ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nagpur Gangster Drama: ಗ್ಯಾಂಗ್‌ ಲೀಡರ್‌ ಹೆಂಡ್ತಿ ಜೊತೆಗೇ ಲವ್ವಿ-ಡವ್ವಿ; ಈತನಿಗಾಗಿ 40ಜನ ಗ್ಯಾಂಗ್‌ಸ್ಟರ್‌ಗಳಿಂದ ಸರ್ಚಿಂಗ್‌

ನಟೋರಿಯಸ್‌ ಗ್ಯಾಂಗ್‌ವೊಂದರ ಸದಸ್ಯನೊಬ್ಬನಿಗೆ ಗ್ಯಾಂಗ್‌ ಲೀಡರ್‌ ಹೆಂಡತಿ ಜೊತೆಗೇ ಲವ್‌ ಆಗಿದೆ. ಲವ್‌ ಆದ ಸಂಭ್ರಮದಲ್ಲಿ ಹಾಯಾಗಿ ಬೈಕ್‌ನಲ್ಲಿ ಜಾಲಿ ರೈಡ್‌ ಹೋಗಿದ್ದಾರೆ. ಆದ್ರೆ ದಾರಿ ಮಧ್ಯೆ ನಡೆದ ಘನಘೋರ ಘಟನೆ ಇವರಿಬ್ಬರ ಕಳ್ಳಾಟ ಗ್ಯಾಂಗ್‌ ಎದುರು ಬಯಲು ಮಾಡಿದೆ.

ಗ್ಯಾಂಗ್‌ ಲೀಡರ್‌ ಹೆಂಡ್ತಿ ಜೊತೆಗೇ ಲವ್ವಿ-ಡವ್ವಿ; ಕೊನೆಗೆ ಆಗಿದ್ದೇನು?

Profile Rakshita Karkera Jul 6, 2025 1:11 PM

ನಾಗ್ಪುರ: ವಿಲಕ್ಷಣ ಘಟನೆಯೊಂದು ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ನಟೋರಿಯಸ್‌ ಗ್ಯಾಂಗ್‌ವೊಂದರ ಸದಸ್ಯನೊಬ್ಬನಿಗೆ ಗ್ಯಾಂಗ್‌ ಲೀಡರ್‌ ಹೆಂಡತಿ ಜೊತೆಗೇ ಲವ್‌ ಆಗಿದೆ. ಲವ್‌ ಆದ ಸಂಭ್ರಮದಲ್ಲಿ ಹಾಯಾಗಿ ಬೈಕ್‌ನಲ್ಲಿ ಜಾಲಿ ರೈಡ್‌ ಹೋಗಿದ್ದಾರೆ. ಆದ್ರೆ ದಾರಿ ಮಧ್ಯೆ ನಡೆದ ಘನಘೋರ ಘಟನೆ ಇವರಿಬ್ಬರ ಕಳ್ಳಾಟ ಗ್ಯಾಂಗ್‌ ಎದುರು ಬಯಲು ಮಾಡಿದೆ. ಇದೀಗ 40 ಗ್ಯಾಂಗ್‌ಸ್ಟರ್‌ಗಳ ತಂಡ ಆತನ ಹತ್ಯೆಗೆ ಕತ್ತಿ ಮಸೆಯುತ್ತಾ ಹುಡುಕಾಟ ನಡೆಸುತ್ತಿದ್ದರೆ, ಇತ್ತ ಆತ ರಕ್ಷಣೆ ಕೊಡಿ ಎದುರು ಪೊಲೀಸ್‌ ಠಾಣೆ ಕದ ತಟ್ಟಿದ್ದಾನೆ.

ಏನಿದು ಘಟನೆ?

ನಾಗ್ಪುರದಲ್ಲಿ ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಇಪ್ಪಾ ಗ್ಯಾಂಗ್‌ನ ಸದಸ್ಯ ಅರ್ಷದ್‌ ಟೋಪಿ ತನ್ನ ಲೀಡರ್‌ನ ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಇವರಿಬ್ಬರು ಗುರುವಾಗ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೈಕ್‌ ಬುಲ್ಡೋಜರ್‌ಗೆ ಗುದ್ದಿ ಅಪಘಾತಗೊಂಡಿತ್ತು. ಅಪಘಾತದಲ್ಲಿ ಟೋಪಿಗೆ ಸಣ್ಣಪುಟ್ಟ ಗಾಯಗೊಳೊಂದಿಗೆ ಪಾರಾಗಿದ್ದಾನೆ. ಆದರೆ ಮಹಿಳೆಗೆ ಗಂಭೀರ ಗಾಯಗಳಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಳು. ಕೊರಾಡಿ ಥರ್ಮಲ್ ಪ್ಲಾಂಟ್‌ನ ಗಸ್ತು ವಾಹನವು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿತು, ಅಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು.

ಈ ಸುದ್ದಿಯನ್ನೂ ಓದಿ: Religious Conversion Gang: ತಲೆಗೆ 50,000ರೂ. ಇನಾಮು ಹೊಂದಿದ್ದ ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ ಅರೆಸ್ಟ್‌

ಟೋಪಿ ಆಂಬ್ಯುಲೆನ್ಸ್ ಚಾಲಕನಿಗೆ ಹಣ ನೀಡಿದ ನಂತರವೇ ಮಹಿಳೆಯನ್ನು ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (GMCH) ದಾಖಲಿಸಲಾಯಿತು. ಇದೆ ಬೆನ್ನಲ್ಲೇ ಇವರಿಬ್ಬರ ಈ ಪ್ರೇಮ ಪ್ರಕರಣ ಗ್ಯಾಂಗ್‌ನ ಎದುರು ಬಯಲಾಗಿತ್ತು. ಅಲ್ಲದೇ GMCH ನ ಸಿಸಿಟಿವಿ ದೃಶ್ಯಗಳಲ್ಲಿ ಟೋಪಿ ಗಾಯಗೊಂಡ ಮಹಿಳೆಯೊಂದಿಗೆ ಆಸ್ಪತ್ರೆಯಲ್ಲಿರುವುದನ್ನು ಕಂಡುಬಂದಿತ್ತು. ಇದರ ಬೆನ್ನಲ್ಲೇ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.

ಮಹಿಳೆಯ ಸಾವಿನ ಸುದ್ದಿ ಹರಡುತ್ತಿದ್ದಂತೆ, ಇಪ್ಪಾ ಗ್ಯಾಂಗ್ ಟೋಪಿಯನ್ನು ನಂಬಿಕೆ ದ್ರೋಹಿ ಎಂದು ಘೋಷಿಸಿ ಆತನ ಹತ್ಯೆಗೆ ಪಣತೊಟ್ಟಿದೆ. ಅಲ್ಲದೇ ಪ್ರತೀಕಾರಕ್ಕಾಗಿ 40 ಜನ ಗ್ಯಾಂಗ್‌ಸ್ಟರ್‌ಗಳ ತಂಡ ಆರೋಪಿಗಾಗಿ ಹುಡುಕಾಟ ನಡೆಸಿದೆ. ಇತ್ತ ತನ್ನ ಜೀವಕ್ಕೆ ಅಪಾಯವಿದೆ ಎಂದು ಟೋಪಿ ರಕ್ಷಣೆಗಾಗಿ ಪಾರ್ಡಿಯಲ್ಲಿರುವ ಉಪ ಪೊಲೀಸ್ ಆಯುಕ್ತರ (ಡಿಸಿಪಿ) ಕಚೇರಿ ಮೆಟ್ಟಿಲೇರಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಡಿಸಿಪಿ ಆತನನ್ನು ಕೊರಾಡಿ ಪೊಲೀಸ್ ಠಾಣೆಗೆ ಕಳುಹಿಸಿದರು.