ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಿಯಲ್‌ಮಿ 15 ಸೀರಿಸ್ ಬಿಡುಗಡೆ – ಮೊದಲ ಬಾರಿಗೆ ಫೋಟೋ ಎಡಿಟಿಂಗಾಗಿ "ಎಐ ಎಡಿಟ್ ಜೀನಿ"ಟೆಕ್ನಾಲಜಿ ಅಳವಡಿಕೆ

ರಿಯಲ್‌ಮಿ ಇದೀಗ 15ಪ್ರೊ 5G ಮತ್ತು ರಿಯಲ್‌ಮಿ 15 5G ಸೀರಿಸ್‌ನನ್ನು ಬಿಡುಗಡೆ ಮಾಡಿದ್ದು, ‘ಎಐ ಪಾರ್ಟಿ ಫೋನ್’ ಎಂದು ಈ ಫೋನ್‌ ಗುರುತಿಸಲ್ಪಡುತ್ತದೆ. ಇದರಲ್ಲಿ ಅನೇಕ ವಿಶೇಷ ಫೀಚರ್ಸ್‌ಗಳನ್ನು ನೀಡಲಾಗಿದೆ. ಪ್ರಮುಖವಾಗಿ ಫೋಟೋ ಎಡಿಟಿಂಗ್‌ಗೆ ಇನ್‌ಬಿಲ್ಟ್‌ "ಎಐ ಎಡಿಟ್ ಜೀನಿ" ಟೆಕ್ನಾಲಜಿ ಅಳವಡಿಸಲಾಗಿದೆ. ಈ ಎಐ ಎಡಿಟ್‌ ನಿಮ್ಮ ಫೋಟೋವನ್ನು ವೃತ್ತಿಪರ ಎಡಿಟರ್‌ನಷ್ಟೇ ನಿಖರವಾಗಿ ಎಡಿಟ್‌ ಮಾಡಿಕೊಡಲಿದೆ.

ಬೆಂಗಳೂರು: ಫೋಟೋ ಕ್ಲಿಕ್ಕಿಸಿದ ಬಳಿಕ ಅದನ್ನು ಎಡಿಟ್‌ ಮಾಡಲೆಂದೇ "ಎಐ ಎಡಿಟ್‌ ಜೀನಿ" ಎಂಬ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡ " ರಿಯಲ್‌ ಮಿ 15 ಸೀರಿಸ್‌"ನನ್ನು ಬಿಡುಗಡೆ ಮಾಡಿದ್ದು, ಫೋಟೋ ಎಡಿಟಿಂಗ್‌ಗಾಗಿ ಎಐ ಎಡಿಟರ್‌ ಇನ್‌ಬಿಲ್ಟ್‌ ಅಳವಡಿಸಿದ ಮೊದಲ ಸ್ಮಾರ್ಟ್‌ ಫೋನ್‌ ಇದಾಗಿದೆ.

ರಿಯಲ್‌ಮಿ ಇಂಡಿಯಾದ ಉತ್ಪನ್ನ ಕಾರ್ಯತಂತ್ರ ವ್ಯವಸ್ಥಾಪಕ ದೇವೇಂದರ್ ಸಿಂಗ್ ಮಾತನಾಡಿ, ರಿಯಲ್‌ಮಿ ಇದೀಗ 15ಪ್ರೊ 5G ಮತ್ತು ರಿಯಲ್‌ಮಿ 15 5G ಸೀರಿಸ್‌ನನ್ನು ಬಿಡುಗಡೆ ಮಾಡಿದ್ದು, ‘ಎಐ ಪಾರ್ಟಿ ಫೋನ್’ ಎಂದು ಈ ಫೋನ್‌ ಗುರುತಿಸಲ್ಪಡುತ್ತದೆ. ಇದರಲ್ಲಿ ಅನೇಕ ವಿಶೇಷ ಫೀಚರ್ಸ್‌ಗಳನ್ನು ನೀಡಲಾಗಿದೆ. ಪ್ರಮುಖವಾಗಿ ಫೋಟೋ ಎಡಿಟಿಂಗ್‌ಗೆ ಇನ್‌ಬಿಲ್ಟ್‌ "ಎಐ ಎಡಿಟ್ ಜೀನಿ" ಟೆಕ್ನಾಲಜಿ ಅಳವಡಿಸಲಾಗಿದೆ. ಈ ಎಐ ಎಡಿಟ್‌ ನಿಮ್ಮ ಫೋಟೋವನ್ನು ವೃತ್ತಿಪರ ಎಡಿಟರ್‌ನಷ್ಟೇ ನಿಖರವಾಗಿ ಎಡಿಟ್‌ ಮಾಡಿಕೊಡಲಿದೆ. ಇದರಿಂದ ಯಾವುದೇ ಕ್ವಾಲಿಟಿ ಕಾಂಪ್ರ ಮೈಸ್‌ ಆಗುವುದಿಲ್ಲ.

ವಿವಿಧ ಜೀವನಶೈಲಿಗಳನ್ನು ಅಳವಡಿಸಿಕೊಳ್ಳುವ ಯುವ ಪೀಳಿಗೆಗಾಗಿ ವಿನ್ಯಾಸಗೊಳಿಸಲಾದ ರಿಯಲ್‌ಮಿ 15 ಸಿರೀಸ್, ಟ್ರಿಪಲ್ 50MP ಅಲ್ಟ್ರಾ-ಕ್ಲಿಯರ್ ಕ್ಯಾಮೆರಾ ಮತ್ತು 4K 60FPS ವೀಡಿಯೊ ರೆಕಾರ್ಡಿಂಗ್‌ ಒಳಗೊಂಡಿದ್ದು ಸ್ಪಷ್ಟ ಹಾಗೂ ವೈವಿಧ್ಯಮಯ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದಲ್ಲದೇ, ರಿಯಲ್‌ಮಿ 15 ಸೀರೀಸ್ ವಿಶ್ವದ ಮೊದಲ ಎಐ ಎಡಿಟ್ ಜೀನಿ ತಂತ್ರಜ್ಞಾನ ಹಾಗೂ ಎಕ್ಸ್‌ಕ್ಲೂಸಿವ್ ಎಐ ಪಾರ್ಟಿ ಮೋಡ್‌" ಟೆಕ್ನಾಲಜಿಯನ್ನು ಅಳವಡಿಸಿದೆ.

ಇದನ್ನೂ ಓದಿ:Roopa Gururaj Column: ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ

ಟ್ರಿಪಲ್ 50MP ಹೈ ಕ್ವಾಲಿಟಿ ಕ್ಯಾಮೆರಾ: ರಿಯಲ್ ಮಿ 15ಪ್ರೊ ಟ್ರಿಪಲ್ ಲೆನ್ಸ್‌ 50MP ಅಲ್ಟ್ರಾ ಕ್ಲಾರಿಟಿ ಕ್ಯಾಮೆರಾ ಒಳಗೊಂಡಿದ್ದು, ಫ್ಲಾಗ್‌ಶಿಪ್ ಮಟ್ಟದ ತಂತ್ರಜ್ಞಾನ ಒಳಗೊಂಡಿದೆ. 1/1.56'' ಅಳತೆಯ ಸೆನ್ಸರ್ ಹೊಂದಿರುವ 24mm ಫೋಕಲ್ ಲೆಂತ್‌ ಸಮಾನವಿರುವ 50MP ಸೋನಿ IMX896 OIS ಮೇನ್ ಕ್ಯಾಮೆರಾ, ಅದ್ಭುತ ಪೋರ್ಟ್ರೆಟ್‌, ಪ್ರಕಾಶಮಾನತೆ ಮತ್ತು ನಿಜಸ್ವರೂಪದ ಬಣ್ಣ ದೊಂದಿಗೆ ಸೆರೆಹಿಡಿಯುತ್ತದೆ. ಜೊತೆಗೆ, 1/2.8’’ ಸೆನ್ಸರ್ ಹೊಂದಿರುವ 16mm ಸಮಾನವಿರುವ 50MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಹಾಗೂ 1/2.8’’ ಸೆನ್ಸರ್‌ನೊಂದಿಗೆ 50MP ಫ್ರಂಟ್ ಕ್ಯಾಮೆರಾವು ೆಲ್ಫಿ ಹಾಗೂ ಹಿಂಬದಿ ಕ್ಯಾಮರದ ಕ್ವಾಲಿಟಿಯಿಂದ ಕೂಡಿರಲಿದೆ.

ಇದಷ್ಟೆ ಅಲ್ಲದೆ, 4K 60 FPS ವೀಡಿಯೋ ಶೂಟಿಂಗ್‌ ಕೆಪಾಸಿಟಿ ಇದ್ದು, ಉತ್ತಮ ಗುಣಮಟ್ಟದ ವಿಡಿಯೋ ಸೆರೆ ಹಿಡಿಯಬಹುದು. ರಿಯಲ್‌ಮಿ 15 ಯಲ್ಲಿ ಎರಡು 50MP ಕ್ಯಾಮೆರಾಗಳಿವೆ. ರಿಯಲ್‌ಮಿ 15 ‌ ಹಿಂದಿನ ಹಾಗೂ ಮುಂಭಾಗದ ಕ್ಯಾಮೆರಾ 4K ರೆಕಾರ್ಡಿಂಗ್‌ ಮಾಡಲಿದೆ.

ಇದನ್ನೂ ಓದಿ: IPL Celebration: ಐಪಿಎಲ್‌ ತಂಡಗಳ ವಿಜಯೋತ್ಸವಕ್ಕೆ ಕಠಿಣ ನಿಯಮ ಜಾರಿಗೆ ತಂದ ಬಿಸಿಸಿಐ

ಮೊದಲ ಬಾರಿಗೆ "ಎಐ ಎಡಿಟ್ ಜೀನಿ" ಟೆಕ್ನಾಲಜಿ

ರಿಯಲ್‌ಮಿ 15 ಸಿರೀಸ್‌ನಲ್ಲಿ "ಎಐ ಎಡಿಟ್ ಜೀನಿ" ಎಡಿಟಿಂಗ್‌ ಅಪ್ಲಿಕೇಷನ್‌ ಇನ್‌ಬಿಲ್ಟ್‌ ಇರಲಿದೆ. ಇದು ಸಂಪೂರ್ಣ ಎಐ ಆಧಾರಿತ ಎಡಿಟಿಂಗ್ ಸಾಧನವಾಗಿದ್ದು, ಧ್ವನಿ ಆದೇಶಗಳ ಮೂಲಕವೇ ಚಿತ್ರಗಳನ್ನು ಎಡಿಟ್ ಮಾಡಬಹುದು. "ಎಐ ಎಡಿಟ್ ಜೀನಿ" ಫೋಟೋಗಳ ಬಣ್ಣ ಬದಲಿಸುವುದು, ನಿಮಗೆ ಬೇಕಾದ ಆಬ್ಜೆಕ್ಟ್‌ಗಳನ್ನು ಸೇರಿಸುವುದು ಸೇರಿಸಿದಂತೆ ಹಲವು ರೀತಿಯಲ್ಲಿ ಎಡಿಟ್‌ ಮಾಡಬಹುದು. ಈ ರೀತಿಯ ಟೆಕ್ನಾಲಜಿ ಇದುವರೆಗೂ ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ಬಿಡುಗಡೆ ಮಾಡಿಲ್ಲ.

ಈ ಎಐ ಜೀನಿ, ಫೋಟೋವನ್ನು ವಿಶ್ಲೇಷಿಸಿ ರಚನಾತ್ಮಕ ಸ್ಪರ್ಶ ಬೀಡಲಿದೆ. ಎಡಿಟಿಂಗ್ ಕೌಶಲ್ಯ ವಿಲ್ಲದವರೂ ಕೂಡ ಎಐ ಜೀನಿ ಮೂಲಕ ಎಡಿಟ್‌ ಮಾಡಬಹುದು.

ಎಐ ಪಾರ್ಟಿ ಮೋಡ್‌

ಇನ್ನು, ಈ ರಿಯಲ್‌ಮಿ 15 ಸಿರೀಸ್‌ನ ಮತ್ತೊಂದು ವಿಶೇಷವೆಂದರೆ, "ಎಐ ಪಾರ್ಟಿ ಮೋಡ್‌" ಟೆಕ್ನಾಲಜಿ. ಇದು ನಿಮ್ಮ ಯಾವುದೇ ರೀತಿಯ ಪಾರ್ಟಿ ಅಥವಾ ವಿಶೇಷ ದಿನಗಳನ್ನು ಇನ್ನಷ್ಟು ವಿಶೇಷಗೋಳಿಸಲು, ಆ ಎಲ್ಲಾ ಫೋಟೋಗಳಿಗೂ "ಎಐ ಪಾರ್ಟಿ ಮೋಡ್‌ ಮೂಲಕ ಕಲರ್‌ಫುಲ್‌ ಫ್ರೇಮ್‌ ಹಾಕಬಹುದು. ನಿಮ್ಮ ಭಾವನಾತ್ಮಕ ಫೋಟೋಗಳಿಗೆ ಸೃಜನಾತ್ಮಕ ವಾಟರ್‌ಮಾರ್ಕ್‌ ಹಾಕುವುದು, ಹಲವಾರು ಶೈಲಿಯ ಫ್ರೇಮ್‌ ಹಾಕಿಕೊಳ್ಳುವ ಮೂಲಕ ಆ ಫೋಟೋಗೆ ಪಾರ್ಟಿ ಮೋಡ್‌ ನೀಡಲಿದೆ.

ಇತರೆ ಫೀಚರ್ಸ್‌:

ರಿಯಲ್‌ಮಿ 15 ಸೀರಿಸ್‌ ಮೊದಲಬಾರಿ ಸ್ನ್ಯಾಪ್ ಡ್ರ್ಯಾಗನ್® 7 Gen 4 ಚಿಪ್‌ಸೆಟ್ ಹೊಂದಿದ್ದು, ಇದು ಸುಧಾರಿತ 4nm ಕಡಿಮೆ ವಿದ್ಯುತ್ ಬಳಕೆಯ ತಂತ್ರಜ್ಞಾನದಲ್ಲಿ ನಿರ್ಮಿತವಾಗಿದೆ. ಇದರ ಫಲಿತಾಂಶವಾಗಿ CPU ಕಾರ್ಯಕ್ಷಮತೆ 15% ಹೆಚ್ಚಿದ್ದು, ಬೆಂಚ್ ಮಾರ್ಕ್‌ನಲ್ಲಿ ಶ್ರೇಷ್ಟವಾದ 110W+ Antutu ಸ್ಕೋರ್ ನೀಡುತ್ತದೆ. ಇಷ್ಟೇ ಅಲ್ಲದೆ, “ಜಿಟಿ ಬೂಸ್ಟ್” ಎಐ ಗೇಮಿಂಗ್ ಆಪ್ಟಿಮೈಜೇಶನ್‌ ಅನ್ನು ಹೊಂದಿವೆ, ಇದು ಗೇಮರ್‌ಗಳಿಗೆ ಉತ್ತಮ ಅನುಭವ ನೀಡುತ್ತದೆ. ಜೊತೆಗೆ, 7000mAh ಟೈಟಾನ್ ಬ್ಯಾಟರಿ ನೀಡಲಾಗಿದೆ. ಬಳಕೆದಾರರು ಕೇವಲ 50% ಬ್ಯಾಟರಿ ಉಳಿದರೂ ದಿನವಿಡೀ ನಿರಂತರ ಉಪಯೋಗ ಮಾಡಬಹುದು. ಸೂಪರ್-ಫಾಸ್ಟ್ 80W ಚಾರ್ಜಿಂಗ್‌ ಇರಲಿದೆ. ಇದಲ್ಲದೇ, ಬಲಿಷ್ಠ 7000mm² VC ಕೂಲಿಂಗ್‌ ಸಿಸ್ಟಮ್‌ ವ್ಯವಸ್ಥೆಯನ್ನು ಅಳವಡಿಸಿದೆ. ಈ ಸೀರಿಸ್‌ ನೋಡಲು ಹೆಚ್ಚು ತೆಳ್ಳಗಿದ್ದು, 7.69mm ದಪ್ಪವಿದೆ.

ರಿಯಲ್‌ಮಿ 15 ಸೀರಿಸ್‌ನ ಬೆಲೆಯುವ 23,999 ನಿಂದ ಪ್ರಾರಂಭವಾಗಲಿದ್ದು, 15 ಪ್ರೋ 28,999 ರೂ.ಗಳಿಂದ ಶುರುವಾಗಲಿದೆ.