ತಿರುವನಂತಪುರಂ: ಮಲಯಾಳಂ ನಟಿ (Malayalam Actress) ರಿನಿ ಜಾರ್ಜ್ (Rini George), ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕನೊಬ್ಬ (Youth Leader) ಕಳೆದ ಮೂರು ವರ್ಷಗಳಿಂದ ತನಗೆ ಅನುಚಿತ ಸಂದೇಶಗಳನ್ನು (Objectionable Messages) ಕಳುಹಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆತ ಫೈವ್ ಸ್ಟಾರ್ ಹೋಟೆಲ್‌ಗೆ ಆಹ್ವಾನಿಸಿದ್ದಾನೆ ಎಂದಿದ್ದಾರೆ.ಈ ಬಗ್ಗೆ ಪಕ್ಷದ ನಾಯಕರಿಗೆ ಹಲವು ಬಾರಿ ದೂರುಗಳನ್ನು ನೀಡಿದರೂ ವರಿಷ್ಠರು ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರಿನಿ ಆರೋಪಿಯ ಹೆಸರು ಅಥವಾ ಪಕ್ಷವನ್ನು ಬಹಿರಂಗಪಡಿಸಿಲ್ಲ. ಆದರೆ, ಕೇರಳದ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ವಿರುದ್ಧ ಆರೋಪ ಮಾಡಿದ್ದು, ಪಾಲಕ್ಕಾಡ್‌ನಲ್ಲಿ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ರಾಹುಲ್ ಮಂಕೂಟ್ಟಿಲ್ ಅಥವಾ ಕಾಂಗ್ರೆಸ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ, ಆದರೆ ಪಕ್ಷದ ನಾಯಕರು ವರದಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆನ್‌ಲೈನ್ ಸಂದರ್ಶನವೊಂದರಲ್ಲಿ ರಿನಿ ಜಾರ್ಜ್, “ಸಾಮಾಜಿಕ ಜಾಲತಾಣದ ಮೂಲಕ ಈ ರಾಜಕಾರಣಿಯೊಂದಿಗೆ ಸಂಪರ್ಕಕ್ಕೆ ಬಂದೆ. ಮೂರು ವರ್ಷಗಳ ಹಿಂದೆ ಆತನಿಂದ ಅನುಚಿತ ಸಂದೇಶಗಳು ಬಂದವು” ಎಂದು ಹೇಳಿದ್ದಾರೆ. ಆತ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸುವ ಆಫರ್ ನೀಡಿದ್ದಾನೆ ಎಂದೂ ಆಕೆ ಆರೋಪಿಸಿದ್ದಾರೆ. ತನ್ನ ದೂರುಗಳನ್ನು ಪಕ್ಷದ ವರಿಷ್ಠರು ನಿರ್ಲಕ್ಷಿಸಿದ್ದಾರೆ ಎಂದು ದೂರಿರುವ ನಟಿ, ಆ ಯುವ ನಾಯಕನಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ನಾನು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದಾಗ, ಆತ ನೀನು ಯಾರಿಗಾದರೂ ಹೇಳು ಎಂದು ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದ” ಎಂದು ರಿನಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Post: ಆಕಸ್ಮಿಕವಾಗಿ ಗೂಗಲ್ ಮ್ಯಾಪ್‌ನಲ್ಲಿ ಸೆರೆಯಾಯ್ತು ದಂಪತಿಯ ದಶಕದ ಪ್ರಯಾಣ; ಈಗ ಇಬ್ಬರೂ ಇಲ್ಲ, ಮನೆಯೂ ಕಣ್ಮರೆ!
ರಿನಿ ಜಾರ್ಜ್, ಸುರಕ್ಷತಾ ಕಾರಣಗಳಿಂದ ಮತ್ತು ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸ ಕೊರತೆಯಿಂದ ದೂರು ದಾಖಲಿಸುವ ಉದ್ದೇಶವಿಲ್ಲ ಎಂದಿದ್ದಾರೆ. “ನಾನು ಯಾವುದೇ ದೌರ್ಜನ್ಯಕ್ಕೆ ಒಳಗಾಗಿಲ್ಲ, ಕೇವಲ ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಆದರೆ, ಬೇರೆ ಮಹಿಳೆಯರು ಈ ನಾಯಕನಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಸ್ನೇಹಿತರಿಂದ ತಿಳಿಯಿತು ಅವರಿಗಾಗಿ ಮಾತನಾಡುತ್ತಿದ್ದೇನೆ,” ಎಂದು ರಿನಿ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ಮತ್ತು ರಾಜಕೀಯ ಆರೋಪ
ಸಂದರ್ಶನ ವೈರಲ್ ಆದ ನಂತರ, ಬಿಜೆಪಿಯು ರಾಹುಲ್ ಮಂಕೂಟ್ಟಿಲ್ ಅವರ ರಾಜೀನಾಮೆಗೆ ಒತ್ತಾಯಿಸಿ, ಪಾಲಕ್ಕಾಡ್‌ನಲ್ಲಿ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಈ ವೇಳೆ ಪೊಲೀಸರೊಂದಿಗೆ ಘರ್ಷಣೆಯೂ ಉಂಟಾಗಿದೆ.