-ಕೇಶವಪ್ರಸಾದ ಬಿ.
ಮುಂಬೈ: ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ (Stock Market) ಎರಡೂ ಇಂದು ಎತ್ತರಕ್ಕೇರಿತು. ಸೆನ್ಸೆಕ್ಸ್ 355 ಅಂಕ ಗಳಿಸಿ 81,904ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 108 ಅಂಕ ಏರಿಕೆಯಾಗಿ 25,114ಕ್ಕೆ ಸ್ಥಿರವಾಯಿತು. ಎಲ್ಲಕ್ಕಿಂತ ವಿಶೇಷ ಏನೆಂದರೆ ನಿಫ್ಟಿ 25,000 ಅಂಕಗಳ ಆಸುಪಾಸಿನಲ್ಲಿ ಹೊಯ್ದಾಡುತ್ತಿತ್ತು. ಆದರೆ ಇವತ್ತು 25,100 ಅಂಕಗಳ ಮಟ್ಟವನ್ನು ದಾಟಿದೆ.
ಇಂದು ಸ್ಟಾಕ್ ಇಂಡೆಕ್ಸ್ ಏರಿಕೆಗೆ ಕಾರಣಗಳು
ನಿಫ್ಟಿ ಸತತ 8 ದಿನಗಳಿಂದ ಏರಿಕೆ ದಾಖಲಿಸಿದೆ. ಒಂದು ರೀತಿಯ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಿದೆ. ಅಮೆರಿಕದಲ್ಲಿ ಉದ್ಯೋಗ ಕುರಿತ ಅಂಕಿ ಅಂಶಗಳು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರ ಇಳಿಸುವ ಸಾಧ್ಯತೆ ಇದೆ. ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದ ಮಾತುಕತೆ ಕೂಡ ಮುಂದುವರಿಯುವ ನಿರೀಕ್ಷೆ ಉಂಟಾಗಿದೆ. ಇದು ಸ್ಟಾಕ್ ಸೂಚ್ಯಂಕ ಏರಿಕೆಗೆ ಕಾರಣವಾಗಿದೆ.
ಇಂದು ಲಾಭ ಗಳಿಸಿದ ಸೆಕ್ಟರ್‌ಗಳು
ಔಷಧ, ಐಟಿ, ಆಟೊಮೊಬೈಲ್, ಹಣಕಾಸು
ಇಂದು ನಷ್ಟಕ್ಕೀಡಾದ ಸೆಕ್ಟರ್‌ಗಳು
FMCG, PSU ಬ್ಯಾಂಕ್, ಮಾಧ್ಯಮ, ರಿಯಾಲ್ಟಿ
ನಿಫ್ಟಿ 50 ಇಂಡೆಕ್ಸ್‌ನಲ್ಲಿ ಲಾಭ ಗಳಿಸಿದ ಸ್ಟಾಕ್ಸ್
ಇನ್ಫೋಸಿಸ್: 1,527/-
ಎಚ್‌ಡಿಎಫ್‌ಸಿ ಬ್ಯಾಂಕ್: 968/-
ಬಿಇಎಲ್: 396/-
ಮಹೀಂದ್ರಾ & ಮಹೀಂದ್ರಾ: 3,587/-
ಬಜಾಜ್ ಫೈನಾನ್ಸ್: 999/-
ರಿಲಯನ್ಸ್ ಇಂಡಸ್ಟ್ರೀಸ್: 1,415/-
ನಿಫ್ಟಿ 50 ಇಂಡೆಕ್ಸ್‌ನಲ್ಲಿ ಇಳಿಕೆ ಕಂಡ ಸ್ಟಾಕ್ಸ್
ಎಚ್‌ಯುಎಲ್: 2,578/-
ವಿಪ್ರೊ: 251/-
ಎಟರ್ನಲ್: 325/-
ಏಷ್ಯನ್ ಪೇಂಟ್ಸ್: 2,539/-
ಟಾಟಾ ಕನ್‌ಸ್ಯೂಮರ್: 1,097/-
ಇಂಡಸ್ ಇಂಡ್ ಬ್ಯಾಂಕ್: 744/-
ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯು 18,000 ಕೋಟಿ ರುಪಾಯಿಗಳ ಷೇರುಗಳ ಬೈ ಬ್ಯಾಕ್ ಯೋಜನೆಯನ್ನು ಘೋಷಿಸಿದೆ. ಇನ್ಫೋಸಿಸ್ ಷೇರಿನ ಈಗಿನ ದರ 1,545/- ಗಳಾಗಿದ್ದು, ಪ್ರತಿ ಷೇರಿಗೆ 1,800/- ಗಳ ಲೆಕ್ಕದಲ್ಲಿ ಕಂಪನಿಯು ಮರು ಖರೀದಿಸಲಿದೆ. ಅಂದರೆ ತಜ್ಞರ ಪ್ರಕಾರ “ಬೈ ಆನ್ ಡಿಪ್ʼ ಕಾರ್ಯತಂತ್ರದ ಹಾಗೆ ಈಗ ಕೊಳ್ಳಬಹುದು. ಇನ್ಫೋಸಿಸ್ 1995ರ ಬಳಿಕ ದೊಡ್ಡ ಪ್ರಮಾಣದಲ್ಲಿ ಷೇರುಗಳ ಮರು ಖರೀದಿ ಮಾಡುತ್ತಿದೆ. ಸುಮಾರು 10 ಕೋಟಿ ಷೇರುಗಳನ್ನು ಕಂಪನಿ ಬೈ ಬ್ಯಾಕ್ ಮಾಡಲಿದೆ.
ಡಿಫೆನ್ಸ್ ಸ್ಟಾಕ್ಸ್ ಏರಿಕೆ
ರಕ್ಷಣಾ ವಲಯದ ಷೇರುಗಳು ಏರುಗತಿಯಲ್ಲಿವೆ. ಸರ್ಕಾರ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತಿರುವುದು ಇದಕ್ಕೆ ಕಾರಣ. ಅಪೊಲೊ ಮೈಕ್ರೊ ಸಿಸ್ಟಮ್ಸ್ ಮತ್ತು GRSE ಷೇರುಗಳು ದರದಲ್ಲಿ ಶುಕ್ರವಾರ ಮಧ್ಯಂತರದಲ್ಲಿ ಏರಿಕೆ ಕಂಡು ಬಂದಿತು.
ಹಾಗಾದರೆ ಯಾವೆಲ್ಲ ಡಿಫೆನ್ಸ್ ಸ್ಟಾಕ್ಸ್ ಇವತ್ತು ಏರಿಕೆ ದಾಖಲಿಸಿವೆ? ಎಂದರೆ- ಅಪೊಲೊ ಮೈಕ್ರೊ ಸಿಸ್ಟಮ್ಸ್. ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಎಂಜಿನಿಯರ್ಸ್ (GRSE).
ಪರಾಸ್ ಡಿಫೆನ್ಸ್ ಆಂಡ್ ಸ್ಪೇಸ್ ಟೆಕ್ನಾಲಜೀಸ್, MTAR ಟೆಕ್ನಾಲಜೀಸ್, ಅಸ್ತ್ರ ಮೈಕ್ರೊವೇವ್ ಪ್ರಾಡಕ್ಸ್ಟ್ ಷೇರು ದರದಲ್ಲಿ 5%-8% ತನಕ ಏರಿಕೆ ದಾಖಲಾಯಿತು. ಬೆಮೆಲ್, ಕೊಚ್ಚಿನ್ ಶಿಪ್ ಯಾರ್ಡ್, ಭಾರತ್ ಡೈನಾಮಿಕ್ಸ್, ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್‌ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್, ಮಿಶ್ರ ಧಾತು ನಿಗಮ್, ಡೇಟಾ ಪ್ಯಾಟರ್ನ್ಸ್, ಸೋಲಾರ್ ಇಂಡಸ್ಟ್ರೀಸ್, ಝೆನ್ ಟೆಕ್ನಾಲಜೀಸ್ ಷೇರಿನ ದರದಲ್ಲಿ 2%-4% ಏರಿಕೆ ದಾಖಲಾಯಿತು.
ಈ ಸುದ್ದಿಯನ್ನೂ ಓದಿ | PM KUSUM Scheme: 2026ರ ಮಾರ್ಚ್ ವೇಳೆಗೆ ʼಪಿಎಂ ಕುಸುಮ್ʼ 2ನೇ ಹಂತದ ಯೋಜನೆ ಅನುಷ್ಠಾನ: ಜೋಶಿ