ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Share Market: ಸೆನ್ಸೆಕ್ಸ್‌ 224 ಅಂಕ ಜಿಗಿತ, ನಿಫ್ಟಿ 24,850ಕ್ಕೆ ಏರಿಕೆ

Stock Market: ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಚೇತರಿಕೆ ಕಂಡುಬಂತು. ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಶುಕ್ರವಾರ ಏರಿಕೆ ದಾಖಲಿಸಿತು. ಬ್ಯಾಂಕಿಂಗ್‌, ಕನ್‌ಸ್ಯೂಮರ್‌ ಮತ್ತು ಲೋಹದ ಷೇರುಗಳು ಏರಿಕೆಯಾಗಿವೆ. ಸೆನ್ಸೆಕ್ಸ್‌ 224 ಅಂಕ ಏರಿಕೆಯಾಗಿ 81,207ಕ್ಕೆ ಸ್ಥಿರವಾಯಿತು. ನಿಫ್ಟಿ 58 ಅಂಕ ಏರಿಕೆಯಾಗಿ 24,895ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.

ಮುಂಬೈ: ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ (Nifty) ಎರಡೂ ಶುಕ್ರವಾರ ಏರಿಕೆ ದಾಖಲಿಸಿತು. ಸತತ ಎರಡನೇ ದಿನ ಸೂಚ್ಯಂಕಗಳು ಚೇತರಿಸಿವೆ. ಬ್ಯಾಂಕಿಂಗ್‌, ಕನ್‌ಸ್ಯೂಮರ್‌ ಮತ್ತು ಲೋಹದ ಷೇರುಗಳು ಏರಿಕೆಯಾಗಿವೆ (Share Market). ಇಂಡಿಯಾ ವಿಕ್ಸ್‌ ಕೂಡ 1.6 ಪರ್ಸೆಂಟ್‌ಗೆ ತಗ್ಗಿದೆ. ಸೆನ್ಸೆಕ್ಸ್‌ 224 ಅಂಕ ಏರಿಕೆಯಾಗಿ 81,207ಕ್ಕೆ ಸ್ಥಿರವಾಯಿತು. ನಿಫ್ಟಿ 58 ಅಂಕ ಏರಿಕೆಯಾಗಿ 24,895ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.

ನಿಫ್ಟಿಯಲ್ಲಿ ಇವತ್ತು ಲಾಭ ಗಳಿಸಿದ ಷೇರುಗಳು: ಟಾಟಾ ಸ್ಟೀಲ್‌, ಪವರ್‌ ಗ್ರಿಡ್‌ ಕಾರ್ಪೊರೇಷನ್‌, ಕೋಟಕ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಲಾರ್ಸನ್‌ ಆಂಡ್‌ ಟೂಬ್ರೊ. ನಷ್ಟಕ್ಕೀಡಾದ ಷೇರುಗಳಲ್ಲಿ ಮ್ಯಾಕ್ಸ್‌ ಹೆಲ್ತ್‌ಕೇರ್‌ ಇನ್‌ಸ್ಟಿಟ್ಯೂಟ್‌, ಕೋಲ್‌ ಇಂಡಿಯಾ, ಈಷರ್‌ ಮೋಟಾರ್‌, ಟೆಕ್‌ ಮಹೀಂದ್ರಾ, ಮಾರುತಿ ಸುಜುಕಿ ಇದೆ. ನಿಫ್ಟಿ ಮೆಟಲ್‌, ನಿಫ್ಟಿ ಪಿಎಸ್‌ಯು ಬ್ಯಾಂಕ್‌, ನಿಫ್ಟಿ ಕನ್ ಸ್ಯೂಮರ್ ಡ್ಯೂರಬಲ್ಸ್‌ ಇಂಡೆಕ್ಸ್‌ ಏರಿಕೆ ದಾಖಲಿಸಿತು.‌

ವಿ-ಮಾರ್ಟ್‌ ರಿಟೇಲ್‌ ಕಂಪನಿಯ ಷೇರುಗಳ ದರ ಶುಕ್ರವಾರ 20 ಪರ್ಸೆಂಟ್‌ ಏರಿಕೆ ದಾಖಲಿಸಿದೆ. ಬಿಎಸ್‌ ಇನಲ್ಲಿ ಷೇರಿನ ದರ 870 ರುಪಾಯಿಗೆ ವೃದ್ಧಿಸಿತು. ಕಂಪನಿಯ ಆದಾಯ ಹೆಚ್ಚಳವಾಗಿರುವುದು ಇದಕ್ಕೆ ಕಾರಣ. ಈ ವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ ಒಂದು ಪರ್ಸೆಂಟ್‌ ಏರಿಕೆಯಾಗಿದೆ.

ಈ ಸುದ್ದಿಯನ್ನೂ ಓದಿ: RBI: ರುಪಾಯಿಯ ಅಂತಾರಾಷ್ಟ್ರೀಯ ಬಳಕೆಗೆ ಆರ್‌ಬಿಐ ಹೊಸ ಹೆಜ್ಜೆ

ಟಾಟಾ ಸ್ಟೀಲ್‌, ಹಿಂಡಾಲ್ಕೊ, ಜೆಎಸ್‌ಡಬ್ಲು ಸ್ಟೀಲ್‌ ಷೇರುಗಳ ದರದಲ್ಲಿ ವೃದ್ಧಿಸಿತು. ಕ್ವಾಂಟ್‌ ಮ್ಯೂಚುವಲ್‌ ಫಂಡ್‌ ಲಾರ್ಜ್‌ ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ ತನ್ನ ಹೂಡಿಕೆಯನ್ನು ಮುಂದುವರಿಸಿರುವುದಾಗಿ ತಿಳಿಸಿದೆ. ಇತ್ತೀಚೆಗೆ ಎನ್‌ಬಿಎಫ್‌ಸಿಗಳಲ್ಲಿ ಕೂಡ ಹೂಡಿಕೆ ಮುಂದುವರಿಸಿತ್ತು. ಅಮೆರಿಕದ ಫೆಡರಲ್‌ ರಿಸರ್ವ್‌ ಅಕ್ಟೋಬರ್‌ನಲ್ಲಿ ಬಡ್ಡಿ ದರ ಇಳಿಸುವ ನಿರೀಕ್ಷೆ ಇರುವುದು ಕೂಡ ಸ್ಟಾಕ್‌ ಮಾರ್ಕೆಟ್‌ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಆದಿತ್ಯ ಬಿರ್ಲಾ ಕ್ಯಾಇಟಲ್‌, ಕೆನರಾ ಬ್ಯಾಂಕ್‌, ಫೋರ್ಟಿಸ್‌ ಹೆಲ್ತ್‌ ಕೇರ್‌ ಸೇರಿದಂತೆ 190 ಷೇರುಗಳು 52 ವಾರಗಳ ಗರಿಷ್ಠ ಎತ್ತರಕ್ಕೇರಿವೆ. ಆದಿತ್ಯ ಬಿರ್ಲಾ ರಿಯಲ್‌ ಎಸ್ಟೇಟ್‌, ಜ್ಯೋತಿ ಲ್ಯಾಬ್ಸ್‌ ಸೇರಿದಂತೆ 83 ಷೇರುಗಳು 52 ವಾರಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಕೆಐಒಸಿಎಲ್‌, ವಿ-ಮಾರ್ಟ್‌ ರಿಟೇಲ್‌, ಲ್ಯೋಡ್ಸ್‌ ಎಂಜಿನಿಯರಿಂಗ್‌ ವರ್ಕ್ಸ್‌, ಏಜಿಸ್‌ ಲಾಜಿಸ್ಟಿಕ್ಸ್‌, ಅಸ್ತ್ರ ಮೈಕ್ರೊವೇವ್‌ ಪ್ರಾಡಕ್ಟ್ಸ್‌ ಷೇರು ದರ 10 ಪರ್ಸೆಂಟ್‌ಗೂ ಹೆಚ್ಚು ಏರಿಕೆ ದಾಖಲಿಸಿತು.