ನವದೆಹಲಿ: ಕುಖ್ಯಾತ ದರೋಡೆಕೋರ ಸಲ್ಮಾನ್ ತ್ಯಾಗಿ(Gangster Salman Tyagi) ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. 2012 ರ ಗಲಭೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಸಲ್ಮಾನ್ ತ್ಯಾಗಿ ಶವ ಶನಿವಾರ ಬೆಳಿಗ್ಗೆ ದೆಹಲಿಯ ಮಂಡೋಲಿ ಜೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೈಲು ಸಂಖ್ಯೆ 15ರಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಮಂಡೋಲಿ ಜೈಲಿನಲ್ಲಿ, ಸಲ್ಮಾನ್ ತ್ಯಾಗಿ ಎಂಬ ದರೋಡೆಕೋರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ಜೈಲು ಸಂಖ್ಯೆ 15 ರಲ್ಲಿ ನಡೆದಿದ್ದು, ಆತನ ದೇಹವು ಇಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ನಡೆಯುತ್ತಿದೆ. ತನಿಖೆಯನ್ನು ಪ್ರಾರಂಭಿಸಲಾಗಿದೆ. ಘಟನೆ ಹೇಗೆ ಸಂಭವಿಸಿತು ಮತ್ತು ಅವರು ಈ ಕ್ರಮ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ವಿವರವಾದ ವರದಿಯನ್ನು ಸಲ್ಲಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಲಭೆ ಪ್ರಕರಣದಲ್ಲಿ ಕೋರ್ಟ್ ತ್ಯಾಗಿಯನ್ನು ದೋಷಿ ಎಂದು ಘೋಷಿಸಿ ತೀರ್ಪು ನೀಡಿರುವ ಕೆಲವೇ ಗಂಟೆಗಳ ನಂತರ ತ್ಯಾಗಿಯ ದೇಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ವಿರುದ್ಧ ಕೊಲೆ, ಸುಲಿಗೆ ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಹರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ತ್ಯಾಗಿ ಮತ್ತು ಅವರ ನಾಲ್ವರು ಸಹಚರರನ್ನು ದೆಹಲಿ ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿತು.
ಈ ಸುದ್ದಿಯನ್ನೂ ಓದಿ: Nagpur Gangster Drama: ಗ್ಯಾಂಗ್ ಲೀಡರ್ ಹೆಂಡ್ತಿ ಜೊತೆಗೇ ಲವ್ವಿ-ಡವ್ವಿ; ಈತನಿಗಾಗಿ 40ಜನ ಗ್ಯಾಂಗ್‌ಸ್ಟರ್‌ಗಳಿಂದ ಸರ್ಚಿಂಗ್
ತಿಸ್ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ASJ) ಶಿವಾಲಿ ಶರ್ಮಾ ಇದ್ದ ನ್ಯಾಯಪೀಠ, ತ್ಯಾಗಿ, ಸಾಹಿಲ್ ಅಲಿಯಾಸ್ ಛೋಟಾ ರೋಷನ್, ಎಸ್ ಮುಸ್ತಫಾ ತ್ಯಾಗಿ, ಮನ್ಸೂರ್ ತ್ಯಾಗಿ ಮತ್ತು ಮನೀಶ್ ಅಲಿಯಾಸ್ ದೀಪಕ್ ಅವರೊಂದಿಗೆ ಮಾರಕ ಆಯುಧಗಳೊಂದಿಗೆ ಗಲಭೆ ಮತ್ತು ಕೊಲೆ ಯತ್ನದ ಆರೋಪದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ತ್ಯಾಗಿಯನ್ನು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿಯೂ ದೋಷಿ ಎಂದು ಘೋಷಿಸಲಾಯಿತು. ಆದಾಗ್ಯೂ, ನ್ಯಾಯಾಲಯವು ಮೊಹಮ್ಮದ್ ಸದ್ದಾಂ ಅಲಿಯಾಸ್ ಗೌರಿಯನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು.
ವಿಚಾರಣೆಯ ಸಮಯದಲ್ಲಿ, ಸೆಪ್ಟೆಂಬರ್ 24 ಮತ್ತು 25, 2012 ರ ಮಧ್ಯರಾತ್ರಿ, ತ್ಯಾಗಿ ಮತ್ತು ಅವರ ಸಹಚರರಾದ ಮನ್ಸೂರ್ ತ್ಯಾಗಿ, ಮಣಿ ನಾಸಾ, ಸದ್ದಾಂ ಗೌರಿ, ದೀಪು ಅಲಿಯಾಸ್ ಬುಂಡಾ ಮತ್ತು ಸಾಹಿಲ್ ಅಲಿಯಾಸ್ ಛೋಟಾ ರೋಶನ್, ಬಂದೂಕುಗಳು, ಕತ್ತಿಗಳು ಮತ್ತು ಕಬ್ಬಿಣದ ರಾಡ್‌ಗಳೊಂದಿಗೆ ಹರಿ ನಗರದ ಶಮ್ಶನ್ ಘಾಟ್ ರಸ್ತೆಯ ಬಳಿ ಸಲೀಂ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.