸಿನ್‌ ಟ್ಯಾಕ್ಸ್‌ಗೆ ಒಳಪಡುವ ಮದ್ಯ ಮತ್ತು ಸಿಗರೇಟ್‌ ಮತ್ತೆ ದುಬಾರಿಯಾಗಲಿದ್ಯಾ ಎನ್ನುವ ಬಹುತೇಕರ ಪ್ರಶ್ನೆಗೆ ಇಲ್ಲಿದೆ ಉತ್ತರ.