ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಮದ್ವೆ ನಂತರವೂ ಮಗಳ ಜೊತೆ ಲವ್ವಿ-ಡವ್ವಿ; ಯುವಕನನ್ನು ಕೊಂದು ರೈಲ್ವೇ ಹಳಿಗೆಸೆದ್ರು!

ಮನೆ ಮಗಳ ಪ್ರಿಯಕರನನ್ನು ಕೊಂದು (Murder case) ರೈಲು ಹಳಿ ಎಸೆದು ಹೋಗಿರುವ ಘಟನೆ ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮೇದಿನಿನಗರದ ಜೋಗಿಯಾಹಿಯಲ್ಲಿ ನಡೆದಿದೆ. ಯುವತಿಯು ಮದುವೆಯ ಬಳಿಕವೂ ಪ್ರಿಯಕರನೊಂದಿಗೆ ಸಂಬಂಧ ಹೊಂದಿರುವುದು ಕೊಲೆಗೆ ಕಾರಣ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮೇದಿನಿನಗರ: ವ್ಯಕ್ತಿಯೊಬ್ಬನನ್ನು ಆತನ ಮಾಜಿ ಗೆಳತಿಯ ಕುಟುಂಬದವರು ಕೊಂದು (Murder case) ಶವವನ್ನು ರೈಲು ಹಳಿ (Railway Tracks) ಮೇಲೆ ಎಸೆದು ಹೋಗಿರುವ ಘಟನೆ ಜಾರ್ಖಂಡ್‌ನ (Jharkhand News) ಪಲಾಮು (Palamu) ಜಿಲ್ಲೆಯಲ್ಲಿ ನಡೆದಿದೆ. ಅವರಿಬ್ಬರ ಸಂಬಂಧವನ್ನು ಬಹಳ ಹಿಂದೆಯೇ ವಿರೋಧಿಸಿದ್ದ ಕುಟುಂಬವು ಆತನ ಗೆಳತಿಗೆ ಬೇರೆ ಮದುವೆ ಮಾಡಿಸಿದೆ. ಮೇದಿನಿನಗರದ ಜೋಗಿಯಾಹಿಯಲ್ಲಿ ಹಳಿಗಳ ಮೇಲೆ ಶನಿವಾರ ಮುಂಜಾನೆ ಅಮರೇಂದ್ರ ಸಿಂಗ್ ಅಲಿಯಾಸ್ ಬಬ್ಲು (22) ಎಂಬಾತನ ಶವ ಪತ್ತೆಯಾಗಿತ್ತು. ಇದರ ತನಿಖೆ ವೇಳೆ ಈ ವಿಚಾರಗಳು ಬಹಿರಂಗವಾಗಿದೆ.

ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮೇದಿನಿನಗರದ ಜೋಗಿಯಾಹಿಯಲ್ಲಿ ಹಳಿಗಳ ಮೇಲೆ ಶನಿವಾರ ಮುಂಜಾನೆ ಅಮರೇಂದ್ರ ಸಿಂಗ್ ಅಲಿಯಾಸ್ ಬಬ್ಲು ಶವ ಪತ್ತೆಯಾಗಿದ್ದು, ಆತನನ್ನು ಮಾಜಿ ಗೆಳತಿಯ ಕುಟುಂಬ ಕತ್ತು ಹಿಸುಕಿ ಕೊಂದಿದೆ. ಬಳಿಕ ಅವರು ಶವವನ್ನು ರೈಲ್ವೆ ಹಳಿಗಳ ಮೇಲೆ ಬಿಟ್ಟು ಹೋಗಿದ್ದರು. ರೈಲು ಹರಿದು ಆತನ ದೇಹ ಎರಡು ಭಾಗಗಳಾಗಿತ್ತು. ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡು ಬಂದಿತ್ತು.

ಆರಂಭದಲ್ಲಿ ಇದು ಅಪಘಾತದ ಪ್ರಕರಣ ಎಂದೇ ನಂಬಲಾಗಿತ್ತು. ಆದರೆ ಮೃತನ ಕುಟುಂಬ ಸಲ್ಲಿಸಿದ ದೂರಿನ ಮೇರೆಗೆ ತನಿಖೆ ಆರಂಭಿಸಿದಾಗ ಇದು ಕೊಲೆ ಎಂಬುದು ಬಹಿರಂಗವಾಗಿದೆ. ಯುವತಿಯು ಐದು ವರ್ಷಗಳ ಕಾಲ ಅಮರೇಂದ್ರ ಸಿಂಗ್ ಜೊತೆ ಸಂಬಂಧ ಹೊಂದಿದ್ದಳು. 2022ರಲ್ಲಿ ಅವಳು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ಅನಂತರವೂ ಇವರಿಬ್ಬರ ಸಂಬಂಧ ಮುಂದುವರಿದಿದೆ. ಆಗಸ್ಟ್ 15ರಂದು ರಾತ್ರಿ ಆ ವ್ಯಕ್ತಿ ತನ್ನ ಗೆಳತಿಯನ್ನು ಭೇಟಿಯಾಗಲು ಹೋದಾಗ ಆಕೆಯ ಮನೆಯವರು ಅವನನ್ನು ಹಿಡಿದು ತಮ್ಮ ಮನೆಗೆ ಎಳೆದುಕೊಂಡು ಹೋಗಿ ಅಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ ಅವರು ಶವವನ್ನು ರೈಲ್ವೆ ಹಳಿಗಳ ಮೇಲೆ ಎಸೆದರು ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Coolie v/s War 2: ಕೂಲಿ v/s ವಾರ್ 2- ಯಾವುದು ಹೆಚ್ಚು ಕಲೆಕ್ಷನ್ ಮಾಡಿದೆ? ಇಲ್ಲಿದೆ ಡಿಟೇಲ್ಸ್‌

ಅಪರಾಧಕ್ಕೆ ಬಳಸಲಾದ ಹಗ್ಗ, ಮೊಬೈಲ್ ಫೋನ್ ಮತ್ತು ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author