ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maoists Encounter: ಮೋಸ್ಟ್‌ ವಾಂಟೆಡ್‌ ನಕ್ಸಲರಿಬ್ಬರ ಎನ್‌ಕೌಂಟರ್‌!

ಛತ್ತೀಸ್‌ಗಢದ ಬಿಜಾಪುರದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಸಿಪಿಐ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಇವರಿಗೆ 16 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. 2025ರಲ್ಲಿ ಛತ್ತೀಸ್‌ಗಢದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಈವರೆಗೆ ಸುಮಾರು 240ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ.

ಬಿಜಾಪುರ: ಭದ್ರತಾ ಸಿಬ್ಬಂದಿ (security personnel) ನಡೆಸಿದ ಎನ್‌ಕೌಂಟರ್‌ನಲ್ಲಿ (Encounter) ಇಬ್ಬರು ನಕ್ಸಲರನ್ನು ಛತ್ತೀಸ್‌ಗಢದ ಬಿಜಾಪುರದಲ್ಲಿ (Chhattisgarh's Bijapur) ಹತ್ಯೆ ಮಾಡಲಾಗಿದೆ. ಈ ಇಬ್ಬರಿಗೆ 16 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಛತ್ತೀಸ್‌ಗಢದ ವಿವಿಧ ಭಾಗಗಳಲ್ಲಿ ಈ ವರ್ಷದ ಆರಂಭದಿಂದ ಈವರೆಗೆ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 240ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ. ಮೃತ ಇಬ್ಬರು ನಕ್ಸಲರು ಹಿದ್ಮಾ ಪೊಡಿಯಮ್, 34, ಮತ್ತು ಮುನ್ನಾ ಮಡ್ಕಮ್, 25, ನಿಷೇಧಿತ ಸಿಪಿಐ (CPI Maoists) ನ ಮಿಲಿಟರಿ ಪ್ಲಟೂನ್ ಸಂಖ್ಯೆ 1 ರ ಸದಸ್ಯರಾಗಿದ್ದರು. ಸ್ಥಳದಲ್ಲಿದ್ದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್, ಬಿಜಾಪುರದ ಅರಣ್ಯ ನೈಋತ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಗಾರ್ಡ್ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಎನ್‌ಕೌಂಟರ್ ಸ್ಥಳದಿಂದ ಭದ್ರತಾ ಪಡೆಗಳು 303 ರೈಫಲ್, 12 ಬೋರ್ ಗನ್, ಎಂಟು ಸುತ್ತುಗಳು, ಬ್ಯಾಟರಿಗಳು, ಕಾರ್ಡೆಕ್ಸ್ ವೈರ್, ಸ್ಕ್ಯಾನರ್ ಸೆಟ್, ಮಾವೋವಾದಿ ಸಾಹಿತ್ಯ ಮತ್ತು ಇತರ ಹಲವು ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜದೇರಾ- ಮಾಟಲ್ ಬೆಟ್ಟಗಳಲ್ಲಿ ಗುರುವಾರ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ (ಸಿಸಿಎಂ) ಮೋಡೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಮತ್ತು ಇತರ ಒಂಬತ್ತು ಕಾರ್ಯಕರ್ತರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಈ ವರ್ಷದ ಆರಂಭದಿಂದ ಈವರೆಗೆ ಛತ್ತೀಸ್‌ಗಢದಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 243 ನಕ್ಸಲರನ್ನು ಕೊಲ್ಲಲಾಗಿದೆ.

ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ 214 ಮಂದಿಯನ್ನು ಹತ್ಯೆ ಮಾಡಲಾಗಿದ್ದು, ಇತರ 27 ಜನರನ್ನು ರಾಯ್‌ಪುರ ವಿಭಾಗದ ಗರಿಯಾಬಂದ್ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ದುರ್ಗ್ ವಿಭಾಗದ ಮೊಹ್ಲಾ-ಮನ್‌ಪುರ-ಅಂಬಾಘರ್ ಚೌಕಿ ಜಿಲ್ಲೆಯಲ್ಲಿ ಇತರ ಇಬ್ಬರು ನಕ್ಸಲರನ್ನು ಕೊಲ್ಲಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಛತ್ತೀಸ್‌ಗಢ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು, ರಾಜ್ಯದಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಏಜೆನ್ಸಿಗಳು ಮತ್ತು ಭದ್ರತಾ ಪಡೆಗಳ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Nepal Unrest: ನೇಪಾಳದಲ್ಲಿ ಪಾಕ್‌ನ ಐಎಸ್‌ಐ ಪ್ರಾಬಲ್ಯ ಇದ್ಯಾ? ಏನಿದು ಸ್ಫೋಟಕ ಸಂಗತಿ?

ನಮ್ಮ ಸರ್ಕಾರ ಇಪ್ಪತ್ತು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಭದ್ರತಾ ಪಡೆಗಳು ಮತ್ತು ಛತ್ತೀಸ್‌ಗಢ ಪೊಲೀಸರು ನಕ್ಸಲಿಸಂ ಅನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ನಡೆಯುತ್ತಿರುವ ಕಾರ್ಯಾಚರಣೆಗಳು ನಮಗೆ ಯಶಸ್ಸನ್ನು ತಂದುಕೊಡುತ್ತಿವೆ. ಗರಿಯಾಬಂದ್‌ನಲ್ಲಿ ಇತ್ತೀಚೆಗೆ ನಡೆದ ನಕ್ಸಲೀಯರ ಎನ್‌ಕೌಂಟರ್‌ನಲ್ಲಿ ನಮ್ಮ ಪಡೆಗಳು ಉತ್ತಮ ಪ್ರದರ್ಶನ ತೋರಿವೆ. ನಾನು ಅವರ ಧೈರ್ಯವನ್ನು ಶ್ಲಾಘಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author