ಮೈಸೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ಬೆಳಕಿಗೆ ಬಂದಿದ್ದು, ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿಕೊಟ್ಟು ಹತ್ಯೆ ಮಾಡುತ್ತಿದ್ದ ಗ್ಯಾಂಗ್‌ನ ಕಾರ್ಯಾಚರಣೆ ಪತ್ತೆಯಾಗಿದೆ. ಮೈಸೂರು (Mysuru) ತಾಲೂಕಿನ ಹುನಗನಹಳ್ಳಿಯಲ್ಲಿ ಗರ್ಭದಲ್ಲೇ ಶಿಶುಗಳನ್ನು ಕೊಲ್ಲುವ ಗ್ಯಾಂಗ್ (Foeticide gang) ಪತ್ತೆಯಾಗಿದ್ದು, ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಸಂಬಂಧ ಇದೀಗ ಪೊಲೀಸರು (Crime news) ಓರ್ವ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರು ತಾಲೂಕಿನ ಹುನಗನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣ ಲಿಂಗ ಪತ್ತೆಯಾದರೆ ಭ್ರೂಣವನ್ನು ಹತ್ಯೆ ಮಾಡುತ್ತಿದ್ದರು. ಗ್ರಾಮೀಣ ಭಾಗದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸ್ಕ್ಯಾನಿಂಗ್ ಮಾಡುತ್ತಿದ್ದರು. ಸ್ಕ್ಯಾನಿಂಗ್‌ಗೆ ಬಂದಿದ್ದ ಇಬ್ಬರು ಗರ್ಭಿಣಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಇದನ್ನೂ ಓದಿ: Crime News: ಭ್ರೂಣ ಲಿಂಗ ಪತ್ತೆ ನಡೆಸುತ್ತಿದ್ದ ನಕಲಿ ವೈದ್ಯನಿಗೆ ಖೆಡ್ಡ ತೋಡಿದ ಮಹಿಳಾ ಪೊಲೀಸ್
ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ ನೇತೃತ್ವದಲ್ಲಿ ಮಂಡ್ಯ ಡಿಹೆಚ್ ಒ ಮೋಹನ್, ಮೈಸೂರು ಡಿಹೆಚ್ ಒ ಕುಮಾರಸ್ವಾಮಿ ದಾಳಿ ನಡೆದ್ದಾರೆ. ದಾಳಿ ವೇಳೆ ಲಾಕರ್‌ನಲ್ಲಿದ್ದ ಮೂರು ಲಕ್ಷಕ್ಕೂ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಭ್ರೂಣ ಹತ್ಯೆಗೆ ಬಳಸುತ್ತಿದ್ದ ಕಿಟ್ ಗಳು, ಔಷಧಿಗಳು ಪತ್ತೆಯಾಗಿವೆ. ಭ್ರೂಣ ಲಿಂಗ ಪತ್ತೆಗೆ 25 ಸಾವಿರ ರೂ. ನಿಗದಿ ಮಾಡಿದ್ದರು ಎಂದು ಗೊತ್ತಾಗಿದೆ.