ನವದೆಹಲಿ: ಎಲೆಕ್ಟ್ರಿಕ್ ಕಾರುಗಳನ್ನು (Electric car) ಟೆಸ್ಲಾ ಭಾರತದಲ್ಲಿ (Tesla in india) ಪರಿಚಯಿಸಿದ ಬೆನ್ನಲ್ಲೇ ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (Liberty General Insurance) ಇವಿ ವಾಹನಗಳಿಗೆ (EV) ವಿಮಾ ಯೋಜನೆಯನ್ನು(EV insurance) ಘೋಷಿಸಿದೆ. ಇದೀಗ ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಭಾರತದಲ್ಲಿ ಟೆಸ್ಲಾ ಕಾರುಗಳಿಗೆ ಹೆಚ್ಚು ಬೇಡಿಕೆಯ ವಿಮಾ ಕಂಪೆನಿಯಾಗಿ ಹೊರಹೊಮ್ಮಿದೆ. ಲಿಬರ್ಟಿಯ ಹೊಸ ಇವಿ ವಿಮೆ ಯೋಜನೆಯು ಟೆಸ್ಲಾ ಕಾರು ಮಾಲೀಕರಿಗೆ ವಾಹನದ ವೈಶಿಷ್ಟ್ಯತೆಗೆ ಅನುಗುಣವಾಗಿ ತಡೆರಹಿತ ಮತ್ತು ಭವಿಷ್ಯಕ್ಕೆ ಸುರಕ್ಷೆಯನ್ನು ನೀಡಲು ಸಿದ್ಧವಾಗಿದೆ.
ಟೆಸ್ಲಾ ಹಾಗೂ ಲಿಬರ್ಟಿ ಇನ್ಶೂರೆನ್ಸ್ ಗ್ರಾಹಕರಿಗೆ ಹೆಚ್ಚು ಸಹಕಾರಿಯಾಗುವ ಯೋಜನೆಯೊಂದನ್ನು ಹಂಚಿಕೊಂಡಿದೆ. ಇದರಲ್ಲಿ ವಾಹನ ಮಾಲೀಕರಿಗೆ ವಾಹನಗಳ ವಿನ್ಯಾಸ, ಡಿಜಿಟಲ್ ಗೆ ಹೆಚ್ಚಿನ ಬೆಂಬಲ ಹಾಗೂ ಎಲೆಕ್ಟ್ರಿಕ್ ಮೊಬಿಲಿಟಿ ವಿಸ್ತಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಟೆಸ್ಲಾದ ಎಂಜಿನಿಯರಿಂಗ್ ಹಾಗೂ ಕಾರ್ಯಕ್ಷಮತೆಯ ಉತ್ಕೃಷ್ಟತೆ ಮತ್ತು ಇವಿ ವಾಹನ ಬಳಕೆದಾರರ ಭವಿಷ್ಯದ ಆದ್ಯತೆಯನ್ನು ಗಮನದಲ್ಲಿರಿಸಿಕೊಂಡು ಲಿಬರ್ಟಿಯು ಸುರಕ್ಷತಾ ಯೋಜನೆಯನ್ನು ರೂಪಿಸಿದೆ.
ವಿಮೆಯಲ್ಲಿ ಒಳಗೊಳ್ಳುವ ಸೌಲಭ್ಯಗಳು
ಭಾರತದಲ್ಲಿ ಟೆಸ್ಲಾಗೆ ಸೂಕ್ತವಾದ ಇವಿ ವಿಮೆಯನ್ನು ಲಿಬರ್ಟಿ ಜನರಲ್ ಇನ್ಶುರೆನ್ಸ್ ಒದಗಿಸಲಿದೆ. ಇದು ಮನೆ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಹೈ-ವೋಲ್ಟೇಜ್ ಬ್ಯಾಟರಿಗಳು ಸೇರಿದಂತೆ ಅಗತ್ಯ ಇವಿ ಘಟಕಗಳನ್ನು ಒಳಗೊಂಡಿರುತ್ತದೆ. ಟೆಸ್ಲಾ ಇವಿಗಳಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸುವುದಾಗಿ ಘೋಷಿಸಿರುವ ಕಂಪೆನಿಯು ಟೆಸ್ಲಾ ತಂತ್ರಜ್ಞಾನ ಮತ್ತು ಮಾಲೀಕತ್ವ ಮಾದರಿಯ ವಿಶಿಷ್ಟ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿದ್ಯುತ್ ವಾಹನ ವಿಮಾ ಯೋಜನೆಯನ್ನು ಪರಿಚಯಿಸಿದೆ.
ಇದರಲ್ಲಿ ಮನೆ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಹೈ-ವೋಲ್ಟೇಜ್ ಬ್ಯಾಟರಿಗಳು ಸೇರಿದಂತೆ ಅಗತ್ಯ ಇವಿ ಘಟಕಗಳಿಗೆ ರಕ್ಷಣೆಯನ್ನು ಒಳಗೊಂಡಿದೆ. ವಿದ್ಯುತ್ ವಾಹನ ವಿಮಾ ಯೋಜನೆಯು ಇಎಂಐ ಸೌಲಭ್ಯವನ್ನು ಕೂಡ ಒದಗಿಸಲಾಗುತ್ತದೆ.
ಇವಿ: ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪರಿಕರಗಳು, ವಾಲ್ ಮೌಂಟೆಡ್ ಯುನಿಟ್, ಕೇಬಲ್, ಅಡಾಪ್ಟರ್‌ಗಳಂತಹ ಸೌಕರ್ಯಗಳಿಗೂ ವಿಮಾ ಸುರಕ್ಷತೆಯನ್ನು ಒದಗಿಸಲಾಗುತ್ತದೆ.
ಬ್ಯಾಟರಿ: ವಾಹನದ ಬ್ಯಾಟರಿ ಸುರಕ್ಷತೆಗೆ ಆಡ್ ಆನ್ ಕವರ್ ನೀಡುತ್ತಿದ್ದು, ಇದರಲ್ಲಿ ರಿಪೇರಿ, ಬದಲಾವಣೆ, ದೀರ್ಘಾವಧಿ ಬ್ಯಾಟರಿ ಕಾರ್ಯಕ್ಷತೆಯ ಭರವಸೆಯನ್ನು ನೀಡಲಾಗುತ್ತದೆ.
ಸಂಪೂರ್ಣ ಸಹಕಾರ: ವಿಮೆ ಪ್ಯಾಕೇಜ್ ನಲ್ಲಿ ಇವಿಗಳಿಗೆ ಉತ್ತಮ ಗುಣಮಟ್ಟದ ರಸ್ತೆ ಬದಿ ನೆರವು ನೀಡುವ ಯೋಜನೆಯನ್ನು ಹೊಂದಿದೆ. ಇದರಲ್ಲಿ ಆನ್ ಸ್ಪಾಟ್ ಚಾರ್ಜಿಂಗ್, ಟೋಯಿಂಗ್, ಹೈಡ್ರಾ ಸರ್ವೀಸ್ , ತಾತ್ಕಾಲಿಕ ನಿಲ್ದಾಣ ಹಾಗೂ ಇನ್ನಿತರ ಪ್ರವಾಸ ಸೌಕರ್ಯಗಳನ್ನು ಒಳಗೊಂಡಿದೆ.
ಇವಿಷ್ಟೇ ಅಲ್ಲದೇ ಟೆಸ್ಲಾದ ಗ್ರಾಹಕರಿಗೆ ಲಿಬರ್ಟಿ ಜನರಲ್ ಇನ್‌ಶ್ಯೂರೆನ್ಸ್ ಆಡ್ ಆನ್ ಆಯ್ಕೆಗಳನ್ನು ಕೂಡ ನೀಡಿದೆ. ಇದು ಮತ್ತಷ್ಟು ಹೆಚ್ಚಿನ ವಿಮಾ ರಕ್ಷಣೆಯನ್ನು ನೀಡಲಿದೆ. ಇದರಲ್ಲಿ ಪ್ರೀಮಿಯಂ ಆಡ್-ಆನ್ ಆಯ್ಕೆಗಳಿವೆ. ಇದು ಫುಲ್ ಡಿಪ್ರಿಸಿಯೇಷನ್ ಶೀಲ್ಡ್, ಗ್ಯಾಪ್ ವಾಲ್ಯೂ, ಟೈರ್‌ಗಳು, ಕೀ ರಿಪ್ಲೇಸ್‌ಮೆಂಟ್ ಕವರ್, ಇಎಂಐ ಬೆಂಬಲ, ಪ್ಯಾಸೆಂಜರ್ ಸಹಾಯ ಸೇವೆಗಳು ಸೇರಿದಂತೆ ಇನ್ನು ಹಲವು ಸೌಲಭ್ಯಗಳು ಇವೆ.
ಸಂಚಾರ ವ್ಯವಸ್ಥೆಯ ಹೊಸ ಅಧ್ಯಾಯ
ಇವಿ ವಿಮಾ ಯೋಜನೆಯ ಕುರಿತು ಮಾತನಾಡಿರುವ ಲಿಬರ್ಟಿ ಜನರೆಲ್ ಇನ್‌ಶ್ಯೂರೆನ್ಸ್ ಲಿಮಿಟೆಡ್ ನ ಸಿಇಒ ಹಾಗೂ ನಿರ್ದೇಶಕ ಪರಾಗ್ ವೇದ್, ಟೆಸ್ಲಾ ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವುದು ಕೇವಲ ಒಂದು ಜಾಗತಿಕ ಕಾರು ಬ್ರ್ಯಾಂಡ್‌ನ ಆಗಮನವಲ್ಲ. ಇದು ಸಂಚಾರ ವ್ಯವಸ್ಥೆಯ ಹೊಸ ಅಧ್ಯಾಯ. ಟೆಸ್ಲಾದ ಪ್ರಮುಖ ಇನ್‌ಶ್ಯೂರೆನ್ಸ್ ಕೊಡುಗೆದಾರರಾಗಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ons Jabeur: ದೈಹಿಕ ಯೋಗಕ್ಷೇಮದತ್ತ ಗಮನಹರಿಸಲು ಟೆನಿಸ್‌ನಿಂದ ಬ್ರೇಕ್ ಪಡೆದ ಒನ್ಸ್ ಜಬೇರ್
ಇದೊಂದು ಪರಿವರ್ತನೆಯ ಕ್ಷಣ. ಮುಂದಿನ ಪೀಳಿಗೆಯ ವಾಹನ ಚಾಲಕರ ಅಗತ್ಯಗಳನ್ನು ಹೇಗೆ ರಕ್ಷಿಸುತ್ತೇವೆ, ಯಾವ ರೀತಿಯ ಸೇವೆ ಸಲ್ಲಿಸುತ್ತೇವೆ ಮತ್ತು ಜನರ ಅಗತ್ಯತೆಗಳು ಏನು ಎಂಬುದನ್ನು ಕೂಡ ಕಂಪೆನಿ ಪರಿಗಣಿಸಲಿದೆ. ವಿದ್ಯುತ್ ವಾಹನ ಚಾಲನಾ ಅನುಭವಕ್ಕೆ ಪೂರಕವಾಗಿ ಇವಿ ಕೇಂದ್ರಿತ ಕೊಡುಗೆಗಳನ್ನು ಕೂಡ ವಿನ್ಯಾಸಗೊಳಿಸಲಾಗಿದೆ. ಡಿಜಿಟಲ್ ವೇದಿಕೆಯ ಮೂಲಕ ಕ್ಲೈಮ್‌ಗಳ ಇತ್ಯರ್ಥಕ್ಕೆ ಅವಕಾಶ ನೀಡಲಾಗುವುದರಿಂದ ಭವಿಷ್ಯದಲ್ಲಿ ಉನ್ನತ ಸೇವೆಯನ್ನು ಕಂಪೆನಿ ಒದಗಿಸಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.