ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಸ್ ಮೇಕ್ ರೆಫ್ರಿಜರೇಷನ್ 2025ರ 1ನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ಸದೃಢ ಪ್ರಗತಿ; ಕಾರ್ಯತಂತ್ರೀಯ ಹೂಡಿಕೆಗಳಿಂದ ದೀರ್ಘಾವಧಿ ವಿಸ್ತರಣೆ

ತ್ರೈಮಾಸಿಕದಲ್ಲಿ ಕಂಪನಿಯು ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯ ₹111.50 ಕೋಟಿ ವರದಿ ಮಾಡಿದ್ದು ಕ್ಯೂ1 ಎಫ್.ವೈ.25ರಲ್ಲಿ ₹85.23 ಕೋಟಿಗೆ ಹೋಲಿಸಿದರೆ ಶೇ.30ರಷ್ಟು ಪ್ರಗತಿ ವರ್ಷದಿಂದ ವರ್ಷಕ್ಕೆ ದಾಖಲಿಸಿದೆ. ಈ ಸಾಧನೆಯು ಕೋಲ್ಡ್ ರೂಮ್ಸ್, ಇಂಡಸ್ಟ್ರಿಯಲ್ ರೆಫ್ರಿಜರೇಷನ್ ಮತ್ತು ಸಾರಿಗೆ ರೆಫ್ರಿಜಿರೇಷನ್ ವಲಯಗಳಲ್ಲಿ ಸತತ ಬೇಡಿಕೆಯನ್ನು ಬಿಂಬಿಸುತ್ತಿದ್ದು ಅದು ಸದೃಢವಾದ ಆರ್ಡರ್ ಪೂರೈಕೆ ಮತ್ತು ಮಾರುಕಟ್ಟೆ ವ್ಯಾಪ್ತಿ ಹೆಚ್ಚಳದ ಬೆಂಬಲ ಪಡೆದಿದೆ

ಬೆಂಗಳೂರು: ಮುಂಚೂಣಿಯ 50ಕ್ಕೂ ಹೆಚ್ಚು ಆವಿಷ್ಕಾರಕ ಕೂಲಿಂಗ್ ಮತ್ತು ರೆಫ್ರಿಜರೇಷನ್ ಪರಿಹಾರಗಳ ಉತ್ಪಾದಕ ಐಸ್ ಮೇಕ್ ರೆಫ್ರಿಜಿರೇಷನ್ ಲಿಮಿಟೆಡ್ ಜೂನ್ 30, 2025ಕ್ಕೆ(ಕ್ಯೂ1 ಎಫ್.ವೈ.26) ಅಂತ್ಯವಾದ ತ್ರೈಮಾಸಿಕಕ್ಕೆ ತನ್ನ ಲೆಕ್ಕ ಪರಿಶೋಧನೆಯಾಗದ ಹಣಕಾಸು ಫಲಿತಾಂಶ ಗಳನ್ನು ಪ್ರಕಟಿಸಿದ್ದು ಇದು ಲಾಭದಲ್ಲಿ ತಾತ್ಕಾಲಿಕ ಹಿನ್ನಡೆಯಾಗಿದ್ದರೂ ತನ್ನ ಆದಾಯದಲ್ಲಿ ಪ್ರಗತಿಯನ್ನು ನಿರೂಪಿಸಿದೆ.

ಈ ತ್ರೈಮಾಸಿಕದಲ್ಲಿ ಕಂಪನಿಯು ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯ ₹111.50 ಕೋಟಿ ವರದಿ ಮಾಡಿದ್ದು ಕ್ಯೂ1 ಎಫ್.ವೈ.25ರಲ್ಲಿ ₹85.23 ಕೋಟಿಗೆ ಹೋಲಿಸಿದರೆ ಶೇ.30ರಷ್ಟು ಪ್ರಗತಿ ವರ್ಷದಿಂದ ವರ್ಷಕ್ಕೆ ದಾಖಲಿಸಿದೆ. ಈ ಸಾಧನೆಯು ಕೋಲ್ಡ್ ರೂಮ್ಸ್, ಇಂಡಸ್ಟ್ರಿಯಲ್ ರೆಫ್ರಿಜರೇಷನ್ ಮತ್ತು ಸಾರಿಗೆ ರೆಫ್ರಿಜಿರೇಷನ್ ವಲಯಗಳಲ್ಲಿ ಸತತ ಬೇಡಿಕೆಯನ್ನು ಬಿಂಬಿಸುತ್ತಿದ್ದು ಅದು ಸದೃಢವಾದ ಆರ್ಡರ್ ಪೂರೈಕೆ ಮತ್ತು ಮಾರುಕಟ್ಟೆ ವ್ಯಾಪ್ತಿ ಹೆಚ್ಚಳದ ಬೆಂಬಲ ಪಡೆದಿದೆ.

ಇದನ್ನೂ ಓದಿ: Vishweshwar Bhat Column: ಪೈಲಟ್‌ ಹೀಗೆ ಹೇಳಬಹುದೇ ?

ಆದಾಗ್ಯೂ ಋತು ಆಧರಿತ ವೆಚ್ಚದ ಏರಿಳಿತಗಳು, ಹಣಕಾಸು ವೆಚ್ಚದ ಹೆಚ್ಚಳ ಮತ್ತು ಇನ್ವೆಂಟರಿ ಹೊಂದಾಣಿಕೆಗಳ ಕಾರಣದಿಂದ ಕ್ಯೂ1 ಎಫ್.ವೈ.26ರಲ್ಲಿ ₹ -1.47 ಕೋಟಿ ನಿವ್ವಳ ಲಾಭ ದಾಖಲಿ ಸಿದ್ದು ಹಿಂದಿನ ವರ್ಷ ಅದೇ ಅವಧಿಗೆ ₹3.64 ಕೋಟಿ ಇತ್ತು. ಆಡಳಿತ ಮಂಡಳಿಯು ಇದು ಅಲ್ಪಾ ವಧಿ ಪರಿಣಾಮ ಎಂದು ಹೇಳಿದ್ದು ಉದ್ಯಮದ ಮೂಲಭೂತ ಅಂಶಗಳು ಸದೃಢವಾಗಿವೆ ಎಂದಿದೆ. ಐಸ್ ಮೇಕ್ ಕಾರ್ಯ ನಿರ್ವಹಣೆಯ ದಕ್ಷತೆಗಳು, ವೆಚ್ಚದ ಗರಿಷ್ಠಗೊಳಿಸುವಿಕೆ ಮತ್ತು ದುಡಿಯುವ ಬಂಡವಾಳದ ಶಿಸ್ತಿಗೆ ಆದ್ಯತೆ ನೀಡುತ್ತದೆ.

*ಈ ಫಲಿತಾಂಶಗಳ ಕುರಿತು ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಚಂದ್ರ ಕಾಂತ್ ಪಿ. ಪಟೇಲ್,* “ನಾವು ಸದೃಢ ಬೇಡಿಕೆ ಮತ್ತು ನಮ್ಮ ಗ್ರಾಹಕರ ಸುಸ್ಥಿರ ವಿಶ್ವಾಸದಿಂದ ಉತ್ತೇಜಿತರಾಗಿದ್ದೇವೆ. ತಾತ್ಕಾಲಿಕ ವೆಚ್ಚಕ್ಕೆ ಸಂಬಂಧೀಸಿದ ಒತ್ತಡಗಳಿದ್ದರೂ ನಾವು ನಮ್ಮ ಬಹು ಮಾದರಿ ವಿಸ್ತರಣೆಯ ಕಾರ್ಯತಂತ್ರ ಮತ್ತು ಮುಂದಿನ ಬಂಡವಾಳ ಸಂಗ್ರಹದ ಯೋಜನೆ ಗಳಿಂದ ಲಾಭದಾಯಕ ಪ್ರಗತಿ ಸಾಧಿಸುವ ವಿಶ್ವಾಸ ಹೊಂದಿದ್ದೇವೆ” ಎಂದರು.