ಬೆಂಗಳೂರು: ಐಟಿ ಕ್ಷೇತ್ರದಲ್ಲಿ ಉದ್ಯೋಗದ ಅಭದ್ರತೆ ಹಾಗೂ ಉದ್ಯೋಗ ಕಡಿತದ ಹೊರತಾಗಿ ಯೂ ಕಾಗ್ನಿಜೆಂಟ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಕಾಗ್ನಿಜೆಂಟ್‌ನ ತನ್ನ ಶೇಕಡ 80 ರಷ್ಟು ಅರ್ಹ ಉದ್ಯೋಗಿಗಳಿಗೆ ನವೆಂಬರ್ 1, 2025 ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದೆ. ಇದು ಎರಡನೇ ತ್ರೈಮಾಸಿಕ ಗಳಿಕೆಯ ಸಮಯದಲ್ಲಿ 2025 ರ ದ್ವಿತೀಯಾರ್ಧದಲ್ಲಿ ಬಹುಪಾಲು ಉದ್ಯೋಗಿಗಳಿಗೆ ಅರ್ಹತೆ ಆಧಾರಿತ ವೇತನ ಹೆಚ್ಚಳವನ್ನು ನೀಡಲು ಯೋಜಿಸಿದೆ ಎಂದು ಘೋಷಿಸುವುದರೊಂದಿಗೆ ಹೊಂದಿಕೆ ಯಾಗುತ್ತದೆ.
ಇದನ್ನೂ ಓದಿ: R T Vittalmurthy Column: ಪರಮೇಶ್ವರ್ ಬೆನ್ನಲ್ಲಿ ಕಾಣುತ್ತಿದೆ ರಾಮಬಾಣ ?
ಈ ಹೆಚ್ಚಳಗಳನ್ನು ಸೀನಿಯರ್ ಅಸೋಸಿಯೇಟ್ ಮಟ್ಟಗಳವರೆಗೆ ವಿಸ್ತರಿಸಿದೆ, ಎಲ್ಲಾ ವಲಯದ ಉದ್ಯೋಗಿಗಳಿಗೂ ತಮ್ಮ ಉದ್ಯೋಗದ ಅರ್ಹತೆ ಆಧಾರದ ಮೇಲೆ ಹಾಗೂ ವೈಯಕ್ತಿಕ ಕಾರ್ಯ ಕ್ಷಮತೆ ರೇಟಿಂಗ್ ಆಧಾರದ ಮೇಲೆ ಸಂಬಳ ಹೆಚ್ಚಳ ಪಡೆಯಲಿದ್ದಾರೆ.
ಇತ್ತೀಚೆಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗದ ಅಭದ್ರತೆ ಹಾಗೂ ಸಾಕಷ್ಟು ಉದ್ಯೋಗಿಗಳ ಕಡಿತದಿಂದ ತತ್ತರಿಸಿದ್ದಾರೆ. ಆದರೆ, ಕಾಗ್ನಿಜೆಂಟ್ ತನ್ನ ಉದ್ಯೋಗಿಗಳ ಕ್ಷೇಮವನ್ನು ಕಾಪಾಡಲಿದೆ, ಜೊತೆಗೆ ದುಡಿತಕ್ಕೆ ಸೂಕ್ತ ಸಂಬಳ ನೀಡುವುದು ಸಂಸ್ಥೆಯ ಕರ್ತವ್ಯವೆಂದು ಭಾವಿಸಿದೆ.
ಉನ್ನತ ಪ್ರದರ್ಶನ ನೀಡುವವರು ಅತ್ಯುನ್ನತ ಹೆಚ್ಚಳವನ್ನು ಪಡೆಯುತ್ತಾರೆ. ಈ ವರ್ಷದ ಆರಂಭ ದಲ್ಲಿ, ಕಾಗ್ನಿಜೆಂಟ್ ತನ್ನ ಹೆಚ್ಚಿನ ಸಹವರ್ತಿಗಳಿಗೆ ಮೂರು ವರ್ಷಗಳಲ್ಲಿ ಅವರ ಅತ್ಯುನ್ನತ ಬೋನಸ್‌ಗಳನ್ನು ಪಾವತಿಸಿದೆ ಎಂದು ಕಾಗ್ನಿಜೆಂಟ್‌ನ ವಕ್ತಾರರು ಮಾಧ್ಯಮಕ್ಕೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದೆ.