RBI: ರುಪಾಯಿಯ ಅಂತಾರಾಷ್ಟ್ರೀಯ ಬಳಕೆಗೆ ಆರ್‌ಬಿಐ ಹೊಸ ಹೆಜ್ಜೆ
ಕಳೆದ ಹಲವಾರು ತಿಂಗಳುಗಳಿಂದ ಸರಕಾರವು ರುಪಾಯಿಯ ಅಂತಾರಾಷ್ಟ್ರೀಯ ಬಳಕೆಗೆ ಉತ್ತೇಜಿಸುತ್ತಿದೆ. ಜಾಗತಿಕ ವ್ಯಾಪಾರದಲ್ಲಿ ರುಪಾಯಿಯ ಬಳಕೆ ಹೆಚ್ಚಿಸುವುದು, ತನ್ಮೂಲಕ ಅದರ ಬಲವರ್ಧಿಸುವುದು ಇದರ ಗುರಿ. ಗ್ಲೋಬಲ್ ಟ್ರೇಡ್, ಫೈನಾನ್ಸ್ ಮತ್ತು ಹೂಡಿಕೆಯ ವಿಚಾರದಲ್ಲಿ ರುಪಾಯಿ ಹೆಚ್ಚು ಸ್ವೀಕಾರಾರ್ಹವಾಗಬೇಕು ಎಂಬುದು ಉದ್ದೇಶವಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

-

ಮುಂಬಯಿ: ರುಪಾಯಿಯ ಅಂತಾರಾಷ್ಟ್ರೀಯ ಬಳಕೆಯನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉತ್ತೇಜನ ನೀಡಲಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರ್ ಬಿಐ ಗವರ್ನರ್ ಸಂಜೀವ್ ಮಲ್ಹೋತ್ರಾ ಘೋಷಿಸಿದ್ದಾರೆ. ಭೂತಾನ್, ನೇಪಾಳ, ಶ್ರೀಲಂಕಾದಲ್ಲಿ ಅನಿವಾಸಿಗಳಿಗೆ ವ್ಯಾಪಾರ-ವಾಣಿಜ್ಯೋದ್ದೇಶಗಳಿಗೆ, ರುಪಾಯಿಯಲ್ಲಿ ಸಾಲ ವಿತರಣೆಗೂ ಆರ್‌ಬಿಐ ಕ್ರಮ ಕೈಗೊಳ್ಳಲಿದೆ. ಕ್ರಮೇಣ ರುಪಾಯಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವುದು ಆರ್‌ಬಿಐನ ಉದ್ದೇಶವಾಗಿದೆ.
ಕಳೆದ ಹಲವಾರು ತಿಂಗಳುಗಳಿಂದ ಸರಕಾರವು ರುಪಾಯಿಯ ಅಂತಾರಾಷ್ಟ್ರೀಯ ಬಳಕೆಗೆ ಉತ್ತೇಜಿಸುತ್ತಿದೆ. ಜಾಗತಿಕ ವ್ಯಾಪಾರದಲ್ಲಿ ರುಪಾಯಿಯ ಬಳಕೆ ಹೆಚ್ಚಿಸುವುದು, ತನ್ಮೂಲಕ ಅದರ ಬಲವರ್ಧಿಸುವುದು ಇದರ ಗುರಿ. ಗ್ಲೋಬಲ್ ಟ್ರೇಡ್, ಫೈನಾನ್ಸ್ ಮತ್ತು ಹೂಡಿಕೆಯ ವಿಚಾರದಲ್ಲಿ ರುಪಾಯಿ ಹೆಚ್ಚು ಸ್ವೀಕಾರಾರ್ಹವಾಗಬೇಕು ಎಂಬುದು ಉದ್ದೇಶವಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಎರಡನೆಯದಾಗಿ ಭಾರತವು ತನ್ನ ಪ್ರಮುಖ ಟ್ರೇಡಿಂಗ್ ಪಾಲುದಾರರ ಜತೆಗೆ ಕರೆನ್ಸಿಗಳ ಪಾರದರ್ಶಕ ರೆಫರೆನ್ಸ್ ರೇಟ್‌ಗಳನ್ನು ವ್ಯವಸ್ಥೆ ಮಾಡಲಿದೆ. ಮೂರನೆಯದಾಗಿ ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ಬಿಸಿನೆಸ್ ಮಾಡಲು ಸರಕಾರ ಅನುಕೂಲ ಮಾಡಿಕೊಡಲಿದೆ. ನಿಯಂತ್ರಕ ನೀತಿಗಳನ್ನು ಸಡಿಲಗೊಳಿಸಲಿದೆ. ದೇಶದಲ್ಲಿ ಹಣದುಬ್ಬರ ಇಳಿಕೆಯಾಗಿದ್ದರೂ, ಅಮೆರಿಕದ ಸುಂಕ ಹೆಚ್ಚಳದಿಂದ ಅನಿಶ್ಚಿತತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೆಪೊ ದರವನ್ನು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಮತ್ತೊಂದು ಕಡೆ
ಕಳೆದ ಆಗಸ್ಟ್‌ನಿಂದೀಚೆಗೆ ಹಣದುಬ್ಬರ ಗಣನೀಯವಾಗಿ ಇಳಿದಿದೆ. ಹೀಗಾಗಿ ಬಡ್ಡಿ ದರ ಇಳಿಸಲು ಒಂದಷ್ಟು ಪೂರಕ ವಾತಾವರಣ ಸೃಷ್ಟಿಯಾಗಿದೆ. ಆದರೂ ಅಮೆರಿಕದ ಟಾರಿಫ್ ಹೆಚ್ಚಳದ ಪರಿಣಾಮ ಮುಂಬರುವ ತ್ರೈಮಾಸಿಕಗಳಲ್ಲಿ ಹಣದುಬ್ಬರ ಒಂದಷ್ಟು ಏರುಗತಿಗೆ ತಿರುಗುವ ನಿರೀಕ್ಷೆಯೂ ಇದೆ. ಆದ್ದರಿಂದ ಬಡ್ಡಿ ದರಗಳನ್ನು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಇರಿಸಲು ಹಣಕಾಸು ಸಮಿತಿ ನಿರ್ಧರಿಸಿತು ಎಂದು ಸಂಜಯ್ ಮಲ್ಹೋತ್ರಾ ವಿವರಿಸಿದರು.
ಆರ್‌ಬಿಐ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿಇರಿಸಿದ್ದಕ್ಕೆ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೆನ್ಸೆಕ್ಸ್ ಬುಧವಾರ ಬೆಳಗ್ಗೆ 500 ಕ್ಕೂ ಹೆಚ್ಚು ಅಂಕ ಏರಿತು. ಮಧ್ಯಂತರದಲ್ಲಿ ಸೆನ್ಸೆಕ್ಸ್ 80,805ಕ್ಕೆ ಏರಿತು. ನಿಫ್ಟಿ 164 ಅಂಕ ಗಳಿಸಿ 24,774ಕ್ಕೆ ವೃದ್ಧಿಸಿತು. ಆರ್‌ಬಿಐ ನಿರೀಕ್ಷೆಯಂತೆ ರೆಪೊ ದರವನ್ನು 5.50%ರ ಯಥಾಸ್ಥಿತಿಯಲ್ಲಿ ಇರಿಸಿದೆ. ಷೇರುಗಳ ಮೇಲೆ ಸಾಲ ಮಿತಿ 1 ಕೋಟಿಗೆ ಏರಿಕೆ: ಆರ್‌ಬಿಐ ಷೇರುಗಳನ್ನು ಅಡಮಾನ ಇಟ್ಟು ಪಡೆಯುವ ಸಾಲದ ಮಿತಿಯನ್ನು ಈಗಿನ 20 ಲಕ್ಷ ರುಪಾಯಿಗಳಿಂದ 1 ಕೋಟಿ ರುಪಾಯಿಗೆ ಏರಿಸಿದೆ.
ಚಿನ್ನ ಮತ್ತು ಬೆಳ್ಳಿಯ ಸಾಲದಲ್ಲಿ ಹೊಸ ಬದಲಾವಣೆ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2025ರ ಅಕ್ಟೋಬರ್ 1ರಿಂದ ಬಂಗಾರ ಮತ್ತು ಬೆಳ್ಳಿಯನ್ನು ಅಡಮಾನ ಇಟ್ಟು ಪಡೆಯುವ ಸಾಲದ ನಿಯಮಾವಳಿಗಳನ್ನು ಬದಲಾಯಿಸಿದೆ. ಹಾಗಾದರೆ ಹೊಸ ಬದಲಾವಣೆಗಳು ಏನು ಎಂಬುದನ್ನು ನೋಡೋಣ. ಹೊಸ ನಿಯಮಗಳ ಪ್ರಕಾರ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ತೆಗಳು ಚಿನ್ನದ ಖರೀದಿಗೆ ಸಾಲ ನೀಡುವಂತಿಲ್ಲ. ಬಂಗಾರದ ಆಭರಣಗಳು, ನಾಣ್ಯ, ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್ ಹೂಡಿಕೆಗೆ ಸಾಲ ನೀಡುವಂತಿಲ್ಲ.
ಈ ಸುದ್ದಿಯನ್ನೂ ಓದಿ: ಟಾಟಾ ಮೋಟಾರ್ಸ್‌ನಿಂದ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್‌ಅಪ್‌ಗಳ ಮೇಲೆ ಭಾರಿ ಆಫರ್ ಘೋಷಣೆ
ಈ ಹಿಂದೆ ಜ್ಯುವೆಲರ್ಸ್ ಮಾತ್ರ ತಮ್ಮಲ್ಲಿರುವ ಚಿನ್ನ, ಬೆಳ್ಳಿಯನ್ನು ಅಡಮಾನ ಇಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಿತ್ತು. ಹೀಗಿದ್ದರೂ ಇತ್ತೀಚಿನ ಬದಲಾವಣೆಗಳ ಪ್ರಕಾರ, ಬಂಗಾರ ಮತ್ತು ಬೆಳ್ಳಿಯನ್ನು ಕಚ್ಚಾ ವಸ್ತುವಾಗಿ ಬಳಸುವ ಸಂಸ್ಥೆ, ಕಾರ್ಖಾನೆಗಳು ಕೂಡ ಅವುಗಳ ಆಧಾರದಲ್ಲಿ ಸಾಲ ಪಡೆಯಬಹುದು. ಈ ವಿಧಾನದಲ್ಲಿ ಚಿನ್ನ-ಬೆಳ್ಳಿಯನ್ನು ಕಚ್ಚಾ ವಸ್ತು ಎಂದು ಪರಿಗಣಿಸಿ ಸಾಲ ನೀಡಲಾಗುತ್ತದೆ. ಕೋಪರೇಟಿವ್ ಬ್ಯಾಂಕ್‌ಗಳು ಕೂಡ ಇಂಥ ಸಾಲಗಳನ್ನು ಕೊಡಬಹುದು. ಅಂದರೆ ಇದುವರೆಗೆ ಜ್ಯುವೆಲರ್ಸ್‌ಗೆ ಮಾತ್ರ ಸಿಗುತ್ತಿದ್ದ ಸಾಲವನ್ನು ಆರ್‌ಬಿಐ ಇದೀಗ ಉತ್ಪಾದನಾ ಕ್ಷೇತ್ರಕ್ಕೂ, ಇಂಡಸ್ಟ್ರಿಗಳಿಗೂ ವಿಸ್ತರಿಸಿದೆ.
ಬ್ಯಾಂಕ್‌ಗಳು ಫ್ಲೋಟಿಂಗ್ ರೇಟ್ ಲೋನ್‌ಗಳಿಗೆ ಬಡ್ಡಿ ದರವನ್ನು ನಿಯಮಿತವಾಗಿ ಇಳಿಸಲು ಆರ್‌ಬಿಐ ಅನುಮತಿ ನೀಡಿದೆ. ಈ ಹಿಂದೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾತ್ರ ಬದಲಾಯಿಸಲು ಅವಕಾಶ ಇರುತ್ತಿತ್ತು. ಅಕ್ಟೋಬರ್ 1ರಿಂದ ಈ ಹೊಸ ಬದಲಾವಣೆ ಜಾರಿಯಾಗಲಿದೆ.