ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಗರ್ಭಿಣಿ ಪತ್ನಿಯನ್ನು ಕೊಂದು ಶವ ಕತ್ತರಿಸಿ ನದಿಗೆ ಎಸೆದ ಕಿಡಿಗೇಡಿ! ಈತ ಸಿಕ್ಕಿಬಿದ್ದಿದ್ದೇ ರೋಚಕ

ಪ್ರೀತಿಸಿ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದು ಶವವನ್ನು ವಿವಿಧ ಭಾಗಗಳಾಗಿ ಕತ್ತರಿಸಿ ಕೆಲವು ತುಂಡುಗಳನ್ನು ನದಿಗೆ ಎಸೆದಿದ್ದಾನೆ. ಬಳಿಕ ಸಹೋದರಿಗೆ ಕರೆ ಮಾಡಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿ ಸಿಕ್ಕಿ ಬಿದ್ದಿದ್ದಾನೆ. ಈ ಕುರಿತು ಮಲ್ಕಜ್‌ಗಿರಿ ವಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈದರಾಬಾದ್: ವ್ಯಕ್ತಿಯೊಬ್ಬ ಗರ್ಭಿಣಿ (Pregnant) ಪತ್ನಿಯನ್ನು ಕೊಂದು (Pregnant Wife murder case) ಶವ ವಿಲೇವಾರಿ ಮಾಡುವಾಗ ಸಿಕ್ಕಿಬಿದ್ದ ಘಟನೆ ಹೈದರಾಬಾದ್‌ನಲ್ಲಿ (Hyderabad crime) ನಡೆದಿದೆ. ರೈಡ್ ಹೇಲಿಂಗ್ ಕಂಪೆನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹೇಂದರ್ ಎಂಬಾತ ಶನಿವಾರ ಸಂಜೆ ತನ್ನ ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದು ಶವವನ್ನು ಎಸೆಯಲು ಹೋದಾಗ ಸಿಕ್ಕಿಬಿದ್ದಿದ್ದಾನೆ. ಅವನು ಆಕೆಯ ಶವವನ್ನು ಕತ್ತರಿಸಿ ಅವುಗಳಲ್ಲಿ ಕೆಲವು ಭಾಗಗಳನ್ನು ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್‌ನ ಮೆಡಿಪಲ್ಲಿಯ ಉಪನಗರವಾದ ಬಾಲಾಜಿ ಹಿಲ್ಸ್‌ನ ಮಹೇಂದರ್ ಎಂಬಾತ ತನ್ನ ಐದು ತಿಂಗಳ ಗರ್ಭಿಣಿ ಪತ್ನಿ 21 ವರ್ಷದ ಸ್ವಾತಿ ಎಂಬಾಕೆಯನ್ನು ಕೊಂದಿದ್ದಾನೆ. ಆಕೆಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ನದಿಗೆ ಎಸೆದಿದ್ದು, ಆಕೆಯ ದೇಹದ ಭಾಗ ಆತನ ಮನೆಯಲ್ಲಿ ಇಟ್ಟುಕೊಂಡಿದ್ದ. ಪತ್ನಿಯ ಕತ್ತರಿಸಿದ ದೇಹದ ಭಾಗಗಳಲ್ಲಿ ತಲೆ, ತೋಳು ಮತ್ತು ಕಾಲುಗಳನ್ನು ಆತ ಮುಸಿ ನದಿಗೆ ಎಸೆದಿದ್ದ. ವಿಕಾರಾಬಾದ್ ಜಿಲ್ಲೆಯ ಕಾಮರೆಡ್ಡಿಗುಡದವರಾದ ಸ್ವಾತಿ ಮತ್ತು ಮಹೇಂದರ್ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಅವರು ಬಾಲಾಜಿ ಹಿಲ್ಸ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದರು.

ಈ ಕುರಿತು ಮಾಹಿತಿ ನೀಡಿದ ಮಲ್ಕಜ್‌ಗಿರಿ ವಲಯ ಡಿಸಿಪಿ ಪಿ.ವಿ. ಪದ್ಮಜ, ಶನಿವಾರ ಸಂಜೆ 4.30 ರ ಸುಮಾರಿಗೆ ಮಹೇಂದರ್ ಸ್ವಾತಿಯನ್ನು ಕೊಂದು ಆಕೆಯ ಶವವನ್ನು ವಿಲೇವಾರಿ ಮಾಡಿದ್ದಾನೆ. ಬಳಿಕ ತನ್ನ ಸಹೋದರಿಗೆ ಕರೆ ಮಾಡಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಹೇಳಿದನು. ಸಹೋದರಿ ಅನುಮಾನಗೊಂಡು ಸಂಬಂಧಿಕರೊಬ್ಬರಿಗೆ ಮಾಹಿತಿ ನೀಡಿದಾಗ ಅವರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ, ಅವನು ಮತ್ತೆ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಹೇಳಲು ಪ್ರಯತ್ನಿಸಿದನು. ಆದರೆ ವಿಚಾರಣೆಯ ಸಮಯದಲ್ಲಿ ಆತ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ಮಹೇಂದರ್‌ನನ್ನು ಬಂಧಿಸಲಾಗಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಸ್ವಾತಿಯ ತಲೆ, ಕೈ ಮತ್ತು ಕಾಲುಗಳನ್ನು ಆತ ಮುಸಿ ನದಿಯಲ್ಲಿ ವಿಲೇವಾರಿ ಮಾಡಿದ್ದಾನೆ. ದೇಹದ ಎಲ್ಲ ಭಾಗಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಮಹಿಳೆಯ ದೇಹ ಆತನ ಮನೆಯಲ್ಲೇ ಅಡಗಿಸಿ ಇಡಲಾಗಿತ್ತು.

ಈ ಸುದ್ದಿಯನ್ನೂ ಓದಿ; Amit Shah: ಜೈಲಿಗೆ ಹೋದರೆ ಪ್ರಧಾನಿ ಹುದ್ದೆ ಇಲ್ಲ; ಮಸೂದೆ ಕುರಿತು ಮೋದಿ ನಿರ್ಧಾರವೇನು? ಸತ್ಯ ಬಿಚ್ಚಿಟ್ಟ ಅಮಿತ್‌ ಶಾ!

ವಿಧಿವಿಜ್ಞಾನ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ದೇಹದ ಒಂದು ಭಾಗ ಮಾತ್ರ ಪತ್ತೆಯಾಗಿದೆ. ಮೃತಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು. ಬಿಎನ್ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತ್ವರಿತ ತನಿಖೆ ಮತ್ತು ವಿಚಾರಣೆ ನಡೆಯಲಿದೆ ಎಂದು ಪದ್ಮಜ ತಿಳಿಸಿದ್ದಾರೆ.

ಸ್ವಾತಿಯ ತಂದೆಗೆ ಮತ್ತು ಅಳಿಯನಿಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಅವರು ಪರಸ್ಪರ ಮಾತನಾಡುತ್ತಿರಲಿಲ್ಲ. ಮಗಳು ಗಂಡನ ಮನೆಯಲ್ಲಿ ಚೆನ್ನಾಗಿದ್ದೇನೆ ಎನ್ನುತ್ತಿದ್ದಳು. ಆದರೆ ಆತ ಯಾವಾಗಲೂ ಅವಳನ್ನು ಹಿಂಸಿಸುತ್ತಿದ್ದ ಎಂದು ಸ್ವಾತಿಯ ತಂದೆ ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author