ಬೆಂಗಳೂರು: ಭಾರತದ ಅತಿದೊಡ್ಡ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರಂ ಕಾಯಿನ್‌ಸ್ವಿಚ್ ಇಂದು 2025 ರ 2ನೇ ಆವೃತ್ತಿಯ 'ಭಾರತದ ಕ್ರಿಪ್ಟೋ ಪೋರ್ಟ್‌ಫೋಲಿಯೋ: ಭಾರತ ಹೇಗೆ ಹೂಡಿಕೆ ಮಾಡುತ್ತಿದೆ' ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. 2 ಕೋಟಿಗೂ ಹೆಚ್ಚು ಬಳಕೆ ದಾರರಿಂದ ಒಳನೋಟಗಳನ್ನು ಇದು ಪಡೆದುಕೊಂಡಿದ್ದು, ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರಿಪ್ಟೋ ವ್ಯವಸ್ಥೆ, ಪ್ರಾದೇಶಿಕ ಟ್ರೆಂಡ್‌ಗಳು, ಹೂಡಿಕೆದಾರರ ವರ್ತನೆ ಮತ್ತು ಅತ್ಯಂತ ಜನಪ್ರಿಯ ಡಿಜಿಟಲ್ ಅಸೆಟ್‌ಗಳ ಬಗ್ಗೆ ವಿವರವಾದ ಒಳನೋಟಗಳನ್ನು ಒದಗಿಸುತ್ತದೆ.
ವರದಿಯ ಪ್ರಕಾರ, 2025 ರ 2ನೇ ತ್ರೈಮಾಸಿಕದಲ್ಲಿ ಭಾರತದ ಕ್ರಿಪ್ಟೋ ಹೂಡಿಕೆಯಲ್ಲಿ ಬೆಂಗಳೂರು 2ನೇ ಸ್ಥಾನ ಪಡೆದುಕೊಂಡಿದ್ದು, ದೇಶದ ಒಟ್ಟಾರೆ, ಕ್ರಿಪ್ಟೋ ಹೂಡಿಕೆಗೆ 6.8% ಕೊಡುಗೆ ನೀಡಿದೆ.
"2025 ರ 2ನೇ ತ್ರೈಮಾಸಿಕವಾಗಿ ಜಾಗತಿಕವಾಗಿ ಕ್ರಿಪ್ಟೋ ಹೂಡಿಕೆಯಲ್ಲಿ ಮಹತ್ವದ ತ್ರೈಮಾಸಿಕ ವಾಗಿತ್ತು ಭಾರತವೂ ಇದಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಬಿಟ್‌ಕಾಯ್ನ್ $123,000ಗೆ ತಲುಪಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ ನೀತಿಯಲ್ಲಿನ ಬದಲಾವಣೆ ಮತ್ತು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಹೆಚ್ಚಳವಾಗಿರುವುದು ಈ ಉತ್ಸಾಹಕ್ಕೆ ಕಾರಣವಾಗಿದೆ. ಭಾರತದಲ್ಲಿ ಕ್ರಿಪ್ಟೋ ಮುಖ್ಯವಾಹನಿಗೆ ಬಂದಿದೆ. ಬಹುತೇಕ ಹೂಡಿಕೆದಾರರ ವಾಲೆಟ್‌ಗಳು ಲಾಭದಲ್ಲಿರುವುದರಿಂದ ಈ ಪರಿಸರ ವ್ಯವಸ್ಥೆ ಹೇಗೆ ಬೆಳೆದಿದೆ ಎಂಬುದನ್ನು ಸೂಚಿಸುತ್ತದೆ. ಭಾರತೀಯರು ಉತ್ತಮ ಪೋರ್ಟ್‌ಫೋಲಿಯೋ ಗಳನ್ನು ರೂಪಿಸಿರುವುದನ್ನು ನಾವು ಗಮನಿಸಿದ್ದೇವೆ.
ಇದನ್ನೂ ಓದಿ: Roopa Gururaj Column: ದಾನ ಮಾಡಿದ ಅಕ್ಕಿಯ ಕಾಳು ಬಂಗಾರವಾದಾಗ
ಬಿಟಿಸಿ ಹಾಗೂ ಇಟಿಎಚ್‌ನಂತಹ ಬ್ಲ್ಯೂ ಚಿಪ್ ಅಸೆಟ್‌ಗಳಲ್ಲಿ ಅವರು ಹೂಡಿಕೆ ಮಾಡುವುದರ ಜೊತೆಗೆ ಮೀಮ್ ಮತ್ತು ಗೇಮಿಂಗ್ ಟೋಕನ್‌ಗಳಲ್ಲೂ ಹೂಡಿಕೆ ಮಾಡುತ್ತಿದ್ದಾರೆ. ಕ್ರಿಪ್ಟೋದಲ್ಲಿ ಭಾರತೀಯರು ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಮತ್ತು ವಿಶ್ವದಲ್ಲೇ ಭಾರತೀಯರು ಅತ್ಯಂತ ಡೈನಾಮಿಕ ಮಾರ್ಕೆಟ್ ಅನ್ನು ರೂಪಿಸುತ್ತಿದ್ದಾರೆ" ಎಂದು ಕಾಯಿನ್‌ಸ್ವಿಚ್‌ನ ಉಪಾಧ್ಯಕ್ಷ ಬಾಲಾಜಿ ಶ್ರೀಹರಿ ಹೇಳಿದ್ದಾರೆ.
ಬೆಂಗಳೂರು ತಾಂತ್ರಿಕವಾಗಿ ಮುಂದುವರಿದ ಹಾಗೂ ವ್ಯೂಹಾತ್ಮಕವಾಗಿ ಮಹತ್ವದ ಕ್ರಿಪ್ಟೋ ಮಾರ್ಕೆಟ್ ಆಗಿದೆ. 2025 ರ 2ನೇ ತ್ರೈಮಾಸಿಕದಲ್ಲಿ ನಗರದ ಹೂಡಿಕೆದಾರರು ಒಂದು ಉತ್ತಮ ಸಮತೋಲಿತ ಹೂಡಿಕೆಯನ್ನು ಮಾಡಿದ್ದಾರೆ. 37.47% ರಷ್ಟು ಬ್ಲ್ಯೂ ಚಿಪ್ ಅಸೆಟ್‌ಗಳಲ್ಲಿ ಮತ್ತು 35.27% ರಲ್ಲಿ ಲಾರ್ಜ್ ಕ್ಯಾಪ್ ಟೋಕನ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಒಟ್ಟಾರೆಯಾಗಿ ನಗರದ ಪೋರ್ಟ್‌ಫೋಲಿಯೋಗಳಲ್ಲಿ ಇವು ನಾಲ್ಕನೇ ಮೂರರಷ್ಟನ್ನು ವ್ಯಾಪಿಸಿವೆ. ಮಿಡ್ ಕ್ಯಾಪ್ ಹೂಡಿಕೆಗಳು 22.41% ಇದ್ದು, ಸ್ಮಾಲ್ ಕ್ಯಾಪ್ ಹೂಡಿಕೆಯು 4.84% ಇವೆ. ಇದು ಪ್ರಜ್ಞಾಪೂರ್ವಕ ಹಾಗೂ ಬೆಳವಣಿಗೆಯ ಮನಸ್ಥಿತಿಯ ಹೂಡಿಕೆಯನ್ನು ಸೂಚಿಸುತ್ತದೆ.
ಬೆಂಗಳೂರಿನಲ್ಲಿ ಬ್ಲಾಕ್‌ಚೈನ್ ಮೂಲಸೌಕರ್ಯವು ಅತ್ಯುತ್ತಮವಾಗಿದೆ. ಅಗ್ರ 10 ನಗರಗಳ ಪೈಕಿ ಲೇಯರ್ 1 ಟೋಕನ್‌ಗಳಿಗೆ ಹೆಚ್ಚಿನ ನಿಯೋಜನೆಯನ್ನು ನಾವು ಗಮನಿಸಿದ್ದೇವೆ. ಇದು 46.12% ರಷ್ಟಿದೆ. ಮೂಲ ತಾಂತ್ರಿಕ ಪ್ಲಾಟ್‌ಫಾರಂಗಳಲ್ಲಿ
ಹೂಡಿಕೆದಾರರು ಆಸಕ್ತಿ ಹೊಂದಿರುವುದನ್ನು ಸೂಚಿಸುತ್ತದೆ. ಮೀಮ್ ಕಾಯಿನ್‌ಗಳು 16.98% ಹಾಗೂ ಡೆಫಿ ಟೋಕನ್‌ಗಳು 10.69% ಇದ್ದು, ಬೆಳೆಯುತ್ತಿರುವ ಟ್ರೆಂಡ್‌ಗಳಲ್ಲಿ ಪ್ರಜ್ಞಾಪೂರ್ವಕ ವಾಗಿ ಭಾಗವಹಿಸುತ್ತಿರುವುದನ್ನು ಕಾಣಬಹುದು.
63.87% ಪೋರ್ಟ್‌ಫೋಲಿಯೋಗಳು ಲಾಭದಲ್ಲಿದ್ದು, ಅಗ್ರ ಕ್ರಿಪ್ಟೋ ಸಿಟಿ ಎಂಬ ಹೆಗ್ಗಳಿಕೆಯನ್ನು ಬೆಂಗಳೂರು ಪಡೆದುಕೊಂಡಿದೆ. ಭವಿಷ್ಯದ ಬ್ಲಾಕ್‌ಚೈನ್ ಟೆಕ್ನಾಲಜಿಯಲ್ಲಿ ಸ್ಮಾರ್ಟ್ ಆಗಿ ಜನರು ಹೂಡಿಕೆ ಮಾಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.
ಪ್ರಮುಖ ರಾಷ್ಟ್ರೀಯ ಟ್ರೆಂಡ್‌ಗಳು: ಭಾರತದ ಕ್ರಿಪ್ಟೋ ಪೋರ್ಟ್‌ಫೋಲಿಯೋದ ಒಂದು ಪಕ್ಷಿ ನೋಟ ಭೌಗೋಳಿಕ ಆಧರಿತ ಅಳವಡಿಕೆ:
- ವಯೋ ಸಮೂಹ: 35 ವಯೋ ಸಮೂಹದ ಹೂಡಿಕೆದಾರರು ಕ್ರಿಪ್ಟೋದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದು, ಒಟ್ಟು ಬಳಕೆದಾರರ ಸಂಖ್ಯೆಯಲ್ಲಿ ಸುಮಾರು 71.7% ಇದ್ದಾರೆ. 26-35 ವಯೋ ಸಮೂಹದವರು 44.4% ಇದ್ದು, ನಂತರದಲ್ಲಿ 18-25 ವಯೋ ಸಮೂಹದವರು 27.3% ಇದ್ದಾರೆ.
- ಮಹಿಳಾ ಹೂಡಿಕೆದಾರರು: ಒಟ್ಟು ಹೂಡಿಕೆದಾರರಲ್ಲಿ 12.02% ಮಹಿಳೆಯರು ಇದ್ದು, ವಲಯದಲ್ಲಿ ಒಳಗೊಳ್ಲುವಿಕೆ ಅವಕಾಶ ಹೆಚ್ಚಳವಾಗುತ್ತಿದೆ.
ಹೂಡಿಕೆದಾರರ ಆದ್ಯತೆಗಳು:
- ಬಿಟ್‌ಕಾಯ್ನ್ ಅತ್ಯಂತ ಮೆಚ್ಚಿನ ಕ್ರಿಪ್ಟೋ ಅಸೆಟ್ ಆಗಿದ್ದು, ಒಟ್ಟು ಹೂಡಿಕೆದಾರರ ಆಸಕ್ತಿಯಲ್ಲಿ 6.5% ಪಾಲನ್ನು ಪಡೆದುಕೊಂಡಿದೆ. ನಂತರದಲ್ಲಿ, ಡಾಜ್‌ಕಾಯಿನ್ (6.49%) ಮತ್ತು ಎಥೆರಿಯಮ್ (5.25%) ಇವೆ. ಈ ಮೂರು ಕಾಯಿನ್‌ಗಳು 1ನೇ ತ್ರೈಮಾಸಿಕದಲ್ಲಿ (ಜೆಎಫ್‌ಎಂ) ಹೂಡಿಕೆದಾರರ ಆದ್ಯತೆಯಾಗಿವೆ.
- ಒಟ್ಟು ಕ್ರಿಪ್ಟೋ ಹೂಡಿಕೆಯಲ್ಲಿ ಮೀಮ್ ಕಾಯಿನ್‌ಗಳು 13.2% ಇದ್ದು, ಡಾಜ್‌ಕಾಯಿನ್ ಮುಂಚೂಣಿಯಲ್ಲಿದ್ದರೆ, ನಂತರದಲ್ಲಿ ಶಿಬಾ ಇನು (4.7%) ಮತ್ತು ಪೆಪೆ (2% ) ಇವೆ.
- ಬಿಟ್ ಕಾಯಿನ್ ಅತ್ಯಂತ ಹೆಚ್ಚು ಟ್ರೇಡ್ ಆದ ಅಸೆಟ್‌ಗಳಲ್ಲಿ ಒಂದಾಗಿದ್ದು, 7.2% ಇದೆ. ನಂತರದಲ್ಲಿ ರಿಪಲ್ (ಎಕ್ಸ್‌ಆರ್‌ಪಿ) ಮತ್ತು ಎಥೆರಿಯಮ್ (ಇಟಿಎಚ್) ಇವೆ. ಇವು ಒಟ್ಟಾರೆ ಯಾಗಿ 4.2% ಟ್ರೇಡಿಂಗ್ ವಾಲ್ಯೂಮ್ ಹೊಂದಿವೆ. 1ನೇ ತ್ರೈಮಾಸಿಕದಲ್ಲಿ ಎಕ್ಸ್‌ಆರ್‌ಪಿ, ಬಿಟಿಸಿ ಮತ್ತು ಡೋಜ್ ಒಟ್ಟಾರೆಯಾಗಿ ಟ್ರೇಡಿಂಗ್ ಚಟುವಟಿಕೆಯಲ್ಲಿ 28.1% ಕೊಡುಗೆ ನೀಡಿದ್ದವು.
ಮಾರುಕಟ್ಟೆ ಬಂಡವಾಳ ಮತ್ತು ಟೋಕನ್ ಟ್ರೆಂಡ್‌ಗಳು
- ಹೂಡಿಕೆದಾರರ ಗಮನ: ಭಾರತೀಯ ಹೂಡಿಕೆದಾರರು ಬ್ಲ್ಯೂ ಚಿಪ್ ಮತ್ತು ಲಾರ್ಜ್ ಕ್ಯಾಪ್ ಟೋಕನ್‌ಗಳನ್ನು ಅವುಗಳ ಸ್ಥಿರತೆಗಾಗಿ ಬಯಸುತ್ತಾರೆ.
- ಲೇಯರ್ 1 ಪಾರಮ್ಯ: ಲೇಯರ್ 1 ಟೋಕನ್‌ಗಳು ಒಟ್ಟಾರೆ ಹೂಡಿಕೆದಾರರ ಆಸಕ್ತಿಯಲ್ಲಿ 35.52% ಇದ್ದು, ಮೀಮ್ ಕಾಯಿನ್‌ಗಳು 19.50% ಆಗಿದೆ.
- ವೈವಿಧ್ಯಮಯ ಹೂಡಿಕೆಗಳು: ಡೆಫಿ ಮತ್ತು ಗೇಮಿಂಗ್ ಟೋಕನ್‌ಗಳು ಕೂಡಾ ಗಮನಾರ್ಹ ಮುನ್ನಡೆಯನ್ನು ಸಾಧಿಸಿದ್ದು, ಬದಲಾಗುತ್ತಿರುವ ಹೂಡಿಕೆದಾರರ ವರ್ತನೆಯನ್ನು ಪ್ರತಿಫಲಿಸು ತ್ತಿವೆ.
ಟ್ರೇಡಿಂಗ್ ಪ್ಯಾಟರ್ನ್‌ಗಳು
- ಹೆಚ್ಚು ಚಟುವಟಿಕೆಯ ತಿಂಗಳುಗಳು: ಕ್ರಿಪ್ಟೋ ಉತ್ಸಾಹಿಗಳಿಗೆ ಮೇ ಅತ್ಯಂತ ಪ್ರಮುಖ ತಿಂಗಳಾಗಿದ್ದು, 2025 ತ್ರೈಮಾಸಿಕ 2 ರಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಮೇ 9 ಮತ್ತು ಮೇ 12 ರಂದು ಕಾಯಿನ್‌ಸ್ವಿಚ್ ಅತಿ ಹೆಚ್ಚು ಟ್ರೇಡಿಂಗ್ ನಡೆಸಿದ್ದು, ಪ್ರಮುಖ ಜಾಗತಿಕ ಟ್ರೇಡ್ ಡೀಲ್‌ಗಳು ಈ ಸಮಯದಲ್ಲಿ ನಡೆದಿವೆ.
- ಅಮೆರಿಕ, ಇಂಗ್ಲೆಂಡ್ ಮತ್ತು ಚೀನಾದ ಟ್ಯಾರಿಫ್ ಇಳಿಕೆ ಮಾಡಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ ಮತ್ತು ಬಿಟ್‌ಕಾಯಿನ್ ಚಟುವಟಿಕೆಯಲ್ಲಿ ಉತ್ತೇಜನ ಮೂಡಿಸಿವೆ.