ಮಿಸ್ ಡಾರ್ಕ್ ಕ್ವೀನ್ ಪ್ರಶಸ್ತಿ ಗೆದ್ದಿದ್ದ ಮಾಡೆಲ್ ಆತ್ಮಹತ್ಯೆಗೆ ಶರಣು
ಪುದುಚೇರಿಯಲ್ಲಿ ಮಾಡೆಲ್ ಸನ್ ರೆಚಲ್ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಪ್ರಶಸ್ತಿಯನ್ನು ಇವರು ಗೆದ್ದಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ರಾಚೆಲ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.