ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Accident: ಭಾರತೀಯ ಟ್ರಕ್‌ ಚಾಲಕನಿಂದ ಡೆಡ್ಲಿ ಆಕ್ಸಿಡೆಂಟ್‌- ಅಮೆರಿಕ ರಾಜಕೀಯದಲ್ಲಿ ಭಾರೀ ತಲ್ಲಣ

ಫ್ಲೋರಿಡಾದಲ್ಲಿ ಟ್ರಕ್ ಚಾಲಕನೊಬ್ಬ ಯು ಟರ್ನ್ ತೆಗೆದುಕೊಳ್ಳುವಾಗ ಉಂಟಾದ ಅಪಘಾತದಿಂದ ಮೂವರು ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಟ್ರಕ್ ಚಾಲಕ ಭಾರತೀಯ ಮೂಲದ ಅಕ್ರಮ ವಲಸಿಗ ಸಿಖ್ ವ್ಯಕ್ತಿ ಹರ್ಜಿಂದರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಈಗಾಗಲೇ ಈತನ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ.

ಫ್ಲೋರಿಡಾ: ಟ್ರಕ್ ಚಾಲಕನೊಬ್ಬ ಯೂ ಟರ್ನ್ ತೆಗೆದುಕೊಳ್ಳುವಾಗ ಉಂಟಾದ ಭೀಕರ ಅಪಘಾತದಿಂದ ಮೂವರು ಸಾವನ್ನಪ್ಪಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡಿದೆ. ದಾಖಲೆ ರಹಿತ ಭಾರತೀಯ ವಲಸಿಗ ಎನ್ನಲಾಗಿರುವ ಸೆಮಿ ಟ್ರಕ್ ಚಾಲಕ ಫ್ಲೋರಿಡಾ ಟರ್ನ್‌ಪೈಕ್‌ನಲ್ಲಿ ಯು-ಟರ್ನ್ ಮಾಡಲು ಪ್ರಯತ್ನಿಸಿದಾಗ ಟ್ರಕ್ ಗೆ ಮಿನಿ ವ್ಯಾನ್ ವೊಂದು ಡಿಕ್ಕಿಯಾಗಿದೆ.

ಟ್ರಕ್ ಚಾಲಕನನ್ನು ಭಾರತೀಯ ಪ್ರಜೆ ಸಿಖ್ ವ್ಯಕ್ತಿ ಹರ್ಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಹರ್ಜಿಂದರ್ ಸಿಂಗ್ ಬಳಿ ಯಾವುದೇ ದಾಖಲೆ ಇಲ್ಲದೇ ಇದ್ದರೂ ಕ್ಯಾಲಿಫೋರ್ನಿಯಾ ಮೋಟಾರ್ ವಾಹನ ಇಲಾಖೆ (DMV) ಆತನಿಗೆ ವಾಣಿಜ್ಯ ಚಾಲನಾ ಪರವಾನಗಿಯನ್ನು ನೀಡಿತ್ತು ಎಂದು ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಭದ್ರತಾ ಇಲಾಖೆಯು ಕ್ರಿಮಿನಲ್ ಅಕ್ರಮ ವಲಸಿಗರನ್ನು ಖಂಡಿಸಿತು. ಸಾರ್ವಜನಿಕರನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿತು ಮತ್ತುಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿತು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗೃಹ ಭದ್ರತಾ ಇಲಾಖೆ, ಫ್ಲೋರಿಡಾದಲ್ಲಿ ಮೂವರು ಅಮಾಯಕರು ಸಾವನ್ನಪ್ಪಿದ್ದಾರೆ. ಯಾಕೆಂದರೆ ಗ್ಯಾವಿನ್ ನ್ಯೂಸಮ್ ಅವರ ಕ್ಯಾಲಿಫೋರ್ನಿಯಾ ಮೋಟಾರ್ ವಾಹನ ಇಲಾಖೆ ಅಕ್ರಮ ವಿದೇಶಿಯರಿಗೆ ವಾಣಿಜ್ಯ ಚಾಲನಾ ಪರವಾನಗಿಯನ್ನು ನೀಡಿದೆ ಎಂದು ಹೇಳಿದೆ.

ಗ್ಯಾವಿನ್ ನ್ಯೂಸಮ್ ಅಮೆರಿಕದ ಸಾರ್ವಜನಿಕರ ಸುರಕ್ಷತೆಯೊಂದಿಗೆ ಆಟವಾಡುವುದನ್ನು ನಿಲ್ಲಿಸಬೇಕು. ಇದಕ್ಕಾಗಿ ಇನ್ನೆಷ್ಟು ಅಮಾಯಕರು ಸಾಯಬೇಕು ಎಂದು ಕೇಳಿದೆ. ಸಾರ್ವಜನಿಕರನ್ನು ರಕ್ಷಿಸಲು ಮತ್ತು ದೇಶದಿಂದ ಕ್ರಿಮಿನಲ್ ಅಕ್ರಮ ವಲಸಿಗರನ್ನು ತೆಗೆದುಹಾಕಲು ಗೃಹ ಭದ್ರತಾ ಇಲಾಖೆಯು ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ ಎಂದು ಅದು ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗವರ್ನರ್ ನ್ಯೂಸಮ್ ಅವರ ಪತ್ರಿಕಾ ಕಚೇರಿಯು, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿರುವಾಗಲೇ ಹರ್ಜಿಂದರ್ ಸಿಂಗ್ ಅಮೆರಿಕಕ್ಕೆ ಪ್ರವೇಶಿಸಿದ್ದಾರೆ ಎಂದು ಹೇಳಿದೆ. 2018ರ ಸೆಪ್ಟೆಂಬರ್ ನಲ್ಲಿ ಸಿಂಗ್ ಕ್ಯಾಲಿಫೋರ್ನಿಯಾವನ್ನು ಅಕ್ರಮವಾಗಿ ಪ್ರವೇಶಿಸಿದ್ದು, ಗಡಿ ಗಸ್ತು ಆತನನ್ನು ವಶಕ್ಕೆ ಪಡೆದಿತ್ತು. ಆತನನ್ನು ಗಡೀಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ. 2019ರ ಜನವರಿಯಲ್ಲಿ 5,000 ಡಾಲರ್ ವಲಸೆ ಬಾಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.



ಅಪಘಾತದ ಬಳಿಕ ಶ್ವೇತಭವನವು ಕ್ಯಾಲಿಫೋರ್ನಿಯಾವನ್ನು ಟೀಕಿಸಿದ್ದು, ಭಾರತೀಯ ಪ್ರಜೆಯಾದ ಸಿಂಗ್ ವಾಣಿಜ್ಯ ಚಾಲನಾ ಪರವಾನಗಿಯನ್ನು ಪಡೆದಿದ್ದಾನೆ. ಇದಕ್ಕೆ ಕ್ಯಾಲಿಫೋರ್ನಿಯಾದ ಅಜಾಗರೂಕ ನೀತಿಯೇ ಕಾರಣ. ಇದರಿಂದ ಪ್ರತಿದಿನ ಅಮೆರಿಕನ್ನರ ಜೀವಗಳನ್ನು ಅಪಾಯಕ್ಕೆ ಸಿಲುಕಿತ್ತಿವೆ ಎಂದು ಹೇಳಿದೆ. ವಲಸೆ ಮತ್ತು ಆರ್ಥಿಕ ತಂತ್ರಗಳು ಸೇರಿದಂತೆ ಹಲವು ವಿಷಯಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ ಟ್ರಂಪ್ ಜೊತೆ ವಾಗ್ವಾದಕ್ಕೆ ಇಳಿದಿದ್ದ ನ್ಯೂಸಮ್ ಅವರು ದುರಂತವನ್ನು ಒಪ್ಪಿಕೊಳ್ಳುವ ಬದಲು ಕ್ರಿಮಿನಲ್ ಅಕ್ರಮ ವಿದೇಶಿಯರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಶ್ವೇತ ಭವನ ಹೇಳಿದೆ.



ಈ ಸುದ್ದಿಯನ್ನೂ ಓದಿ: Infant death: ಕಿವಿ ಚುಚ್ಚಲು ಅನಸ್ತೇಶಿಯಾ ನೀಡಿದ ವೈದ್ಯರು, 5 ತಿಂಗಳ ಮಗು ಸಾವು

ಕ್ಯಾಲಿಫೋರ್ನಿಯಾದ ಕಾನೂನಿನ ಪ್ರಕಾರ ದೇಶದಲ್ಲಿ ಕಾನೂನುಬದ್ಧ ಉಪಸ್ಥಿತಿ ಇದ್ದಾಗ ಮಾತ್ರ ವಾಣಿಜ್ಯ ಚಾಲನಾ ಪರವಾನಗಿ ಪಡೆಯುತ್ತಾರೆ. ಅಕ್ರಮ ಪ್ರವೇಶ ಪಡೆದವರಿಗೆ ಚಲನಾ ಪರವಾನಿಗೆ ನೀಡುವುದು ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸುತ್ತದೆ ಎಂದು ಗ್ಯಾವಿನ್ ನ್ಯೂಸಮ್ ಕಚೇರಿ ಹೇಳಿರುವುದು ವಿವಾದವನ್ನು ಉಂಟು ಮಾಡಿದೆ.

ಅಪಘಾತದ ಬಳಿಕ ಸಿಂಗ್ ಅನ್ನು ಶನಿವಾರ ಕ್ಯಾಲಿಫೋರ್ನಿಯಾದಲ್ಲಿ ಯುಎಸ್ ಮಾರ್ಷಲ್‌ಗಳು ಬಂಧಿಸಿದ್ದು, ಶೀಘ್ರದಲ್ಲೇ ಗಡೀಪಾರು ಮಾಡಲು ಕ್ರಮಕೈಗೊಳ್ಳಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author