ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ದಿನ ಬೆಳಗಾದ್ರೆ ಪತಿಯ ಕಿರುಕುಳ- ಬೇಸತ್ತ ಪತ್ನಿ ವೆಬ್‌ ಸೀರೀಸ್‌ ನೋಡಿ ಮಾಡಿದ್ಳು ಭಯಾನಕ ಪ್ಲ್ಯಾನ್‌!

ರಾಜಸ್ಥಾನದ ಜೈಪುರದ ಸಂತೋಷ್ ದೇವಿ ಎಂಬಾಕೆ ಗಂಡನ ದೈಹಿಕ ಕಿರುಕುಳ ಮತ್ತು ನಿರಂತರ ಅನುಮಾನಕ್ಕೆ ಬೇಸೆತ್ತು ಇಬ್ಬರು ಸ್ನೇಹಿತರ ಸಹಾಯದಿಂದ ಪತಿಯನ್ನು ಕೊಲೆಗೆ ಸಂಚು ರೂಪಿಸಿದ್ದಳು. ಇದಕ್ಕಾಗಿ ಸುಮಾರು ಒಂದು ತಿಂಗಳಿಂದ ನಿರಂತರ ಅಪರಾಧ ವೆಬ್ ಸೀರೀಸ್‌ ಅನ್ನು ವೀಕ್ಷಿಸುತ್ತಿದ್ದಳು ಎನ್ನಲಾಗಿದೆ.

ಜೈಪುರ: ಪತಿಯನ್ನು ಹತ್ಯೆ (Murder case) ಮಾಡುವ ಮೊದಲು ಮಹಿಳೆಯೊಬ್ಬರು ಅಪರಾಧದ ವೆಬ್ ಸೀರಿಸ್‌ ಅನ್ನು ವೀಕ್ಷಿಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ದೌರ್ಜನ್ಯದಿಂದ (Violence) ಬೇಸೆತ್ತ ಮಹಿಳೆಯೊಬ್ಬಳು ಗಂಡನ ಕೊಲೆಗೆ ಸಂಚು (plan to kill husband) ರೂಪಿಸಿದ್ದಾಳೆ. ಇದಕ್ಕೂ ಮೊದಲು ಸಾಕಷ್ಟು ಅಪರಾಧದ ವೆಬ್ ಸರಣಿಯನ್ನು ವೀಕ್ಷಿಸಿದ್ದಾಳೆ. ರಾಜಸ್ಥಾನದ (Rajasthan) ಸಂತೋಷ್ ದೇವಿ ಎಂಬಾಕೆ ಗಂಡನ ಹತ್ಯೆ ಮಾಡಲು ಯೋಜನೆ ರೂಪಿಸುವುದಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದು, ಸ್ನೇಹಿತರ ಸಹಾಯದಿಂದ ಇದನ್ನು ಕಾರ್ಯಗತಗೊಳಿಸಿರುವುದು ಬಹಿರಂಗವಾಗಿದೆ.

ರಾಜಸ್ಥಾನದ ಜೈಪುರದ ಸಂತೋಷ್ ದೇವಿ ಗಂಡನ ದೈಹಿಕ ಕಿರುಕುಳ ಮತ್ತು ನಿರಂತರ ಅನುಮಾನಕ್ಕೆ ಬೇಸೆತ್ತು ಇಬ್ಬರು ಸ್ನೇಹಿತರ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ್ದಾಳೆ. ಇದಕ್ಕಾಗಿ ಯೋಜನೆ ರೂಪಿಸಲು ಸಂತೋಷ್ ದೇವಿ ಅಪರಾಧ ವೆಬ್ ಸೀರೀಸ್‌ ಅನ್ನು ನಿರಂತರ ವೀಕ್ಷಿಸಿ ಇ-ರಿಕ್ಷಾ ಚಾಲಕನಾಗಿರುವ ಪತಿ ಮನೋಜ್‌ನ ಹತ್ಯೆಯನ್ನು ಮಾಡಿದ್ದಾಳೆ ಎನ್ನಲಾಗಿದೆ.

ಆರೋಪಿಗಳಲ್ಲಿ ಸಂತೋಷ್ ಮತ್ತು ರಿಷಿ ಶ್ರೀವಾಸ್ತವ ಸೇರಿದ್ದಾರೆ. ಬೆಡ್‌ಶೀಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ಭೇಟಿಯಾಗಿದ್ದ ಸಂತೋಷ್ ದೇವಿ ಅವರ ಸಹಾಯ ಪಡೆದು ಮನೋಜ್ ಅನ್ನು ಕೊಲ್ಲಲು ಸಂಚು ರೂಪಿಸಿದರು. ರಿಷಿಯ ಸ್ನೇಹಿತ ಮೋಹಿತ್ ಶರ್ಮಾ ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದನು. ಈ ಮೂವರು ವ್ಯಕ್ತಿಗಳು ಸಂತೋಷ್ ದೇವಿ ಸಿಕ್ಕಿಬೀಳದಂತೆ ಕೊಲ್ಲುವ ಮಾರ್ಗಗಳಿಗಾಗಿ ಗೂಗಲ್ ನಲ್ಲಿ ಹುಡುಕಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಇವರು ಹೊಸ ಸಿಮ್ ಕಾರ್ಡ್‌ಗಳನ್ನು ಖರೀದಿಸಿದ್ದು, ಬಳಿಕ ಮೋಹಿತ್ ಇಸ್ಕಾನ್ ದೇವಸ್ಥಾನಕ್ಕೆ ಪ್ರಯಾಣಿಸಲು ಮನೋಜ್‌ನ ಇ-ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಾನೆ. ಸುಮಾರು 10 ನಿಮಿಷಗಳ ಪ್ರಯಾಣದ ಬಳಿಕ ರಿಷಿ ಆತನೊಂದಿಗೆ ಸೇರಿಕೊಂಡಿದ್ದಾನೆ. ಇ-ರಿಕ್ಷಾವನ್ನು ನಿರ್ಜನ ತೋಟದ ಮನೆಗೆ ಕರೆದೊಯ್ದು ಅಲ್ಲಿ ಮನೋಜ್‌ನ ಕತ್ತು ಸೀಳಿದರು. ಕೊಲೆಯ ಬಳಿಕ ಇಬ್ಬರು ತಮ್ಮ ಬಟ್ಟೆಗಳನ್ನು ಬದಲಾಯಿಸಿಕೊಂಡು ಸಿಮ್ ಕಾರ್ಡ್‌ಗಳನ್ನು ಆಫ್ ಮಾಡಿದರು.

ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲದಿದ್ದರೂ ಶಂಕಿತರನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ವಿಚಾರಣೆಯ ಸಮಯದಲ್ಲಿ ಮೂವರೂ ತಪ್ಪೊಪ್ಪಿಕೊಂಡಿದ್ದಾರೆ. ಮನೋಜ್ ನ ಕೊಲೆಗಾಗಿ ಸುಮಾರು ಒಂದು ತಿಂಗಳ ಹಿಂದೆಯೇ ಇವರು ಯೋಜನೆ ಪ್ರಾರಂಭಿಸಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 45 Movie: ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ʼ45ʼ ಸಿನಿಮಾ ಬಿಡುಗಡೆ ಯಾವಾಗ?

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಪತಿ ಹಂಸ್ರಾಮ್ ಅವರನ್ನು ಕೊಂದ ಆರೋಪದ ಮೇರೆಗೆ ಲಕ್ಷ್ಮಿ ದೇವಿ ಮತ್ತು ಆಕೆಯ ಪ್ರಿಯಕರ ಜಿತೇಂದ್ರ ಶರ್ಮಾ ನನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಮನೋಜ್ ಹತ್ಯೆ ನಡೆದಿದೆ. ಲಕ್ಷ್ಮಿ ದೇವಿ ತನ್ನ ಗಂಡನನ್ನು ಕೊಲೆ ಮಾಡಿಸಿ ಬಾಡಿಗೆ ಮನೆಯ ಛಾವಣಿಯ ಮೇಲಿರುವ ನೀಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಆತನ ಶವವನ್ನು ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author