ಗುರುಗ್ರಾಮ: ಹರಿಯಾಣದ (Haryana) ಗುರುಗ್ರಾಮದಲ್ಲಿ (Gurugram) ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಒಬ್ಬಾತ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ ಆಕೆಯನ್ನು ಕೊಂದು, ನಂತರ ತಾನೂ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಡೆದಿದೆ. ಈ ದಾರುಣ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಆರೋಪಿ ಅಜಯ್ ಕುಮಾರ್ (30) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವನಾದರೆ, ಆತನ ಪತ್ನಿ ಸ್ವೀಟಿ ಶರ್ಮಾ (28) ಪಶ್ಚಿಮ ಬಂಗಾಳದ ಅಸನ್‌ಸೋಲ್‌ನವರು. ಮೂರು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿ ಗುರುಗ್ರಾಮದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಜಯ್ ಕುಮಾರ್ ತನ್ನ ಸ್ನೇಹಿತನಿಗೆ ವಿಡಿಯೋ ಸಂದೇಶ ಕಳುಹಿಸಿ, “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದಿದ್ದ.
ಸ್ನೇಹಿತನಿಂದ ಮಾಹಿತಿ ಪಡೆದ ಪೊಲೀಸರು ಫ್ಲ್ಯಾಟ್‌ಗೆ ತೆರಳಿದಾಗ, ಸ್ವೀಟಿ ಶರ್ಮಾ ಅವರ ದೇಹವನ್ನು ನೆಲದ ಮೇಲೆ ಬಿದ್ದಿತ್ತು. ಅಜಯ್ ಕುಮಾರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದ. ಪೊಲೀಸರ ಪ್ರಕಾರ, ಅಜಯ್ ಕುಮಾರ್ ತನ್ನ ಪತ್ನಿಯನ್ನು ಕೊಂದು ನಂತರ ಆತ್ಮಹತ್ಯೆಗೆ ಶರಣಾದನೆಂದು ತೋರುತ್ತದೆ. ಆದರೆ, ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ವೀಟಿ ಶರ್ಮಾ ಅವರ ಕುಟುಂಬವು ಅಜಯ್ ಕುಮಾರ್ ವಿರುದ್ಧ ಕೊಲೆ ಆರೋಪದ ದೂರು ದಾಖಲಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ದಂಪತಿಗಳ ಜಗಳದ ಹಿನ್ನೆಲೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. “ಈ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಯುತ್ತಿದೆ. ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Chikkaballapur News: ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಧನ್ಯವಾದ 5.45 ಲಕ್ಷ ನೌಕರರಿಗೆ ಅನುಕೂಲ: ಎಂ ಶಂಕರಪ್ಪ
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ದಂಪತಿಗಳ ನಡುವಿನ ಜಗಳ ಇಂತಹ ದುರಂತಕ್ಕೆ ಕಾರಣವಾಗಿರುವುದು ದುಃಖಕರ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ಮಾನಸಿಕ ಆರೋಗ್ಯ ಮತ್ತು ದಾಂಪತ್ಯ ಸಂಬಂಧಗಳ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.
ಇನ್ನು ಕೆಳ ದಿನಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂತದೇ ಘಟನೆ ನಡೆದಿತ್ತು. ಇಬ್ಬರು ಮಕ್ಕಳು, ಪತಿಯನ್ನು ಕೊಂದು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಗೊಣಕನಹಳ್ಳಿ ಗ್ರಾಮದಲ್ಲಿ ಶಿವು (32), ಮಕ್ಕಳಾದ ಚಂದ್ರಕಲಾ (11), ಉದಯ್ ಸೂರ್ಯ (7) ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು, ಪತಿಯನ್ನು ಕೊಂದ ಬಳಿಕ ಪತ್ನಿಯೂ ಆತ್ಮಹತ್ಯೆಗೆ ಯತ್ನಿಸಿದ್ದಳು. ಅದೃಷ್ಟವಶಾತ್ ಮಂಜುಳಾ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು.