ಅಹ್ಮದಾಬಾದ್: 12 ವರ್ಷದ ಬಾಲಕಿ ಮೇಲೆ ಸುಮಾರು 200 ಪುರುಷರು ಅತ್ಯಾಚಾರ (Girl Raped) ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಇದೀಗ ಈ ಕೃತ್ಯ ಎಸಗಿದ 10 ಮಂದಿಯನ್ನು ಬಂಧಿ ಸಲಾಗಿದೆ. ಮುಂಬೈ ಸಮೀಪದ ವಸೈನಲ್ಲಿ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ 12 ವರ್ಷದ ಬಾಂಗ್ಲಾದೇಶಿ ಬಾಲಕಿಯ ಮೇಲೆ ಮೂರು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಪುರುಷರು ಅತ್ಯಾಚಾರ ಎಸಗಿದ್ದಾರೆ ಎಂದು ಎಂದು ಬಾಲಕಿ ಹೇಳಿ ಕೊಂಡಿದ್ದಾಳೆ. ಈ ಘಟನೆ ಗುಜ ರಾತ್‌ನ ನಾಡಿಯಾಡ್‌ನಲ್ಲಿ ನಡೆದಿದೆ. ನಂತರ ಅವಳನ್ನು ವಸೈ ಸಮೀಪದ ನೈಗಾಂವ್ ನಲ್ಲಿರುವ ವೇಶ್ಯಾ ವಾಟಿಕೆ ಜಾಲದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಲೆಯಲ್ಲಿ ಒಂದು ವಿಷಯದಲ್ಲಿ ಫೇಲ್ ಆಗಿದ್ದ ಬಾಲಕಿ ತನ್ನ ಪೋಷಕರಿಗೆ ಹೆದರಿ ತನಗೆ ಪರಿ ಚಯ ಇದ್ದಂತಹ ಮಹಿಳೆ ಯೊಂದಿಗೆ ಭಾರತಕ್ಕೆ ಬಂದಿದ್ದಳು. ಆ ಮಹಿಳೆಯೇ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಳು ಎಂದು ಆರೋಪಿಸಲಾಗಿದೆ. ಮಹಿಳೆ ಬಾಲಕಿಯನ್ನು ಮೊದಲು ಗುಜರಾತ್‌ನ ನಡಿಯಾಡ್‌ಗೆ ಕರೆದೊಯ್ದು ಅಲ್ಲಿ ಮೂರು ತಿಂಗಳ ಅವಧಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಪುರುಷರ ಲೈಂಗಿಕ ದೌರ್ಜನ್ಯಕ್ಕೆ ಬಲಿಪಶುವಾಗುವಂತೆ ಮಾಡಿದ್ದಳು ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
ಇದನ್ನು ಓದಿ:Tripura Crime: ಹೆಣ್ಣು ಮಗುವೆಂದು ತಾತ್ಸಾರ...ಮಗಳಿಗೆ ವಿಷವುಣಿಸಿದ ತಂದೆ- ಇದು ಪೊಲೀಸಪ್ಪ ಕ್ರೌರ್ಯದ ಕಥೆ!
ಮೀರಾ-ಭಾಯಂದರ್ ವಸೈ-ವಿರಾರ್ (MBVV) ಪೊಲೀಸ್ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಜುಲೈ 26, 2025 ರಂದು ಈ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ. ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಮತ್ತು ಹಾರ್ಮನಿ ಫೌಂಡೇಶನ್ ಎಂಬ ಎನ್ ಜಿಒಗಳು ಈ ಕಾರ್ಯಾಚರಣೆಗೆ ನೆರವು ನೀಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಮಂದಿಯನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸುವಂತೆ ಹಾರ್ಮನಿ ಫೌಂಡೇಶನ್ ಸಂಸ್ಥಾಪಕ ಅಬ್ರಹಾಂ ಮಥಾಯ್ ಇದೀಗ ಒತ್ತಾಯಿಸಿದ್ದಾರೆ.
ಪೊಲೀಸ್ ಆಯುಕ್ತ ನಿಕೇತ್ ಕೌಶಿಕ್ ಅವರು ಈ ಸಂಪೂರ್ಣ ಜಾಲವನ್ನು ಬಯಲು ಮಾಡಲು ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇಂತಹ ಘಟನೆಗಳು ಆಗಾಗ ವರದಿ ಯಾಗುತ್ತಿದ್ದು, ಏನು ತಿಳಿಯಾದ ಸಣ್ಣ ಮಕ್ಕಳನ್ನು ಹಳ್ಳಿಗಳಿಂದ ಕರೆತಂದು ನಗರಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸ ಲಾಗುತ್ತಿದೆ ಎಂದು ಸಾಮಾ ಜಿಕ ಕಾರ್ಯಕರ್ತೆ ಮಧು ಶಂಕರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.