ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

POST OFFICE RD SCHEME: ತಿಂಗಳಿಗೆ 10,000 ರೂ. ಹೂಡಿಕೆ; 5 ವರ್ಷದಲ್ಲಿ 7.13 ಲಕ್ಷ ಗ್ಯಾರಂಟಿ ಆದಾಯ!

ನೀವು ಪೋಸ್ಟ್‌ ಆಫೀಸಿನ ಈ ಆರ್‌ಡಿ ಯೋಜನೆಯಲ್ಲಿ ಪ್ರತಿ ತಿಂಗಳೂ 10,000/-ಗಳನ್ನು ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ 7,13,658 (POST OFFICE RD SCHEME) ರುಪಾಯಿಗಳನ್ನು ಗಳಿಸಬಹುದು. ಈ ಕುರಿತ ವಿವರಗಳನ್ನು ತಿಳಿಯುವುದಕ್ಕೆ ಮುನ್ನ ಕೆಲವೊಂದು ವಿಚಾರಗಳನ್ನು ಯೋಚಿಸೋಣ.

ಕೇಶವಪ್ರಸಾದ.ಬಿ

ಬೆಂಗಳೂರು: ನೀವು ಪೋಸ್ಟ್‌ ಆಫೀಸಿನ ಈ ಆರ್‌ಡಿ ಯೋಜನೆಯಲ್ಲಿ ಪ್ರತಿ ತಿಂಗಳೂ 10,000/-ಗಳನ್ನು ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ 7,13,658 (POST OFFICE RD SCHEME) ರುಪಾಯಿಗಳನ್ನು ಗಳಿಸಬಹುದು. ಈ ಕುರಿತ ವಿವರಗಳನ್ನು ತಿಳಿಯುವುದಕ್ಕೆ ಮುನ್ನ ಕೆಲವೊಂದು ವಿಚಾರಗಳನ್ನು ಯೋಚಿಸೋಣ. ಸ್ಟಾಕ್‌ ಮಾರ್ಕೆಟ್‌, ಮ್ಯೂಚುವಲ್‌ ಫಂಡ್‌, ಫ್ಯೂಚರ್‌ ಆಂಡ್‌ ಆಪ್ಷನ್ಸ್‌, ಇಟಿಎಫ್‌ ಮೊದಲಾದ ಹೂಡಿಕೆಯ ಆಯ್ಕೆಗಳು ಇದ್ದರೂ, ಇವುಗಳಲ್ಲಿ ಮಾರುಕಟ್ಟೆಯ ಏರಿಳಿತಗಳ ರಿಸ್ಕ್‌ ಇರುತ್ತದೆ. ಆದ್ದರಿಂದ ಹಲವಾರು ಮಂದಿ ಹೂಡಿಕೆದಾರರು ಈಗಲೂ ಅಂಚೆ ಇಲಾಖೆಯ ರಿಕರಿಂಗ್‌ ಡೆಪಾಸಿಟ್‌ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸ್ತಾರೆ. ಏಕೆಂದರೆ ಇದರಲ್ಲಿ ಹೂಡಿಕೆಗೆ ಕೇಂದ್ರ ಸರಕಾರವೇ ಗ್ಯಾರಂಟಿ ನೀಡುತ್ತದೆ. ಜತೆಗೆ ಖಾತರಿಯ ಆದಾಯ ಸಿಗುತ್ತದೆ.

ನಾವು ಇಲ್ಲಿ ಯಾವುದು ಶ್ರೇಷ್ಠ ಎಂದು ಹೋಲಿಕೆ ಮಾಡಲು ಹೋಗುವುದಿಲ್ಲ. ಏಕೆಂದರೆ ಮಾರುಕಟ್ಟೆ ಲಿಂಕ್ಡ್‌ ಹೂಡಿಕೆಗೂ ಲೋ ರಿಸ್ಕ್‌ ಇನ್‌ಸ್ಟ್ರುಮೆಂಟ್‌ಗಳಿಗೂ ಅದರದ್ದೇ ಆದ ಉದ್ದೇಶಗಳು ಇರುತ್ತವೆ. ಆದ್ದರಿಂದ ಯಾವುದು ಬೇಕು ಎಂಬ ಆಯ್ಕೆಯು ಹೂಡಿಕೆದಾರರ ವೈಯಕ್ತಿಕ ಇಷ್ಟಗಳನ್ನು, ಅಗತ್ಯಗಳನ್ನು ಅಧರಿಸಿರುತ್ತದೆ.

ಅಂಚೆ ಕಚೇರಿಯಲ್ಲಿ ನ್ಯಾಶನಲ್‌ ಸೇವಿಂಗ್ಸ್‌ ರಿಕರಿಂಗ್‌ ಡೆಪಾಸಿಟ್‌ ಸ್ಕೀಮ್‌ ಎಂಬ ಉಳಿತಾಯ ಯೋಜನೆ ಇದೆ. ಸರಳವಾಗಿ ಪೋಸ್ಟ್‌ ಆಫೀಸ್‌ ಆರ್‌ಡಿ ಸ್ಕೀಮ್‌ ಅಂ ಜನ ಕರೆಯುತ್ತಾರೆ. ಈ ಆರ್‌ ಡಿ ಯೋಜನೆಯಲ್ಲಿ ಪ್ರತಿ ತಿಂಗಳು 10,000/- ಹೂಡುತ್ತಾ ಬಂದರೆ, 5 ವರ್ಷಗಳಲ್ಲಿ ನಿಮ್ಮ ಒಟ್ಟು ಠೇವಣಿ ಸಂಗ್ರಹ 6,00,000/- ಆಗುತ್ತದೆ. ಈಗ ವಾರ್ಷಿಕ 6.7% ಬಡ್ಡಿ ದರ ಇದಕ್ಕಿದೆ. ಹೀಗಾಗಿ ಬಡ್ಡಿಯ ಮೊತ್ತವಾಗಿ 1,13,658/- ಸೇರಿದಂತೆ ಒಟ್ಟು 7,13,658/- ಖಾತರಿಯ ಆದಾಯ ಸಿಗುತ್ತದೆ.

ಈಗ ಸಂಕ್ಷಿಪ್ತವಾಗಿ ವಿವರಗಳನ್ನು ತಿಳಿಯೋಣ

ಯೋಜನೆಯ ಹೆಸರು: ನ್ಯಾಶನಲ್‌ ಸೇವಿಂಗ್ಸ್‌ ರಿಕರಿಂಗ್‌ ಡೆಪಾಸಿಟ್‌ ಸ್ಕೀಮ್‌

ಎಲ್ಲಿ ಲಭ್ಯ: ಅಂಚೆ ಕಚೇರಿಗಳಲ್ಲಿ.

ಪ್ರತಿ ತಿಂಗಳ ಹೂಡಿಕೆ: 10,000/-

5 ವರ್ಷಗಳಲ್ಲಿ ಹೂಡಿಕೆ: 6 ಲಕ್ಷ ರುಪಾಯಿ

ಮೆಚ್ಯೂರಿ ಮೊತ್ತ : 7,13,658/-

ಬಡ್ಡಿ: ವಾರ್ಷಿಕ 6.7%

ಅರ್ಹತೆ: ಭಾರತೀಯ ನಾಗರಿಕರು ಆಗಿರಬೇಕು. ಜಂಟಿ ಖಾತೆಯಲ್ಲೂ ತೆರೆಯಬಹುದು. ಅಪ್ರಾಪ್ರ ಮಕ್ಕಳ ಹೆಸರಿನಲ್ಲಿ ಪೋಷಕರು ಹೂಡಿಕೆ ಮಾಡಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಸ್ವತಂತ್ರವಾಗಿ ಹೂಡಿಕೆ ಮಾಡಬಹುದು.

ಕನಿಷ್ಠ ಹೂಡಿಕೆ: ಪ್ರತಿ ತಿಂಗಳು 100/- ಕನಿಷ್ಠ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ.

ಅವಧಿ: 5 ವರ್ಷಗಳು. (60 ತಿಂಗಳು)

ಠೇವಣಿಗೆ ಸೂಕ್ತ ಸಮಯ: ಪ್ರತಿ ತಿಂಗಳು 15ರೊಳಗೆ ಕಟ್ಟುವುದು ಸೂಕ್ತ.

ಸಾಲ ಸೌಲಭ್ಯ ಇದೆಯೇ: ಅಕೌಂಟ್‌ ತೆರೆದು 1 ವರ್ಷದ ಬಳಿಕ ಹೂಡಿಕೆಯ 50% ಮೊತ್ತಕ್ಕೆ ಸಮವಾಗುವಷ್ಟು ಸಾಲ ಪಡೆಯಬಹುದು.

ಟ್ಯಾಕ್ಸ್‌ ಬೆನಿಫಿಟ್:‌ ಸೆಕ್ಷನ್‌ 80 C ಅಡಿಯಲ್ಲಿ ತೆರಿಗೆ ಅನುಕೂಲ ಇಲ್ಲ.

ಕಂತು ತಪ್ಪಿದರೆ ಏನಾಗುತ್ತದೆ?: ಠೇವಣಿ ತಪ್ಪಿದರೆ ಪ್ರತಿ 100/- ಕ್ಕೆ 1 ರುಪಾಯಿ ದಂಡ ಕಟ್ಟಬೇಕಾಗುತ್ತದೆ.

ಅವಧಿಗೆ ಮುನ್ನ ಹಿಂತೆಗೆತ ಹೇಗೆ: ಮೂರು ವರ್ಷಗಳ ಬಳಿಕ ಸಾಧ್ಯವಿದೆ. ಅದಕ್ಕೂ ಮುನ್ನ ಕ್ಲೋಸ್‌ ಮಾಡಿದ್ರೆ, ಎಸ್‌ ಬಿ ಖಾತೆಗೆ ಸಿಗುವ ಬಡ್ಡಿ ಸಿಗುತ್ತದೆ. ಆರ್‌ ಡಿ ಬಡ್ಡಿ ಸಿಗಲ್ಲ.

ಉದ್ಯೋಗಿಗಳು, ಗೃಹಿಣಿಯರು, ಹಿರಿಯ ನಾಗರಿಕರು, ಪೋಷಕರು ಈ ಪೋಸ್ಟ್‌ ಆಫೀಸ್‌ ಆರ್‌ ಡಿ ಸ್ಕೀಮ್‌ ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ರಿಕರಿಂಗ್‌ ಡೆಪಾಸಿಟ್‌ ಉಳಿತಾಯ ಯೋಜನೆಗಳನ್ನು ಬ್ಯಾಂಕ್‌ಗಳೂ ನೀಡುತ್ತವೆ. ಹಾಗಾದರೆ ಪೋಸ್ಟ್‌ ಆಫೀಸ್‌ ಆರ್‌ ಡಿ ಸ್ಕೀಮ್‌ಗಳಿಗೂ, ಬ್ಯಾಂಕ್‌ಗಳ ಆರ್‌ ಡಿ ಸ್ಕೀಮ್‌ಗಳಿಗೂ ಏನು ವ್ಯತ್ಯಾಸ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ನೋಡೋಣ.

ಅಂಚೆ ಇಲಾಖೆಯ ಆರ್‌ ಡಿ ಸ್ಕೀಮ್‌ಗಳಿಗೆ 6.7% ಬಡ್ಡಿ ಸಿಕ್ಕಿದರೆ, ಬ್ಯಾಂಕ್‌ ಆರ್‌ ಡಿ ಯೋಜನೆಗಳಲ್ಲಿ ತುಸು ಹೆಚ್ಚಿನ ಬಡ್ಡಿ ಸಿಗಬಹುದು. ಬ್ಯಾಂಕ್‌ಗಳು ಸಾಮಾನ್ಯವಾಗಿ 6 ತಿಂಗಳುಗಳಿಂದ 5 ವರ್ಷದ ತನಕದ ಆರ್‌ ಡಿ ಸ್ಕೀಮ್‌ ಗಳನ್ನು ನೀಡಬಹುದು. ಪೋಸ್ಟ್‌ ಆಫೀಸ್‌ನಲ್ಲಿ 5 ವರ್ಷಗಳ ಸ್ಕೀಮ್‌ ಇರುತ್ತದೆ. HDFC ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 5 ವರ್ಷಗಳ ಆರ್‌ಡಿಗೆ 7% ಬಡ್ಡಿ ಇದೆ. ಕೆನರಾ ಬ್ಯಾಂಕ್‌ 6.75%, ಬ್ಯಾಂಕ್‌ ಆಫ್‌ ಬರೋಡಾ 6.75%, ಎಸ್‌ಬಿಐ 6.5% ಬಡ್ಡಿ ನೀಡುತ್ತದೆ.

ಬ್ಯಾಂಕ್‌ಗಳಲ್ಲಿಯೂ ಕನಿಷ್ಠ 100/- ಹೂಡಿಕೆಯೊಂದಿಗೆ ಆರ್‌.ಡಿ ಆರಂಭಿಸಬಹುದು. ಹೀಗಿದ್ದರೂ, ಬ್ಯಾಂಕ್‌ಗಳಲ್ಲಿ ಠೇವಣಿಗೆ ಡೆಪಾಸಿಟ್‌ ಇನ್ಷೂರೆನ್ಸ್‌ ಪ್ರೋಗ್ರಾಮ್‌ ಅಡಿಯಲ್ಲಿ 5 ಲಕ್ಷ ರುಪಾಯಿ ತನಕ ಮಾತ್ರ ವಿಮೆ ಕವರೇಜ್‌ ಸಿಗುತ್ತದೆ. ಆದರೆ ಅಂಚೆ ಇಲಾಖೆಯಲ್ಲಿ ಈ ಮಿತಿ ಇರುವುದಿಲ್ಲ. ಆದರೆ ಬ್ಯಾಂಕ್‌ ಆರ್‌ ಡಿಯಲ್ಲಿ ಲಾಕ್‌ ಇನ್‌ ಅವಧಿ ಇರುವುದಿಲ್ಲ. ಹೀಗಾಗಿ ಲಿಕ್ವಿಡಿಟಿ ಹೆಚ್ಚು.

ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್‌ 700 ಅಂಕ ಪತನ, ಸ್ಟಾಕ್‌ ಮಾರ್ಕೆಟ್‌ ಕುಸಿಯುತ್ತಿರುವುದೇಕೆ?

ಹೂಡಿಕೆಯ ಸೇಫ್ಟಿ ದೃಷ್ಟಿಯಿಂದ ಎರಡೂ ಉತ್ತಮವೇ. ಆದರೂ ಪೋಸ್ಟ್‌ ಅಫೀಸ್‌ ಆರ್‌ ಡಿಯಲ್ಲಿ ಸಂಪೂರ್ಣ ಮೊತ್ತಕ್ಕೆ ಕೇಂದ್ರ ಸರಕಾರದ ಗ್ಯಾರಂಟಿ ಇರುತ್ತದೆ. ಕೇವಲ ಎಸ್‌ಬಿ ಅಕೌಂಟ್‌ನಲ್ಲಿ 3% -4% ಬಡ್ಡಿಗೆ ಠೇವಣಿ ಇಡೋದಕ್ಕಿಂತ ಪೋಸ್ಟ್‌ ಆಫೀಸ್‌ ಆರ್‌ ಡಿಯಲ್ಲಿ ಹೂಡಿಕೆ ಮಾಡುವುದು ಸೂಕ್ತ. ಕಾಲಾಂತರದಲ್ಲಿ ಉತ್ತಮ ಸಂಪತ್ತನ್ನು ಸೃಷ್ಟಿಸಬಹುದು.