ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ರ‍್ಯಾಗಿಂಗ್ ಭೂತಕ್ಕೆ ವಿದ್ಯಾರ್ಥಿನಿ ಬಲಿ; ಕಾಲೇಜ್‌ ವಿರುದ್ಧ ಪೋಷಕರ ಆಕ್ರೋಶ

ಉತ್ತರಾಖಂಡದ ಭೀಮತಾಲ್‌ನ ಗ್ರಾಫಿಕ್ ಎರಾ ಹಿಲ್ ಯೂನಿವರ್ಸಿಟಿಯಲ್ಲಿ ಬಿಸಿಎ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದ ಲಕ್ನೋ ಮೂಲದ ವಾಸವಿ ತೋಮರ್ ಬುಧವಾರ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಿಶ್ವವಿದ್ಯಾಲಯವು ಇದನ್ನು ಆತ್ಮಹತ್ಯೆ ಎಂದು ವರದಿ ಮಾಡಿದರೆ, ಕುಟುಂಬವು ರ‍್ಯಾಗಿಂಗ್ ಘಟನೆಯ ನಂತರ ಹತ್ಯೆಯಾಗಿದೆ ಎಂದು ಹೇಳಿದೆ.

ವಾಸವಿ ತೋಮರ್

ಲಕ್ನೋ: ಉತ್ತರಾಖಂಡದ (Uttarakhand) ಭೀಮತಾಲ್‌ನ ಗ್ರಾಫಿಕ್ ಎರಾ ಹಿಲ್ ಯೂನಿವರ್ಸಿಟಿಯಲ್ಲಿ (Graphic Era Hill University) ಬಿಸಿಎ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದ ಲಕ್ನೋ (Lucknow) ಮೂಲದ ವಾಸವಿ ತೋಮರ್ ಬುಧವಾರ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ (Self Harming) ಪತ್ತೆಯಾಗಿದ್ದಾಳೆ. ವಿಶ್ವವಿದ್ಯಾಲಯವು ಇದನ್ನು ಆತ್ಮಹತ್ಯೆ ಎಂದು ವರದಿ ಮಾಡಿದರೆ, ಕುಟುಂಬವು ರ‍್ಯಾಗಿಂಗ್ (Ragging) ಘಟನೆಯ ನಂತರ ಹತ್ಯೆಯಾಗಿದೆ ಎಂದು ಹೇಳಿದೆ. ವಾಸವಿಯು ಕಿರಿಯ ವಿದ್ಯಾರ್ಥಿಯೊಬ್ಬರನ್ನು ಕೀಟಲೆ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಕೊಲೆಯಾಗಿದೆ ಎಂದು ಕುಟುಂಬ ಆರೋಪಿಸಿದೆ.

ರ‍್ಯಾಗಿಂಗ್ ಬೆದರಿಕೆ ಬಗ್ಗೆ ತಾಯಿಗೆ ತಿಳಿಸಿದ್ದ ವಾಸವಿ

ವಾಸವಿಯು ತನ್ನ ಸಾವಿಗೆ ಒಂದು ರಾತ್ರಿ ಮೊದಲು ತಾಯಿ ಬಿನು ಸಿಂಗ್‌ ಜತೆ ಮಾತನಾಡಿದ್ದಳು. ಹಿರಿಯ ವಿದ್ಯಾರ್ಥಿಗಳು ತನ್ನ ರೂಮ್ ಮೇಟ್ ನರ್ಸಿಂಗ್‌ನ ಮೊದಲ ವರ್ಷದ ವಿದ್ಯಾರ್ಥಿಯನ್ನು ರ‍್ಯಾಗಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಳು. ವಾಸವಿಯು ಈ ಕಿರಿಯ ವಿದ್ಯಾರ್ಥಿಯ ಪರವಾಗಿ ಮಧ್ಯಸ್ಥಿಕೆ ವಹಿಸಿದ್ದಳು, ಆದರ ಪರಿಣಾಮವಾಗಿ ಬೆದರಿಕೆಗಳನ್ನು ಎದುರಿಸಿದ್ದಳು. ಆಕೆ ತನ್ನ ತಾಯಿಗೆ ಒಬ್ಬ ಹಿರಿಯ ವಿದ್ಯಾರ್ಥಿಯೊಂದಿಗೆ ವಾದಿಸುತ್ತಿರುವ ವಿಡಿಯೋವನ್ನೂ ಕಳುಹಿಸಿದ್ದಳು.

ಮರಣೋತ್ತರ ಪರೀಕ್ಷೆಯಿಂದ ಕತ್ತು ಹಿಸುಕಿದ ಶಂಕೆ

ಬುಧವಾರ ಸಂಜೆ ವಿಶ್ವವಿದ್ಯಾಲಯವು ವಾಸವಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಕ್ಕೆ ತಿಳಿಸಿತು. ಆಕೆಯು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ ಎಂದು ಹೇಳಲಾಗಿದೆ. ಆದರೆ, ಆಕೆಯ ಸಹೋದರ ಅಯುಷ್ ಸಿಂಗ್, ಮರಣೋತ್ತರ ಪರೀಕ್ಷೆಯ ವರದಿಯು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬೆದರಿಕೆ

ಕುಟುಂಬವು, ಇತರ ಹಾಸ್ಟೆಲ್ ನಿವಾಸಿಗಳಿಗೆ ಈ ಘಟನೆಯ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದೆ. ವಿಶ್ವವಿದ್ಯಾಲಯವು ವಾಸವಿಯು ಬಿಟ್ಟುಹೋದ ಆತ್ಮಹತ್ಯೆಯ ಟಿಪ್ಪಣಿಯನ್ನು ಇದುವರೆಗೆ ಹಂಚಿಕೊಂಡಿಲ್ಲ.

ಈ ಸುದ್ದಿಯನ್ನು ಓದಿ: Viral News: ಛೇ ಎಂತ ದುರ್ವಿಧಿ..!; 180 ಕಿಮೀ, 5 ಆಸ್ಪತ್ರೆಗಳಿಗೆ ಅಲೆದರೂ ಬದುಕುಳಿಯಲಿಲ್ಲ ಸೈನಿಕನ ಮಗು...!

ನಿಷ್ಪಕ್ಷಪಾತ ತನಿಖೆಗೆ ಕುಟುಂಬದ ಒತ್ತಾಯ

ವಾಸವಿಯ ತಾಯಿ, ತನ್ನ ಮಗಳು ಎಂಸಿಎ ಪೂರ್ಣಗೊಳಿಸಿ ಕೃತಕ ಬುದ್ಧಿಮತ್ತೆ (AI) ಅಧ್ಯಯನ ಮಾಡುವ ಆಸೆ ಹೊಂದಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಎಂದು ಒತ್ತಿಹೇಳಿದ್ದಾರೆ. ರ‍್ಯಾಗಿಂಗ್ ಘಟನೆಯ ಬಗ್ಗೆ ಹಾಸ್ಟೆಲ್ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಕ್ಷಾಬಂಧನಕ್ಕಾಗಿ ಆಗಸ್ಟ್ 7 ರಂದು ಮನೆಗೆ ಬರಲು ರೈಲು ಟಿಕೆಟ್ ಕಾಯ್ದಿರಿಸಿದ್ದ ವಾಸವಿಯ ದೇಹವನ್ನು ಈಗ ಕುಟುಂಬವು ಸ್ವೀಕರಿಸುತ್ತಿದೆ. ನಿಷ್ಪಕ್ಷಪಾತ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕುಟುಂಬ ಒತ್ತಾಯಿಸಿದೆ.